Suvarna News   | Asianet News
Published : Jan 31, 2021, 07:07 PM ISTUpdated : Feb 01, 2021, 04:32 PM IST

Live| Budget 2021: ಪೆಟ್ರೋಲ್, ಡೀಸೆಲ್ ಮೇಲೆ ಕೃಷಿ ಸೆಸ್, ಇದರ ಲಾಭ ಯಾರಿಗೆ?

ಸಾರಾಂಶ

ಒಂದು ಹಂತದ ಕೊರೋನಾ ಸಂಕಷ್ಟ ಮುಗಿಸಿದ ಭಾರತಕ್ಕೆ ಆರ್ಥಿಕ ಟಾನಿಕ್ ಅಗತ್ಯವಿತ್ತು. ಒಂದೆಡೆ ದೆಹಲಿಯಲ್ಲಿ ಪಟ್ಟು ಹಿಡಿದು, ಪ್ರತಿಭಟನೆ ನಡೆಸುತ್ತಿರುವ ರೈತರು, ಮತ್ತೊಂದೆಡೆ ಕಾಡುತ್ತಿರುವ ಕೊರೋನಾ. ಎಲ್ಲವಕ್ಕೂ ಅಗತ್ಯ ಔಷಧಿಯನ್ನು ನಿರ್ಮಲಾ ಕೊಡುತ್ತಾರೆಂಬ ನಿರೀಕ್ಷೆ ಇತ್ತು. ಯಾವುದೇ ಮಹತ್ವದ ಘೋಷಣೆಗಳಿಲ್ಲದ, ಇದ್ದದ್ದನ್ನೇ ನಿಭಾಯಿಸುವ ಮುಂಗಡ ಪತ್ರವನ್ನು ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಮಂಡಿಸಿದ್ದಾರೆ. ಬಜೆಟ್ ಘೋಷಣೆಗಳು ಹೇಗಿವೆ. ಇಲ್ಲಿದೆ ಲೈವ್ ಬ್ಲಾಗ್...

Live| Budget 2021:  ಪೆಟ್ರೋಲ್, ಡೀಸೆಲ್ ಮೇಲೆ ಕೃಷಿ ಸೆಸ್, ಇದರ ಲಾಭ ಯಾರಿಗೆ?

07:48 PM (IST) Feb 01

ಒಟ್ಟಾರೆ ಬಜೆಟ್ ಹೇಗಿದೆ. ಇಲ್ಲಿದೆ ನೋಡಿ ರೌಂಡಪ್

"

07:36 PM (IST) Feb 01

ಕೃಷಿಗೆ ಮೋದಿ ಸರಕಾರದ ಕೊಡುಗೆ ಏನು? ಹಿಂದಿನ ಕಾಂಗ್ರೆಸ್ ಸರಕಾರ ಕೊಟ್ಟಿದ್ದೇನು?

07:14 PM (IST) Feb 01

ಅನ್ನದಾತನಿಗೆ ನಿರ್ಮಲಾ ಕೊಟ್ಟಿದ್ದೇನು?

07:01 PM (IST) Feb 01

ಬಜೆಟ್‌ನಲ್ಲಿ ಕೃಷಿಗೆ ಒತ್ತು ಕೊಟ್ಟ ನಿರ್ಮಲಾ, ಸುದ್ದಿಗೋಷ್ಠಿಯಲ್ಲಿ ಹೇಳಿದ್ದಿಷ್ಟು

06:47 PM (IST) Feb 01

ಕೇಂದ್ರ ಬಜೆಟ್ 20201: ಮಾಜಿ ಸಿಎಂ ಕುಮಾರಸ್ವಾಮಿ ರಿಯಾಕ್ಷನ್ ಇದು

06:45 PM (IST) Feb 01

2200 ಪಾಯಿಂಟ್ಸ್ ಜಿಗಿದ ಸೆನ್ಸೆಕ್ಸ್, 22 ವರ್ಷಗಳ ಸಾರ್ವಕಾಲಿಕ ದಾಖಲೆ ಇದು

ಅತ್ತ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಬಜೆಟ್ ಮಂಡಿಸುತ್ತಿದ್ದಂತೆ, ಇತ್ತ ಶೇರು ಮಾರುಕಟ್ಟೆಯಲ್ಲಿ ಗೂಳಿಯೂ ಓಟವೂ ಜೋರಾಗಿತ್ತು. 
 

ಸೆನ್ಸೆಕ್ಸ್ ಬರೆದ ಹೊಸ ದಾಖಲೆ ಏನು? 

 

05:57 PM (IST) Feb 01

ಬಜೆಟ್ 2021 ಕೊರೋನಾ ಕಾಲದ ಅಗ್ನಿ ಪರೀಕ್ಷೆ: ನಿರ್ಮಲಾಗೆ ಭೇಷ್ ಎಂದ ಮೋದಿ

05:46 PM (IST) Feb 01

ಕ್ರೀಡೆಗೆ ಮಣೆ ಹಾಕದ ನಿರ್ಮಲಾ, ಕಡಿಮೆ ಅನುದಾನ ನೀಡಿಕೆ

 

05:44 PM (IST) Feb 01

ಶಿಕ್ಷಣಕ್ಕೆ ನಿರ್ಮಲಾ ಕೊಟ್ಟಿದ್ದೆಷ್ಟು?

 

05:29 PM (IST) Feb 01

ಕೇಂದ್ರ ಬಜೆಟ್‌ಗೆ ಭೇಷ್ ಎಂದ ಯಡಿಯೂರಪ್ಪ

05:13 PM (IST) Feb 01

ಚುನಾವಣೆ ಹೊಸ್ತಿಲಲ್ಲಿ ಇರೋ ರಾಜ್ಯಗಳಿಗೆ ಬಂಪರ್

 ತಮಿಳುನಾಡು, ಅಸ್ಸಾಂ, ಕೇರಳ ಹಾಗೂ ಪಶ್ಚಿಮ ಬಂಗಾಳ ರಸ್ತೆ ಅಭಿವೃದ್ಧಿಗೆ ಒತ್ತು ನೀಡಿದ ನಿರ್ಮಲಾ. 

ಕೊಟ್ಟಿದ್ದೆಷ್ಟು ಈ ರಾಜ್ಯಗಳಿಗೆ

 

 

04:26 PM (IST) Feb 01

ಮನೆ ಕಟ್ಟೋ ಪ್ಲ್ಯಾನ್ ಇರೋರಿಗೆ ನಿರ್ಮಲಾ ಗಿಫ್ಟ್ ಇದು

ಕೈಗೆಟಕುವ ದರದಲ್ಲಿ ಮನೆ ಕೊಳ್ಳುವ ಪ್ಲ್ಯಾನ್ ಇದ್ದರೆ ಸಾಕಷ್ಟು ಲಾಭ ಇವೆ.
ನಿರ್ಮಲಾ ಘೋಷಣೆ ಏನು?

 

 

04:22 PM (IST) Feb 01

ಕಂಪನಿಗಳು ಪಿಎಫ್ ಹಣ ಲೇಟಾಗಿ ಜಮಾ ಮಾಡಿದರೆ ಇನ್ನು ಸೀಗೋಲ್ಲ ತೆರಿಗೆ ವಿನಾಯತಿ

ಉದ್ಯೋಗಿಗಳಿಗೆ ವರವಾಗುವಂಥ ಘೋಷಣೆ ಇದಾದರೂ, ನಷ್ಟವೂ ಅವರಿಗೇ ಆಗೋದು. 
ಏನಿದೆ ಈ ಘೋಷಣೆಯಲ್ಲಿ

 

 

03:15 PM (IST) Feb 01

ಯಾವ ವಸ್ತುಗಳಿನ್ನು ದುಬಾರಿ?

 

03:12 PM (IST) Feb 01

ಯಾವ ವಸ್ತುಗಳಿನ್ನು ಅಗ್ಗ?

 

03:10 PM (IST) Feb 01

ರೈಲ್ವೆಗೆ ನಿರ್ಮಲಾ ಕೊಟ್ಟಿದ್ದೇನು?

 

02:20 PM (IST) Feb 01

ಭಾರತದ ಸರ್ವತೋಮುಖ ಅಭಿವೃದ್ಧಿಗೆ ನೆರವಾಗುವ ಬಜೆಟ್ ಇದು

02:00 PM (IST) Feb 01

ನಿರ್ಮಲಾ ಮಂಡಿಸಿದ ಪೂರ್ತಿ ಬಜೆಟ್ ಭಾಷಣ ಇಲ್ಲಿದೆ

01:44 PM (IST) Feb 01

ದೇಶದ ಆರೋಗ್ಯ ಕ್ಷೇತ್ರಕ್ಕೆ ನಿರ್ಮಲಾ ನೀಡಿದ ಟಾನಿಕ್ ಏನು?

 

01:43 PM (IST) Feb 01

ಸಾರಿಗೆ, ರಸ್ತೆ ನಿರ್ಮಾಣಕ್ಕೆ ಸಿಕ್ಕಿದ್ದೇನು?

 

01:11 PM (IST) Feb 01

ಪ್ರಾಮಾಣಿಕ ತೆರೆಗೆದಾರರಿಗೆ ಬಜೆಟ್ ಅನುಕೂಲ

01:10 PM (IST) Feb 01

ರೈತರ ಪ್ರಗತಿಗೆ ಒತ್ತು ನೀಡುವಂಥ ಬಜೆಟ್

01:08 PM (IST) Feb 01

ಮೊಬೈಲ್, ಫ್ರಿಡ್ಜ್, ಟಿವಿ ಬೆಲೆ ಏರಿಕೆ

ಮೊಬೈಲ್, ಫ್ರಿಡ್ಜ್, ಟಿವಿ ಬೆಲೆ ಏರಿಕೆ

01:05 PM (IST) Feb 01

ಯಥಾಸ್ಥಿತಿ ಬಜೆಟ್

ಕೊರೋನಾದಿಂದ ತತ್ತರಿಸಿರುವ ಆರ್ಥಿಕತೆಗೆ ಟಾನಿಕ್ ನೀಡುವಂಥ ಯಾವುದೇ ವಿಶೇಷ ಘೋಷಣೆ ಇಲ್ಲ. 
ಆದಾಯ ತೆರಿಗೆ ಸ್ಲ್ಯಾಬ್ ವಿಸ್ತರಣೆಯೂ ಇಲ್ಲ. 
ರೇಷ್ಮೆ, ಹತ್ತಿ ಬೆಳೆಯೋ ರೈತರಿಗೆ ತುಸು ಅನುಕೂಲವಾಗುವಂಥ ಬಜೆಟ್ ಇದು. 
 

01:03 PM (IST) Feb 01

ಶೋಕಿವಾಲಾಗಳಿಗೆ ಹೆಚ್ಚು ಹೊಡೆತ

ವಿದೇಶ ವಸ್ತುಗಳ ಕ್ರೇಜ್ ಇರುವವರಿಗೆ ಇನ್ನು ಹೊಡೆತ. ಉತ್ಪನ್ನಗಳಿಗೆ ಹೆಚ್ಚು ಹಣ ನೀಡೋದು ಅನಿವಾರ್ಯ.

01:02 PM (IST) Feb 01

ಹಿರಿಯ ನಾಗರಿಕರಿಗೆ ಸಿಕ್ಕಿದ್ದೇನು?

75 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಯಾರು ಪಿಂಚಣಿ ಮತ್ತು ಠೇವಣಿಯ ಆಧಾರದ ಮೇಲೆ ಜೀವನ ನಡೆಸುತ್ತಾರೋ ಅವರು ಟ್ಯಾಕ್ಸ್ ಫೈಲ್ ಮಾಡೋ ಆಗತ್ಯವಿಲ್ಲ.

ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
 

01:01 PM (IST) Feb 01

ಕೋವಿಡಿ ಸೆಸ್ ಇಲ್ಲ

 ಹಣದ ಕೊರತೆ ಎದುರಿಸುತ್ತಿರುವ ಕೇಂದ್ರ ಸರಕಾರ ಕೋವಿಡ್ ಸೆಸ್ ಹೇರಬಹುದು ಎನ್ನಲಾಗುತ್ತಿತ್ತು. ಆದರೆ, ಅಂಥ ಪ್ರಸ್ತಾವನೆ ಇಲ್ಲ. 
 

 

12:55 PM (IST) Feb 01

ಹತ್ತಿ ಹಾಗೂ ರೇಷ್ಮೆಗೆ ಕಸ್ಟಮ್ ಡ್ಯೂಟಿ ಹೆಚ್ಚಳ

ಹತ್ತಿಗೆ ಶೇ.10 ಹಾಗೂ ರೇಷ್ಮೆಗೆ ಶೇ.15ರಷ್ಟು ಹೆಚ್ಚಾದ ಕಷ್ಟಮ್ ಡ್ಯೂಟಿ. ನಮ್ಮ ದೇಶದಲ್ಲಿ ಬೆಳೆಯುವ ಹತ್ತಿ, ರೇಷ್ಮೆ ಬೆಳೆೆಗಳಿದೆ ಇದು ಅನಕೂಲ.

12:53 PM (IST) Feb 01

ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡುವವರ ಸಂಖ್ಯೆಯಲ್ಲಿ ಹೆಚ್ಚಳ

ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡುವವರ ಸಂಖ್ಯೆಯಲ್ಲಿ ಹೆಚ್ಚಳ

2014 ರಲ್ಲಿ 3.31 ಕೋಟಿ ಜನ ಆದಾಯ ತೆರಿಗೆ ಘೋಷಣೆ ಮಾಡಿದ್ರು

2020 ರಲ್ಲಿ 6.48 ಕೋಟಿ ಜನ ಆದಾಯ ತೆರಿಗೆ ಘೋಷಣೆ ಮಾಡಿದ್ದಾರೆ

12:52 PM (IST) Feb 01

ಆದಾಯ ತೆರಿಗೆ ವಿನಾಯತಿಯಲ್ಲಿ ಯಾವುದೇ ಬದಲಾವಣೆಯಿಲ್ಲ

ಆದಾಯ ತೆರಿಗೆ ವಿನಾಯತಿಯಲ್ಲಿ ಯಾವುದೇ ಬದಲಾವಣೆಯಿಲ್ಲ

12:52 PM (IST) Feb 01

ಬಜೆಟ್ ಮಂಡನೆ ಮುಗಿಸಿದ ವಿತ್ತ ಸಚಿವೆ ನಿರ್ಮಲಾ ಸೀತರಾಮನ್

ಬಜೆಟ್ ಮಂಡನೆ ಮುಗಿಸಿದ ವಿತ್ತ ಸಚಿವೆ ನಿರ್ಮಲಾ ಸೀತರಾಮನ್

12:51 PM (IST) Feb 01

ಪೇಪರ್, ರಹಿತ ವ್ಯವಹಾರಕ್ಕೆ ಒತ್ತು

ಪೇಪರ್, ರಹಿತ ವ್ಯವಹಾರಕ್ಕೆ ಒತ್ತು

12:51 PM (IST) Feb 01

ಆಟೋ ಭಾಗಗಳ ಕಸ್ಟಮ್ ಡ್ಯೂಟಿ ಹೆಚ್ಚಳ, ವಾಹನಗಳ ಬೆಲೆ ಮತ್ತಷ್ಟು ತುಟ್ಟಿಯಾಗೋ ಸಾಧ್ಯತೆ.

ಆಟೋ ಭಾಗಗಳ ಕಸ್ಟಮ್ ಡ್ಯೂಟಿ ಹೆಚ್ಚಳ, ವಾಹನಗಳ ಬೆಲೆ ಮತ್ತಷ್ಟು ತುಟ್ಟಿಯಾಗೋ ಸಾಧ್ಯತೆ.

12:48 PM (IST) Feb 01

ಚಿನ್ನ, ಬೆಳ್ಳಿ ಕಸ್ಟಮ್ ಡ್ಯೂಟಿಯಲ್ಲಿ ಬದಲಾವಣೆ.

ಚಿನ್ನ, ಬೆಳ್ಳಿ ಕಸ್ಟಮ್ ಡ್ಯೂಟಿಯಲ್ಲಿ ಬದಲಾವಣೆ. 

12:41 PM (IST) Feb 01

ಕಾರ್ಮಿಕ ಕಲ್ಯಾಣ

ಕಂಪನಿಗಳು ತಕ್ಷಣವೇ ಪಿಎಫ್ ಹಣವನ್ನು ಇನ್ನು ತುಂಬಬೇಕು, ತಡವಾಗಿ ತುಂಬಿದ ಮೊತ್ತವನ್ನು ತೆರಿಗೆ ವಿನಾಯತಿಗೆ ಪರಿಗಣಿಸುವುದಿಲ್ಲ. 

12:40 PM (IST) Feb 01

ಇನ್ನು ತೆರಿಗೆ ಅರ್ಜಿಯನ್ನು ಫಿಲ್ ಮಾಡೋ ಅಗತ್ಯವಿಲ್ಲ. ಮೊದಲೇ ತುಂಬಿರುತ್ತದೆ.

ಇನ್ನು ತೆರಿಗೆ ಅರ್ಜಿಯನ್ನು ಫಿಲ್ ಮಾಡೋ ಅಗತ್ಯವಿಲ್ಲ. ಮೊದಲೇ ತುಂಬಿರುತ್ತದೆ. ಬ್ಯಾಂಕ್, ಪೋಸ್ಟ್ ಆಫೀಸ್ ಹಾಗೂ ಕ್ಯಾಪಿಟಲ್ ಗೇನ್ಸ್ ವಿವರ ಫಿಲ್ ಆಗಿಯೇ ಫಾರ್ಮ್ ಬರಲಿದೆ. 

12:39 PM (IST) Feb 01

ಕೈ ಗಟಕುವ ದರದಲ್ಲಿ ಮನೆ ಕೊಳ್ಳಲು ನೀಡುತ್ತಿದ್ದ ಬೆನಫಿಟ್ಸ್ ಮುಂದಿನ ವರ್ಷ ಮಾರ್ಚ್‌ವರೆಗೆ ವಿಸ್ತರಣೆ.

ಕೈ ಗಟಕುವ ದರದಲ್ಲಿ ಮನೆ ಕೊಳ್ಳಲು ನೀಡುತ್ತಿದ್ದ ಬೆನಫಿಟ್ಸ್ ಮುಂದಿನ ವರ್ಷ ಮಾರ್ಚ್‌ವರೆಗೆ ವಿಸ್ತರಣೆ.

12:37 PM (IST) Feb 01

ತೆರಿಗೆ ಮಾಹಿತಿ ಸಲ್ಲಿಸಲು ಈಗಿರುವ ಮೂರು ವರ್ಷದ ಮಿತಿಯನ್ನು ಆರು ವರ್ಷಗಳಿಗೆ ಏರಿಸಿದ ವಿತ್ತ ಸಚಿವೆ

ತೆರಿಗೆ ಮಾಹಿತಿ ಸಲ್ಲಿಸಲು ಈಗಿರುವ ಮೂರು ವರ್ಷದ ಮಿತಿಯನ್ನು ಆರು ವರ್ಷಗಳಿಗೆ ಏರಿಸಿದ ವಿತ್ತ ಸಚಿವೆ

12:36 PM (IST) Feb 01

ಅಡ್ವಾನ್ಸ್ ಟ್ಯಾಕ್ಸ್ ಸಲ್ಲಿಸಲು ಡೆವಿಡೆಂಡ್ ಆದಾಯವನ್ನು ಇನ್ನು ಮುಂಗಡವಾಗಿ ಗಣನೆಗೆ ತೆಗೆದುಕೊಳ್ಳುವುದಿಲ್ಲ

ಅಡ್ವಾನ್ಸ್ ಟ್ಯಾಕ್ಸ್ ಸಲ್ಲಿಸಲು ಡೆವಿಡೆಂಡ್ ಆದಾಯವನ್ನು ಇನ್ನು ಮುಂಗಡವಾಗಿ ಗಣನೆಗೆ ತೆಗೆದುಕೊಳ್ಳುವುದಿಲ್ಲ

12:35 PM (IST) Feb 01

ಟ್ಯಾಕ್ಸ್ ಆಡಿಟ್ ಲಿಮಿಟ್ 5 ಕೋಟಿ ರೂ.ನಿಂದ 10 ಕೋಟಿಗೆ ಏರಿಕೆ

ಟ್ಯಾಕ್ಸ್ ಆಡಿಟ್ ಲಿಮಿಟ್ 5 ಕೋಟಿ ರೂ.ನಿಂದ 10 ಕೋಟಿಗೆ ಏರಿಕೆ