
ನವದೆಹಲಿ: ಭಾರತದಲ್ಲಿ ಚಿನ್ನದ ಬೆಲೆ ಸಾರ್ವಕಾಲಿಕ ದಾಖಲೆಯನ್ನು ಬರೆದಿದ್ದು, 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 1 ಲಕ್ಷ ರೂಪಾಯಿಯ ಗಡಿಯನ್ನು ದಾಟಿದೆ. ಕಳೆದ ಮೂರ್ನಾಲ್ಕು ದಿನಗಳಲ್ಲಿ ಚಿನ್ನದ ದರ 1,900 ರೂ.ವರೆಗೆ ಏರಿಕೆ ಕಂಡು ಬಂದಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯೂ 1 ಲಕ್ಷ ರೂ.ವರೆಗೆ ತಲುಪಿದೆ. ಭಾರತದ ನೆರೆಯ ದೇಶವಾಗಿರುವ ಪಾಕಿಸ್ತಾನದಲ್ಲಿ 22 ಮತ್ತು 24 ಕ್ಯಾರಟ್ ಚಿನ್ನದ ಬೆಲೆ ಎಷ್ಟಿದೆ ಗೊತ್ತಾ? ಆ ಕುರಿತ ಮಾಹಿತಿಯನ್ನು ಈ ಲೇಖನ ಒಳಗೊಂಡಿದೆ.
BBC ಉರ್ದು ವರದಿಯ ಪ್ರಕಾರ, ಪಾಕಿಸ್ತಾನದಲ್ಲಿನ ಚಿನ್ನದ ಮೌಲ್ಯವನ್ನು ಜಾಗತಿಕ ಮಾರುಕಟ್ಟೆಯ ವಿದ್ಯಮಾನಗಳ ಮೇಲೆ ನಿರ್ಧರಿತವಾಗುತ್ತದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಹೆಚ್ಚಳವಾಗುತ್ತಿರೋದರಿಂದ ಇಲ್ಲಿಯೂ ಏರಿಕೆಯಾಗಿದೆ. ಚಿನ್ನದ ಬೆಲೆ ಕುರಿತು ಬಿಬಿಸಿ ಉರ್ದು ಜೊತೆ ಮಾತನಾಡಿರುವ
ಆಲ್ ಪಾಕಿಸ್ತಾನ್ ಸರಾಫಾ ಜ್ಯುವೆಲರ್ಸ್ ಅಸೋಸಿಯೇಷನ್ ಅಧ್ಯಕ್ಷ ಮತ್ತು ಕರಾಚಿ ಬುಲಿಯನ್ ಎಕ್ಸ್‌ಚೇಂಜ್‌ನ ಅಧ್ಯಕ್ಷ ಮುಹಮ್ಮದ್ ಖಾಸಿಮ್ ಶಿಕಾರ್ಪುರಿ, ಅಮೆರಿಕಾ ಮತ್ತು ಚೀನಾ ನಡುವಿನ ವ್ಯಾಪಾರ ಬಿಕ್ಕಟ್ಟು ಸಹ ಬೆಲೆ ಏರಿಕೆಗೆ ಮೂಲ ಕಾರಣವಾಗಿದೆ. ಹೊಸ ಸುಂಕಗಳ ಹೇರಿಕೆಯಿಂದಾಗಿ ಮಾರುಕಟ್ಟೆಯಲ್ಲಿನ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ ಎಂದು ಹೇಳಿದ್ದಾರೆ.
ಎಷ್ಟಿದೆ ಚಿನ್ನದ ಬೆಲೆ?
ಪಾಕಿಸ್ತಾನ ಟುಡೇ ವರದಿಯ ಪ್ರಕಾರ, 10 ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆ 3,24,940 ಪಾಕಿಸ್ತಾನಿ ರೂಪಾಯಿ, 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 306,505.833 ಪಾಕಿಸ್ತಾನಿ ರೂಪಾಯಿ ಆಗಿದೆ. ಇದನ್ನು ಭಾರತೀಯ ಕರೆನ್ಸಿಗೆ ಬದಲಾಯಿಸಿದ್ರೆ ಪಾಕಿಸ್ತಾನದಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 98,509.64 ರೂಪಾಯಿ ಆಗುತ್ತದೆ.
ಭಾರತದಲ್ಲಿ ಚಿನ್ನದ ಬೆಲೆ ಹೆಚ್ಚಳಕ್ಕೆ ಕಾರಣ ಏನು?
ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಬಡ್ಡಿದರ ನಿಗಧಿ ಕುರಿತು ಅಮೆರಿಕ ಅಧ್ಯಕ್ಷ ಮತ್ತು ಫೆಡರಲ್ ರಿಸರ್ವ್ ಅಧ್ಯಕ್ಷರ ನಡುವಿನ ಭಿನ್ನಾಬಿಪ್ರಾಯಗಳಿಂದಾಗಿ ಭಾರತದಲ್ಲಿ ಚಿನ್ನದ ಬೆಲೆ ಏರಿಕೆಯಾಗುತ್ತಿದೆ. ಈ ಭಿನ್ನಾಬಿಪ್ರಾಯ ಡಾಲರ್ ಸೂಚ್ಯಂಕದ ಮೇಲೆ ನೇರ ಪರಿಣಾಮ ಬೀರುತ್ತದೆ. ಪ್ರಸ್ತುತ ಡಾಲರ್ ಸೂಚ್ಯಂಕವು 98.12 ರ ಆಸುಪಾಸಿನಲ್ಲಿ ವಹಿವಾಟು ನಡೆಸುತ್ತಿದ್ದು, ಇದು ಕಳೆದ ಮೂರು ವರ್ಷಗಳಲ್ಲಿ ಅತ್ಯಂತ ಕಡಿಮೆ ಮಟ್ಟವಾಗಿದೆ.
ಡಾಲರ್ ದುರ್ಬಲತೆಯಿಂದಾಗಿ, ಹೂಡಿಕೆದಾರರು ಈಗ ಸುರಕ್ಷಿತ ಆಯ್ಕೆಗಳನ್ನು ನೋಡುತ್ತಿದ್ದಾರೆ. ಹೂಡಿಕೆದಾರರು ಚಿನ್ನವನ್ನು ಯಾವಾಗಲೂ 'ಸುರಕ್ಷಿತ ಸ್ವರ್ಗ' (Safe Heaven) ಎಂದು ಪರಿಗಣಿಸುತ್ತಾರೆ. ಹಾಗಾಗಿ ಚಿನ್ನದ ಮೇಲಿನ ಹೂಡಿಕೆ ಪ್ರಮಾಣವೂ ಸತತವಾಗಿ ಏರಿಕೆಯಾಗುತ್ತಲಿದೆ. ಈ ಎಲ್ಲದರ ಜೊತೆ ಅಮೆರಿಕ ಮತ್ತು ಚೀನಾ ನಡುವೆ ಹೆಚ್ಚುತ್ತಿರುವ ವ್ಯಾಪಾರ ಉದ್ವಿಗ್ನತೆಯು ಚಿನ್ನದ ಬೇಡಿಕೆಯನ್ನು ಮತ್ತಷ್ಟು ಹೆಚ್ಚಿಸಿದೆ. ಭಾರತ ಅಥವಾ ಪಾಕಿಸ್ತಾನವಾಗಲಿ, ಎರಡೂ ದೇಶಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳ ಈ ಏರಿಕೆಯು ಜಾಗತಿಕ ಆರ್ಥಿಕ ವಾತಾವರಣದ ಪರಿಣಾಮವಾಗಿದೆ.
ಭಾರತದಲ್ಲಿ ಇಂದಿನ ಚಿನ್ನದ ಬೆಲೆ
Good Returns ವರದಿ ಪ್ರಕಾರ ಭಾರತದಲ್ಲಿಂದು ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 2,750 ರೂಪಾಯಿ ಮತ್ತು 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 3,000 ರೂ.ಗಳಷ್ಟು ಇಳಿಕೆಯಾಗಿದೆ.
ಇದನ್ನೂ ಓದಿ: ಕಳಚುತ್ತಾ ಬೆಂಗಳೂರಿನ ನಂ.1 ಕಿರೀಟ, ಹೈದರಾಬಾದ್‌ನಲ್ಲಿ 450 ಎಕರೆ ಹೈಟೆಕ್ ಐಟಿ ಹಬ್
ದೇಶದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 9,015 ರೂಪಾಯಿ (275 ರೂಪಾಯಿ ಇಳಿಕೆ)
8 ಗ್ರಾಂ: 72,120 ರೂಪಾಯಿ (2,200 ರೂಪಾಯಿ ಇಳಿಕೆ)
10 ಗ್ರಾಂ: 90,150 ರೂಪಾಯಿ (2,750 ರೂಪಾಯಿ ಇಳಿಕೆ)
100 ಗ್ರಾಂ:9,01,500 ರೂಪಾಯಿ (27,500 ರೂಪಾಯಿ ಇಳಿಕೆ)
ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 9,835 ರೂಪಾಯಿ (300 ರೂಪಾಯಿ ಇಳಿಕೆ)
8 ಗ್ರಾಂ: 78,680 ರೂಪಾಯಿ (2,400 ರೂಪಾಯಿ ಇಳಿಕೆ)
10 ಗ್ರಾಂ: 98,350 ರೂಪಾಯಿ (3,000 ರೂಪಾಯಿ ಇಳಿಕೆ)
100 ಗ್ರಾಂ: 9,83,500 ರೂಪಾಯಿ (30,000 ರೂಪಾಯಿ ಇಳಿಕೆ)
ಇದನ್ನೂ ಓದಿ: ಅತಿಹೆಚ್ಚು ಬಂಗಾರ ಬಳಸುವ ಟಾಪ್ 10 ದೇಶಗಳು: ಭಾರತಕ್ಕೆ ಎಷ್ಟನೇ ಸ್ಥಾನ?
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.