ಅಣ್ಣನ ಕಾಲ್ ಬರ್ತಿಲ್ಲ: ಅನಿಲ್ ಕಾದಿರುವುದು ಮುಖೇಶ್‌ಗೆ ಗೊತ್ತಿಲ್ಲ!

Published : Feb 21, 2019, 01:23 PM IST
ಅಣ್ಣನ ಕಾಲ್ ಬರ್ತಿಲ್ಲ: ಅನಿಲ್ ಕಾದಿರುವುದು ಮುಖೇಶ್‌ಗೆ ಗೊತ್ತಿಲ್ಲ!

ಸಾರಾಂಶ

ಸಂಕಷ್ಟದ ಸರಮಾಲೆಯನ್ನೇ ಹೊತ್ತಿರುವ ಅನಿಲ್ ಅಂಬಾನಿ| ಅನಿಲ್ ಅಂಬಾನಿ ಸಹಾಯಕ್ಕೆ ಮುಖೇಶ್ ಅಂಬಾನಿ ಬರುವುದೂ ಅನುಮಾನ?| ಸ್ಪೆಕ್ಟ್ರಮ್ ಒಪ್ಪಂದಕ್ಕಷ್ಟೇ ಸಿಮೀತವಾದ ಸಹೋದರರ ನಡುವಿನ ಸಂಬಂಧ| ಅನಿಲ್ ಗೆ ಜೈಲಾದರೆ ಜಾಮೀನು ಕೊಡಲ್ಲ ಮುಖೇಶ್|

ಮುಂಬೈ(ಫೆ.21): ಎರಿಕ್ಸನ್ ಕಂಪನಿಗೆ ನೀಡಬೇಕಾದ ಸಾಲವನ್ನು ಕೇವಲ ನಾಲ್ಕು ವಾರಗಳಲ್ಲಿ ತೀರಿಸಿ ಇಲ್ಲವೇ ಜೈಲಿಗೆ ಹೋಗಿ ಎಂದು ನಿನ್ನೆಯಷ್ಟೇ ಸುಪ್ರೀಂ ಕೋರ್ಟ್ ಅನಿಲ್ ಅಂಬಾನಿಗೆ ಆದೇಶ ನೀಡಿದೆ.

ನಾಲ್ಕು ವಾರಗಳಲ್ಲಿ 550 ಕೋಟಿ ರೂ. ಹೊಂದಿಸಬೇಕಾದ ಒತ್ತಡದಲ್ಲಿ ಅನಿಲ್ ಅಂಬಾನಿ ಇದ್ದಾರೆ.  ಒಂದು ವೇಳೆ ಅನಿಲ್‌ಗೆ ಹಣ ಹೊಂದಿಸಲು ಸಾಧ್ಯವಾಗದೇ ಹೋದರೆ ಜೈಲು ಕಟ್ಟಿಟ್ಟ ಬುತ್ತಿ.

ಈ ಮಧ್ಯೆ ಅನಿಲ್ ಅಂಬಾನಿ ಮತ್ತು ಸಹೋದರ ಮುಖೇಶ್ ಅಂಬಾನಿ ನಡುವೆ ನಡೆದ ಒಪ್ಪಂದಕ್ಕೂ ಕಾರ್ಮೋಡ ಕವಿಯುವ ಲಕ್ಷಣ ಗೋಚರಿಸುತ್ತಿವೆ. ಕಾರಣ ಮುಖೇಶ್ ಅಂಬಾನಿ ಈ ಮೊದಲಿನ ಒಪ್ಪಂದಕ್ಕೆ ಬದ್ಧವಾಗಿದ್ದರೂ, ಒಂದು ವೇಳೆ ಅನಿಲ್ ಜೈಲಿಗೆ ಹೋಗುವ ಪರಿಸ್ಥಿತಿ ಎದುರಾದರೆ ಜಾಮೀನು ನೀಡಲು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. 

ರಿಲಯನ್ಸ್ ಕಮ್ಯುನಿಕೇಶನ್ಸ್ ಸ್ಪೆಕ್ಟ್ರಮ್‌ಗಳನ್ನು ಮುಖೇಶ್ ಒಡೆತನದ ರಿಲಯನ್ಸ್ ಜಿಯೋಗೆ 18 ಸಾವಿರ ಕೋಟಿ ರೂ.ಗಳಿಗೆ ಮಾರಾಟ ಮಾಡುವ ಕುರಿತು ಸಹೋದರರ ನಡುವೆ ಒಪ್ಪಂದವಾಗಿತ್ತು.

ಇದರಿಂದ ಅನಿಲ್ ಅಂಬಾನಿಗೆ ತಮ್ಮ ಸಾಲ ತೀರಿಸುವಲ್ಲಿ ನೆರವಾಗಲಿತ್ತು. ಆದರೆ ಮುಖೇಶ್ ಕೇವಲ ಈ ಒಪ್ಪಂದಕ್ಕಷ್ಟೇ ತಮ್ಮನ್ನು ಸಿಮೀತಗೊಳಿಸಿದ್ದು, ಅನಿಲ್ ಅವರ ಇತರ ಸಾಲವಾಗಲಿ ಅಥವಾ ಜಾಮೀನು ನೀಡುವಲ್ಲಿ ಆಸಕ್ತಿವಹಿಸುತ್ತಿಲ್ಲ.

ಮುಖೇಶ್ ಅಂಬಾನಿ ಹೆಚ್ಚೆಂದರೆ ಅನಿಲ್ ಅಂಬಾನಿ ಅವರ ಈ ಹಿಂದಿನ ಸಾಲಗಳಿಗೆ ಗ್ಯಾರಂಟೀ ಮಾತ್ರ ನೀಡಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.

ಅನಿಲ್ ಫಿನಿಷ್: ಸಾಲ ತೀರಿಸಿ ಇಲ್ಲ ಜೈಲಿಗೆ ಹೋಗಿ ಎಂದ ಸುಪ್ರೀಂ!

ಜೈಲು ಅಂತಿದ್ದಂತೇ RCom ಷೇರು ಪಾತಾಳಕ್ಕೆ: ಅನಿಲ್‌ಗೇನೂ ಆಗ್ತಿಲ್ಲ ಮಾಡಕ್ಕೆ!

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಇಂಡಿಗೋ ಅವಾಂತರ: ನಾಲ್ವರು ಫ್ಲೈಟ್ ಆಪರೇಷನ್ ಇನ್ಸ್‌ಪೆಕ್ಟರ್‌ಗಳ ವಜಾ ಮಾಡಿದ ಡಿಜಿಸಿಎ
ಅಮೆರಿಕಾದ ಬಳಿಕ ಈಗ ಮೆಕ್ಸಿಕೋದಿಂದಲೂ ಭಾರತದ ಮೇಲೆ ಶೇ.50 ಸುಂಕ: ಜನವರಿ 1ರಿಂದಲೇ ಹೊಸ ತೆರಿಗೆ ಜಾರಿ