ಭಾರತದ ಮೇಲೆ ನಿರ್ಬಂಧ ಹಾಕ್ತಾರಂತೆ ಟ್ರಂಪ್: ಕಾರಣ ಎಸ್‌–400?

By Web DeskFirst Published Sep 21, 2018, 4:50 PM IST
Highlights

ಭಾರತಕ್ಕೆ ಕಠಿಣ ನಿರ್ಬಂಧದ ಎಚ್ಚರಿಕೆ ನೀಡಿದ ಅಮೆರಿಕ! ರಷ್ಯಾದಿಂದ ಎಸ್‌–400 ಟ್ರಯಂಫ್ ವಾಯು ರಕ್ಷಣಾ ಕ್ಷಿಪಣಿ ಖರೀದಿ! ಭಾರತಕ್ಕೆ ಕಂಟಕವಾಗುತ್ತಾ ರಷ್ಯಾದೊಂದಿಗಿನ ರಕ್ಷಣಾ ಒಪ್ಪಂದ! ಅಮೆರಿಕ ಎದುರಾಳಿಗಳ ನಿರ್ಬಂಧ ಕಾಯ್ದೆಗೆ ಟ್ರಂಪ್ ಸಹಿ
 

ವಾಷಿಂಗ್ಟನ್(ಸೆ.21): ರಷ್ಯಾದಿಂದ ಎಸ್‌–400 ಟ್ರಯಂಫ್ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆ ಖರೀದಿಸಲು ಭಾರತ ಮುಂದಾದರೆ ಅಮೆರಿಕದ ನಿರ್ಬಂಧಗಳಿಗೆ ಆಹ್ವಾನ ನೀಡಿದಂತಾಗುತ್ತದೆ ಎಂದು ವಾಷಿಂಗ್ಟನ್ ಎಚ್ಚರಿಕೆ ನೀಡಿದೆ.

ರಷ್ಯಾದೊಂದಿಗಿನ ಎಸ್‌–400 ಡೀಲ್ ಅನ್ನು 'ಗಮನಾರ್ಹ ವಹಿವಾಟು' ಎಂದು ಪರಿಗಣಿಸಲಾಗುವುದು ಮತ್ತುಇದಕ್ಕಾಗಿ ಅಮೆರಿಕ ಕಠಿಣವಾದ ನಿರ್ಬಂಧಗಳನ್ನು ವಿಧಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಟ್ರಂಪ್ ಆಡಳಿತ ಎಚ್ಚರಿಕೆ ನೀಡಿದೆ.

ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಮೆರಿಕ ಎದುರಾಳಿಗಳ ನಿರ್ಬಂಧ ಕಾಯ್ದೆ(CAATSA)ಉಲ್ಲಂಘಿಸುವ ರಾಷ್ಟ್ರಗಳ ಮೇಲೆ ಕಠಿಣ ನಿರ್ಬಂಧ ಹೇರುವ ಕಾರ್ಯನಿರ್ವಾಹಕ ಆದೇಶಕ್ಕೆ ಸಹಿ ಹಾಕಿದ್ದು, ಒಂದು ವೇಳೆ ಭಾರತ ಎಸ್ - 400 ಡೀಲ್ ಮಾಡಿಕೊಂಡರೆ ಅಮೆರಿಕದ ನಿರ್ಬಂಧ ಎದುರಿಸುವ ಸಾಧ್ಯತೆ ಇದೆ.

ರಷ್ಟಾ ವಿರುದ್ಧದ ಅಮೆರಿಕದ ಪ್ರಸ್ತಕ ನೀತಿಯ ಅನುಸಾರ, ರಕ್ಷಣಾ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಅಭಿವೃದ್ಧಿಶೀಲ ರಾಷ್ಟ್ರಗಳು ರಷ್ಯಾದೊಂದಿಗೆ ಒಪ್ಪಂದ ಮಾಡಿಕೊಂಡರೆ ನಿರ್ಬಂಧಗಳನ್ನು ಎದುರಿಸಬೇಕಾಗುತ್ತದೆ. ಅಮೆರಿಕದಿಂದ ನಿರ್ಬಂಧ ಹೇರಿಕೆ ಆತಂಕದ ನಡುವೆಯೂ ಭಾರತ ರಷ್ಯಾದಿಂದ ಅತ್ಯಾಧುನಿಕ ಕ್ಷಿಪಣಿ ನಿರೋಧಕ ವ್ಯವಸ್ಥೆ ಎಸ್-400 ಖರೀದಿ ಮಾಡುವ ಸಿದ್ಧತೆಯಲ್ಲಿದೆ. 

click me!