ಭಾರತೀಯ ಮೂಲದ ಅಭಿಜಿತ್ ಬ್ಯಾನರ್ಜಿ ಸೇರಿ ಮೂವರಿಗೆ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿ

Published : Oct 14, 2019, 04:22 PM ISTUpdated : Oct 14, 2019, 04:32 PM IST
ಭಾರತೀಯ ಮೂಲದ ಅಭಿಜಿತ್ ಬ್ಯಾನರ್ಜಿ ಸೇರಿ ಮೂವರಿಗೆ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿ

ಸಾರಾಂಶ

ಭಾರತೀಯ ಮೂಲದ ಅಮೆರಿಕದ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ ಸೇರಿ ಮೂವರಿಗೆ ನೊಬೆಲ್ ಪ್ರಶಸ್ತಿ| ಫ್ರೆಂಚ್ ಮೂಲದ ಅಮೆರಿಕದ ಪ್ರಜೆ ಎಸ್ತಾರ್ ಡುಫ್ಲೊ ಹಾಗೂ ಅಮೆರಿಕದ ಮೈಕೆಲ್ ಕ್ರೆಮರ್​ ಗೂ ಪ್ರಶಸ್ತಿ| ಜಾಗತಿಕ ಬಡತನ ನಿವಾರಿಸುವ ಪ್ರಾಯೋಗಿಕ ವಿಧಾನ ಪರಿಗಣಿಸಿ ಪ್ರಶಸ್ತಿ

ಸ್ಟಾಕ್​ಹೋಮ್[ಅ.14]: ಭಾರತ ಮೂಲದ ಅಮೆರಿಕದ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ ಸೇರಿ ಮೂವರಿಗೆ 2019ನೇ ಸಾಲಿನ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತ್ರಿಗೆ ಆಯ್ಕೆಯಾಗಿದ್ದಾರೆ.

ಇಥಿಯೋಪಿಯಾ ಸರದಾರ: ಅಬಿ ಅಹ್ಮದ್ ಅಲಿಗೆ ನೊಬೆಲ್ ಶಾಂತಿ ಪುರಸ್ಕಾರ!

ಭಾರತೀಯ ಮೂಲದ ಅಮೆರಿಕದ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ, ಫ್ರೆಂಚ್ ಮೂಲದ ಅಮೆರಿಕದ ಪ್ರಜೆ ಎಸ್ತಾರ್ ಡುಫ್ಲೊ ಹಾಗೂ ಅಮೆರಿಕದ ಮೈಕೆಲ್ ಕ್ರೆಮರ್​ ಜಾಗತಿಕ ಬಡತನ ನಿವಾರಿಸುವ ಪ್ರಾಯೋಗಿಕ ವಿಧಾನ ಪರಿಗಣಿಸಿ ಸ್ವೀಡಿಶ್ ಅಕಾಡೆಮಿ ಇವರ ಹೆಸರನ್ನು ನೊಬೆಲ್ ಅರ್ಥಶಾಸ್ತ್ರ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ಭಾರತದಲ್ಲಿ ಜನಿಸಿದ ಅಭಿಜಿತ್ ಬ್ಯಾನರ್ಜಿ[58] ಹಾರ್ವರ್ಡ್ ಯೂನಿವರ್ಸಿಟಿಯಿಂದ Ph.D ಪಡೆದಿದ್ದಾರೆ ಹಾಗೂ ಪ್ರಸ್ತುತ ಅಮೆರಿಕಾದ ಎಂಐಟಿಯಲ್ಲಿ ಅರ್ಥಶಾಸ್ತ್ರ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ನೊಬೆಲ್ ಪ್ರಶಸ್ತಿಯಲ್ಲಿ ಸಿಗುವ 90 ಲಕ್ಷ ಕ್ರೋನಾ ಅಂದರೆ ಸುಮಾರು 6.5 ಕೋಟಿ ಬಹುಮಾನ ಮೊತ್ತವನ್ನು ಈ ಮೂವರು ವಿಜೇತರಿಗೆ ಸಮನಾಗಿ ಹಂಚಲಾಗುತ್ತದೆ.

ಇಥಿಯೋಪಿಯಾ ಸರದಾರ: ಅಬಿ ಅಹ್ಮದ್ ಅಲಿಗೆ ನೊಬೆಲ್ ಶಾಂತಿ ಪುರಸ್ಕಾರ!

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಮೋದಿ-ಪುಟಿನ್‌ ಒಪ್ಪಂದ: 40 ದಿನಗಳಲ್ಲ, ಕೇವಲ 24 ದಿನಗಳಲ್ಲೇ ರಷ್ಯಾಗೆ ತಲುಪಲಿದೆ ಭಾರತದ ಸರಕುಗಳು!
ಡಿಸೆಂಬರ್‌ 31ರ ಒಳಗೆ ಈ ಇಂಪಾರ್ಟೆಂಟ್‌ ಕೆಲಸ ಪೂರ್ತಿ ಮಾಡಿ, ಮತ್ತೆ ಸರ್ಕಾರ ಈ ಅವಕಾಶ ನೀಡಲ್ಲ..!