ಭಾರತದ ಆರ್ಥಿಕ ಕುಸಿತ ತಾತ್ಕಾಲಿಕ: ಐಎಂಎಫ್ ಮುಖ್ಯಸ್ಥೆ!

Suvarna News   | Asianet News
Published : Jan 24, 2020, 07:26 PM IST
ಭಾರತದ ಆರ್ಥಿಕ ಕುಸಿತ ತಾತ್ಕಾಲಿಕ: ಐಎಂಎಫ್ ಮುಖ್ಯಸ್ಥೆ!

ಸಾರಾಂಶ

'ಭಾರತದಲ್ಲಿನ ಆರ್ಥಿಕ ಬೆಳವಣಿಗೆ ದರ ಕುಸಿತ ತಾತ್ಕಾಲಿಕ| ಅಂತಾರಾಷ್ಟ್ರೀಯ ಹಣಕಾಸು ನಿಧಿ ಸಂಸ್ಥೆ ಮುಖ್ಯಸ್ಥೆ ಅಭಿಮತ| ಆರ್ಥಿಕ ಸಂಕಷ್ಟದಿಂದ ಪಾರಾಗುವ ಕ್ಷಮತೆ ಭಾರತಕ್ಕಿದೆ ಎಂದ ಕ್ರಿಸ್ಟಾಲಿನಾ ಜಿಯೊರ್ಜಿವಾ| ಶೇ.3.3 ರ ವಿಶ್ವ ಆರ್ಥಿಕ ಬೆಳವಣಿಗೆ ದರ ತೃಪ್ತಿದಾಯಕವಲ್ಲ ಎಂದ ಕ್ರಿಸ್ಟಾಲಿನಾ ಜಿಯೊರ್ಜಿವಾ|

ದಾವೋಸ್(ಜ.24): ಭಾರತದಲ್ಲಿನ ಆರ್ಥಿಕ ಬೆಳವಣಿಗೆ ದರ ಕುಸಿತ ತಾತ್ಕಾಲಿಕವಾಗಿದ್ದು, ಈ ಸಂಕಷ್ಟದಿಂದ ಪಾರಾಗುವ ಕ್ಷಮತೆ ಭಾರತಕ್ಕಿದೆ ಎಂದು ಐಎಂಎಪ್ ಮುಖ್ಯಸ್ಥೆ ಕ್ರಿಸ್ಟಾಲಿನಾ ಜಿಯೊರ್ಜಿವಾ ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ ಭಾರತ ಆರ್ಥಿಕ  ಪರಿಸ್ಥಿತಿ ಸುಧಾರಿಸಲಿದ್ದು, ಸರ್ಕಾರ ಈ ಕುರಿತು ಕಾರ್ಯೋನ್ಮುಖವಾಗಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ ಎಂದು ಸ್ಟಾಲಿನಾ ಜಿಯೊರ್ಜಿವಾ ಅಭಿಪ್ರಾಯಪಟ್ಟಿದ್ದಾರೆ.

ಭಾರತದ ಆರ್ಥಿಕ ಪ್ರಗತಿ ಶೇ.4.8ಕ್ಕೆ ಕುಸಿತ: ಐಎಂಎಫ್‌

ದಾವೋಸ್'ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆ ಶೃಂಗಸಭೆಯಲ್ಲಿ ಮಾತನಾಡಿದ ಕ್ರಿಸ್ಟಾಲಿನಾ ಜಿಯೊರ್ಜಿವಾ, 2019 ಅಕ್ಟೋಬರ್‌ನಲ್ಲಿ ಐಎಂಎಫ್  ವಿಶ್ವ ಆರ್ಥಿಕ ಮುನ್ನೋಟವನ್ನು ಘೋಷಿಸಿದ್ದಾಗ ಇದ್ದ ಆರ್ಥಿಕ ಸ್ಥಿತಿಗತಿಗೂ ಈಗಿನ ಪರಿಸ್ಥಿತಿಗೂ ಹೋಲಿಸಿದಾಗ ಸಾಕಷ್ಟು ಪ್ರಗತಿಯನ್ನು ಕಾಣಬಹುದು ಎಂದು ಅಭಿಪ್ರಾಯಪಟ್ಟರು.

ಅಮೆರಿಕ-ಚೀನಾ ನಡುವಣ ಮೊದಲ ಹಂತದ ವ್ಯಾಪಾರ ಒಪ್ಪಂದ ನಂತರ ಆರ್ಥಿಕ ಬೆಳವಣಿಗೆ ಸುಧಾರಿಸುತ್ತಿದ್ದು, ಅದಾಗ್ಯೂ ಶೇ.3.3 ರ ವಿಶ್ವ ಆರ್ಥಿಕ ಬೆಳವಣಿಗೆ ದರ ತೃಪ್ತಿದಾಯಕವಲ್ಲ ಎಂದು ಕ್ರಿಸ್ಟಾಲಿನಾ ಜಿಯೊರ್ಜಿವಾ ಹೇಳಿದರು.

ಭಾರತದ ಆರ್ಥಿಕ ಕುಸಿತದ IMF ಬಗ್ಗೆ ಕಳವಳ

ವಿಶ್ವದ ಆರ್ಥಿಕ ಸ್ಥಿತಿ ಸುಧಾರಿಸಲು ಹೆಚ್ಚಿನ ಆಕ್ರಮಣಶಾಲಿ ಆರ್ಥಿಕ ನೀತಿಯನ್ನು ಜಾರಿಗೊಳಿಸಬೇಕಾಗಿದೆ. ರಚನಾತ್ಮಕ ಸುಧಾರಣೆ ತರಲು ನಾವೆಲ್ಲಾ ಒಟ್ಟಾಗಿ ಶ್ರಮಿಸೋಣ ಎಂದು ಕ್ರಿಸ್ಟಾಲಿನಾ ಜಿಯೊರ್ಜಿವಾ ಕರೆ ನೀಡಿದರು.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

YouTube ನಲ್ಲಿ ಗೋಲ್ಡನ್ ಬಟನ್ ಸಿಕ್ಕಿದ್ರೆ ಹಣದ ಹೊಳೆ, ಜಾಸ್ತಿ ಆಗುತ್ತೆ ತೆರಿಗೆ ಭಾರ
ಒನ್‌8 ಬ್ರ್ಯಾಂಡ್‌ ಸೇಲ್‌: ತನ್ನ ಆಪ್ತ ಗೆಳೆಯನ ಈ ಸಂಸ್ಥೆಯಲ್ಲಿ ಕೊಹ್ಲಿ 40 ಕೋಟಿ ಹೂಡಿಕೆ!