ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ: IRCTC ಆಫರ್ ಸೂಪರ್!

By Web DeskFirst Published Sep 5, 2019, 7:13 PM IST
Highlights

ಪ್ರಯಾಣಿಕರಿಗೆ ಭರ್ಜರಿ ಆಫರ್ ಕೊಟ್ಟ ಭಾರತೀಯ ರೈಲು ಇಲಾಖೆ| ಸೂಪರ್ ಆಗಿದೆ ಭಾರತೀಯ ರೈಲ್ವೇ ಇಲಾಖೆಯ IRCTC ಆಫರ್|  ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಇ-ಟಿಕೆಟ್ ಕಾಯ್ದಿರಿಸುವ ಶುಲ್ಕ ಕಡಿಮೆ| ಎಸಿ ರಹಿತ ವರ್ಗಗಳನ್ನು ಕಾಯ್ದಿರಿಸಲು ಪ್ರತಿ ಟಿಕೆಟ್‌ಗೆ 15 ರೂ.| ಎಸಿ ಹಾಗೂ ಪ್ರಥಮ ದರ್ಜೆ ಟಿಕೆಟ್‌ಗಳನ್ನು ಕಾಯ್ದಿರಿಸಲು ಪ್ರತಿ ಟಿಕೆಟ್‌ಗೆ 30 ರೂ.| ಭೀಮ್ ಆ್ಯಪ್ ಮೂಲಕ ಪಾವತಿ ಮಾಡುವ ಗ್ರಾಹಕರಿಗೆ ಭರ್ಜರಿ ಆಫರ್| 

ನವದೆಹಲಿ(ಸೆ.05): ಭಾರತೀಯ ರೈಲ್ವೇ ಇಲಾಖೆಯ IRCTC , ತನ್ನ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಇ-ಟಿಕೆಟ್ ಕಾಯ್ದಿರಿಸಲು ಗ್ರಾಹಕರಿಗೆ ವಿಧಿಸುವ ಅನುಕೂಲ ಶುಲ್ಕವನ್ನು ಕಡಿಮೆ ಮಾಡಲು ನಿರ್ಧರಿಸಿದೆ.

ಎಸಿ ರಹಿತ ವರ್ಗಗಳನ್ನು ಆನ್‌ಲೈನ್‌ನಲ್ಲಿ ಕಾಯ್ದಿರಿಸಲು ಪ್ರತಿ ಟಿಕೆಟ್‌ಗೆ 15 ರೂ. ಮತ್ತು  ಎಸಿ ಹಾಗೂ ಪ್ರಥಮ ದರ್ಜೆ ಟಿಕೆಟ್‌ಗಳನ್ನು ಕಾಯ್ದಿರಿಸಲು ಪ್ರತಿ ಟಿಕೆಟ್‌ಗೆ 30 ರೂ. ಶುಲ್ಕ ವಿಧಿಸಿದೆ.  

ಈ ಹಿಂದೆ ಎಸಿ ವರ್ಗವಲ್ಲದ ಪ್ರತಿ ಟಿಕೆಟ್‌ಗೆ 20 ರೂ. ಮತ್ತು ಎಸಿ ಪ್ರಥಮ ದರ್ಜೆ ಟಿಕೆಟ್‌ಗೆ 40 ರೂ. ಶುಲ್ಕ ವಿಧಿಸಲಾಗುತ್ತಿತ್ತು. ಪ್ರಸಕ್ತ ದರ ಹಿಂದಿನ ದರಕ್ಕಿಂತ ಶೇ.25ರಷ್ಟು ಕಡಿಮೆ ಇದೆ.  2019 ರ ನವೆಂಬರ್ 1 ರಿಂದ ನೂತನ ಶುಲ್ಕವು ಅನ್ವಯವಾಗಲಿದೆ.

ಇದೇ ವೇಳೆ ಯುಪಿಐ ಭೀಮ್ ಆ್ಯಪ್ ಮೂಲಕ ಪಾವತಿ ಮಾಡುವ ಗ್ರಾಹಕರಿಗೆ, ಎಸಿ ರಹಿತ ದರ್ಜೆಯ ಟಿಕೆಟ್ ಕಾಯ್ದಿರಿಸಲು ಪ್ರತಿ ಟಿಕೆಟ್‌ಗೆ ಕೇವಲ 10 ರೂ. ಹಾಗೂ ಎಸಿ ಮತ್ತು ಪ್ರಥಮ ದರ್ಜೆ ಟಿಕೆಟ್‌ಗೆ 20 ರೂ. ಮಾತ್ರ ವಿಧಿಸಲು ನಿರ್ಧರಿಸಿದೆ.

click me!