ಡೇಟಾ ಸೆಂಟರ್ ತೆರೆದರೆ 21 ವರ್ಷ ತೆರಿಗೆ ರಜೆ! ಏನಿದು ಡೇಟಾ ಸೆಂಟರ್? ಮಂಗಳೂರಿಗೆ ಸಿಗುತ್ತಾ ಚಾನ್ಸ್?

Kannadaprabha News   | Kannada Prabha
Published : Feb 02, 2026, 08:37 AM IST
Data Centre and AI hub

ಸಾರಾಂಶ

ಭಾರತವನ್ನು ಕೃತಕ ಬುದ್ಧಿಮತ್ತೆ (ಎಐ) ಮತ್ತು ಡಿಜಿಟಲ್ ಮೂಲಸೌಕರ್ಯದ ಜಾಗತಿಕ ಹಬ್ ಆಗಿಸುವ ಗುರಿಯೊಂದಿಗೆ, ಕೇಂದ್ರ ಸರ್ಕಾರವು ದೇಶದಲ್ಲಿ ಡೇಟಾ ಸೆಂಟರ್‌ಗಳನ್ನು ಸ್ಥಾಪಿಸುವ ವಿದೇಶಿ ಕಂಪನಿಗಳಿಗೆ 2047ರವರೆಗೆ ತೆರಿಗೆ ರಜೆ ಘೋಷಿಸಿದೆ.  

ಜಗತ್ತಿನಾದ್ಯಂತ ಕ್ಲೌಡ್‌ ಸೇವೆಯನ್ನು ಒದಗಿಸಲು ಭಾರತದಲ್ಲಿ ಡೇಟಾ ಸೆಂಟರ್‌ ತೆರೆಯುವ ವಿದೇಶಿ ಕಂಪನಿಗಳಿಗೆ 2047ರವರೆಗೂ ತೆರಿಗೆ ರಜೆ ನೀಡುವುದಾಗಿ ಕೇಂದ್ರ ಸರ್ಕಾರ ಮಹತ್ವದ ಘೋಷಣೆಯನ್ನು ಮಾಡಿದೆ. ಸದ್ಯ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಬಳಕೆದಾರ ದೇಶವಾಗಿರುವ ಭಾರವನ್ನು ಎಐ ಹಾಗೂ ಡಿಜಿಟಲ್‌ ಮೂಲಸೌಕರ್ಯದ ಬಹುದೊಡ್ಡ ಹಬ್‌ ಆಗಿಸುವ ಉದ್ದೇಶದಿಂದ ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್‌ ಅವರು ಈ ‘ಟ್ಯಾಕ್ಸ್‌ ಹಾಲಿಡೇ’ ಪ್ರಕಟಿಸಿದ್ದಾರೆ.

ಎಐ ತಂತ್ರಜ್ಞಾನದಲ್ಲಿ ಮುಖ್ಯ ಪಾತ್ರ ವಹಿಸಲು ಭಾರತ ಹಲವು ಕ್ರಮ

ಶರವೇಗದಲ್ಲಿ ವ್ಯಾಪಿಸುತ್ತಿರುವ ಎಐ ತಂತ್ರಜ್ಞಾನದಲ್ಲಿ ಮುಖ್ಯ ಪಾತ್ರ ವಹಿಸಲು ಭಾರತ ಈಗಾಗಲೇ ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇದೀಗ ಬಜೆಟ್‌ನಲ್ಲಿ ಮಾಡಲಾಗಿರುವ ಘೋಷಣೆಯಿಂದ ಜಾಗತಿಕ ಕ್ಲೌಡ್‌ ಹಾಗೂ ಎಐ ಸೇವೆಗಳಲ್ಲಿ ಭಾರತವನ್ನು ಬಳಕೆದಾರ ಪಟ್ಟದಿಂದ ವಿಶ್ವದಲ್ಲಿ ಡಿಜಿಟಲ್‌ ಮೂಲಸೌಕರ್ಯದ ನೆಲೆಯನ್ನಾಗಿಸಲಿದೆ. ತನ್ಮೂಲಕ ಕ್ಲೌಡ್‌ ಕಂಪ್ಯೂಟಿಂಗ್‌ ಕ್ಷೇತ್ರದ ರಫ್ತು ವಲಯವನ್ನಾಗಿಸಲೂ ಸರ್ಕಾರ ಪಣ ತೊಟ್ಟಿರುವಂತಿದೆ.

‘ಕ್ಲಿಷ್ಟಕರ ಮೂಲಸೌಕರ್ಯವನ್ನು ಒದಗಿಸಿ ಡೇಟಾ ಸೆಂಟರ್‌ಗಳಲ್ಲಿ ಹೂಡಿಕೆ ಉತ್ತೇಜಿಸುವ ಸಲುವಾಗಿ ಜಾಗತಿಕ ಗ್ರಾಹಕರಿಗೆ ಭಾರತೀಯ ಡೇಟಾ ಸೆಂಟರ್‌ಗಳನ್ನು ಬಳಸಿ ಕ್ಲೌಡ್‌ ಸೇವೆ ಒದಗಿಸುವ ವಿದೇಶಿ ಕಂಪನಿಗಳಿಗೆ 2047ರವರೆಗೂ ತೆರಿಗೆ ರಜೆ ಘೋಷಣೆ ಮಾಡಲು ಉದ್ದೇಶಿಸಿದ್ದೇನೆ’ ಎಂದು ಆಯವ್ಯಯ ಭಾಷಣದಲ್ಲಿ ನಿರ್ಮಲಾ ತಿಳಿಸಿದರು.

ಏನಿದು ಡೇಟಾ ಸೆಂಟರ್‌?

ಶಕ್ತಿಶಾಲಿ ಕಂಪ್ಯೂಟರ್‌ಗಳನ್ನು ಹೊಂದಿದ ಕೇಂದ್ರಗಳು ಇವಾಗಿದ್ದು, ಇ-ಮೇಲ್‌, ಬ್ಯಾಂಕಿಂಗ್‌ನಿಂದ ಹಿಡಿದು ಎಲ್ಲ ಡಿಜಿಟಲ್‌ ಡೇಟಾಗಳನ್ನು ಸಂಗ್ರಹಿಸಿ, ಸಂಸ್ಕರಿಸಿ, ವರ್ಗಾವಣೆ ಮಾಡುತ್ತವೆ. ಇವು ಬಿಗಿಭದ್ರತೆಯ ಅಭೇದ್ಯ ಕೋಟೆಯಂತಿದ್ದು, ತಡೆರಹಿತ ವಿದ್ಯುತ್‌, ಅತ್ಯಾಧುನಿಕ ಕೂಲಿಂಗ್‌ ಹಾಗೂ ದಿನದ ಇಪ್ಪತ್ನಾಲ್ಕೂ ತಾಸು ನಿಗಾದಂತಹ ನಿರ್ದಿಷ್ಟ ಮೂಲಸೌಕರ್ಯಗಳನ್ನು ಒದಗಿಸಬೇಕಾಗುತ್ತದೆ. ಒಂದು ನಿಮಿಷ ತೊಂದರೆಯಾದರೂ ಕೋಟ್ಯಂತರ ಜನರಿಗೆ ಸಮಸ್ಯೆಯಾಗುತ್ತದೆ.

ಎಐ, ಕ್ಲೌಡ್‌ ಕಂಪ್ಯೂಟಿಂಗ್‌ ಹಾಗೂ ಡಿಜಿಟಲ್‌ ಪೇಮೆಂಟ್‌ ಸೇವೆಗಳು ವೇಗವಾಗಿ ಬೆಳೆಯುತ್ತಿರುವುದರಿಂದ ರಸ್ತೆ ಹಾಗೂ ವಿದ್ಯುತ್‌ ಘಟಕಗಳಷ್ಟೇ ಡೇಟಾ ಸೆಂಟರ್‌ಗಳು ಕೂಡ ಮುಖ್ಯ ಪಾತ್ರ ವಹಿಸುತ್ತಿವೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಷೇರುಪೇಟೆಗೆ ನಿರ್ಮಲಾ STT ಹೊಡೆತ! ಫ್ಯೂಚರ್ಸ್‌ & ಆಪ್ಷನ್‌ಗೆ ಸುಂಕದ ಬರೆ; ಮಕಾಡೆ ಮಲಗಿದ ಸೆನ್ಸಕ್ಸ್
ತೆಂಗು, ಗೋಡಂಬಿ, ಶ್ರೀಗಂಧ ಕೃಷಿಗೆ ಕೇಂದ್ರ ಬಂಪರ್‌-ರೈತರ ಆದಾಯ ಹೆಚ್ಚಿಸಲು ಹಲವು ಕ್ರಮ