* ಇತರೆ ದೇಶಗಳಿಗಿಂತ ಭಾರತದ ಆರ್ಥಿಕತೆ ಹೆಚ್ಚು ಪ್ರಗತಿ: ಬ್ಲೂಮ್‌ಬರ್ಗ್
* ಕೊರೋನಾ ಮಧ್ಯೆಯೇ ಭಾರತದ ಆರ್ಥಿಕತೆ ಸಾಧನೆ ನಿರೀಕ್ಷೆ
* 2021-22ನೇ ಸಾಲಿನ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆಯು ಶೇ.10ರಷ್ಟುವೃದ್ಧಿಯಾಗುವ ಪಥದಲ್ಲಿದೆ
ನವದೆಹಲಿ(ಜೂ.01): ಮಹಾಮಾರಿ ಕೊರೋನಾ ವೈರಸ್ನ 2ನೇ ಅಲೆಯಿಂದಾಗಿ ದೇಶಾದ್ಯಂತ ಸೆಮಿ ಲಾಕ್ಡೌನ್, ನಿಷೇಧಾಜ್ಞೆ ಹಾಗೂ ಕಫä್ರ್ಯ ಜಾರಿ ಹೊರತಾಗಿಯೂ, 2022ನೇ ಸಾಲಿನ ಹಣಕಾಸು ವರ್ಷದಲ್ಲಿ ವಿಶ್ವದ ಇತರೆ ರಾಷ್ಟ್ರಗಳಿಗಿಂತಲೂ ಭಾರತದ ಆರ್ಥಿಕತೆಯು ವೇಗವಾಗಿ ಅಭಿವೃದ್ಧಿ ಪಥದಲ್ಲಿ ಸಾಗಲಿದೆ ಎಂದು ಅಂದಾಜಿಸಲಾಗಿದೆ.
ಜಿಡಿಪಿ 7.3ರಷ್ಟುಕುಸಿತ: 4 ದಶಕದ ಕನಿಷ್ಠ!
undefined
2021-22ನೇ ಸಾಲಿನ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆಯು ಶೇ.10ರಷ್ಟು ವೃದ್ಧಿಯಾಗುವ ಪಥದಲ್ಲಿದೆ. ಬ್ಲೂಮ್‌ಬರ್ಗ್ ನ್ಯೂಸ್ ಸಂಗ್ರಹಿಸಿದ 12 ಮಾಧ್ಯಮಗಳ ವರದಿಯ ಸರಾಸರಿಯ ಅಂದಾಜುಗಳಿಂದ ಗೊತ್ತಾಗಿದೆ.
ಏಷ್ಯಾ ಶ್ರೀಮಂತ ವ್ಯಕ್ತಿ ಪಟ್ಟಿ ಬಿಡುಗಡೆ; ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟ ಗೌತಮ್ ಅದಾನಿ!
ಆದಾಗ್ಯೂ, ಭಾರತದ ಆರ್ಥಿಕತೆಯ ಸುಧಾರಣೆ ಮತ್ತು ವಾರ್ಷಿಕ ಅಭಿವೃದ್ಧಿ ದರವು ಬೇಡಿಕೆ ಮತ್ತು ಕೊರೋನಾ ನಿಯಂತ್ರಣಕ್ಕಾಗಿ ಹೇರಲಾದ ಲಾಕ್ಡೌನ್ಗಳನ್ನು ಅವಲಂಬಿಸಿದೆ. ಕೊರೋನಾ ವೈರಸ್ನ 2ನೇ ಅಲೆಯ ನಿಯಂತ್ರಣಕ್ಕಾಗಿ ಸ್ಥಳೀಯ ಮಟ್ಟದ ಲಾಕ್ಡೌನ್, ಕಂಟೈನ್ಮೆಂಟ್, ನಿಷೇಧಾಜ್ಞೆಗೆ ಹೆಚ್ಚು ಒತ್ತು ನೀಡಲಾಗಿತ್ತು. ಇದರಿಂದಾಗಿ ಆರ್ಥಿಕತೆಯ ಮೇಲೆ 2ನೇ ಅಲೆಯ ಪರಿಣಾಮ ಅಷ್ಟಾಗಿ ಆಗಲಿಲ್ಲ ಎನ್ನಲಾಗಿದೆ.