
ದುಬೈ: ಹೇಳಿ ಕೇಳಿ ದುಬೈ ಮಾಯಾನಗರಿ ಇಲ್ಲಿ ಇಲ್ಲದ ಅದ್ಭುತಗಳಿಲ್ಲ. ದುಡ್ಡಿದವರು ಹೇಗೆ ಬೇಕಾದರೂ ಬದುಕಬಹುದಾದ ಸುಂದರ ನಗರಿ ದುಬೈನಲ್ಲಿ ಮನೆ ಕೊಳ್ಳಲು ಈಗ ಭಾರತೀಯರು ಸಾಲುಗಟ್ಟಿ ನಿಂತಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ದುಬೈನ ಪಾಮ್ ಐಲ್ಯಾಂಡ್‌ನಲ್ಲಿ ಮನೆ ಕೊಳ್ಳಲು ಭಾರತೀಯರು 10 ಪಟ್ಟು ಹೆಚ್ಚು ಹಣ ನೀಡಲು ಸಿದ್ದರಾಗಿದ್ದಾರೆ ಎಂದು ವರದಿಯೊಂದು ಹೇಳಿದೆ. ಪಾಮ್ ಐ ಲ್ಯಾಂಡ್‌ನಲ್ಲಿರುವ ಈ ನಿವೇಶನದಲ್ಲಿ ಮನೆಗಳು ನಿರ್ಮಾಣ ಹಂತದಲ್ಲಿದ್ದು, ಖರೀದಿದಾರರು ಈ ಮನೆಯ ಮೌಲ್ಯದ ಶೇಕಡಾ 20 ರಷ್ಟನ್ನು ಮೊದಲಿಗೆ ನಂತರ ಶೇಕಡಾ 40ರಷ್ಟು ನಿರ್ಮಾಣ ಹಂತದಲ್ಲಿ ನೀಡಬೇಕು. ಉಳಿದ ಹಣವನ್ನು 2027ರಲ್ಲಿ ಈ ಕಟ್ಟಡ ಸಂಪೂರ್ಣ ನಿರ್ಮಾಣವಾದ ನಂತರ ನೀಡಬೇಕು.
ಪಾಮ್ ಆಕಾರದಲ್ಲಿರುವ ಈ ದ್ವೀಪದಲ್ಲಿ ಐಷಾರಾಮಿ ಮನೆಗಳ (Luxury House) ಖರೀದಿಗಾಗಿ ನೂರಾರು ಖರೀದಿದಾರರು ಮುಗಿಬಿದ್ದಿದ್ದು, ಇದರಿಂದ ಎರಡು ದಶಕಗಳ ಹಿಂದೆ ಈ ಯೋಜನೆ ಆರಂಭವಾದಾಗ ವಿಲ್ಲಾಗಳಿಗೆ ಇದ್ದ ಬೆಲೆಗಿಂತ 10 ಪಟ್ಟು ಜಾಸ್ತಿ ಆಗಿದೆ ಎಂದು ವರದಿ ಹೇಳಿದೆ. ಆಗ ಯೋಜನೆಯ ಪ್ರಸ್ತಾಪವಾಗಿತ್ತದರೂ ನಿರ್ಮಾಣ ಕಾರ್ಯ ಆರಂಭವಾಗಿರಲಿಲ್ಲ,
ಇಲ್ಲಿ ಮನೆ ಖರೀದಿ ವ್ಯವಹಾರದಲ್ಲಿ ತೊಡಗಿರುವ ದಲ್ಲಾಳಿಗಳು (Mediator) ಮತ್ತು ಹೂಡಿಕೆದಾರರು (Investor) ಬೆಳಗ್ಗೆ 6 ಗಂಟೆಯಿಂದಲೇ ನಖೀಲ್ PJSC ಮಾರಾಟ ಕೇಂದ್ರದ ಹೊರಗೆ 38 ಡಿಗ್ರಿ ಸೆಲ್ಸಿಯಸ್ ಶಾಖದ ನಡುವೆಯೂ ಸರತಿ ಸಾಲಿನಲ್ಲಿ ನಿಂತಿದ್ದರು. ಈ ನಖೀಲ್ ಪಿಜೆಎಸ್‌ಸಿ ಮಾರಾಟ ಕೇಂದ್ರದಲ್ಲಿ ಸರ್ಕಾರದಿಂದ ಅಭಿವೃದ್ಧಿಯಾಗದೇ ಇರುವ ಪಾಮ್ ಜೆಬೆಲ್ ಅಲಿಯ ಐದರಿಂದ 7 ಬೆಡ್‌ರೂಮ್‌ಗಳಿರುವ ನೂರಾರು ನಿವೇಶನಗಳನ್ನು ಮಾರಾಟ ಮಾಡಲಾಗುತ್ತಿದೆ. ದುಬೈನಿಂದ 50 ಕಿಲೋಮೀಟರ್ ದೂರದಲ್ಲಿರುವ ಇಲ್ಲಿ ಮನೆಗಳು 18.7 ದಿರ್ಹಮ್ ಅಂದರೆ (5.1 ಮಿಲಿಯನ್ ಡಾಲರ್)ನಿಂದ ಆರಂಭವಾಗಿದ್ದು, ಇಲ್ಲಿ ಕಡಿಮೆ ಬೆಲೆ ಪ್ಲಾಟ್‌ಗಳು 40 ಮಿಲಿಯನ್‌ಗೆಲ್ಲಾ ದೊರೆಯುತ್ತದೆ ಎಂದು ವರದಿಯಾಗಿದೆ.
ಚೆಕ್‌ಬುಕ್‌ಗಳೊಂದಿಗೆ ದಲ್ಲಾಳಿಗಳು ಹಾಗೂ ರಷ್ಯಾ (Russia) ಮತ್ತು ಭಾರತದ (India) ಖರೀದಿದಾರರನ್ನು ಪ್ರತಿನಿಧಿಸುವ ಅನೇಕರು ಅತ್ಯಂತ ಪ್ರಸಿದ್ಧವಾದ ಮಾನವ ನಿರ್ಮಿತ ದ್ವೀಪವಾದ ಪಾಮ್ ಜುಮೇರಾ ತಳದಲ್ಲಿರುವ ಈ ಮಾರಾಟದ ಕೇಂದ್ರದ ಮುಂದೆ ದಾಂಗುಡಿ ಇಟ್ಟಿದ್ದಾರೆ. ಏಳು ವರ್ಷಗಳ ಕಾಲ ಕುಸಿತಗೊಂಡಿದ್ದ ಆಸ್ತಿ ಬೆಲೆ ಈಗ ಭಾರತೀಯರು ಹಾಗೂ ಇತರ ಹೊರಗಿನವರ ಬೇಡಿಕೆಯಿಂದಾಗಿ ದಾಖಲೆಯ ಏರಿಕೆ ಕಂಡಿದ್ದು, ಇದರಿಂದಾಗಿ ದುಬೈಯು ಪಾಮ್ ಜೆಬೆಲ್ ಅಲಿ ಯೋಜನೆಯನ್ನು ಸ್ಥಗಿತಗೊಳಿಸಿದ ಹಲವು ವರ್ಷಗಳ ನಂತರ ಈ ಪಾಮ್ ರೆಸಾರ್ಟ್ ಕೃತಕ ದ್ವೀಪಕ್ಕೆ ಬೇಡಿಕೆ ಬರುತ್ತಿದೆ. ರಿಯಲ್ ಎಸ್ಟೇಟ್ ಕನ್ಸಲ್ಟೆನ್ಸಿ ನೈಟ್ ಫ್ರಾಂಕ್ ಪ್ರಕಾರ, ಮಾರುಕಟ್ಟೆಯ 10 ಮಿಲಿಯನ್ ಡಾಲರ್ ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ಮನೆಗಳ ವಹಿವಾಟುಗಳಿಂದಾಗಿ ಎರಡನೇ ತ್ರೈಮಾಸಿಕದಲ್ಲಿ ಜಾಗತಿಕವಾಗಿ ವಹಿವಾಟು ಏರಿಕೆ ಕಂಡಿದೆ.
ಪಾಮ್ ಜುಮೇರಾದಲ್ಲಿನ ಎರಡು ವಿಲ್ಲಾಗಳನ್ನು ಮಾರಿ ಉತ್ತಮ ಹಣವನ್ನು ಗಳಿಸಿದ ನಂತರ, ದುಬೈ ಮೂಲದ ಹೂಡಿಕೆ ಸಂಸ್ಥೆ ಜೆನೆರೊ ಕ್ಯಾಪಿಟಲ್ ಎಲ್ಎಲ್‌ಸಿ ಸಂಸ್ಥಾಪಕ ಟಮೆರ್ ಬಜಾರಿ ಅವರು ಬುಧವಾರ 19 ಮಿಲಿಯನ್ ದಿರ್ಹಮ್‌ಗಳಿಗೆ 7,000 ಚದರ ಅಡಿ (650 ಚದರ ಮೀಟರ್) ಆಸ್ತಿಯನ್ನು ಖರೀದಿಸಿದ್ದು, ಮತ್ತೊಂದನ್ನು ಖರೀದಿಸುವ ಯೋಚನೆಯಲ್ಲಿದ್ದಾರೆ.
ಫ್ಯಾಷನ್ ಲೋಕದಲ್ಲಿ ಹವಾ ಸೃಷ್ಟಿಸಿದ ಪುಟಾಣಿ ಮಾಡೆಲ್‌ಗಳ ಸುಂದರ ಫೋಟೋಗಳು
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.