ರಷ್ಯಾಗೇ 7 ಸಾವಿರ ಕೋಟಿ ಸಾಲ ಕೊಟ್ಟ ಮೋದಿ!

By Web DeskFirst Published Sep 5, 2019, 4:36 PM IST
Highlights

ರಷ್ಯಾಗೆ 7 ಸಾವಿರ ಕೋಟಿ ಸಾಲ ಘೋಷಿಸಿದ ಪ್ರಧಾನಿ| 5ನೇ ಪೂರ್ವ ಆರ್ಥಿಕ ವೇದಿಕೆ ಶೃಂಗಸಭೆ ಉದ್ದೇಶಿಸಿ ಮಾತನಾಡಿದ ಮೋದಿ| ರಷ್ಯಾದ ಫಾರ್ ಈಸ್ಟ್ ಪ್ರದೇಶದ ಅಭಿವೃದ್ಧಿಗಾಗಿ 1 ಬಿಲಿಯನ್ ಯುಎಸ್ ಡಾಲರ್ ಸಾಲ| ಆ್ಯಕ್ಟ್ ಫಾರ್ ಈಸ್ಟ್ ನೀತಿ ಬಿಡುಗಡೆಗೊಳಿಸಿದ ಪ್ರಧಾನಿ| ಆರ್ಥಿಕ ರಾಜತಾಂತ್ರಿಕತೆಗೆ ಹೊಸ ಆಯಾಮ ನೀಡಿದ ಮೋದಿ| 

ವ್ಲಾದಿವೋಸ್ಟೋಕ್(ಸೆ.05): ರಷ್ಯಾ ಪ್ರವಾಸದಲ್ಲಿರುವ ಪ್ರಧಾನಿ ಮೋದಿ,  ಅಲ್ಲಿನ ಫಾರ್ ಈಸ್ಟ್ ಪ್ರದೇಶದ ಅಭಿವೃದ್ಧಿಗಾಗಿ 1 ಬಿಲಿಯನ್ ಯುಎಸ್ ಡಾಲರ್ (ಸುಮಾರು 7 ಸಾವಿರ ಕೋಟಿ ರೂ.) ಸಾಲ ನೀಡುವುದಾಗಿ ಘೋಷಿಸಿದ್ದಾರೆ.

PM Narendra Modi at 5th Eastern Economic Forum: For the development of Far East, India will give line of credit worth US$ 1 Billion. My govt has actively engaged East Asia as part of its 'Act East' policy. This will also give a new dimension to our economic diplomacy. pic.twitter.com/tMWmcinh4P

— ANI (@ANI)

5ನೇ ಪೂರ್ವ ಆರ್ಥಿಕ ವೇದಿಕೆ ಶೃಂಗಸಭೆ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ,  ರಷ್ಯಾದ ಫಾರ್ ಈಸ್ಟ್ ಪ್ರದೇಶದ ಅಭಿವೃದ್ಧಿಗಾಗಿ 1 ಬಿಲಿಯನ್ ಯುಎಸ್ ಡಾಲರ್ ಸಾಲ ನೀಡುವುದಾಗಿ ಘೋಷಿಸಿದರು.

live from Russia: Prime Minister Narendra Modi addresses at the Plenary Session of 5th Eastern Economic Forum, in Vladivostok. https://t.co/tqBTAJlYQZ

— ANI (@ANI)

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರೊಂದಿಗೆ ಫಾರ್ ಈಸ್ಟ್ ಪ್ರದೇಶದೊಂದಿಗೆ ಭಾರತದ ಸಹಭಾಗಿತ್ವ ವೃದ್ಧಿಗೆ ಸಂಬಂಧಿಸಿದ ಆ್ಯಕ್ಟ್ ಫಾರ್ ಈಸ್ಟ್ ನೀತಿಗಳನ್ನು ಪ್ರಧಾನಿ ಮೋದಿ ಬಿಡುಗಡೆಗೊಳಿಸಿದರು.

PM Narendra Modi at the Plenary Session of 5th Eastern Economic Forum, in Vladivostok: I believe that our brainstorming today at this forum will not only strengthen the efforts for human welfare in Far East, but also the entire mankind. pic.twitter.com/rA9C08uAwy

— ANI (@ANI)

ಭಾರತ-ರಷ್ಯಾ ಸ್ನೇಹ ಕೇವಲ ಸರ್ಕಾರದ ಸಂವಹನ, ರಾಜಧಾನಿಗಳಿಗೆ ಸೀಮಿತವಾಗದೇ, ಜನತೆ ಹಾಗೂ ಉದ್ಯಮಕ್ಕೂ ವಿಸ್ತರಿಸಿದೆ ಎಂದು ಪ್ರಧಾನಿ ಮೋದಿ ಈ ವೇಳೆ ಅಭಿಪ್ರಾಯಪಟ್ಟರು.

PM Modi at 5th Eastern Economic Forum: The relation of India&Far East is not new but ages old. India is the 1st country which opened its consulate in Vladivostok. Even during Soviet Russia when there was restrictions on other foreigners, Vladivostok was open for Indians. pic.twitter.com/u4gc24c6yC

— ANI (@ANI)

ರಷ್ಯಾದ ಫಾರ್ ಈಸ್ಟ್ ಪ್ರದೇಶಕ್ಕೆ ಭೇಟಿ ನೀಡಿರುವ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾಗಿದ್ದು, ಇದು ನಮ್ಮ ಆರ್ಥಿಕ ರಾಜತಾಂತ್ರಿಕತೆಗೆ ಹೊಸ ಆಯಾಮ ನೀಡಲಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

click me!