ಜಗತ್ತು ಹಲವು ಸಮಸ್ಯೆಗಳ ನಡುವೆ ತೊಳಲಾಡುತ್ತಿರುವಾಗಲೇ ಎಲ್ಲಾ ಬಿಕ್ಕಟ್ಟುಗಳನ್ನು ಒಟ್ಟಿಗೆ ಬಗೆಹರಿಸಬಹುದು ಎಂದು ಭಾರತ ತೋರಿಸಿದೆ. ಹಾಗಾಗಿ ಭಾರತ ಭವಿಷ್ಯದ ಭರವಸೆಯನ್ನು ನೀಡುತ್ತಿದೆ ಎಂದು ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಹಾಗೂ ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್ ಸಹ-ಮುಖ್ಯಸ್ಥ ಬಿಲ್‌ಗೇಟ್ಸ್ ಹೇಳಿದ್ದಾರೆ.
ಕ್ಯಾಲಿಫೋರ್ನಿಯಾ: ಜಗತ್ತು ಹಲವು ಸಮಸ್ಯೆಗಳ ನಡುವೆ ತೊಳಲಾಡುತ್ತಿರುವಾಗಲೇ ಎಲ್ಲಾ ಬಿಕ್ಕಟ್ಟುಗಳನ್ನು ಒಟ್ಟಿಗೆ ಬಗೆಹರಿಸಬಹುದು ಎಂದು ಭಾರತ ತೋರಿಸಿದೆ. ಹಾಗಾಗಿ ಭಾರತ ಭವಿಷ್ಯದ ಭರವಸೆಯನ್ನು ನೀಡುತ್ತಿದೆ ಎಂದು ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಹಾಗೂ ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್ ಸಹ-ಮುಖ್ಯಸ್ಥ ಬಿಲ್‌ಗೇಟ್ಸ್ ಹೇಳಿದ್ದಾರೆ.
ಈ ಕುರಿತಾಗಿ ತಮ್ಮ ಬ್ಲಾಗ್ ಗೇಟ್ಸ್ ನೋಟ್ಸ್‌ನಲ್ಲಿ (Gates Notes) ಬರೆದಿರುವ ಅವರು, ಪ್ರಸ್ತುತ ಜಗತ್ತು ಹತ್ತು ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಆದರೆ ಇವುಗಳನ್ನೆಲ್ಲಾ ಒಟ್ಟಿಗೆ ಬಗೆಹರಿಸಲು ಹಣ ಮತ್ತು ಸಮಯದ ಕೊರತೆ ಇದೆ ಎಂದು ನಾವು ಅಂದುಕೊಂಡಿದ್ದೆವು. ಆದರೆ ಭಾರತ ಈ ಊಹೆಗಳನ್ನು ಸುಳ್ಳಾಗಿಸಿದೆ. ಹಾಗಾಗಿ ಭಾರತ ಸಂಪೂರ್ಣವಾಗಿ ಭವಿಷ್ಯದ ಭರವಸೆ ನೀಡುತ್ತಿದೆ. ಭಾರತ ಬಹುದೊಡ್ಡ ಬಿಕ್ಕಟ್ಟುಗಳಿಂದ ಹೊರಬಂದಿದೆ. ಪೋಲಿಯೋವನ್ನು (Polio) ಸಂಪೂರ್ಣವಾಗಿ ತೊಡೆದುಹಾಕಿದೆ. ಎಚ್‌ಐವಿ (HIV)ಪ್ರಸರಣವನ್ನು ಕಡಿಮೆ ಮಾಡಿದೆ. ಬಡತನವನ್ನು ಕಡಿಮೆ ಮಾಡಿದೆ. ಶಿಶುಮರಣ ಪ್ರಮಾಣವನ್ನು (infant mortality rate) ತಗ್ಗಿಸಿದೆ. ಅಲ್ಲದೇ ಆರ್ಥಿಕ ಸೇವೆಗಳಿಗೆ (financial services)ಪ್ರವೇಶವನ್ನು ಹೆಚ್ಚಿಸಿದೆ ಎಂದು ಅವರು ಹೇಳಿದ್ದಾರೆ.
ಎಂಥಾ ಕಾಲ ಬಂತಪ್ಪಾ! ಹೆಂಡ್ತಿ ಬಿಟ್ಟ ನಂತರ ರೋಟಿ ಮಾಡ್ತಿದ್ದಾರೆ ಬಿಲಿಯನೇರ್ ಬಿಲ್‌ಗೇಟ್ಸ್
ಸಂಶೋಧನೆಗಳಿಗೆ ಒತ್ತು:
ಇಷ್ಟೇ ಅಲ್ಲದೇ ಭಾರತ ಹೊಸ ಸಂಶೋಧನೆಗಳಿಗೆ ಹೆಚ್ಚಿನ ಒತ್ತು ನೀಡುತ್ತಿದೆ. ರೊಟಾ ವೈರಸ್‌ನ (rota virus) ಪ್ರಕರಣದಲ್ಲಿ ಮಕ್ಕಳನ್ನು ರಕ್ಷಿಸುವ ಸಲುವಾಗಿ ಭಾರತ ತಾನೇ ಲಸಿಕೆಯನ್ನು ಉತ್ಪಾದಿಸಲು ತೀರ್ಮಾನಿಸಿತು. ಈ ಲಸಿಕೆ ದುಬಾರಿಯಾಗಿದ್ದ ಕಾಲದಲ್ಲಿ ತಜ್ಞರು ಹಾಗೂ ಹೂಡಿಕೆದಾರರ ಸಹಾಯದೊಂದಿಗೆ ಭಾರತ ದೊಡ್ಡ ಮಟ್ಟದಲ್ಲಿ ಲಸಿಕೆ ಉತ್ಪಾದನೆ ಮತ್ತು ವಿತರಣೆಯನ್ನು ಮಾಡಿತು. 2021ರ ಅಂತ್ಯದ ವೇಳೆಗೆ ಶೇ.83ರಷ್ಟು ಮಕ್ಕಳಿಗೆ ಈ ಲಸಿಕೆಯನ್ನು ನೀಡಲಾಗಿದೆ ಎಂದು ಅವರು ಹೇಳಿದ್ದಾರೆ. ಅಲ್ಲದೇ ಕೃಷಿ ಸಂಶೋಧನೆಯಲ್ಲೂ ಭಾರತ ಮುಂಚೂಣಿಯಲ್ಲಿದ್ದು, ದೇಶದ ಜನರಿಗೆ ಬೇಸಿಗೆಯಲ್ಲೂ ಸಾಕಷ್ಟು ಊಟ ಒದಗಿಸಲು ಶಕ್ತವಾಗಿದೆ ಎಂದು ಹೇಳಿದ್ದಾರೆ.
ಜಗತ್ತಿನ ಶ್ರೀಮಂತ ವ್ಯಕ್ತಿಗಳ ಸರಳ ಅಭ್ಯಾಸಗಳಿವು, ಅಳವಡಿಸಿಕೊಂಡರೆ ಜೀವನ ಬಿಂದಾಸ್!
ಮುಂದಿನ ವಾರ ಭಾರತ ಭೇಟಿ:
ಇದೇ ವೇಳೆ ಮುಂದಿನ ವಾರ ಭಾರತ ಪ್ರವಾಸ ಕೈಗೊಳ್ಳುವುದಾಗಿ ಹೇಳಿರುವ ಬಿಲ್‌ಗೇಟ್ಸ್ (Bill Gate), ಈ ಭೇಟಿಯ ಸಮಯದಲ್ಲಿ ನವೋದ್ಯಮಿಗಳನ್ನು ಭೇಟಿ ಮಾಡುವುದಾಗಿ ಹೇಳಿದ್ದಾರೆ.