Published : Feb 01, 2019, 10:32 AM ISTUpdated : Feb 01, 2019, 01:30 PM IST

Live| Union Budget 2019: ಎಲ್ಲರಿಗೂ ಬಜೆಟ್ ಪ್ರಸಾದ, ಸರ್ವೇಜನಃ ಸುಖಿನೋಭವಂತು

ಸಾರಾಂಶ

ಲೋಕಸಭೆ ಚುನಾವಣೆಗೆ ಹಲವು ಕೆಲವೇ ತಿಂಗಳು ಬಾಕಿ ಇರುವಾಗಲೇ, ಮೋದಿ ಸರ್ಕಾರದಿಂದ ಮಧ್ಯಂತರ ಬಜೆಟ್ ಮಂಡಿಸಿದೆ. ನಿರೀಕ್ಷೆಯಂತೆ ಇದು ಜನಪ್ರಿಯ ಬಜೆಟ್. ಕಾರ್ಮಿಕ, ರೈತ, ಮಧ್ಯಮ ವರ್ಗದವರ ಆಶಯದೊಂದಿಗೆ, ಮೇಲ್ವರ್ಗದ ಜನರಿಗೂ ಅನುಕೂಲವಾಗುವಂಥ ಅಂಶಗಳಿರುವುದು ವಿಶೇಷ. ಸರ್ವೇಜನಃ ಸುಖಿನೋ ಭವಂತು ಎಂಬಂತೆ 'ಎಲ್ಲರೊಂದಿಗೆ ವಿಕಾಸ...' ಎಂಬ ತತ್ವ ಬಜೆಟ್‌ನಲ್ಲಿ ಪ್ರತಿಬಿಂಬಿಸಿದೆ.

Live| Union Budget 2019:  ಎಲ್ಲರಿಗೂ ಬಜೆಟ್ ಪ್ರಸಾದ, ಸರ್ವೇಜನಃ ಸುಖಿನೋಭವಂತು

02:21 PM (IST) Feb 01

ದುಡಿಯುವ ಕೈಗಳಿಗೆ ಶಕ್ತಿ ತುಂಬಿದ ಮೋದಿ ಸರ್ಕಾರ: ಏನೆನೆಲ್ಲಾ ಸಹಾಯ?

ಮಧ್ಯಂತರ ಬಜೆಟ್ ನಲ್ಲಿ ಕಾರ್ಮಿಕ ವಲಯಕ್ಕೆ ಭರಪೂರ ಕೊಡುಗೆ ನೀಡಿರುವ ಕೇಂದ್ರ ಸರ್ಕಾರ, ಪ್ರಮುಖವಾಗಿ ಅಸಂಘಟಿತ ಕಾರ್ಮಿಕ ವಲಯಕ್ಕೆ ಸಿಹಿ ಸುದ್ದಿ ನೀಡಿದೆ.

02:04 PM (IST) Feb 01

ಆಯುಷ್ಮಾನ್ ಭಾರತ್: ಕೊಟ್ಟಷ್ಟು ಲಾಭ ಮಾಡಿಕೊಂಡಿದ್ದೀರಾ?

ಈ ಬಾರಿಯ ಮಧ್ಯಂತರ ಬಜೆಟ್ ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ ನೀಡಿಲಾಗಿದ್ದು, ಗ್ರಾಮೀಣ ಆರೋಗ್ಯ ಕ್ಷೇತದಲ್ಲಿ ಹಲವು ಕ್ರಾಂತಿಕಾರಕ ಬದಲಾವಣೆಗೆ ಮುನ್ನುಡಿ ಬರೆಯಲಾಗಿದೆ.

ಆಯುಷ್ಮಾನ್ ಭಾರತ್: ಕೊಟ್ಟಷ್ಟು ಲಾಭ ಮಾಡಿಕೊಂಡಿದ್ದೀರಾ?

01:45 PM (IST) Feb 01

ಕೈಗಾರಿಕೆ ವಲಯಕ್ಕೆ ಅಭಯಹಸ್ತ: ಅಸಂಘಟಿತ ಕಾರ್ಮಿಕರಿಗೆ 3 ಸಾವಿರ ಪಿಂಚಣಿ!

ಮಧ್ಯಂತರ ಬಜೆಟ್ ನಲ್ಲಿ ಕೈಗಾರಿಕೆಗೆ ಭೃಪೂರ ಕೊಡುಗೆ ನೀಡಿರುವ ಕೇಂದ್ರ ಸರ್ಕಾರ, ಕೈಗಾರಿಕೋದ್ಯಮ ವಲಯದ ಸಂತಸ ಇಮ್ಮಡಿಗೊಳಿಸಿದೆ.

ಕೈಗಾರಿಕೆ ವಲಯಕ್ಕೆ ಅಭಯಹಸ್ತ: ಅಸಂಘಟಿತ ಕಾರ್ಮಿಕರಿಗೆ 3 ಸಾವಿರ ಪಿಂಚಣಿ!

01:36 PM (IST) Feb 01

ಸಿನಿಮಾ ರಂಗದ ರಂಗು ಹೆಚ್ಚಿಸಿದ ಬಜೆಟ್: ಚಿತ್ರೋದ್ಯಮ ಫುಲ್ ಖುಷ್!

ಈ ಬಾರಿಯ  ಮಧ್ಯಂತರ ಬಜೆಟ್ ನಲ್ಲಿ ಮನರಂಜನೆ ಕ್ಷೇತ್ರಕ್ಕೆ ಗಮನಾರ್ಹ ಕೊಡುಗೆ ನೀಡಿರುವ ಕೇಂದ್ರ ಸರ್ಕಾರ, ಪ್ರಮುಖವಾಗಿ ಸಿನಿಮಾ ಉದ್ಯಮಕ್ಕೆ ಸಿಹಿ ಸುದ್ದಿ ನೀಡಿದೆ.

ಸಿನಿಮಾ ರಂಗದ ರಂಗು ಹೆಚ್ಚಿಸಿದ ಬಜೆಟ್: ಚಿತ್ರೋದ್ಯಮ ಫುಲ್ ಖುಷ್!

01:09 PM (IST) Feb 01

ಬಜೆಟ್ ಮಂಡನೆ ಮುಕ್ತಾಯ

ಕೇಂದ್ರ ಸರ್ಕಾರದ ಮಧ್ಯಮತರ ಬಜೆಟ್ ಮಂಡನೆ ಮುಕ್ತಾಯ. ಸಂಸತ್ ಅಧಿವೇಶನ ಸೋಮವಾರಕ್ಕೆ ಮುಂದೂಡಿಕೆ

01:04 PM (IST) Feb 01

ಬಜೆಟ್ ಮಂಡಿಸಿದ ಸಚಿವ ಪಿಯೂಷ್ ಗೋಯಲ್‌ಗೆ ಅರುಣ್ ಜೇಟ್ಲಿ ಅಭಿನಂದನೆ

01:01 PM (IST) Feb 01

ನಿಮ್ಮ ವೇತನ 41,666 ರೂ.?: ತೆರಿಗೆ ಮರೆತು ಬಿಡಿ ಅಂದಿದೆ ಕೇಂದ್ರ!

ಇನ್ನು ಮುಂದೆ ವಾರ್ಷಿಕ 5 ಲಕ್ಷ ರೂ. ವರೆಗೆ  ಆದಾಯ ಇರುವವರು ತೆರಿಗೆ ವಿನಾಯ್ತಿ ಪಡೆದಿದ್ದಾರೆ. ಅಂದರೆ ಮಾಸಿಕ 41,666 ರೂ. ವೇತನ ಹೊಂದಿರುವವರು ಇನ್ನು ಮುಂದೆ ಯಾವುದೇ ತೆರಿಗೆ ಕಟ್ಟಬೇಕಾಗಿಲ್ಲ. ಈ ಮೊದಲು 20,833 ರೂ. ಇತ್ತು.

ನಿಮ್ಮ ವೇತನ 41,666 ರೂ.?: ತೆರಿಗೆ ಮರೆತು ಬಿಡಿ ಅಂದಿದೆ ಕೇಂದ್ರ!

12:53 PM (IST) Feb 01

ಸೈನ್ಯ ದೇಶದ ಚೈತನ್ಯ: ರಕ್ಷಣಾ ವಲಯಕ್ಕೆ ಅಗಾಧ ಮೊತ್ತ!

ಎನ್‌ಡಿಎ ಸರ್ಕಾರದ ಮಧ್ಯಂತರ ಬಜೆಟ್‌ನಲ್ಲಿ ರಕ್ಷಣಾ ವಲಯಕ್ಕೆ ಭಾರೀ ಮೊತ್ತವನ್ನು ಮೀಸಲಿರಿಸಲಾಗಿದ್ದು, ದೇಶದ ಸುರಕ್ಷತೆಯಲ್ಲಿ ಯಾವುದೇ ರಾಜಿ ಇಲ್ಲ ಎಂಬ ಸ್ಪಷ್ಟ ಸಂದೇಶ ರವಾನೆಯಾಗಿದೆ.

ಸೈನ್ಯ ದೇಶದ ಚೈತನ್ಯ: ರಕ್ಷಣಾ ವಲಯಕ್ಕೆ ಅಗಾಧ ಮೊತ್ತ!

12:51 PM (IST) Feb 01

5 ಲಕ್ಷಕ್ಕೆ ತೆರಿಗೆ ಮಿತಿ ಹೆಚ್ಚಿಸಿದ ಬೆನ್ನಲ್ಲೇ ಸೆನ್ಸೆಕ್ಸ್ ನಲ್ಲಿ ಏರಿಕೆ

ಮುಂಬೈ ಷೇರುಪೇಟೆಯ ಮೇಲೆ ಬಜೆಟ್ ಎಫೆಕ್ಟ್. 5 ಲಕ್ಷಕ್ಕೆ ತೆರಿಗೆ ಮಿತಿ ಹೆಚ್ಚಿಸಿದ ಬೆನ್ನಲ್ಲೇ ಸೆನ್ಸೆಕ್ಸ್ನಲ್ಲಿ ಏರಿಕೆ. 450 ಅಂಕಗಳ ಏರಿಕೆ ಕಂಡ ಸೆನ್ಸೆಕ್ಸ್. ನಿಫ್ಟಿಯಲ್ಲೂ ಬರೋಬ್ಬರಿ 150 ಅಂಕಗಳ ಏರಿಕೆ. ತೆರಿಗೆ ಮಿತಿ ಹೆಚ್ಚಿಸುವ ಮುನ್ನ 150 ಅಂಕ ಏರಿಕೆ ಕಂಡಿದ್ದ ಸೆನ್ಸೆಕ್ಸ್
 

12:48 PM (IST) Feb 01

ಜಾಗತಿಕ ಹವಾಮಾನ ಬದಲಾವಣೆ ತಡೆ ಪ್ರಯತ್ನಗಳಿಗೆ ಭಾರತದ್ದೇ ನಾಯಕತ್ವ

ವಂದೇ ಭಾರತ್ ಎಕ್ಸ್‌ಪ್ರೆಸ್‌ನಿಂದ ವೇಗದ, ಸುರಕ್ಷಿತ ಸೇವೆ. ಮೇಕ್ ಇನ್ ಇಂಡಿಯಾ ಯೋಜನೆಗೆ ಇದರಿಂದ ಬೃಹತ್ ಉತ್ತೇಜನ. ಜಾಗತಿಕ ಹವಾಮಾನ ಬದಲಾವಣೆ ತಡೆ ಪ್ರಯತ್ನಗಳಿಗೆ ಭಾರತದ್ದೇ ನಾಯಕತ್ವ 

12:46 PM (IST) Feb 01

40 ಸಾವಿರವರೆಗಿನ ಬಡ್ಡಿಗೆ ಟಿಡಿಎಸ್ ಇಲ್ಲ

ಟಿಡಿಎಸ್ ಮಿತಿಯಲ್ಲೂ ಏರಿಕೆ. 40 ಸಾವಿರವರೆಗಿನ ಬಡ್ಡಿಗೆ ಟಿಡಿಎಸ್ ಇಲ್ಲ. ಈ ಮುಂಚೆ 10 ಸಾವಿರಕ್ಕೆ ಟಿಡಿಎಸ್ ಕಟ್ಟಬೇಕಿತ್ತು. ಟಿಡಿಎಸ್ ಮಿತಿ ಹೆಚ್ಚಳದಿಂದ ಠೇವಣಿದಾರರಿಗೆ ಲಾಭ. ಮನೆ ಬಾಡಿಗೆ ಮೇಲಿನ ಸೆಸ್ ಇಳಿಕೆ.

12:42 PM (IST) Feb 01

2030ಕ್ಕೆ ಎಲ್ಲ ವಾಹನಗಳು ಎಲೆಕ್ಟ್ರಿಕ್ ವಾಹನಗಳಾಗಿ ಪರಿವರ್ತನೆ

ವಿಷನ್ 2030: ಭಾರತದ ಹಣಕಾಸು 10 ಟ್ರಿಲಿಯನ್ ಡಾಲರ್ ತಲುಪಬೇಕು. 2030ಕ್ಕೆ ಎಲ್ಲ ವಾಹನಗಳು ಎಲೆಕ್ಟ್ರಿಕ್ ವಾಹನಗಳಾಗಿ ಪರಿವರ್ತನೆ. ಪೆಟ್ರೋಲ್, ಡೀಸೆಲ್, ಗ್ಯಾಸ್ ಆಮದು ಮಾಡಿಕೊಳ್ಳದ ಭಾರತ ನಿರ್ಮಾಣವೇ ಗುರಿ

12:41 PM (IST) Feb 01

ನ್ಯಾಷನಲ್ ಎಜುಕೇಷನ್ ಮಿಷನ್ ಗಾಗಿ 38,572 ಕೋಟಿ ರೂಪಾಯಿ

ರಾಷ್ಟ್ರೀಯ ಶಿಕ್ಷಣ ಯೋಜನೆಗೆ ಅನುದಾನ. ನ್ಯಾಷನಲ್ ಎಜುಕೇಷನ್ ಮಿಷನ್ ಗಾಗಿ 38,572 ಕೋಟಿ ರೂಪಾಯಿ

12:39 PM (IST) Feb 01

ಪರಿಶಿಷ್ಟ ಜಾತಿ ಅಭಿವೃದ್ಧಿಗೆ 76,800 ಕೋಟಿ ರೂಪಾಯಿ ಅನುದಾನ

ಪ.ಜಾತಿ ಹಾಗೂ ಪ.ಪಂಗಡ ಅಭಿವೃದ್ಧಿ. ಪರಿಶಿಷ್ಟ ಜಾತಿ ಅಭಿವೃದ್ಧಿಗೆ 76,800 ಕೋಟಿ ರೂಪಾಯಿ ಅನುದಾನ. ಪರಿಶಿಷ್ಟ ಪಂಗಡ ಅಭಿವೃದ್ಧಿಗೂ ಈ ಬಾರಿ ಹೆಚ್ಚಿನ ಅನುದಾನ ವ್ಯವಸ್ಥೆ

12:33 PM (IST) Feb 01

5 ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ಇಲ್ಲ

ಜನಸಾಮಾನ್ಯರ ತೆರಿಗೆ ಹೊರೆ ಇಳಿಸಿದ ಕೇಂದ್ರ ಸರ್ಕಾರ. 5 ಲಕ್ಷದವರೆಗೂ ಆದಾಯ ಹೊಂದಿರುವವರಿಗೆ ತೆರಿಗೆ ಇಲ್ಲ. ಶೇ .5 ರಷ್ಟು ಇದ್ದ ತೆರಿಗೆ ರದ್ದುಗೊಳಿಸಿದ ಕೇಂದ್ರ ಸರ್ಕಾರ. 6.5 ಲಕ್ಷ ಆದಾಯದವರೆಗೂ ತೆರಿಗೆ ಇಲ್ಲ . ಪಿ.ಎಫ್‌ ಸೇರಿದಂತೆ ಹಲವು ಉಳಿತಾಯಗಳಿಗೂ ಟ್ಯಾಕ್ಸ್ ಇಲ್ಲ. ಮಧ್ಯಮ ವರ್ಗ ಸೇರಿದಂತೆ ಸುಮಾರು 3 ಕೋಟಿ ಜನರಿಗೆ ತೆರಿಗೆ ಇಲ್ಲ. 2 ಲಕ್ಷದವರೆಗಿನ ಗೃಹ ಸಾಲಕ್ಕೆ ತೆರಿಗೆ ಇಲ್ಲ. ಶಿಕ್ಷಣ ಸಾಲಕ್ಕೂ ತೆರಿಗೆ ಇಲ್ಲ. 41 ಸಾವಿರದ 666 ರೂ. ಸಂಬಳದಾರರಿಗೆ ಟ್ಯಾಕ್ಸ್ ಇಲ್ಲ. 20 ಸಾವಿರ 833 ರೂ.ಗಿಂತ ಸಂಬಳ ಹೆಚ್ಚಿದ್ದವರು ಟ್ಯಾಕ್ಸ್ ಕಟ್ಟಬೇಕಿತ್ತು

12:30 PM (IST) Feb 01

2022ರೊಳಗೆ ಸ್ವದೇಶಿ ಉಪಗ್ರಹಗಳ ಉಡಾವಣೆ ತೀರ್ಮಾನ

2022ರೊಳಗೆ ಸ್ವದೇಶಿ ಉಪಗ್ರಹಗಳ ಉಡಾವಣೆ ತೀರ್ಮಾನ. ಗಗನಯಾನ ಕ್ಷೇತ್ರಕ್ಕೆ ಕೇಂದ್ರದಿಂದ ಸಂಪೂರ್ಣ ಸಹಕಾರ

12:29 PM (IST) Feb 01

ಸೋಲಾರ್ ವಿದ್ಯುತ್ ಉತ್ಪಾದನೆಯಲ್ಲಿ 10 ಪಟ್ಟು ಹೆಚ್ಚಳ

ಸೋಲಾರ್ ವಿದ್ಯುತ್ ಉತ್ಪಾದನೆಯಲ್ಲಿ 10 ಪಟ್ಟು ಹೆಚ್ಚಳ. ಶೇ. 50ರಷ್ಟು ಮೊಬೈಲ್ ಡೇಟಾ ಕ್ಷೇತ್ರದಲ್ಲಿ ಅಭಿವೃದ್ಧಿ. ಮೊಬೈಲ್ ಕಂಪನಿಗಳ ಉದ್ಯಮದ ವಿಸ್ತರಣೆಗೆ ಅನುಕೂಲ.

12:26 PM (IST) Feb 01

ಸಾಗರ ಮಾಲಾ ಯೋಜನೆಯಡಿಯಲ್ಲಿ ಬಂದರುಗಳ ಅಭಿವೃದ್ಧಿ

ಸಾಗರ ಮಾಲಾ ಯೋಜನೆಯಡಿಯಲ್ಲಿ ಬಂದರುಗಳ ಅಭಿವೃದ್ಧಿ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ತ್ವರಿತಗತಿ ಕಾಮಗಾರಿ. ದೇಶಾದ್ಯಂತ ದಿನಕ್ಕೆ 27 ಕಿಲೋಮೀಟರ್ ಹೆದ್ದಾರಿ ರಸ್ತೆ ನಿರ್ಮಾಣದ ದಾಖಲೆ.

12:25 PM (IST) Feb 01

ಸಿನಿಮಾ ಶೂಟಿಂಗ್ ಗೆ ಏಕಗವಾಕ್ಷಿ ಯೋಜನೆ ಅಡಿ ಅನುಮತಿ

ಸಿನಿಮಾ ಶೂಟಿಂಗ್ ಗೆ ಏಕಗವಾಕ್ಷಿ ಯೋಜನೆ ಅಡಿ ಅನುಮತಿ. ಸಿನಿಮಾ ಶೂಟಿಂಗ್ ಗೆ ಶೀಘ್ರ ಅನುಮತಿ ನೀಡಲು ವ್ಯವಸ್ಥೆ

12:17 PM (IST) Feb 01

ಮಧ್ಯಮ ವರ್ಗದ ಅವಶ್ಯಕ ಸಾಮಗ್ರಿಗಳು 0 ಯಿಂದ ಶೇ.5ರಷ್ಟು ಜಿಎಸ್ಟಿ ವ್ಯಾಪ್ತಿಯಲ್ಲಿವೆ

12:16 PM (IST) Feb 01

ಕಪ್ಪುಹಣದ ವಿರುದ್ಧ ಗಧಾಪ್ರಹಾರ

1 ಕೋಟಿ ಜನರು ಮೊದಲ ಬಾರಿಗೆ ಐಟಿ ರಿಟರ್ನ್ ಸಲ್ಲಿಸಿದ್ದಾರೆ. ನೋಟ್ ಬ್ಯಾನ್ ನಂತರ ತೆರಿಗೆ ಪಾವತಿದಾರರ ಸಂಖ್ಯೆ ಹೆಚ್ಚಳ. ಕಪ್ಪುಹಣದ ವಿರುದ್ಧ ಗಧಾಪ್ರಹಾರ ಮಾಡಿದ್ದೇವೆ. 1.30 ಲಕ್ಷ ಕೋಟಿ ರೂ. ತೆರಿಗೆ ವ್ಯಾಪ್ತಿಗೆ ಬಂದಿದೆ. ದೊಡ್ಡ ಮೊತ್ತದ ನಗದು ಹೊಂದಿರುವವರು ಆದಾಯ ಮೂಲ ಘೋಷಿಸಲೇಬೇಕು.

12:14 PM (IST) Feb 01

ಉಳುವಾ ಯೋಗಿಗೆ ಮೋದಿ ಸರ್ಕಾರದ ಬಂಪರ್ ಗಿಫ್ಟ್: 6 ಸಾವಿರ ಸಹಾಯಧನ!

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಮಧ್ಯಂತರ ಬಜೆಟ್ ನ್ನು ಹಂಗಾಮಿ ವಿತ್ತ ಸಚಿವ ಪಿಯೂಷ್ ಗೋಯೆಲ್ ಮಂಡಿಸುತ್ತಿದ್ದಾರೆ. ಈ ವೇಳೆ ದೇಶದ ಕೃಷಿ ವಲಯಕ್ಕೆ ಅತ್ಯಂತ ಸಿಹಿ ಸುದ್ದಿ ನೀಡಿರುವ ಮೋದಿ ಸರ್ಕಾರ, ಸಣ್ಣ ಮತ್ತು ಮಧ್ಯಮ ಹಿಡುವಳಿದಾರರಿಗೆ ಬಂಪರ್ ಕೊಡುಗೆ ಘೋಷಿಸಿದೆ.

ಉಳುವಾ ಯೋಗಿಗೆ ಮೋದಿ ಸರ್ಕಾರದ ಬಂಪರ್ ಗಿಫ್ಟ್: 6 ಸಾವಿರ ಸಹಾಯಧನ!

12:12 PM (IST) Feb 01

ಉಜ್ವಲಾ ಯೋಜನೆಯಡಿ 8 ಕೋಟಿ ಎಲ್‌ಪಿಜಿ ಸಂಪರ್ಕ

ಉಜ್ವಲಾ ಯೋಜನೆಯಡಿ 8 ಕೋಟಿ ಎಲ್‌ಪಿಜಿ ಸಂಪರ್ಕ. ಅಲೆಮಾರಿಗಳ ಅಭಿವೃದ್ಧಿಗೆ ವಿಶೇಷ ಮಂಡಳಿ. ಪ್ರಧಾನ ಮಂತ್ರಿ ಶ್ರಮ ಯೋಗಿ ಮಂಧನ್ ಯೋಜನೆ

12:10 PM (IST) Feb 01

ಲೋಕಸಭೆಯಲ್ಲಿ ಬಜೆಟ್ ಮಂಡನೆ ಆರಂಭ: ಮುಗಿಲೆತ್ತರಕ್ಕೆ ಸೆನ್ಸೆಕ್ಸ್!

ಹಾಲಿ ಎನ್‌ಡಿಎ ಸರ್ಕಾರ ಕೊನೆಯ ಬಜೆಟ್ ಮಂಡನೆ ಆರಂಭವಾಗುತ್ತಿದ್ದಂತೆಯೇ, ಇತ್ತ ಭಾರತೀಯ ಷೇರುಮಾರುಕಟ್ಟೆ ಮೇಲೆ ಬಜೆಟ್ ಸಕಾರಾತ್ಮಕ ಪರಿಣಾಮ ಬೀರಿದೆ. ಸೆನ್ಸೆಕ್ಸ್ 160 ಅಂಕಗಳ ಏರಿಕೆ ಕಂಡಿದೆ.

ಲೋಕಸಭೆಯಲ್ಲಿ ಬಜೆಟ್ ಮಂಡನೆ ಆರಂಭ: ಮುಗಿಲೆತ್ತರಕ್ಕೆ ಸೆನ್ಸೆಕ್ಸ್!

12:08 PM (IST) Feb 01

ವೈಯಕ್ತಿಕ ಆದಾಯ ತೆರಿಗೆಯಲ್ಲಿ ಬದಲಾವಣೆ ಇಲ್ಲ

ವೈಯಕ್ತಿಕ ಆದಾಯ ತೆರಿಗೆಯಲ್ಲಿ ಬದಲಾವಣೆ ಇಲ್ಲ. ತೆರಿಗೆ ಮಿತಿ 5 ಲಕ್ಷಕ್ಕೆ ಏರಿಕೆ ನಿರೀಕ್ಷಿಸಿದ್ದ ಜನತೆ. 

12:06 PM (IST) Feb 01

ಮರು ಪರಿಶೀಲನೆ ಇಲ್ಲದೇ ಶೇ. 99.54 ರಷ್ಟು ಐಟಿ ರಿಟರ್ನ್ಸ್

ಮರು ಪರಿಶೀಲನೆ ಇಲ್ಲದೇ ಶೇ. 99.54 ರಷ್ಟು ಐಟಿ ರಿಟರ್ನ್ಸ್. 24 ಗಂಟೆಯೊಳಗೆ ಎಲ್ಲ ರಿಟರ್ನ್ ಫೈಲ್ ಇತ್ಯರ್ಥ. ಇನ್ಮುಂದೆ ಆನ್ಲೈನ್ ಮೂಲಕವೇ ಎಲ್ಲ ತೆರಿಗೆ ನಿರ್ವಹಣೆ. ಆದಾಯ ತೆರಿಗೆಯಲ್ಲಿ ಬದಲಾವಣೆ ಇಲ್ಲ. 24 ಗಂಟೆಯಲ್ಲೇ ಟಿಡಿಎಸ್ ಮರು ಪಾವತಿ

12:05 PM (IST) Feb 01

ತೆರಿಗೆ ಸಂಗ್ರಹ ದ್ವಿಗುಣಗೊಂಡಿದೆ

ತೆರಿಗೆ ಸಂಗ್ರಹ ದ್ವಿಗುಣಗೊಂಡಿದೆ. 2013-14ರಲ್ಲಿ 6.38 ಲಕ್ಷ ಕೋಟಿ ಇತ್ತು. ಈಗ ತೆರಿಗೆ ಸಂಗ್ರಹ 12 ಲಕ್ಷ ಕೋಟಿ ಮೀರಿದೆ

12:03 PM (IST) Feb 01

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ 2 ಹೆಕ್ಟೇರ್ ಕ್ಕಿಂತ ಕಡಿಮೆ ಭೂಮಿ

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ 2 ಹೆಕ್ಟೇರ್ ಕ್ಕಿಂತ ಕಡಿಮೆ ಭೂಮಿ ಹೊಂದಿರುವ ದೇಶದ ರೈತರಿಗೆ ಪ್ರತಿ ವರ್ಷ 3 ಕಂತಿನಲ್ಲಿ 6000 ರೂ. ರೈತರ ಬ್ಯಾಂಕ್ ಖಾತೆಗೆ ನೇರ ವರ್ಗಾವಣೆ

12:02 PM (IST) Feb 01

ಕೇಂದ್ರ ಬಜೆಟ್, ನಿಮ್ಮ ಜಿಲ್ಲೆ, ನಿಮ್ಮ ನಿರೀಕ್ಷೆ: ಮೋದಿ ಈಡೇರಿಸಲಿ ಎಂಬ ಅಪೇಕ್ಷೆ!

2019 ಚುನಾವಣಾ ಹೊತ್ತಲ್ಲೇ ಬಜೆಟ್ ಮಂಡನೆ ಇರುವುದರಿಂದ, ಸಹಜವಾಗಿ ಈ ಬಾರಿ ಮೋದಿ ಬಜೆಟ್ ಬುಟ್ಟಿಯಲ್ಲಿ ಏನಿದೆ ಎಂದು ದೇಶವಾಸಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.ಅದರಂತೆ ಇಂದಿನ ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಮೇಲೆ ರಾಜ್ಯದ ಜನತೆ ಕೂಡ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದು, ತಮ್ಮ ಜಿಲ್ಲೆಗೆ ಮೋದಿ ಸರ್ಕಾರ ಏನು ಕೊಡುಗೆ ನೀಡಬಹುದು ಎಂದು ಜನ ಕಾಯುತ್ತಿದ್ದಾರೆ. ಇನ್ನು ಜಿಲ್ಲಾವಾರು ನಿರೀಕ್ಷೆಗಳನ್ನು ನೋಡುವುದಾದರೆ.. 

ಕೇಂದ್ರ ಬಜೆಟ್, ನಿಮ್ಮ ಜಿಲ್ಲೆ, ನಿಮ್ಮ ನಿರೀಕ್ಷೆ: ಮೋದಿ ಈಡೇರಿಸಲಿ ಎಂಬ ಅಪೇಕ್ಷೆ!

12:00 PM (IST) Feb 01

ಮೊಬೈಲ್ ಡೇಟಾ ದರದಲ್ಲೂ ಗಣನೀಯ ಇಳಿಕೆ

ಮಾಸಿಕ ಮೊಬೈಲ್ ಡೇಟಾ ಬಳಕೆ 50 ಪಟ್ಟು ಹೆಚ್ಚಳ. ಮೊಬೈಲ್ ಡೇಟಾ ದರದಲ್ಲೂ ಗಣನೀಯ ಇಳಿಕೆ. ಮುಂದಿನ 5 ವರ್ಷದಲ್ಲಿ 1 ಲಕ್ಷ ಡಿಜಿಟಲ್ ವಿಲೇಜ್ ನಿರ್ಮಾಣ

11:59 AM (IST) Feb 01

ರೈಲ್ವೆ ಅಭಿವೃದ್ದಿ 1 ಲಕ್ಷ 58 ಸಾವಿರ ಕೋಟಿ ರೂ. ವಿನಿಯೋಗ

ರೈಲ್ವೆ ಅಭಿವೃದ್ದಿ 1 ಲಕ್ಷ 58 ಸಾವಿರ ಕೋಟಿ ರೂ. ವಿನಿಯೋಗ. ರಾಷ್ಟ್ರೀಯ ಗೋಕುಲ ಮಿಷನ್‌ ಅನುದಾನ 750 ಕೋಟಿ ರೂ.ಗೆ ಹೆಚ್ಚಳ

11:58 AM (IST) Feb 01

ಬ್ರಹ್ಮಪುತ್ರ ನದಿಯಲ್ಲಿ ಕೆಂಟೈನರ್ ಹಡಗುಗಳ ಪ್ರಯಾಣ ಆರಂಭ

ಪ್ರಪಂಚದಲ್ಲಿ ಅತಿವೇಗವಾಗಿ ಹೆದ್ದಾರಿ ನಿರ್ಮಿಸುತ್ತಿರುವ ದೇಶ ಭಾರತ. ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಯೋಜನೆಗಳನ್ನು ಪೂರ್ಣಗೊಳಿಸಿದ್ದೇವೆ. ವಿಮಾನಯಾನದ ಪ್ರಮಾಣ ದ್ವಿಗುಣಗೊಂಡಿದೆ. ಬ್ರಾಡ್ಗೇಜ್ನಲ್ಲಿ ಮಾನವ ರಹಿತ ರೈಲ್ವೆ ಕ್ರಾಸಿಂಗ್ ಸಂಪೂರ್ಣ ತೆಗೆದುಹಾಕಿದ್ದೇವೆ. ಬ್ರಹ್ಮಪುತ್ರ ನದಿಯಲ್ಲಿ ಕೆಂಟೈನರ್ ಹಡಗುಗಳ ಪ್ರಯಾಣ ಆರಂಭ

11:57 AM (IST) Feb 01

ರಕ್ಷಣಾ ಇಲಾಖೆಗೆ 3 ಲಕ್ಷ ಕೋಟಿ ರೂ. ಮೀಸಲು

11:54 AM (IST) Feb 01

ರಕ್ಷಣಾ ಇಲಾಖೆಗೆ 3 ಲಕ್ಷ  ಕೋಟಿ ರೂ. ಮೀಸಲು

ರಕ್ಷಣಾ ಇಲಾಖೆಗೆ 3 ಲಕ್ಷ  ಕೋಟಿ ರೂ. ಮೀಸಲು: ಅವಶ್ಯಕತೆಬಿದ್ದರೆ ಇನ್ನೂ ಹೆಚ್ಚಿನ ಹಣ ನೀಡಲು ಸಿದ್ಧ

11:52 AM (IST) Feb 01

ಮುದ್ರಾ ಯೋಜನೆಯಡಿ ಮಹಿಳೆಯರಿಗೆ ಸಾಲ ಯೋಜನೆ

ಮುದ್ರಾ ಯೋಜನೆಯಡಿ ಮಹಿಳೆಯರಿಗೆ ಸಾಲ ಯೋಜನೆ. ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆ ಜಾರಿ

11:51 AM (IST) Feb 01

ಇಎಸ್ಐ ಆದಾಯ ಮಿತಿ ಏರಿಕೆ

ಇಎಸ್ಐ ಆದಾಯ ಮಿತಿ ಏರಿಕೆ. 15 ಸಾವಿರದಿಂದ 21 ಸಾವಿರಕ್ಕೆ ಏರಿಕೆ

11:50 AM (IST) Feb 01

ಸಣ್ಣ ಕೈಗಾರಿಕೋದ್ಯಮಿಗಳಿಗೆ ಬಡ್ಡಿ ವಿನಾಯ್ತಿ

ಸಣ್ಣ ಕೈಗಾರಿಕೋದ್ಯಮಿಗಳಿಗೆ ಬಡ್ಡಿ ವಿನಾಯ್ತಿ. ಶೇ. 2ರಷ್ಟು ಬಡ್ಡಿ ವಿನಾಯ್ತಿ. 59 ನಿಮಿಷದಲ್ಲಿ 1 ಕೋಟಿ ರೂ.ವರೆಗೆ ಸಾಲ

11:47 AM (IST) Feb 01

ಕಾರ್ಮಿಕರಿಗೆ ಬಂಪರ್ ಕೊಡುಗೆ

ಕಾರ್ಮಿಕರಿಗೆ ಬಂಪರ್ ಕೊಡುಗೆ. ಸಂಘಟಿತ ವಲಯದ ಕಾರ್ಮಿಕರಿಗೆ ಪಿಂಚಣಿ. ಪ್ರತಿ ತಿಂಗಳು 3 ಸಾವಿರ ರೂ. ಪಿಂಚಣಿ. 60 ವರ್ಷ ದಾಟಿದ ಕಾರ್ಮಿಕರಿಗೆ ಪಿಂಚಣಿ ಯೋಜನೆ. ತಿಂಗಳಿಗೆ 100 ರೂ. ಪಾವತಿಸಿದರೆ ಸಾಕು

11:44 AM (IST) Feb 01

60 ವರ್ಷ ದಾಟಿದವರಿಗೆ 3 ಸಾವಿರ ರೂ. ಪಿಂಚಣಿ.

60 ವರ್ಷ ದಾಟಿದವರಿಗೆ 3 ಸಾವಿರ ರೂ. ಪಿಂಚಣಿ.

ಅಂಗನವಾಡಿ ಕಾರ್ಯಕರ್ತರಿಗೆ ಬಂಪರ್ ಘೋಷಣೆ. ಶೇ.50 ರಷ್ಟು ವೇತನ ಹೆಚ್ಚಳ 

11:41 AM (IST) Feb 01

ಗ್ರಾಚ್ಯುಟಿ ಮೊತ್ತ 10 ಲಕ್ಷದಿಂದ 20ಲಕ್ಷಕ್ಕೆ ಏರಿಕೆ

ಹೊಸ ಪೆನ್ಷನ್ ಸ್ಕೀಂನಲ್ಲಿ ನಿಯಮ ಸಡಿಲಿಕೆ. ಗ್ರಾಚ್ಯುಟಿ ಮೊತ್ತ 10 ಲಕ್ಷದಿಂದ 20ಲಕ್ಷಕ್ಕೆ ಏರಿಕೆ. ಕೆಲಸದ ಅವಧಿಯಲ್ಲಿ ಕಾರ್ಮಿಕ ಮೃತಪಟ್ಟರೆ 6ಲಕ್ಷದವರೆಗೂ ಪರಿಹಾರ. ಎರಡು ವರ್ಷದಲ್ಲಿ 2 ಕೋಟಿ ಉದ್ಯೋಗ ಸೃಷ್ಟಿಯಾಗಿದೆ