ಸೀಟ್‌ಬೆಲ್ಟ್ ಅಲಾರಂ ನಿಷ್ಕ್ರಿಯಗೊಳಿಸುವ ಸಾಧನಗಳ ಮಾರಾಟ ನಿಲ್ಲಿಸಲು Amazonಗೆ ಕೇಂದ್ರ ಸರ್ಕಾರ ಸೂಚನೆ

By BK Ashwin  |  First Published Sep 7, 2022, 10:08 PM IST

ಲೋಹದ ಕ್ಲಿಪ್‌ಗಳ ಮಾರಾಟವು ಕಾನೂನುಬಾಹಿರವಲ್ಲದಿದ್ದರೂ, ಇತ್ತೀಚೆಗೆ ಭಾರತೀಯ ಉದ್ಯಮಿ ಸೈರಸ್ ಮಿಸ್ತ್ರಿ ಕಾರು ಅಪಘಾತದಲ್ಲಿ ಮೃತಪಟ್ಟ ನಂತರ ಅಂತಹ ಸಾಧನಗಳು ಮತ್ತು ವಿಶಾಲವಾದ ರಸ್ತೆ ಸುರಕ್ಷತೆ ಸಮಸ್ಯೆಗಳು ನಿಕಟ ಪರಿಶೀಲನೆಗೆ ಒಳಪಟ್ಟಿವೆ. ಈ ಹಿನ್ನೆಲೆ ಇವುಗಳ ಮಾರಾಟ ನಿಲ್ಲಿಸುವಂತೆ ಅಮೆಜಾನ್‌ಗೆ ಹೇಳಲಾಗಿದೆ ಎಂದು ನಿತಿನ್‌ ಗಡ್ಕರಿ ಮಾಹಿತಿ ನೀಡಿದ್ದಾರೆ. 


ಟಾಟಾ ಸನ್ಸ್‌ನ (Tata Sons)  ಮಾಜಿ ಅಧ್ಯಕ್ಷ ಸೈರಸ್‌ ಮಿಸ್ತ್ರಿ ಅಪಘಾತಕ್ಕೆ (Accident) ಬಲಿಯಾದ ನಂತರ ಸೀಟ್‌ಬೆಲ್ಟ್‌ (Seat Belt) ಪ್ರಾಮುಖ್ಯತೆ ಬಗ್ಗೆ ದೇಶದಲ್ಲಿ ಹೆಚ್ಚು ಚರ್ಚೆಯಾಗುತ್ತಿದೆ. ಅದರಲ್ಲೂ, ಹಿಂಬದಿ ಸೀಟುಗಳಲ್ಲಿ (Rear Seats) ಕುಳಿತರೂ ಸೀಟ್‌ ಬೆಲ್ಟ್‌ ಎಷ್ಟು ಪ್ರಮುಖ ಅನ್ನೋದನ್ನು ಈ ಘಟನೆಯೇ ನಮಗೆ ತಿಳಿ ಹೇಳುತ್ತದೆ. ಈ ಘಟನೆಯ ನಂತರ ಕೇಂದ್ರ ಸರ್ಕಾರವೂ ಎಚ್ಚೆತ್ತುಕೊಂಡಿದ್ದು, ಕಾರಿನ ಸೀಟ್‌ಬೆಲ್ಟ್ ಅಲಾರಂಗಳನ್ನು ನಿಷ್ಕ್ರಿಯಗೊಳಿಸಲು (Disable Car Seat Belt Alarms) ವಿನ್ಯಾಸಗೊಳಿಸಲಾದ ಸಾಧನಗಳನ್ನು ಮಾರಾಟ ಮಾಡುವುದನ್ನು ನಿಲ್ಲಿಸುವಂತೆ ಆನ್‌ಲೈನ್ ಚಿಲ್ಲರೆ ದೈತ್ಯ ಕಂಪನಿ ಅಮೆಜಾನ್‌ (Amazon) ಗೆ ಸೂಚನೆ ನೀಡಲಾಗಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ರಾಯಿಟರ್ಸ್‌ಗೆ ಮಾಹಿತಿ ನೀಡಿದ್ದಾರೆ. ಸಂಭಾವ್ಯ ಸುರಕ್ಷತೆಯ ಅಪಾಯಗಳನ್ನು ಉಲ್ಲೇಖಿಸಿ ಅಮೆಜಾನ್‌ಗೆ ಕೇಳಲಾಗಿದೆ ಎಂದೂ ಅವರು ಹೇಳಿದ್ದಾರೆ.

ಲೋಹದ ಕ್ಲಿಪ್‌ಗಳ (Metal Clips) ಮಾರಾಟವು ಕಾನೂನುಬಾಹಿರವಲ್ಲದಿದ್ದರೂ, ಇತ್ತೀಚೆಗೆ ಭಾರತೀಯ ಉದ್ಯಮಿ ಸೈರಸ್ ಮಿಸ್ತ್ರಿ ಕಾರು ಅಪಘಾತದಲ್ಲಿ ಮೃತಪಟ್ಟ ನಂತರ ಅಂತಹ ಸಾಧನಗಳು ಮತ್ತು ವಿಶಾಲವಾದ ರಸ್ತೆ ಸುರಕ್ಷತೆ ಸಮಸ್ಯೆಗಳು ನಿಕಟ ಪರಿಶೀಲನೆಗೆ ಒಳಪಟ್ಟಿವೆ. ಸೈರಸ್‌ ಮಿಸ್ತ್ರಿ ಅವರು ಸೀಟ್ ಬೆಲ್ಟ್ ಧರಿಸಿರಲಿಲ್ಲ ಎಂದು ಹೇಳಲಾಗಿದ್ದು, ಇದು ವಿಶ್ವದ ನಾಲ್ಕನೇ ಅತಿದೊಡ್ಡ ಕಾರು ಮಾರುಕಟ್ಟೆಯಲ್ಲಿ ರಸ್ತೆ ಸುರಕ್ಷತೆಯ ಚರ್ಚೆಯನ್ನು ಪುನರುಜ್ಜೀವನಗೊಳಿಸಿದೆ. 

Tap to resize

Latest Videos

ಇದನ್ನು ಓದಿ: Seat Belt ಹಾಕ್ಕೊಂಡು ಪ್ರಾಣ ಉಳಿಸ್ಕಳಿ..! ಬೆಲ್ಟ್‌ ಹಾಕ್ಕೊಂಡ್ರಷ್ಟೇ ಏರ್‌ಬ್ಯಾಗ್‌ ಓಪನ್‌

ಇನ್ನು, ನಿತಿನ್‌ ಗಡ್ಕರಿ ಅವರು ಯೋಜಿತ ಸುರಕ್ಷತಾ ಕ್ರಮಗಳ ಕುರಿತು ಚರ್ಚಿಸಿದ ಸಂದರ್ಶನದ ವೇಳೆ, ಅಮೆಜಾನ್‌ನಲ್ಲಿ ಲಭ್ಯವಿರುವ ಲೋಹದ ಕ್ಲಿಪ್‌ಗಳನ್ನು ಸೀಟ್‌ಬೆಲ್ಟ್ ಸ್ಲಾಟ್‌ಗಳಲ್ಲಿ ಅಳವಡಿಸಲಾಗಿದೆ. ಇದು ಕಾರು ಚಾಲನೆ ಮಾಡುವಾಗ ಸೀಟ್‌ಬೆಲ್ಟ್ ಬಳಕೆಯಲ್ಲಿಲ್ಲದಿದ್ದರೂ, ಎಚ್ಚರಿಕೆಯನ್ನು ತಡೆಗಟ್ಟುತ್ತದೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ. ಹಾಗೂ, "ಜನರು ಸೀಟ್‌ಬೆಲ್ಟ್ ಧರಿಸುವುದನ್ನು ತಪ್ಪಿಸಲು ಅಮೆಜಾನ್‌ನಿಂದ ಕ್ಲಿಪ್‌ಗಳನ್ನು ಖರೀದಿಸುತ್ತಾರೆ. ನಾವು ಅಮೆಜಾನ್‌ಗೆ (ಇವುಗಳನ್ನು ಮಾರಾಟ ಮಾಡುವುದನ್ನು) ನಿಲ್ಲಿಸುವಂತೆ ನೋಟಿಸ್ ಕಳುಹಿಸಿದ್ದೇವೆ" ಎಂದು ನಿತಿನ್‌ ಗಡ್ಕರಿ ಹೇಳಿದರು. ಆದರೆ, ಅಮೆಜಾನ್ ಈ ಬಗ್ಗೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ತಿಳಿದುಬಂದಿದೆ.

2021 ರಲ್ಲಿ ಭಾರತದಲ್ಲಿ ವಾಹನ ಅಪಘಾತಗಳಿಂದ (Vehicle Accidents) ಸುಮಾರು ಒಂದೂವರೆ ಲಕ್ಷ ಜನರು ಮೃತಪಟ್ಟಿದ್ದಾರೆ ಎಂದೂ ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಹೇಳಿದರು. ಭಾರತದ ರಸ್ತೆಗಳಲ್ಲಿ ಪ್ರತಿ ನಾಲ್ಕು ನಿಮಿಷಗಳಿಗೊಮ್ಮೆ ಸಾವು ಸಂಭವಿಸುತ್ತದೆ ಎಂದು ಕಳೆದ ವರ್ಷ ವಿಶ್ವ ಬ್ಯಾಂಕ್ (World Bank) ಹೇಳಿದೆ. ಈ ಹಿನ್ನೆಲೆ ಚಾಲಕ ಮತ್ತು ಮುಂಭಾಗದ ಪ್ರಯಾಣಿಕರ ಆಸನಗಳಿಗೆ ಮಾತ್ರವಲ್ಲದೆ ಹಿಂಬದಿ ಸೀಟುಗಳಿಗೆ ಸಹ ಸೀಟ್‌ಬೆಲ್ಟ್ ಅಲಾರಂಗಳನ್ನು ಕಡ್ಡಾಯಗೊಳಿಸಲು ಭಾರತ ಯೋಜಿಸಿದೆ ಎಂದು ನಿತಿನ್‌ ಗಡ್ಕರಿ ಹೇಳಿದರು.

ಇದನ್ನೂ ಓದಿ: Cyrus Mistry Death: ಖ್ಯಾತ ವೈದ್ಯೆ ಚಲಾಯಿಸುತ್ತಿದ್ದ ಕಾರು; ಸೀಟ್ ಬೆಲ್ಟ್ ಧರಿಸಿರಲಿಲ್ಲ ಸೈರಸ್‌ ಮಿಸ್ತ್ರಿ..!

249 ರೂ. ಗೆ ಸಿಗುತ್ತೆ ಸೀಟ್‌ಬೆಲ್ಟ್‌ ಅಲಾರಂ ವಿರೋಧಿ ಕ್ಲಿಪ್‌..!
ಅಮೆಜಾನ್‌ ಇಂಡಿಯಾ ವೆಬ್‌ಸೈಟ್‌ನಲ್ಲಿ ಬುಧವಾರ ಅಂದರೆ ಇಂದು ಸಹ ಸಣ್ಣ ಲೋಹದ ಹಲವಾರು ಕ್ಲಿಪ್‌ಗಳು ಮಾರಾಟಕ್ಕೆ ಲಭ್ಯವಿದೆ. ಎಲ್ಲ ಕಾರು ವೇರಿಯೆಂಟ್‌ ಹಾಗೂ ಮಾಡೆಲ್‌ಗಳ ಕಾರುಗಳು ಸಹ ಲಭ್ಯವಿದ್ದು, ಇವುಗಳನ್ನು ಸೀಟ್‌ಬೆಲ್ಟ್ ಅಲಾರಮ್‌ಗಳನ್ನು "ನಿರ್ಮೂಲನೆ" ಮಾಡುವ ಉತ್ಪನ್ನಗಳೆಂದು ವಿವರಿಸಲಾಗಿದೆ. ಅಲ್ಲದೆ, ಈ ಸಾಧನಗಳ ಬೆಲೆ 249 ರೂಪಾಯಿಗಳಿಂದ ಅಂದರೆ ಸುಮಾರು 3 ಡಾಲರ್‌ಗೆ ಆರಂಭವಾಗುತ್ತದೆ. 

click me!