ಭಾರತದ ಆರ್ಥಿಕತೆ ನಿರೀಕ್ಷೆಗಿಂತ ವೇಗವಾಗಿ ಚೇತರಿಸುತ್ತಿದೆ; ಆಕ್ಸಫರ್ಡ್ ಎಕನಾಮಿಕ್ಸ್!

By Suvarna News  |  First Published Nov 15, 2020, 7:50 PM IST

ಇತ್ತೀಚೆಗಿನ ದಿನಗಳಲ್ಲಿ ಭಾರತೀಯ ಆರ್ಥಿಕತೆ ಕುಸಿತ, ಪಾತಾಳಕ್ಕೆ ಕುಸಿದ ಜಿಡಿಪಿ ಸೇರಿದಂತೆ ಹಲವು ಆಘಾತಕಾರಿ ಮಾಹಿತಿ ಭಾರತೀಯರ ಇರುವ ನೆಮ್ಮದಿ ಹಾಳುಮಾಡಿತ್ತು. ಇದೀಗ ಆಕ್ಸ್‌ಫರ್ಡ್ ಎಕನಾಮಿಕ್ಸ್ ಸಿಹಿ ಸುದ್ದಿ ನೀಡಿದೆ. 


ನವದೆಹಲಿ(ನ.15):  ಆಕ್ಸ್‌ಫರ್ಡ್ ಎಕನಾಮಿಕ್ಸ್ ಪ್ರಕಾರ ಭಾರತದ ಆರ್ಥಿಕತೆ ನಿರೀಕ್ಷೆಗಿಂತ ವೇಗವಾಗಿ ಚೇತರಿಸಿಕೊಳ್ಳುತ್ತಿದೆ ಎಂದಿದೆ. ಇಷ್ಟೇ ಅಲ್ಲ ರಿಸರ್ವ್ ಬ್ಯಾಂಕ್ ದರ ಸರಾಗಗೊಳಿಸುವ ಚಕ್ರದ ಅಂತ್ಯಕ್ಕೆ ಬರುವ ಸಾಧ್ಯತೆಯಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.

ಇತಿಹಾಸದಲ್ಲಿ ಮೊದಲ ಬಾರಿ ಭಾರತದಲ್ಲಿ ಆರ್ಥಿಕ ಕುಸಿತ!.

Latest Videos

undefined

ಈಗಿನ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಹಣದುಬ್ಬರ  ಸರಾಸರಿ ಶೇಕಡಾ 6ಕ್ಕಿಂತ ಹೆಚ್ಚಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಕುರಿತು ಡಿಸೆಂಬರ್ ತಿಂಗಳಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಹಣಕಾಸು ನೀತಿ ಪರಿಶೀಲನಾ ಸಭೆಯಲ್ಲಿ ಪಾಲಿಸಿ ರೇಟ್‌ಗಳನ್ನು ನಿರ್ಧರಿಸಲಿದೆ.

10 ಉತ್ಪಾದನಾ ವಲಯಗಳಿಗೆ 2 ಲಕ್ಷ ಕೋಟಿ ರೂ. ಪ್ರೋತ್ಸಾಹಧನ!

ಕೊರೋನಾ ವೈರಸ್‌ಗೂ ಮೊದಲು ಗ್ರಾಹಕರ ಹಣದುಬ್ಬರ ಗರಿಷ್ಠ ಮಟ್ಟಕ್ಕೆ ತಲುಪಿತ್ತು. ಇಂಧನದಲ್ಲಿ ದರದ ಏರಿಳಿತದ ಹೊರತುಪಡಿಸಿದೆ ಇನ್ನುಳಿದ ಎಲ್ಲಾ ಕ್ಷೇತ್ರದಲ್ಲಿ ದರ ಏರಿಕೆ ಕಂಡಿತ್ತು . ಇದೀಗ ನಾಲ್ಕನೇ ತ್ರೈಮಾಸಿಕದಲ್ಲಿ ಹಣದುಬ್ಬರ ಮತ್ತಷ್ಟು ಭಾದಿಸುವ ಸಾಧ್ಯತೆ ಇದೆ. ಆದರೆ 2021ರಲ್ಲಿ ನಾವು ಹೆಚ್ಚು ಎಚ್ಚರಿಕೆಯಿಂದರಬೇಕು ಎಂದು ಆಕ್ಸ್‌ಫರ್ಡ್ ಎಕಾನಿಮಿಕ್ಸ್ ಹೇಳಿದೆ.

ದುಬಾರಿ ತರಕಾರಿಗಳು ಮತ್ತು ಮೊಟ್ಟೆಗಳು ಚಿಲ್ಲರೆ ಹಣದುಬ್ಬರವನ್ನು ಅಕ್ಟೋಬರ್‌ನಲ್ಲಿ ಸುಮಾರು ಆರು ಮತ್ತು ಒಂದೂವರೆ ವರ್ಷದ ಗರಿಷ್ಠ 7.61 ಕ್ಕೆ ಏರಿಸಿದ್ದು, ಇದು ರಿಸರ್ವ್ ಬ್ಯಾಂಕಿನ ಆರಾಮ ವಲಯಕ್ಕಿಂತ ಗಮನಾರ್ಹವಾಗಿ ಉಳಿದಿದೆ. ಚಿಲ್ಲರೆ ಹಣದುಬ್ಬರವು 2020 ರ ಸೆಪ್ಟೆಂಬರ್‌ನಲ್ಲಿ ಶೇಕಡಾ 7.27 ರಷ್ಟಿತ್ತು.

ಕಳೆದ ಆರೂವರೆ ವರ್ಷದಲ್ಲಿ ತರಕಾರಿ ಮತ್ತು ಮೊಟ್ಟೆ ಸೇರಿದಂತೆ ಚಿಲ್ಲರೆ ಹಣದುಬ್ಬರ ಅಕ್ಟೋಬರ್ ತಿಂಗಳಲ್ಲಿ 7.61 ಶೇಕಡಾ ತಲುಪಿತು. ಚಿಲ್ಲರೆ ಹಣದುಬ್ಬರ ಪ್ರಸಕ್ತ ವರ್ಷದಲ್ಲಿ(2020) ಶೇಕಡಾ 7.27 ರಷ್ಟಿತ್ತು. ನಿರೀಕ್ಷಿತ ಮಟ್ಟಕ್ಕಿಂತಲೂ ವೇಗವಾಗಿ ಭಾರತದ ಆರ್ಥಿಕತೆ ಚೇತರಿಸಿಕೊಳ್ಳುತ್ತಿದೆ. ಇದು ಭಾರತ ಮಾತ್ರವಲ್ಲ, ವಿಶ್ವಕ್ಕೆ ನೆರವಾಗಲಿದೆ ಎಂದ ಆಕ್ಸ್‌ಫರ್ಡ್ ಹೇಳಿದೆ.

click me!