ಕೊರೋನಾ ಹೊಡೆತ: ಜಿಡಿಪಿ ಅಭಿವೃದ್ಧಿ ಶೇ.2.5 ಕ್ಕೆ ಕುಸಿತ!

By Kannadaprabha NewsFirst Published Mar 28, 2020, 9:04 AM IST
Highlights

ಕೊರೋನಾ ಹೊಡೆತ: ಜಿಡಿಪಿ ಅಭಿವೃದ್ಧಿ ಶೇ.2.5ಕ್ಕೆ ಕುಸಿತ! 2020 ರ ಬೆಳವಣಿಗೆ ದರದ ಅಂದಾಜು ಶೇ.5.3ರಿಂದ ಶೇ.2.5ಕ್ಕೆ ಇಳಿಸಿದ ಮೂಡೀಸ್‌ |  ಭಾರತದ್ದಷ್ಟೇ ಅಲ್ಲ, ಇಡೀ ಜಗತ್ತಿನ ಜಿಡಿಪಿ ಕುಸಿತ

ನವದೆಹಲಿ (ಮಾ. 28): ಕೊರೋನಾ ವೈರಸ್‌ ಹೊಡೆತದಿಂದ ಆರ್ಥಿಕ ಹಿಂಜರಿಕೆ ಇನ್ನಷ್ಟುತೀವ್ರವಾಗಲಿದೆ ಎಂಬ ಭೀತಿಯಲ್ಲಿದ್ದ ಭಾರತಕ್ಕೆ ಇದೀಗ ಆ ಹಿಂಜರಿಕೆ ಯಾವ ಪ್ರಮಾಣದಲ್ಲಿರಬಹುದು ಎಂಬ ಮೊದಲ ಅಂದಾಜು ದೊರೆತಿದೆ. ಅಂತಾರಾಷ್ಟ್ರೀಯ ರೇಟಿಂಗ್‌ ಸಂಸ್ಥೆಯಾದ ಮೂಡೀಸ್‌ 2020 ರಲ್ಲಿ ಭಾರತದ ಜಿಡಿಪಿ ಅಭಿವೃದ್ಧಿ ದರ ಶೇ.2.5ರಷ್ಟುಮಾತ್ರ ಬೆಳವಣಿಗೆ ಸಾಧಿಸಬಹುದು ಎಂದು ಹೇಳಿದೆ. ಈ ಮೊದಲು ಮೂಡೀಸ್‌ ಭಾರತದ ಅಭಿವೃದ್ಧಿ ದರ ಈ ವರ್ಷ ಶೇ.5.3 ರಷ್ಟುಇರಲಿದೆ ಎಂದು ಹೇಳಿತ್ತು.

ಆರ್‌ಬಿಐ ಕ್ರಮ ಸಮಯೋಚಿತ, ಆರ್ಥಿಕತೆಗೆ ತುಂಬಲಿದೆ ಬಲ: ಕರ್ನಾಟಕ ಬ್ಯಾಂಕ್ ಎಂಡಿ

ಕೊರೋನಾವೈರಸ್‌ನಿಂದ ಜಾಗತಿಕ ಆರ್ಥಿಕತೆಯ ಮೇಲೆ ಹಿಂದೆಂದೂ ಕಂಡುಕೇಳರಿಯದ ಹೊಡೆತ ಬೀಳಲಿದೆ. ಭಾರತಕ್ಕೂ ತೀವ್ರ ಆರ್ಥಿಕ ಹೊಡೆತ ಬೀಳಲಿದ್ದು, ಈಗಾಗಲೇ ಸಾಲದ ಹರಿವು ತುಂಬಾ ಕಡಿಮೆಯಾಗಿರುವುದರಿಂದ ಆರ್ಥಿಕತೆಗೆ ದೊಡ್ಡ ಹೊಡತ ಬಿದ್ದಾಗಿದೆ. ಬ್ಯಾಂಕುಗಳು ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳು ತೀವ್ರ ಹಣಕಾಸು ಹರಿವಿನ ಕೊರತೆ ಎದುರಿಸುತ್ತಿವೆ ಎಂದು ಮೂಡೀಸ್‌ ಹೇಳಿದೆ.

2020ರಲ್ಲಿ ಇಡೀ ಜಗತ್ತಿನ ಜಿಡಿಪಿ ಬೆಳವಣಿಗೆ ಶೇ.0.5 ರಷ್ಟುಕಡಿಮೆಯಾಗಲಿದೆ. ಆದರೆ, 2021ರಲ್ಲಿ ಶೇ.3.2ಕ್ಕೆ ಏರಿಕೆಯಾಗಲಿದೆ. ಕೊರೋನಾವೈರಸ್‌ ಹರಡುವಿಕೆಯಿಂದಾಗಿ ಜಗತ್ತಿನಲ್ಲಿ ಆರ್ಥಿಕ ಚಟುವಟಿಕೆಗಳು ತೀವ್ರ ಪ್ರಮಾಣದಲ್ಲಿ ಕಡಿಮೆಯಾಗಿವೆ. ಬೇರೆ ಬೇರೆ ದೇಶಗಳ ಕೇಂದ್ರೀಯ ಬ್ಯಾಂಕ್‌ಗಳು ಮತ್ತು ಸರ್ಕಾರಗಳು ಕ್ಷಿಪ್ರವಾಗಿ ಸುಧಾರಣಾ ಕ್ರಮಗಳನ್ನು ಕೈಗೊಂಡಿದ್ದರೂ ಲಾಕ್‌ಡೌನ್‌ನಿಂದಾಗಿ 2008ರ ಆರ್ಥಿಕ ಹಿಂಜರಿಕೆಯ ಕಾಲಕ್ಕೆ ಜಗತ್ತೀಗ ಜಾರಿದೆ.

ಮುಂದಿನ 3 ತಿಂಗಳು EMI ಪಾವತಿ ಮಾಡೋದು ಬೇಡ್ವಾ..?

ಮುಂದಿನ ಎರಡರಿಂದ ನಾಲ್ಕು ತಿಂಗಳ ಕಾಲ ಬೇಡಿಕೆ ದೊಡ್ಡ ಪ್ರಮಾಣದಲ್ಲಿ ಕುಸಿಯಲಿದೆ. ಉದ್ದಿಮೆಗಳಿಗೆ ಹಾಗೂ ಜನರಿಗೆ ಉಂಟಾಗುವ ನಷ್ಟದ ಪರಿಣಾಮ ಇನ್ನೂ ಬಹಳ ಕಾಲ ಜಗತ್ತನ್ನು ಬಾಧಿಸಲಿದೆ. ಜಗತ್ತಿನಾದ್ಯಂತ ಮುಂದಿನ ಕೆಲ ತಿಂಗಳ ಕಾಲ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ನಷ್ಟಉಂಟಾಗಲಿದೆ. ಈ ಎಲ್ಲ ನಷ್ಟಗಳು ಯಾವ ಪ್ರಮಾಣದಲ್ಲಿರಲಿವೆ ಎಂಬುದರ ಮೇಲೆ ಮುಂದೆ ಜಗತ್ತು ಎಷ್ಟುಬೇಗ ಚೇತರಿಸಿಕೊಳ್ಳಲಿದೆ ಎಂಬುದು ನಿಂತಿದೆ ಎಂದು ಅಭಿಪ್ರಾಯಪಟ್ಟಿದೆ.

Close

click me!