ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್‌ಗೆ 203-24ನೇ ಸಾಲಿನ ಪ್ರತಿಷ್ಠಿತ ಇಂಡಿಯಾ ಗೋಲ್ಡ್ ಕಾನ್ಫರೆನ್ಸ್‌ನಲ್ಲಿ ರೆಸ್ಪಾನ್ಸಿಬಲ್ ಜ್ಯುವೆಲ್ಲರಿ ಹೌಸ್ ಅವಾರ್ಡ್ ಲಭಿಸಿದೆ. ಸೂಕ್ತ ಗಣಿಗಾರಿಕೆ ಮಾಡಿದ ಚಿನ್ನ ಮತ್ತು ವಜ್ರಗಳನ್ನು ಕಾನೂನುಬದ್ಧ ಮೂಲಗಳಿಂದ ಪಡೆಯುವಲ್ಲಿನ ಬದ್ಧತೆಗೆ ಈ ಪ್ರಶಸ್ತಿ ನೀಡಲಾಗಿದೆ.
ಬೆಂಗಳೂರು: ಜಗತ್ತಿನ ಅತಿ ದೊಡ್ಡ ಆಭರಣ ಸಮೂಹಗಳಲ್ಲಿ ಒಂದಾಗಿರುವ ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್‌ಗೆ 203-24ನೇ ಸಾಲಿನ ಪ್ರತಿಷ್ಠಿತ ಇಂಡಿಯಾ ಗೋಲ್ಡ್ ಕಾನ್ಫರೆನ್ಸ್ (ಐಜಿಸಿ)ನಲ್ಲಿ ರೆಸ್ಪಾನ್ಸಿಬಲ್ ಜ್ಯುವೆಲ್ಲರಿ ಹೌಸ್ ಅವಾರ್ಡ್ ಲಭಿಸಿದೆ. ಇದು ಭಾರತೀಯ ಆಭರಣ ಕ್ಷೇತ್ರದಲ್ಲಿ ಪ್ರತಿಷ್ಠಿತ ಪ್ರಶಸ್ತಿಯಾಗಿದ್ದು, ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್‌ನ ನೈತಿಕ ನೌಲ್ಯ ಮತ್ತು ಸುಸ್ಥಿರ ಬದ್ಧತೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.
ಸೂಕ್ತ ಗಣಿಗಾರಿಕೆ ಮಾಡಿದ ಚಿನ್ನ ಮತ್ತು ವಜ್ರವನ್ನು ಕಾನೂನುಬದ್ಧ ಮೂಲಗಳಿಂದ ಪಡೆಯುವಲ್ಲಿ ಮಲಬಾರ್ ಗೋಲ್ಡ್ & ಡೈಮಂಡ್ಸ್ ತೋರುತ್ತಿರುವ ಬದ್ಧತೆ ಮತ್ತು ಸಮರ್ಪಣೆಗೆ ಈ ಪ್ರಶಸ್ತಿಯ ಗರಿ ಮುಡಿಗೇರಿದೆ. ಪ್ರತಿಯೊಂದು ಆಭರಣವೂ ಅತ್ಯುನ್ನತ ಗುಣಮಟ್ಟದ ಶುದ್ಧತೆ ಮತ್ತು ಸಮಗ್ರತೆಯೊಂದಿಗೆ ತಯಾರಿಸಲ್ಪಟ್ಟಿರುವುದನ್ನು ಮಲಬಾರ್ ಖಚಿತಪಡಿಸುತ್ತದೆ. ಬೆಂಗಳೂರಿನ ಹಿಲ್ಟನ್ ಮಾನ್ಯತಾ ಬ್ಯುಸಿನೆಸ್ ಪಾರ್ಕ್‌ನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್ ಪರವಾಗಿ ಭಾರತದ ಕಾರ್ಯಾಚರಣೆ ವ್ಯವಸ್ಥಾಪಕ ನಿರ್ದೇಶಕ ಏ.ಏಶರ್ ಇಂಡಿಯಾ ಗೋಲ್ಡ್ ಪಾಲಿಸಿ ಸೆಂಟರ್ ಅಧ್ಯಕ್ಷರಾದ ಡಾ.ಸುಂದರವಲ್ಲಿ ನಾರಾಯಣಸ್ವಾಮಿ ಅವರಿಂದ ಪ್ರಶಸ್ತಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮಲಬಾರ್ ಗೋಲ್ಡ್ ಎಲ್‌ಎಲ್‌ಸಿ ಬ್ಯುಸಿನೆಸ್ ಡೆವಲಪ್‌ಮೆಂಟ್ ಹೆಡ್ ಸೀತಾರಾಮನ್ ವರದರಾಜನ್, ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್‌ನ ಬುಲಿಯನ್ ಹೆಡ್ ದಿಲೀಪ್ ನಾರಾಯಣನ್, ಫಿನ್ಮೆಟ್ ಪಿಟಿಇ ಲಿಮಿಟೆಡ್ ಡೈರೆಕ್ಟರ್ ಸುನೀಲ್ ಕಶ್ಯಪ್, ರ‍್ಯಾಂಡ್ ರಿಫೈನರಿ ಸಿಇಒ ಪ್ರವೀಣ್ ಬೈಜನಾಥ್ ಮತ್ತು ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್‌ನ ಕರ್ನಾಟಕದ ಮುಖ್ಯಸ್ಥ ಫಿಲ್ಸರ್ ಬಾಬು ಉಪಸ್ಥಿತರಿದ್ದರು.
ಉಪಸ್ಥಿತರಿದ್ದ ಗಣ್ಯರು:
ಈ ಸಂದರ್ಭದಲ್ಲಿ ಮಾತನಾಡಿದ ಮಲಬಾರ್ ಗ್ರೂಪ್ ಅಧ್ಯಕ್ಷ ಎಂ.ಪಿ.ಅಹ್ಮದ್, ಈ ಐಜಿಸಿಯಿಂದ ಪ್ರತಿಷ್ಠಿತ ರೆಸ್ಪಾನ್ಸಿಬಲ್ ಜ್ಯುವೆಲ್ಲರಿ ಹೌಸ್ ಅವಾರ್ಡ್ ಸ್ವೀಕರಿಸಲು ಅತೀವ ಸಂತಸವಾಗುತ್ತಿದೆ. ಚಿನ್ನ ಮತ್ತು ವಜ್ರಗಳು ಅಮೂಲ್ಯವಾದ ಉಡುಗೊರೆಗಳಾಗಿವೆ. ಮದುವೆ ಮತ್ತು ಜನ್ಮದಿನಗಳಂತಹ ಜೀವನದ ಅತ್ಯಂತ ಸಂತೋಷದಾಯಕ ಕ್ಷಣಗಳಲ್ಲಿ ಆಗಾಗ್ಗೆ ಈ ಅಮೂಲ್ಯ ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳಲಾಗುತ್ತದೆ. ಈ ಅಮೂಲ್ಯ ವಸ್ತುಗಳನ್ನು ನೈತಿಕವಾಗಿ, ಕಾನೂನುಬದ್ಧ ಮೂಲಗಳಿಂದ ಯಾವುದೇ ಕಾನೂನು ಉಲ್ಲಂಘನೆಯಾಗದ ರೀತಿಯಲ್ಲಿ ಪಡೆಯಲಾಗಿದೆ ಎಂಬುದನ್ನು ಖಚಿತಪಡಿಸಲು ನಾವು ಬದ್ಧರಾಗಿದ್ದೇವೆ. ಆಗ ಮಾತ್ರ ಈ ಉಡುಗೊರೆಗಳು ಅವರು ಸಂಕೇತಿಸುವ ಪಾವಿತ್ರ್ಯತೆ, ಶುದ್ಧತೆ ಮತ್ತು ತೇಜಸ್ಸನ್ನು ನಿಜವಾಗಿಯೂ ಸಾಕಾರಗೊಳಿಸಬಹುದು. ಚಿನ್ನವನ್ನು ಗಣಿಗಾರಿಕೆ ಮಾಡಿದ ಕ್ಷಣದಿಂದ ನಮ್ಮ ಗ್ರಾಹಕರನ್ನು ತಲುಪುವ ಅಂತಿಮ ಹಂತದವರೆಗೂ ನಾವು ಈ ಬದ್ಧತೆಯನ್ನು ಪಾಲಿಸಿಕೊಂಡು ಬರುತ್ತಿದ್ದೇವೆ, ಎಂದರು.
ಭಾರತದಲ್ಲಿ ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್‌ನ ಕಾರ್ಯಾಚರಣೆಗಳ ವ್ಯವಸ್ಥಾಪಕ ನಿರ್ದೇಶಕ ಓ.ಏಷರ್ ಮಾತನಾಡಿ, 'ನಾವು ಖರೀದಿಸುವ ಮತ್ತು ಮಾರುವ ಚಿನ್ನದ ಬಾರ್‌ಗಳು ಜವಾಬ್ದಾರಿಯುತ ಮತ್ತು ಸಂಪೂರ್ಣವಾಗಿ ಕಾನೂನುಬದ್ಧವಾಗಿರುತ್ತವೆ ಎಂಬುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ. ನಾವು ಲಂಡನ್ ಬುಲಿಯನ್ ಮಾರ್ಕೆಟ್ ಅಸೋಸಿಯೇಷನ್ (ಎಲ್‌ಬಿಎಂಎ) ಗುಣಮಟ್ಟದ ಪ್ರಮಾಣೀಕೃತ ಲಂಡನ್ ಗುಡ್ ಡೆಲಿವರಿ ಬಾರ್‌ಗಳು (ಎಲ್‌ಜಿಡಿಬಿ), ದುಬೈ ಗುಡ್ ಡೆಲಿವರಿ ಬಾರ್‌ಗಳು(ಡಿಜಿಡಿಬಿ) ಮತ್ತು ಎಚ್‌ಯುಐಡಿ ಹಾಲ್‌ಮಾರ್ಕ್ ಇಂಡಿಯನ್ ಗುಡ್ ಡೆಲಿವರಿ ಬಾರ್‌ಗಳನ್ನು ಬಳಸುತ್ತಿದ್ದೇವೆ. ಮಲಬಾರ್ ಗೋಲ್ಡ್ & ಡೈಮಂಡ್ಸ್ ಈಗಾಗಲೇ ವಿಶ್ವದ ವಿಶ್ವಾಸಾರ್ಹ ಆಭರಣ ಬ್ರ್ಯಾಂಡ್ ಆಗಿದೆ,' ಎಂದು ಹರ್ಷ ವ್ಯಕ್ತಪಡಿಸಿದರು.
ಮಲಬಾರ್ ಗೋಲ್ಡ್ & ಡೈಮಂಡ್ಸ್ ಪ್ರಸ್ತುತ ವಿಶ್ವದ 13 ದೇಶಗಳಲ್ಲಿ 350 ಕ್ಕೂ ಹೆಚ್ಚು ಶೋರೂಂಗಳನ್ನು ಹೊಂದಿದ್ದು, 26 ದೇಶಗಳ 21000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ. 100ಕ್ಕೂ ಹೆಚ್ಚು ದೇಶಗಳ 15 ಮಿಲಿಯನ್‌ಗೂ ಅಧಿಕ ತೃಪ್ತಿದಾಯಕ ಗ್ರಾಹಕರನ್ನು ಹೊಂದಿರುವ ಕಂಪನಿ ತನ್ನೆಲ್ಲಾ ಶೋರೂಂಗಳಲ್ಲಿ ವಿಶ್ವದರ್ಜೆಯ ಸೌಲಭ್ಯಗಳನ್ನು ನೀಡುತ್ತಿದೆ. ಭಾರತ ಒಂದು ಚಿನ್ನದ ಬೆಲೆ ಉಪಕ್ರಮದ ಮೂಲಕ ಮಲಬಾರ್ ಗೋಲ್ಡ್ & ಡೈಮಂಡ್ಸ್ ಭಾರತದಾದ್ಯಂತ ತನ್ನೆಲ್ಲಾ ಶೋರೂಂಗಳಲ್ಲಿ ಚಿನ್ನಕ್ಕೆ ಒಂದೇ ಬೆಲೆಯನ್ನು ನಿಗದಿ ಮಾಡಿದೆ.
ಸಮಾಜಮುಖಿ ಕಾರ್ಯಗಳು:
ಮಲಬಾರ್ ಗ್ರೂಪ್ ತನ್ನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ಅಡಿಯಲ್ಲಿ ಗಮನಾರ್ಹವಾದ ಕೊಡುಗೆಯನ್ನು ಸಮಾಜಕ್ಕೆ ನೀಡುತ್ತಾ ಬಂದಿದೆ. ಸಂಸ್ಥೆಯು ಆರಂಭವಾದಾಗಿನಿಂದ ಸಮೂಹ ತನ್ನ ಲಾಭಾಂಶದಲ್ಲಿ ಶೇ.5 ರಷ್ಟು ಹಣವನ್ನು ಸಿಎಸ್‌ಆರ್ ಚಟುವಟಿಕೆಗಳಿಗೆ ಬಳಸುತ್ತಿದೆ. ಹಸಿವು ಮುಕ್ತ ಪ್ರಪಂಚ ಯೋಜನೆಯಡಿ ನಿರ್ಗತಿಕರಿಗೆ ಊಟದ ವ್ಯವಸ್ಥೆ, ಪರಿತ್ಯಕ್ತ ಮಹಿಳೆಯರಿಗೆ ಅಜ್ಜಿ ಮನೆ ಯೋಜನೆಯಡಿ ಆಶ್ರಯ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳಿಗೆ ಈ ಹಣ ವಿನಿಯೋಗಿಸುತ್ತಿದೆ. ಇದಲ್ಲದೇ, ಸಮೂಹವು ದುರ್ಬಲ ವರ್ಗದವರ ಔಷಧೋಪಚಾರಕ್ಕೆ ನೆರವಾಗುತ್ತಿದ್ದು, ಬಡವರಿಗೆ ಮನೆ ನಿರ್ಮಾಣ, ಹೆಣ್ಣು ಮಕ್ಕಳಿಗೆ ಶೈಕ್ಷಣಿಕ ವಿದ್ಯಾರ್ಥಿ ವೇತನ, ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಗಳ ಹೆಣ್ಣು ಮಕ್ಕಳ ಮದುವೆಗೆ ಆರ್ಥಿಕ ನೆರವು ಸೇರಿದಂತೆ ಇನ್ನಿತರ ಸಮಾಜ ಸುಧಾರಣೆ ಯೋಜನೆಗಳಲ್ಲಿ ಕೈ ಜೋಡಿಸುತ್ತಿದೆ. ಇಲ್ಲಿಯವರೆಗೆ ಸಂಸ್ಥೆಯು ಇಂತಹ ಕಾರ್ಯಕ್ರಮಗಳಿಗೆ 250 ಕೋಟಿ ರೂಪಾಯಿಗೂ ಅಧಿಕ ಹಣ ವಿನಿಯೋಗಿಸಿದೆ.