Crypto ಪಾವತಿಗೆ ನಿಷೇಧ? ಚಿನ್ನ, ಬಾಂಡ್‌ ರೀತಿ ಹೂಡಿಕೆಗಷ್ಟೇ ಅವಕಾಶ!

By Kannadaprabha News  |  First Published Nov 18, 2021, 6:45 AM IST

* ಕ್ರಿಪ್ಟೋಗೆ ಚಿನ್ನದ ಸ್ಥಾನಮಾನ, ಪಾವತಿಗೆ ನಿಷೇಧ?

* ಚಿನ್ನದ ರೀತಿ ಹೂಡಿಕೆ ಮಾಡಲಷ್ಟೇ ಅವಕಾಶ ಸಾಧ್ಯತೆ

* ಬರುವ ಅಧಿವೇಶನದಲ್ಲಿ ಕ್ರಿಪ್ಟೋ ನಿಯಂತ್ರಣ ಮಸೂದೆ ಮಂಡನೆ


ನವದೆಹಲಿ(ನ.18): ಯಾವುದೇ ನಿಯಂತ್ರಣಕ್ಕೆ ಒಳಪಡದೇ, ಭಾರೀ ಪ್ರಮಾಣದಲ್ಲಿ ಬೆಳೆಯುತ್ತಿರುವ ಕ್ರಿಪ್ಟೋಕರೆನ್ಸಿ (Cryptocurrency) ವಲಯವನ್ನು ನಿಯಂತ್ರಿಸಲು ಸರ್ಕಾರ ಮಸೂದೆ ರೂಪಿಸುತ್ತಿದೆ. ಸರ್ಕಾರ ಕ್ರಿಪ್ಟೋಕರೆನ್ಸಿಯನ್ನು ಪೂರ್ಣವಾಗಿ ನಿಷೇಧಿಸುವ ಬದಲು, ಅದಕ್ಕೆ ನಿಯಂತ್ರಣ ಹೇರಿ ಆದಾಯದ ಮೂಲವನ್ನಾಗಿ (Source Of Income) ಮಾಡಿಕೊಳ್ಳುವ ಉದ್ದೇಶ ಹೊಂದಿದ್ದು, ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ(Winter Session) ಮಸೂದೆ ಮಂಡಿಸುವ ಸಾಧ್ಯತೆ ಇದೆ.

ಮೂಲಗಳ ಪ್ರಕಾರ ಕ್ರಿಪ್ಟೋಕರೆನ್ಸಿಗೆ ಚಿನ್ನದ ಸ್ಥಾನಮಾನ ನೀಡುವ ಉದ್ದೇಶ ಸರ್ಕಾರದ್ದು. ಅಂದರೆ ಅದನ್ನು ಚಿನ್ನ (Gold), ಷೇರು ಅಥವಾ ಬಾಂಡ್‌ ಮೇಲೆ ಹೂಡಿಕೆ ರೀತಿಯಲ್ಲಿ ಪರಿಗಣಿಸಿ ಅವಕಾಶ ನೀಡುವುದು. ಇಂಥ ಕ್ರಮವು, ಕ್ರಿಪ್ಟೋ (Crypto) ಮೇಲಿನ ಸಂಪೂರ್ಣ ನಿಷೇಧ ಸಾಧ್ಯತೆ ದೂರ ಮಾಡುವುದರ ಜೊತೆಗೆ ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ಹೊಸ ಆದಾಯದ ಮೂಲವೂ ಆಗಲಿದೆ.

Tap to resize

Latest Videos

undefined

ಕ್ರಿಪೋ ಕರೆನ್ಸಿಯನ್ನು ಸಂಪೂರ್ಣ ನಿಷೇಧಿಸುವ ಬದಲು ಅದಕ್ಕೆ ಕರೆನ್ಸಿ ಮಾನ್ಯತೆಯ ಬದಲಾಗಿ ಅದನ್ನು ಒಂದು ಸರಕಿನ ರೂಪದಲ್ಲಿ ಪರಿಗಣಿಸಿ ಇಂದು ಈಗಾಗಲೇ ಭಾರತದ ಕ್ರಿಪ್ಟೋ ಸಮುದಾಯ ಕೂಡಾ ಸರ್ಕಾರಕ್ಕೆ ಕೋರಿಕೆ ಸಲ್ಲಿಸಿದೆ. ಹೀಗಾಗಿ ಈ ನಿಯಮ ಜಾರಿಯಾಗುವ ಸಾಧ್ಯತೆ ನಿಚ್ಚಳ ಎನ್ನಲಾಗಿದೆ.

ಆದರೆ ಯಾವುದೇ ಕಾರಣಕ್ಕೂ ಕ್ರಿಪ್ಟೋಕರೆನ್ಸಿಯನ್ನು ಚಲಾವಣೆಗೆ ಅಥವಾ ಪಾವತಿಯ ಒಂದು ಮಾರ್ಗವಾಗಿ ಬಳಸಲು ಅವಕಾಶ ನೀಡುವ ಸಾಧ್ಯತೆ ಇಲ್ಲವೇ ಇಲ್ಲ ಎನ್ನಲಾಗಿದೆ.

ಇನ್ನು ಕ್ರಿಪ್ಟೋ ಕರೆನ್ಸಿಗಳಿಗೆ, ಷೇರು ಮಾರುಕಟ್ಟೆನಿಯಂತ್ರಣಾ ಸಂಸ್ಥೆಯಾದ ಸೆಬಿಯನ್ನೇ ನಿಯಂತ್ರಣ ಸಂಸ್ಥೆಯನ್ನಾಡಿ ಮಾಡುವ ಉದ್ದೇಶ ಸರ್ಕಾರದ್ದು ಎನ್ನಲಾಗಿದೆ.

2020ರ ಏಪ್ರಿಲ್‌ನಲ್ಲಿ ಭಾರತದಲ್ಲಿ ಕ್ರಿಪ್ಟೋ ಕರೆನ್ಸಿ ಮೇಲಿನ ಹೂಡಿಕೆ ಅಂದಾಜು 7000 ಕೋಟಿ ರು.ಗಳಿದ್ದರೆ, 2021ರ ಮೇ ತಿಂಗಳಲ್ಲಿ ಅದು 45000 ಕೋಟಿ ರು.ದಾಟಿದೆ ಎಂದು ಬ್ಲಾಕ್‌ಚೈನ್‌ ಡಾಟಾ ವೇದಿಕೆಯಾದ ಚೈನಾಲಿಸ್‌ ತನ್ನ ಇತ್ತೀಚಿನ ವರದಿಯಲ್ಲಿ ಹೇಳಿತ್ತು.

ಬಿಟ್‌ ಕಾಯಿನ್ ಅಂದ್ರೇನು?

ಬಿಟ್‌ಕಾಯಿನ್ ಎನ್ನುವುದು 2009 ರಲ್ಲಿ ರಚಿಸಲಾದ ಡಿಜಿಟಲ್ ಕರೆನ್ಸಿಯಾಗಿದೆ.  ಸಂತೋಷಿ ನಕಮೋಟೋ ಎಂಬ ಕಾವ್ಯನಾಮದ ಸಂಸ್ಥೆಯೊಂದು ಬಿಟ್ ಕಾಯಿನ್ ವ್ಯವಸ್ಥೆಯನ್ನು ಪರಿಚಯಿಸಿದ್ದು, ಬಿಟ್ ಕಾಯಿನ್ ಅಂದ್ರೆ ಕಣ್ಣಿಗೆ ಕಾಣಲ್ಲ. ಅದೊಂದು ಡಿಜಿಟಲ್ ಕರೆನ್ಸಿ. ಇದು ಆನ್‌ಲೈನ್ ಮತ್ತು ಇಟ್ಟಿಗೆ ಮತ್ತು ಗಾರೆ ಖರೀದಿಗೆ ಬಳಸುವ ಸಂಸ್ಕರಿಸಿದ ಡೇಟಾ ಬ್ಲಾಕ್‌ಗಳಿಂದ ಮಾಡಲ್ಪಟ್ಟ ಡಿಜಿಟಲ್ ಕ್ರಿಪ್ಟೋ ಕರೆನ್ಸಿಯಾಗಿದೆ.

Bitcoin Scam: ಕಾಂಗ್ರೆಸ್‌-ಬಿಜೆಪಿ ನಾಯಕರ ಮಧ್ಯೆ ವಾಗ್ಯುದ್ಧ..!

ಸಾಂಪ್ರದಾಯಿಕ ಆನ್‌ಲೈನ್ ಪಾವತಿ ಕಾರ್ಯವಿಧಾನಗಳಿಗಿಂತ ಕಡಿಮೆ ವಹಿವಾಟು ಶುಲ್ಕದ ಭರವಸೆಯನ್ನು ಬಿಟ್‌ಕಾಯಿನ್ ನೀಡುತ್ತದೆ ಮತ್ತು ಇದನ್ನು ಸರ್ಕಾರ ನೀಡುವ ಕರೆನ್ಸಿಗಳಿಗಿಂತ ಭಿನ್ನವಾಗಿ ವಿಕೇಂದ್ರೀಕೃತ ಪ್ರಾಧಿಕಾರವು ನಿರ್ವಹಿಸುತ್ತದೆ. ಬಿಟ್‌ಕಾಯಿನ್‌ಗಳು ಸೀಮಿತವಾಗಿರುವುದರಿಂದ ಮತ್ತು ಅವುಗಳ ಮೌಲ್ಯವನ್ನು ಮಾರುಕಟ್ಟೆ ಶಕ್ತಿಗಳು ನಿರ್ಧರಿಸುವುದರಿಂದ, ಬಿಟ್‌ಕಾಯಿನ್‌ಗಳನ್ನು ಸಹ ವಿವಿಧ ವಿನಿಮಯ ಕೇಂದ್ರಗಳಲ್ಲಿನ ಷೇರುಗಳಂತೆ ವ್ಯಾಪಾರ ಮಾಡಲಾಗುತ್ತದೆ. ಬಿಟ್‌ಕಾಯಿನ್‌ಗಳನ್ನು ಯಾವುದೇ ಬ್ಯಾಂಕುಗಳು ಅಥವಾ ಸರ್ಕಾರಗಳು ನೀಡುವುದಿಲ್ಲ ಅಥವಾ ಬೆಂಬಲಿಸುವುದಿಲ್ಲ, ಅಥವಾ ವೈಯಕ್ತಿಕ ಬಿಟ್‌ಕಾಯಿನ್‌ಗಳು ಸರಕುಗಳಂತೆ ಮೌಲ್ಯಯುತವಾಗಿರುವುದಿಲ್ಲ.

2009ರಲ್ಲಿ  ಇದೀಗ ಮಾರ್ಚ್‌ 2021ರ ಅಂಕಿಅಂಶವನ್ನು ನೋಡಿದರೆ ಇಡೀ ವಿಶ್ವದಲ್ಲಿ ಒಟ್ಟು 18.6 ದಶ ಲಕ್ಷ ಬಿಟ್ ಕಾಯಿನ್‌ಗಳು ಬಳಕೆಯಲ್ಲಿವೆ. ಇದರ ಒಟ್ಟು ಮಾರುಕಟ್ಟೆ ಮೌಲ್ಯ 927 ಬಿಲಿಯನ್ ಅಮೆರಿಕನ್ ಡಾಲರ್.

ಬಿಟ್ ಕಾಯಿನ್‌ಗಳನ್ನು ಹೇಗೆ ಖರ್ಚು ಮಾಡಬಹುದು? 

ಇದೊಂದು ಡಿಜಿಟಲ್ ಹಣಕಾಸು ಅಥವಾ ಡಿಜಿಟಲ್ ಕರೆನ್ಸಿ ಆಗಿದೆ. ಅಂದರೆ ಆನ್ಲೈನ್ ಮೂಲಕ ಪಾವತಿಸಲು ನಿಜವಾದ ನಾಣ್ಯವನ್ನು ನೀಡಬೇಕಾಗಿಲ್ಲ. ಇಂದು ಸುಮಾರು 800ರಷ್ಟು ಇಂತಹ ಕ್ರಿಪ್ಟೋಕರೆನ್ಸಿ (cryptocurrency) ಗಳಿವೆ. ಈ ತಂತ್ರಜ್ಞಾನವನ್ನು ಬ್ಲಾಕ್ಚೈನ್ (blockchain) ಎಂಬ ನೂತನ ವಿಧಾನದ ಆಧಾರದಲ್ಲಿ ಸಾರ್ವಜನಿಕರಿಗೆ ಮಿಥ್ಯಾಹಣದ ಮೂಲಕ ಸುಲಭವಾಗಿ ತಮ್ಮ ಹಣಕಾಸಿನ ವ್ಯವಹಾರಗಳನ್ನು ವಿಶ್ವಮಟ್ಟದಲ್ಲಿ ನಡೆಸಲು ಸಾಧ್ಯವಾಗುತ್ತದೆ.

Bitcoin scam;ಇಲ್ಲದ 'ಬಿಟ್‌' ವಿವಾದ ಜೀವಂತವಾಗಿಡಲು 'ಕೈ' ಯತ್ನ ಎಂದ ಸಿಎಂಗೆ ಕಾಂಗ್ರೆಸ್ ತಿರುಗೇಟು!

ಕ್ರಿಪ್ಟೋ ಕರೆನ್ಸಿಯ ಮಾರುಕಟ್ಟೆ ದರವು ಬೇಡಿಕೆ ಹಾಗೂ ಲಭ್ಯತೆ ಆಧಾರದ ಮೇಲೆ ಏರಿಳಿಕೆಯಾಗುತ್ತೆ.. ಅಂದರೆ, ಬೇಡಿಕೆ ಹೆಚ್ಚಾದಂತೆ ಬೆಲೆಯೂ ಹೆಚ್ಚಾಗುತ್ತೆ. ಒಂದು ಕಂಪನಿಯ ಕ್ರಿಪ್ಟೋ ಕರೆನ್ಸಿಗೂ ಮತ್ತೊಂದು ಕಂಪನಿಯ ಕರೆನ್ಸಿಗೂ ಮೌಲ್ಯ ಹೆಚ್ಚು ಕಮ್ಮಿ ಆಗುತ್ತಿರುತ್ತದೆ.

click me!