ಜಿಡಿಪಿ ಇಳಿದರೂ ಭಾರತವೇ ಅತಿ ವೇಗದಲ್ಲಿ ಬೆಳೆಯುವ ಆರ್ಥಿಕತೆ!

By Kannadaprabha News  |  First Published Mar 29, 2020, 7:35 AM IST

ಜಿಡಿಪಿ ಇಳಿದರೂ ಭಾರತವೇ ಅತಿ ವೇಗದಲ್ಲಿ ಬೆಳೆಯುವ ಆರ್ಥಿಕತೆ!| ಮೂಡೀಸ್‌ ನೀಡಿದ ಕೆಟ್ಟಸುದ್ದಿಯ ಬೆನ್ನಲ್ಲೇ ಇಐಯು ಶುಭಸುದ್ದಿ| ಕೊರೋನಾ ನಂತರ ಜಗತ್ತಿನಲ್ಲೇ ಭಾರತದ ಬೆಳವಣಿಗೆ ವೇಗ ಹೆಚ್ಚು


ನವದೆಹಲಿ(ಮಾ.29):  ಆರ್ಥಿಕ ಹಿಂಜರಿಕೆ ಮತ್ತು ಕೊರೋನಾವೈರಸ್‌ ಸಮಸ್ಯೆಯಿಂದಾಗಿ ಈ ವರ್ಷ ಭಾರತದ ಜಿಡಿಪಿ ಬೆಳವಣಿಗೆ ದರ ಭಾರಿ ಪ್ರಮಾಣದಲ್ಲಿ ಕುಸಿದರೂ ಇದು ಜಗತ್ತಿನಲ್ಲೇ ಅತಿ ವೇಗದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಯಾಗಲಿದೆ ಎಂದು ಬ್ರಿಟನ್ನಿನ ಪ್ರಸಿದ್ಧ ಎಕನಾಮಿಸ್ಟ್‌ ಇಂಟೆಲಿಜೆನ್ಸ್‌ ಯುನಿಟ್‌ (ಇಐಯು) ಭವಿಷ್ಯ ನುಡಿದಿದೆ.

ಪ್ರಸಿದ್ಧ ರೇಟಿಂಗ್‌ ಸಂಸ್ಥೆಯಾದ ಮೂಡೀಸ್‌ ಈ ವರ್ಷ ಭಾರತದ ಜಿಡಿಪಿ ಅಭಿವೃದ್ಧಿ ದರ ಈ ಹಿಂದೆ ಹೇಳಿದಂತೆ ಶೇ.5.3 ಆಗಿರದೆ ಶೇ.2.5ಕ್ಕೆ ಕುಸಿಯಲಿದೆ ಎಂದು ಎರಡು ದಿನಗಳ ಹಿಂದಷ್ಟೇ ಹೇಳಿತ್ತು. ಆದರೆ, ಇಐಯು ಸಂಸ್ಥೆ ಭಾರತದ ಜಿಡಿಪಿ ಬೆಳವಣಿಗೆ ದರ 2020-21ಕ್ಕೆ ಶೇ.2.1ಕ್ಕೆ ಕುಸಿಯಲಿದ್ದು, ಆದರೂ ಜಗತ್ತಿನ ಬೇರೆಲ್ಲಾ ದೇಶಗಳಿಗಿಂತ ವೇಗವಾಗಿ ಅಭಿವೃದ್ಧಿ ಹೊಂದುವ ಆರ್ಥಿಕತೆಯಾಗಲಿದೆ. ಏಕೆಂದರೆ ಜಗತ್ತಿನ ಇನ್ನೆಲ್ಲಾ ದೇಶಗಳ ಆರ್ಥಿಕತೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕುಸಿಯಲಿದೆ ಎಂದು ತಿಳಿಸಿದೆ.

Tap to resize

Latest Videos

ಕೊರೋನಾವೈರಸ್‌ ವಿಪತ್ತಿನಿಂದಾಗಿ ಜಿ20 ದೇಶಗಳ ಪೈಕಿ ಬಹುತೇಕ ದೇಶಗಳ ಆರ್ಥಿಕಾಭಿವೃದ್ಧಿಯ ವೇಗ ನೆಲಕಚ್ಚಲಿದೆ. ಜಗತ್ತಿನ ಒಟ್ಟಾರೆ ಆರ್ಥಿಕತೆ ಶೇ.2.2ರಷ್ಟುಕುಸಿಯಲಿದೆ. ಆಗ ಭಾರತವು ಜಗತ್ತಿನ ಪ್ರಮುಖ ಆರ್ಥಿಕತೆಗಳ ಪೈಕಿ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಯಾಗಿ ಹೊರಹೊಮ್ಮಲಿದೆ. ಚೀನಾ ಹಾಗೂ ಇಂಡೋನೇಷ್ಯಾ ಕೂಡ ಭಾರತಕ್ಕೆ ಪೈಪೋಟಿ ನೀಡಲಿವೆ ಎಂದು ಹೇಳಿದೆ.

ಜಿ20 ದೇಶಗಳ ಪೈಕಿ ಇಟಲಿ, ಜರ್ಮನಿ ಹಾಗೂ ಬ್ರೆಜಿಲ್‌ನ ಆರ್ಥಿಕತೆ ಅತಿಹೆಚ್ಚು ಹೊಡೆತ ತಿನ್ನುವ ಸಾಧ್ಯತೆಗಳಿವೆ.

click me!