
ದಿನಸಿ ಬ್ಯಾಗ್‌ಗಳಿಗೆ ಹೆಚ್ಚೆಂದರೆ 20ರಿಂದ 30 ಅಥವಾ 40 ರಿಂದ 50 ರೂಪಾಯಿ ಇರಬಹುದು. ಆದರೆ ಅಮೆರಿಕಾದಲ್ಲಿ ಭಾರತದ ಈ ಸಾಮಾನ್ಯ ಜೂಟ್ ಬ್ಯಾಗಾ ಅಥವಾ ಜೋಲಾ ಬ್ಯಾಗ್ ಎಂದು ಕರೆಯುವ ಸಿಂಪಲ್ ಬ್ಯಾಗ್ ದರ ಕೇಳಿದರೆ ಪ್ರಜ್ಞೆ ತಪ್ಪೊದು ಪಕ್ಕಾ ಅಲ್ಲಿ ಅಷ್ಟು ದುಬಾರಿಯಾಗಿದೆ ಈ ಜೂಟ್ ಬ್ಯಾಗ್ ಹೌದು, ಭಾರತ ಮೂಲದ ಯುವತಿಯೊಬ್ಬರು ಈ ವಿಚಾರವನ್ನು ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, ವೈರಲ್ ಆಗಿದೆ.
ಭಾರತೀಯ ಮನೆಗಳಲ್ಲಿ ದಿನಸಿ, ಕೆಲಸ ಮತ್ತು ಪ್ರಯಾಣಕ್ಕಾಗಿ ಪ್ರತಿದಿನ ಬಳಸುವ ಸರಳ ಬಟ್ಟೆಯ ಚೀಲವಾದ ಜೋಲಾವನ್ನು ಈಗ ಅಮೆರಿಕದ ಐಷಾರಾಮಿ ಆನ್‌ಲೈನ್ ಸ್ಟೋರ್ ನಾರ್ಡ್‌ಸ್ಟ್ರೋಮ್‌ನ ವೆಬ್‌ಸೈಟ್‌ನಲ್ಲಿ 48 ಡಾಲರ್‌ಗೆ (ರೂ. 4,228) ಗ ಮಾರಾಟ ಮಾಡಲಾಗುತ್ತಿದೆ. ಇದನ್ನು ನಂಬಲು ಕಷ್ಟವೆನಿಸಬಹುದು, ಆದರೆ ಇದು ನಿಜ, ಏಕೆಂದರೆ ಸಾಧಾರಣ ಜೋಲಾ" ವನ್ನು ಇಷ್ಟು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ನಾರ್ಡ್‌ಸ್ಟ್ರೋಮ್‌ನ ವೆಬ್‌ಸೈಟ್‌ನಲ್ಲಿ ಕಂಡುಬರುವಂತೆ, ಜೋಲಾವನ್ನು ಜಪಾನಿನ ಬ್ರ್ಯಾಂಡ್ ಪ್ಯೂಬ್ಕೊ ಸಂಸ್ಥೆ ಭಾರತೀಯ ಸ್ಮಾರಕ ಚೀಲ (Indian Souvenir Bag)ಎಂದು ಮರು ನಾಮಕರಣ ಮಾಡಿದೆ. ಹಾಗೆಯೇ ನಾರ್ಡ್‌ಸ್ಟ್ರೋಮ್ ಜೋಲಾವನ್ನು ಸ್ಟೈಲಿಶ್ ಬ್ಯಾಗ್, ವಿಶಿಷ್ಟ ವಿನ್ಯಾಸಗಳಿಂದ ಅಲಂಕರಿಸಲ್ಪಟ್ಟಿದೆ ಎಂದು ಬಣ್ಣಿಸಿದ್ದಾರೆ , ಇದು ನಿಮ್ಮೊಂದಿಗೆ ಭಾರತದ ಒಂದು ತುಣುಕನ್ನು ತೆಗೆದುಕೊಂಡು ಹೋಗಲು ಅನುವು ಮಾಡಿಕೊಡುತ್ತದೆ ಎಂದು ವಿವರಣೆ ನೀಡಿದೆ. ಜೊತೆಗೆ ಬ್ಯಾಗ್‌ಗೆ ಸಂಬಂಧಿಸಿದ ವಿವರಣೆಯಲ್ಲಿ ಬ್ಯಾಗ್‌ನಲ್ಲಿ ಕೈನಿಂದ ಮಾಡಿದ ವಿನ್ಯಾಸವನ್ನು ಹೈಲೈಟ್ ಮಾಡಿತು, ಆದರೆ ಅದರ ಬಣ್ಣಗಳು ಮಸುಕಾಗಬಹುದು ಮತ್ತು ಮುದ್ರಣ ದೋಷಗಳಿರಬಹುದು ಎಂದು ವಿವರಿಸಿದೆ.
ಇನ್ನು ಈ ಬ್ಯಾಗ್‌ನ ವಿನ್ಯಾಸದ ಬಗ್ಗೆ ಹೇಳುವುದಾದರೆ, ಮೂಲ ಬಿಳಿ ಬಣ್ಣದ ಈ ಚೀಲದ ಮೇಲೆ 'ರಮೇಶ್ ಸ್ಪೆಷಲ್ ನಾಮ್ಕೀನ್' ಮತ್ತು ಚೇತಕ್ ಸ್ವೀಟ್ಸ್' ಎಂದು ಹಿಂದಿ ಲಿಪಿಯಲ್ಲಿ ಬರೆಯಲಾಗಿದೆ. ಸುಂದರವಾದ ದೇಶದ ಮೇಲಿನ ನಿಮ್ಮ ಪ್ರೀತಿಯನ್ನು ಪ್ರದರ್ಶಿಸುವಾಗ ನಿಮ್ಮ ಅಗತ್ಯ ವಸ್ತುಗಳನ್ನು ಸಾಗಿಸಲು ಇದು ಸೂಕ್ತವಾಗಿದೆ. ಯಾವುದೇ ಪ್ರಯಾಣಿಕರು ಅಥವಾ ಭಾರತೀಯ ಸಂಸ್ಕೃತಿಯ ಪ್ರೇಮಿಗಳು ಹೊಂದಿರಲೇಬೇಕಾದ ಚೀಲ ಇದು ಎಂದು ಮಾರ್ಕೆಟಿಂಗ್ ಮಾಡಿ ಈ 'ಭಾರತೀಯ ಸ್ಮಾರಕ ಚೀಲ'ದ ಬಗ್ಗೆ ವಿವರಣೆ ನೀಡಲಾಗಿದೆ.
Wordita(@wordi25) ಎಂಬುವವರು ಈ ವಿಚಾರವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಇದು ಯಾವ ರೀತಿಯ ಹಗರಣ ಜೋಲಾವನ್ನು ನಾರ್ಡ್‌ಸ್ಟ್ರೋಮ್‌ನ ಪ್ರೀಮಿಯಂ ಡಿಪಾರ್ಟ್‌ಮೆಂಟ್ ಸ್ಟೋರ್‌ನಲ್ಲಿ $48 ಗೆ ಮಾರಾಟ ಮಾಡಲಾಗುತ್ತಿದೆ! 😭😭 ನಾನು ನನ್ನ ಮನೆಯನ್ನು ಮಿಸ್ ಮಾಡಿಕೊಳ್ಳುವ ವ್ಯಕ್ತಿ, ಆದರೆ ಇದನ್ನು ಖರೀದಿಸುವಷ್ಟು ನಾಸ್ಟಾಲಜಿಯಾ ಮಟ್ಟವನ್ನು ತಲುಪಿಲ್ಲ ಎಂದು ಅವರು ಬರೆದುಕೊಂಡಿದ್ದಾರೆ.
ಎರಡು ಲಕ್ಷಕ್ಕೂ ಹೆಚ್ಚು ಜನ ಆ ಪೋಸ್ಟನ್ನು ವೀಕ್ಷಿಸಿದ್ದು, ಹಲವು ರೀತಿಯ ಕಾಮೆಂಟ್ ಮಾಡಿದ್ದಾರೆ. ನಾನು ಅಮೆಜಾನ್‌ನಲ್ಲಿ ಸಿಗುವ ವಿಮಲ್ ಬ್ಯಾಗೇ ದುಬಾರಿ ಅನ್ಕೊಂಡಿದ್ದೆ, ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಜನ ಇದನ್ನೂ ಖರೀದಿಸ್ತಾರಾ ಎಂದು ಒಬ್ಬರು ಕೇಳಿದ್ದು, ಇದಕ್ಕೇ ಪೋಸ್ಟ್ ಮಾಡಿದವರು ಖರೀದಿಸ್ತಿದ್ದಾರಾ ಗೊತ್ತಿಲ್ಲ, ಆದರೆ ಅಮೆರಿಕಾದ ಉನ್ನತ ಸ್ಟೋರೊಂದು ಇದನ್ನು ಮಾರುತ್ತಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಭಾರತದಲ್ಲಿ, ಜೋಳವು ಕೈಗೆಟುಕುವ, ಪ್ರಾಯೋಗಿಕ ಮತ್ತು ಪರಿಸರ ಸ್ನೇಹಿ ಬ್ಯಾಗ್ ಆಗಿ ಹೆಸರುವಾಸಿಯಾಗಿದೆ. 100 ರೂ.ಗಿಂತ ಕಡಿಮೆ ಬೆಲೆಯದ್ದಾಗಿದ್ದು, ಕೆಲವು ಅಂಗಡಿಗಳು ಅವುಗಳನ್ನು ಉಚಿತವಾಗಿಯೂ ನೀಡುತ್ತವೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.