ಜಿಡಿಪಿ 7.3ರಷ್ಟು ಕುಸಿತ: 4 ದಶಕದ ಕನಿಷ್ಠ!

By Kannadaprabha NewsFirst Published Jun 1, 2021, 8:37 AM IST
Highlights

* ಜಿಡಿಪಿ 7.3ರಷ್ಟುಕುಸಿತ: 4 ದಶಕದ ಕನಿಷ್ಠ

* ಕೊರೋನಾ ಸಂಕಷ್ಟದಿಂದ ಆರ್ಥಿಕತೆಗೆ ಭಾರಿ ಹಾನಿ

* ಕೊನೆಯ ತ್ರೈಮಾಸಿಕದ ಜಿಡಿಪಿ ಶೇ.1.6ರಷ್ಟು ಏರಿಕೆ

ನವದೆಹಲಿ(ಜೂ.01): ಕೊರೋನಾ ಸಾಂಕ್ರಾಮಿಕ ದೇಶದ ಆರ್ಥಿಕತೆಗೆ ಭಾರೀ ಹೊಡೆತ ನೀಡಿದ್ದು, 2020-21ನೇ ಸಾಲಿನ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕ ಪ್ರಗತಿ ದರ ಶೇ.7.3ರಷ್ಟುಇಳಿಕೆ ದಾಖಲಿಸಿದೆ. ಇದು ಕಳೆದ ನಾಲ್ಕು ದಶಕಗಳ ಇತಿಹಾಸದಲ್ಲಿಯೇ ಭಾರತ ದಾಖಲಿಸಿದ ಅತಿ ಕನಿಷ್ಠ ಆರ್ಥಿಕ ಪ್ರಗತಿ ದರ ಎನಿಸಿಕೊಂಡಿದೆ.

ಲಾಕ್‌ಡೌನ್‌ನಿಂದ ಈ ಬಾರಿ ಆರ್ಥಿಕತೆಗೆ ಹೆಚ್ಚು ಪೆಟ್ಟಿಲ್ಲ!

ಕೇಂದ್ರ ಸಂಖ್ಯಾಶಾಸ್ತ್ರೀಯ ಕಚೇರಿ ಸೋಮವಾರ ಜಿಡಿಪಿ ಪ್ರಗತಿ ದರವನ್ನು ಬಿಡುಗಡೆ ಮಾಡಿದ್ದು, ಕಳೆದ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕತೆ ದಾಖಲೆಯ ಮಟ್ಟಕ್ಕೆ ಕುಸಿದಿರುವುದನ್ನು ಸೂಚಿಸಿದೆ. ಇದೇ ವೇಳೆ ಜನವರಿಯಿಂದ ಮಾಚ್‌ರ್‍ ವರೆಗಿನ ನಾಲ್ಕನೇ ತ್ರೈಮಾಸಿಕದ ಅವಧಿಯಲ್ಲಿ ದೇಶದ ಒಟ್ಟು ದೇಶಿಯ ಉತ್ಪನ್ನ- ಜಿಡಿಪಿ ದರ ಧನಾತ್ಮಕ ಶೇ.1.6ಕ್ಕೆ ಏರಿಕೆ ಕಂಡಿದ್ದು, ಆರ್ಥಿಕತೆ ಚೇತರಿಸಿಕೊಳ್ಳುವ ಭರವಸೆ ಮೂಡಿಸಿದೆ. ಆದರೆ, ಒಟ್ಟಾರೆಯಾಗಿ ದೇಶದ ಆರ್ಥಿಕ ಪ್ರಗತಿ ದರ ಶೇ.7.3ರಷ್ಟುಇಳಿಕೆ ಕಂಡಿದೆ. ಮಾ.2020ರ ಮಾರ್ಚ್ ಅಂತ್ಯದಲ್ಲಿ ಇದ್ದ 145 ಲಕ್ಷ ಕೋಟಿ ರು. ಜಿಡಿಪಿ ಮೌಲ್ಯಕ್ಕೆ ಹೋಲಿಸಿದರೆ 2020-21ರಲ್ಲಿ ದೇಶದ ನೈಜ ಜಿಡಿಪಿ ಮೌಲ್ಯ 135 ಲಕ್ಷ ಕೋಟಿ ರು.ಗಳಿಗೆ ಇಳಿಕೆ ಆಗಿದೆ.

ಚೀನಾಗೆ ಗುಡ್‌ ಬೈ ಹೇಳ್ತಿವೆ ಕಂಪನಿಗಳು, ಪಲಾಯನ ತಡೆಯಲು ಡ್ರ್ಯಾಗನ್ ಹರಸಾಹಸ!

40 ವರ್ಷದಲ್ಲಿ ಇದೇ ಮೊದಲು:

ಸಮಗ್ರ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕತೆ ನಕಾರಾತ್ಮಕ ಪ್ರಗತಿ ದಾಖಲಿಸಿದ್ದು, ಕಳೆದ ನಾಲ್ಕು ದಶಕಗಳ ಇತಿಹಾಸದಲ್ಲಿ ಇದೇ ಮೊದಲು. ಈ ಮುನ್ನ 1979​-80ರಲ್ಲಿ ದೇಶದ ಜಿಡಿಪಿ ಪ್ರಗತಿ ದರ ಶೇ.- 5.2ರಷ್ಟುಇಳಿಕೆ ಕಂಡಿತ್ತು. ಆ ಬಳಿಕ ಮೊದಲ ಬಾರಿ ದೇಶ ನಕರಾರಾತ್ಮಕ ಆರ್ಥಿಕ ಪ್ರಗತಿ ದರ ದಖಲಿಸಿದೆ. 2019-20ನೇ ಹಣಕಾಸು ವರ್ಷದಲ್ಲಿ ಆರ್ಥಿಕತೆ ಶೇ.4ರಷ್ಟುಪ್ರಗತಿ ದರವನ್ನು ದಾಖಲಿಸಿತ್ತು.

ಕಳೆದ ವರ್ಷ ಕೊರೋನಾ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಮಾ.25ರಿಂದ ದೇಶವ್ಯಾಪಿ ಲಾಕ್‌ಡೌನ್‌ ಘೋಷಿಸಿದ್ದರ ಪರಿಣಾಮವಾಗಿ 2020- ಏಪ್ರಿಲ್‌ ಜೂನ್‌ ಅವಧಿಯಲ್ಲಿ ಜಿಡಿಪಿ ಪ್ರಗತಿ ದರ ಸಾರ್ವಕಾಲಿಕ ದಾಖಲೆಯ ಶೇ.24.4ರಷ್ಟುಇಳಿಕೆ ದಾಖಲಿಸಿತ್ತು. ಕೇವಲ ಭಾರತ ಮಾತ್ರವಲ್ಲಿ ಅಮೆರಿಕ ಸೇರಿದಂತೆ ವಿಶ್ವದ ಬಹುತೇಕ ರಾಷ್ಟ್ರಗಳ ಆರ್ಥಿಕ ಪ್ರಗತಿ ನೆಲಕಚ್ಚಿತ್ತು. ಭಾರತದಲ್ಲಿ ಜೂನ್‌ ಬಳಿಕ ಲಾಕ್‌ಡೌನ್‌ ಅನ್ನು ಹಂತ ಹಂತವಾಗಿ ತೆರವುಗೊಳಿಸಿದ್ದರಿಂದ ಆರ್ಥಿಕತೆ ನಿಧಾನವಾಗಿ ಚೇತರಿಕೆ ಕಂಡಿತ್ತು. ಒಟ್ಟಾರೆಯಾಗಿ 2​0​​​-21ನೇ ಸಾಲಿನಲ್ಲಿ ದೇಶದ ಆರ್ಥಿಕತೆ ಶೇ. 7.5ರಷ್ಟುಇಳಿಕೆ ಆಗಬಹುದು ಎಂದು ರಿಸವ್‌ರ್‍ ಬ್ಯಾಂಕ್‌ ಅಂದಾಜಿಸಿತ್ತು. ಅದೇ ರೀತಿ ರಾಷ್ಟ್ರೀಯ ಸಂಖ್ಯಾಶಾಸ್ತ್ರೀಯ ಇಲಾಖೆ ಕಳೆದ ಹಣಕಾಸು ವರ್ಷದಲ್ಲಿ ಜಿಡಿಪಿ ಶೇ.8ರಷ್ಟುಇಳಿಕೆ ಆಗಲಿದೆ ಎಂದು ಭವಿಷ್ಯ ನುಡಿಸಿತ್ತು. ಆದರೆ, ಅಂದಾಜಿಸಿದ್ದಕ್ಕಿಂತಲೂ ಆಶಾದಾಯಕ ಪ್ರಗತಿ ದರ ದಾಖಲಾಗಿದೆ.

ಬಡ್ಡಿದರ ಯಥಾಸ್ಥಿತಿ: ಆರ್‌ಬಿಐ ಸಾಲ ನೀತಿ ಪ್ರಕಟ!

ಮತ್ತೆ ಪುಟಿದೇಳಲಿದೆ ಆರ್ಥಿಕತೆ

ಇದೇ ವೇಳೆ 2021-22ನೇ ಸಾಲಿನಲ್ಲಿ ದೇಶದ ಆರ್ಥಿಕತೆ ಶೇ.10ರಿಂದ ಶೇ.11ರ ಪ್ರಗತಿ ದರದಲ್ಲಿ ವೃದ್ಧಿಯಾಗುವ ನಿರೀಕ್ಷೆ ಇದ್ದು, ನೈಜ ಜಿಡಿಪಿ ಮೌಲ್ಯ 145 ಲಕ್ಷ ಕೋಟಿ ರು.ಗೆ ಮತ್ತೆ ಪುನಃ ಏರಿಕೆ ಆಗಲಿ ಎಂದು ವಿಶ್ಲೇಷಿಸಲಾಗಿದೆ. ಆದರೆ, ಕೊರೋನಾ 2ನೇ ಅಲೆಯಿಂದಾಗಿ ಕಳೆದ 2 ತಿಂಗಳಿನಿಂದ ಆರ್ಥಿಕ ಚಟುವಟಿಕೆಗಳು ಕುಂಠಿತಗೊಂಡಿದ್ದು, ಜಿಡಿಪಿ ಪ್ರಗತಿ ದರ ಎರಡಂಕಿಯನ್ನು ತಲುಪುವುದು ಅನುಮಾನ ಎಂದು ಹೇಳಲಾಗುತ್ತಿದೆ. ಬ್ಲೂಮ್‌ಬರ್ಗ್‌ ನಡೆಸಿರುವ ಅಧ್ಯಯನದ ಪ್ರಕಾರವೂ ಭಾರತದ ಆರ್ಥಿಕತೆ ಇತರ ದೇಶಗಳಿಗಿಂತ ಪುಟಿದೇಳಲಿದೆ. ಕೊರೋನಾ 2ನೇ ಅಲೆಯ ನಡುವೆ, ಮೊದಲನೇ ಅಲೆ ರೀತಿ ದೇಶವ್ಯಾಪಿ ಲಾಕ್‌ಡೌನ್‌ ಘೋಷಣೆ ಮಾಡದೇ ಆರ್ಥಿಕ ಚಟುವಟಿಕೆಗೆ ಅನುಮತಿಸಿದ್ದು ಇದಕ್ಕೆ ಕಾರಣ ಎಂದಿದೆ.

click me!