ತೈಲ ಆಯ್ತು, ಇದೀಗ ರೈಲ್ವೆ ಪ್ರಯಾಣಿಕರಿಗೂ ಶಾಕ್

By Web DeskFirst Published Sep 20, 2018, 6:52 PM IST
Highlights

ಇಷ್ಟು ದಿನ ಒಂದೆಲ್ಲಾ ಒಂದು ಸಿಹಿ ಸುದ್ದಿ ನೀಡುತ್ತಿದ್ದ ಭಾರತೀಯ ರೈಲ್ವೆ ಇದೀಗ ಪ್ರಯಾಣಿಕರಿಗೆ ಸಣ್ಣ ಶಾಕ್ ನೀಡಿದೆ. ಹಾಗಾದರೆ ಪ್ರಯಾಣಿಕರಿಗೆ ರೈಲ್ವೆ ಕೊಟ್ಟಿರುವ ಸುದ್ದಿ ಏನು?

ನವದೆಹಲಿ[ಸೆ.20] ಕಾಫಿ ಮತ್ತು ಟೀ ಪ್ರಿಯರು ರೈಲ್ವೆಯಲ್ಲಿ ಪ್ರಯಾಣಿಸುವ ವೇಳೆ ಹೆಚ್ಚಿಗೆ ಹಣ ನೀಡಬೇಕಿದೆ. ಸೆಪ್ಟೆಂಬರ್ 18 ರಿಂದಲೇ ಇದು ಜಾರಿಗೆ ಬಂದಿದೆ ಎಂದು ಐಆರ್ ಸಿಟಿಸಿ ತಿಳಿಸಿದೆ.

ಈ ಮೊದಲು ಕಾಫಿ ನೀಡಬೇಕಿದ್ದ 7 ರೂ. ಬದಲಾಗಿ ಇನ್ನು ಮುಂದೆ 10 ರೂ. ನೀಡಬೇಕು.  ಟೀಗೆ ನೀಡಬೇಕಿದ್ದ 5 ರೂ. ಬದಲಾಗಿ 10 ರೂ. ನೀಡಬೇಕಿದೆ. ಜಿಎಸ್ ಟಿಯನ್ನು ಇದು ಒಳಗೊಳ್ಳಲಿದೆ. ಆದರೆ ಪ್ರೀಮಿಯಂ ರೈಲು ಮತ್ತು ರಾಜಧಾನಿ ಹಾಹಗೂ ಶತಾಬ್ಧಿಗಳಲ್ಲಿ ಯಾವ ಬದಲಾವಣೆ ಮಾಡಲಾಗಿಲ್ಲ. 

ರೈಲ್ವೆ ಇಲಾಖೆ ತನ್ನೊಂದಿಗೆ ಒಪ್ಪಂದ ಮಾಡಿಕೊಳ್ಳುವ ಆಹಾರ ತಯಾರಿಕಾ ಸಂಸ್ಥೆಗಳಿಗೆ ತನ್ನ ಮೆನುವಿನಲ್ಲಿ ಸೂಚಿಸಿರುವ ಆಹಾರ ನೀಡಲು ಸೂಚಿಸಿದೆ. ಆದರೆ ಹಲವಾರು ಕಡೆಯಲ್ಲಿ ಇದು ಪಾಲನೆಯಾಗುತ್ತಿಲ್ಲ ಎಂಬ ದೂರುಗಳು ಇದ್ದೇ ಇವೆ.


 

 

click me!