PAN ಕಾರ್ಡ್ ಇಲ್ಲದೇ ಈ 10 ಕೆಲಸ ಮಾಡುವುದು ಅಸಾಧ್ಯ: ಎಲ್ಲೆಲ್ಲಿ ಕಡ್ಡಾಯ?

By Web DeskFirst Published Jan 28, 2019, 5:37 PM IST
Highlights

ಪಾನ್ ಕಾರ್ಡ್ ಸರ್ಕಾರಿ ಯೋಜನೆಗಳು, ಬ್ಯಾಂಕ್ ಕೆಲಸಗಳು ಸೇರಿದಂತೆ ಇನ್ನೂ ಹಲವಾರು ಕೆಲಸಗಳಿಗೆ ಅತ್ಯಗತ್ಯ. ಪಾನ್ ಕಾರ್ಡ್ ಇಲ್ಲದೇ ನಾವು ಹಲವಾರು ಯೋಜನೆಗಳ ಲಾಭ ಸಿಗದೆ ವಂಚಿತರಾಗುತ್ತೇವೆ. ಹಾಗಾದ್ರೆ ಎಲ್ಲೆಲ್ಲಿ ಪಾನ್ ಕಾರ್ಡ್ ಅಗತ್ಯ? ಇಲ್ಲಿದೆ ವಿವರ

ಸರ್ಕಾರಿ ಯೋಜನೆಗಳ ಲಾಭ ಪಡೆಯಲು ಆಧಾರ್ ಜೊತೆಗೆ ಪಾನ್ ಕಾರ್ಡ್ ಇರುವುದು ಅತಿ ಅಗತ್ಯ. ಪಾನ್ ಕಾರ್ಡ್ ಇಲ್ಲದಿದ್ದರೆ, ಹಲವಾರು ಸರ್ಕಾರಿ ಯೋಜನೆಗಳು ನಿಮ್ಮ ಕೈ ತಪ್ಪುವ ಸಾಧ್ಯತೆಗಳಿವೆ. ನಗದು ವ್ಯವಹಾರ ನಡೆಸಲು ಸರ್ಕಾರವು ಪಾನ್ ಕಾರ್ಡ್ ಕಡ್ಡಾಯಗೊಳಿಸಿದೆ. ಇದೇ ರೀತಿ ಒಂದು ವೇಳೆ ನೀವು ವಾಹನ ಖರೀದಿಸುವ ಸಂದರ್ಭದಲ್ಲಿ ಪಾನ್ ಕಾರ್ಡ್ ಇಲ್ಲವೆಂದಾಧರೆ ವಾಹನ ಮನೆಗೊಯ್ಯಲು ಸಾಧ್ಯವಿಲ್ಲ. ಹೀಗಿರುವಾಗ ಪಾನ್ ಕಾರ್ಡ್ ಬಳಕೆ ಎಲ್ಲೆಲ್ಲಿ ಕಡ್ಡಾಯ ಎಂದು ತಿಳಿದುಕೊಳ್ಳುವುದು ಅಗತ್ಯ.

ಬಂತು ಪ್ಯಾನ್ ಕಾರ್ಡ್ ಹೊಸ ನಿಯಮ: ಹೀಗೆ ಮಾಡೋದು ಉತ್ತಮ!

1. ಒಂದು ವೇಳೆ ನೀವು 2.5 ಲಕ್ಷ ರೂಪಾಯಿಗಿಂತ ಅಧಿಕ ನಗದು ವ್ಯವಹಾರ ನಡೆಸುತ್ತೀರೆಂದಾದರೆ ನಿಮ್ಮ ಬಳಿ ಪಾನ್ ಕಾರ್ಡ್ ಇರಲೇಬೇಕು. 

2. ನೀವು ಬೈಕ್, ಕಾರು ಅಥವಾ ಇನ್ನಾವುದಾದರೂ ವಾಹನ ಖರೀದಿಸುತ್ತೀರೆಂದಾದರೆ ಪಾನ್ ಕಾರ್ಡ್ ಇರಲೇಬೇಕು. 

3. ಉದ್ಯಮಿಗಳಾಗಿದ್ದರೆ, ನಿಮ್ಮ ಉದ್ಯಮದ ಟರ್ನ್ ಓವರ್ 5 ಲಕ್ಷ ರೂಪಾಯಿಗಿಂತಲೂ ಅಧಿಕವಿದ್ದರೆ ಪಾನ್ ಕಾರ್ಡ್ ಅಗತ್ಯವಾಗಿದೆ.

4. 10 ಲಕ್ಷ ರೂಪಾಯಿಗಿಂತಲೂ ಅಧಿಕ ಮೊತ್ತದ ಸ್ಥಿರಾಸ್ತಿ ಖರೀದಿಸಲು ಅಥವಾ ಮಾರಲು ಪಾನ್ ಕಾರ್ಡ್ ಕಡ್ಡಾಯ.

5. 2 ಲಕ್ಷಕ್ಕೂ ಅಧಿಕ ಮೊತ್ತದ ವಸ್ತು ಖರೀದಿಸುತ್ತೀರೆಂದಾದರೆ ಪಾನ್ ಕಾರ್ಡ್ ನಿಮ್ಮ ಬಳಿ ಇರಲೇಬೇಕು.

ಆನ್‍ಲೈನ್‌ನಲ್ಲಿ e-Pan ಬೇಕಾ?: ಸರಳ, ಸುಲಭ ವಿಧಾನ ಸಾಕಾ?

6. ಬ್ಯಾಂಕ್ ಅಕೌಂಟ್ ತೆರೆಯಲು ಕೂಡಾ ಪಾನ್ ಕಾರ್ಡ್ ಅತ್ಯಗತ್ಯ.

7. ಬೇರೆಯವರ ಖಾತೆಗೆ 50 ಸಾವಿರಕ್ಕಿಂತಲೂ ಅಧಿಕ ಮೊತ್ತ ಟ್ರಾನ್ಸ್ ಫರ್ ಮಾಡುವಾಗ ಪಾನ್ ಕಾರ್ಡ್ ಕಡ್ಡಾಯ

8. 50 ಸಾವಿರಕ್ಕೂ ಅಧಿಕ ಮೊತ್ತದ ಜೀವ ವಿಮೆ ಮಾಡಿಸಿಕೊಳ್ಳುವುದಾದರೆ ಪಾನ್ ಬೇಕೇ ಬೇಕು.

9. ಸರ್ಕಾರವು ಮ್ಯೂಚುವಲ್ ಫಂಡ್, ಫಿಕ್ಸೆಡ್ ಡೆಪಾಸಿಟ್ ಮಾಡುವ ವೇಳೆ ಪಾನ್ ಕಾರ್ಡ್ ಕಡ್ಡಾಯಗೊಳಿಸಿದೆ.

10. ನೀವು ಖರೀದಿಸುವ ಶೇರುಗಳ ಮೊತ್ತ 1 ಲಕ್ಷ ರೂಪಾಯಿಗಿಂತಲೂ ಅಧಿಕವಾಗಿದ್ದರೆ ಪಾನ್ ಕಾರ್ಡ್ ನಿಮ್ಮ ಬಳಿ ಇರಲೇಬೇಕು.

click me!