ಚೀನಾ ಬಿಟ್ಟು ಬರುವ ಕಂಪನಿಗೆ ಭಾರತದಲ್ಲಿ 4.6 ಲಕ್ಷ ಹೆಕ್ಟೇರ್‌ ಭೂಮಿ ಗುರುತು!

Published : May 06, 2020, 07:43 AM ISTUpdated : May 06, 2020, 08:44 AM IST
ಚೀನಾ ಬಿಟ್ಟು ಬರುವ ಕಂಪನಿಗೆ ಭಾರತದಲ್ಲಿ 4.6 ಲಕ್ಷ ಹೆಕ್ಟೇರ್‌ ಭೂಮಿ ಗುರುತು!

ಸಾರಾಂಶ

ಚೀನಾ ಬಿಟ್ಟು ಬರುವ ಕಂಪನಿಗೆ ಭಾರತದಲ್ಲಿ ಲ್ಯಾಂಡ್‌ ಬ್ಯಾಂಕ್‌!| 10 ಕ್ಷೇತ್ರದ ಉದ್ಯಮಗಳನ್ನು ಆಕರ್ಷಿಸಲು ಕೇಂದ್ರ ಸರ್ಕಾರ ತಂತ್ರ| 4.6 ಲಕ್ಷ ಹೆಕ್ಟೇರ್‌ ಭೂಮಿ ಗುರುತು, ಇದು ಸಿಂಗಾಪುರದ 7 ಪಟ್ಟು

ನವದೆಹಲಿ(ಮೇ.06): ಕೊರೋನಾ ವೈರಸ್‌ ವಿಷಯದಲ್ಲಿ ಚೀನಾ ಆಡಿದ ಕಳ್ಳಾಟದಿಂದ ಬೇಸತ್ತು ಆ ದೇಶವನ್ನು ತೊರೆದು ಬೇರೆ ದೇಶಗಳತ್ತ ಮುಖಮಾಡಿರುವ ಜಾಗತಿಕ ಮಟ್ಟದ ಕಂಪನಿಗಳನ್ನು ಆಕರ್ಷಿಸಲು ಭಾರತ ಸರ್ಕಾರ ಭಾರಿ ಪ್ರಮಾಣದ ಭೂಮಿ ಸಿದ್ಧಪಡಿಸಿಕೊಳ್ಳುತ್ತಿದೆ. ಅಂದಾಜಿನ ಪ್ರಕಾರ ಸುಮಾರು 4,61,589 ಹೆಕ್ಟೇರ್‌ ವಿಸ್ತೀರ್ಣದ ಜಾಗವನ್ನು ಬೇರೆ ಬೇರೆ ರಾಜ್ಯಗಳ ಜೊತೆ ನಡೆಸಿದ ಮಾತುಕತೆಯಲ್ಲಿ ಕೇಂದ್ರ ಸರ್ಕಾರ ಗುರುತಿಸಿದೆ ಎಂದು ಹೇಳಲಾಗಿದೆ. ಇದು ಇಡೀ ಸಿಂಗಾಪುರ ದೇಶದ ಗಾತ್ರಕ್ಕಿಂತ ಸುಮಾರು 7 ಪಟ್ಟಾಗುತ್ತದೆ!

ಜಪಾನ್‌, ಅಮೆರಿಕ, ದಕ್ಷಿಣ ಕೊರಿಯಾ ಹಾಗೂ ಕೆಲ ಚೀನಾದ ಕಂಪನಿಗಳೇ ಚೀನಾವನ್ನು ತೊರೆಯಲು ನಿರ್ಧರಿಸಿವೆ. ಅವುಗಳನ್ನು ಭಾರತಕ್ಕೆ ಆಕರ್ಷಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ನಮ್ಮ ದೇಶದಲ್ಲಿ ಉದ್ದಿಮೆ ಸ್ಥಾಪನೆಗೆ ಭೂಮಿ ಒದಗಿಸುವುದೇ ದೊಡ್ಡ ಸಮಸ್ಯೆಯಾಗಿರುವುದರಿಂದ ಮೊದಲೇ ಭೂಮಿ ಸಿದ್ಧಪಡಿಸಿಟ್ಟುಕೊಳ್ಳಲು ನಿರ್ಧರಿಸಿದೆ.

ಚೀನಾದಲ್ಲಿನ ಅಮೆರಿಕ ಕಂಪನಿಗಳು ಭಾರತಕ್ಕೆ?

ಗುಜರಾತ್‌, ಮಹಾರಾಷ್ಟ್ರ, ತಮಿಳುನಾಡು ಹಾಗೂ ಆಂಧ್ರದಲ್ಲಿ ಈಗಾಗಲೇ ಒಂದಷ್ಟು ಭೂಮಿ ಗುರುತಿಸಲಾಗಿದೆ. ಯಾವ್ಯಾವ ಕ್ಷೇತ್ರದ ಉದ್ದಿಮೆಗಳನ್ನು ದೇಶಕ್ಕೆ ಆಹ್ವಾನಿಸಬೇಕು ಎಂದೂ ಸರ್ಕಾರ ಪಟ್ಟಿಮಾಡಿಕೊಂಡಿದ್ದು, ಎಲೆಕ್ಟ್ರಿಕಲ್‌, ಫಾರ್ಮಾಸುಟಿಕಲ್ಸ್‌, ವೈದ್ಯಕೀಯ ಉಪಕರಣಗಳು, ಎಲೆಕ್ಟ್ರಾನಿಕ್ಸ್‌, ಹೆವಿ ಎಂಜಿನಿಯರಿಂಗ್‌, ಸೋಲಾರ್‌ ಉಪಕರಣ, ಆಹಾರ ಸಂಸ್ಕರಣೆ, ರಾಸಾಯನಿಕ ಹಾಗೂ ಜವಳಿ ಸೇರಿ 10 ಕ್ಷೇತ್ರಗಳು ಅದರಲ್ಲಿವೆ.

ಚೀನಾ ತೊರೆಯಲು ಸಜ್ಜಾಗಿರುವ ಕಂಪನಿಗಳನ್ನು ಆಕರ್ಷಿಸುವ ಸಲುವಾಗಿ ಕಾರ್ಯತಂತ್ರ ರೂಪಿಸಲೆಂದೇ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ಸಚಿವರು ಮತ್ತು ಹಿರಿಯ ಅಧಿಕಾರಿಗಳ ಸಭೆ ನಡೆಸಿದ್ದರು. ಅದರಲ್ಲಿ ಬಂಡವಾಳ ಆಕರ್ಷಣೆಗೆ ಕೈಗೊಳ್ಳಬೇಕಾದ ಕ್ರಮಗಳ ಜೊತೆಗೆ, ಈ ನಿಟ್ಟಿನಲ್ಲಿ ರಾಜ್ಯಗಳಿಗೆ ನೀಡಬೇಕಾದ ನೆರವಿನ ಕುರಿತೂ ಚರ್ಚಿಸಲಾಗಿತ್ತು.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

One8 ಸ್ಪೋರ್ಟ್ಸ್ ಬ್ರ್ಯಾಂಡ್ ಮಾರಾಟಕ್ಕೆ ಮುಂದಾದ ಕೊಹ್ಲಿ, 40 ಕೋಟಿ ಹೂಡಿಕೆ ಪ್ಲಾನ್
ಮೋದಿ-ಪುಟಿನ್‌ ಒಪ್ಪಂದ: 40 ದಿನಗಳಲ್ಲ, ಕೇವಲ 24 ದಿನಗಳಲ್ಲೇ ರಷ್ಯಾಗೆ ತಲುಪಲಿದೆ ಭಾರತದ ಸರಕುಗಳು!