ITR Form: ನೀವು ವಿದೇಶಿ ಷೇರುಗಳಲ್ಲಿ ಹೂಡಿಕೆ ಮಾಡಿದ್ದೀರಾ? ಹಾಗಾದ್ರೆ ಈ ಐಟಿಆರ್ ಅರ್ಜಿ ನಮೂನೆ ಬಳಸೋದು ಅಗತ್ಯ!

By Suvarna News  |  First Published Apr 25, 2023, 4:46 PM IST

ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಗೆ ಅನೇಕ ಅರ್ಜಿ ನಮೂನೆಗಳು ಲಭ್ಯವಿವೆ. ಆಯಾ ತೆರಿಗೆದಾರರು ತಮ್ಮ ಆದಾಯಕ್ಕೆ ಸರಿಹೊಂದುವ ಅರ್ಜಿ ನಮೂನೆಯನ್ನು ಆಯ್ಕೆ ಮಾಡೋದು ಅಗತ್ಯ. ಹಾಗಾದ್ರೆ ವಿದೇಶಿ ಷೇರುಗಳಿಂದ ಪಡೆದ ಗಳಿಕೆ ಅಥವಾ ನಷ್ಟ, ವಿದೇಶದಲ್ಲಿರುವ ಆಸ್ತಿಗಳ ವಿವರ ಸಲ್ಲಿಕೆಗೆ ತೆರಿಗೆದಾರ ಯಾವ ಐಟಿಆರ್ ಅರ್ಜಿ ನಮೂನೆಯನ್ನು ಆಯ್ಕೆ ಮಾಡಬೇಕು? ಇಲ್ಲಿದೆ ಮಾಹಿತಿ.


Business Desk:2022–23ನೇ ಹಣಕಾಸು ಸಾಲಿನ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಕೆಗೆ  ಜುಲೈ 31 ಅಂತಿಮ ಗಡುವು. ಆ ಬಳಿಕ ಐಟಿಆರ್ ಸಲ್ಲಿಕೆ ಮಾಡಿದ್ರೆ ವಿಳಂಬ ಶುಲ್ಕ ಪಾವತಿಸಬೇಕಾಗುತ್ತದೆ. ತೆರಿಗೆದಾರ 2022ರ ಏಪ್ರಿಲ್ 1 ಹಾಗೂ 2023ರ ಮಾರ್ಚ್ 31ರ ನಡುವೆ ಗಳಿಸಿದ ಆದಾಯಕ್ಕೆ ಐಟಿಆರ್ ಸಲ್ಲಿಕೆ ಮಾಡಬೇಕು. ಇದರಲ್ಲಿ ವಿದೇಶಿ ಈಕ್ವಿಟಿಗಳಿಂದ ಗಳಿಸಿದ ಗಳಿಕೆಯ ಬಗ್ಗೆ ಕೂಡ ಮಾಹಿತಿ ಇರಬೇಕು. ಮೌಲ್ಯಮಾಪನ ವರ್ಷ ಅಂದ್ರೆ ನೀವು ರಿಟರ್ನ್ಸ್ ಫೈಲ್ ಮಾಡುವ ಹಾಗೂ ಹಿಂದಿನ ಹಣಕಾಸು ಸಾಲಿನ ತೆರಿಗೆ ಮೌಲ್ಯಮಾಪನಕ್ಕೆ ನಿಮ್ಮ ಹೂಡಿಕೆಗಳನ್ನು ಘೋಷಣೆ ಮಾಡುವ ವರ್ಷವಾಗಿದೆ. ಈಗ ಐಟಿಆರ್ ಫೈಲ್ ಮಾಡಲು ಬಯಸುತ್ತಿರುವ ತೆರಿಗೆದಾರರಿಗೆ 2022-23ನೇ ಹಣಕಾಸು ಸಾಲಿನಲ್ಲಿ ಗಳಿಸಿದ ಆದಾಯಕ್ಕೆ ಮೌಲ್ಯಮಾಪನ ವರ್ಷ 2023ರ ಏ.1ರಿಂದ 2024ರ ಮಾರ್ಚ್ 31ರ ತನಕ ಆಗಿರುತ್ತದೆ. ವಿದೇಶಿ ಷೇರುಗಳಿಂದ ಗಳಿಕೆ ಅಥವಾ ನಷ್ಟ ಅನುಭವಿಸಿದ ಬಗ್ಗೆ ತೆರಿಗೆದಾರರು 2023-24ನೇ ಮೌಲ್ಯಮಾಪನ ವರ್ಷಕ್ಕೆ ಸರಿಯಾದ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಅರ್ಜಿ ಆಯ್ಕೆ ಮಾಡೋದು ಮುಖ್ಯ.

ಭಾರತದ ತೆರಿಗೆ ಉದ್ದೇಶಕ್ಕೆ 'ನಿವಾಸಿ ಹಾಗೂ ಸಾಮಾನ್ಯ ನಿವಾಸಿ' ಅರ್ಹತೆ ಗಳಿಸಿರುವ ವ್ಯಕ್ತಿಗಳು 2023-24ನೇ ಮೌಲ್ಯಮಾಪನ ವರ್ಷಕ್ಕೆ ತಮ್ಮ ಜಾಗತಿಕ ಆದಾಯವನ್ನು ಆದಾಯ ತೆರಿಗೆ ರಿಟರ್ನ್ ನಲ್ಲಿ (ಐಟಿಆರ್) ಉಲ್ಲೇಖಿಸಬೇಕು ಹಾಗೂ ಕೊನೆಯ ದಿನಾಂಕವಾದ ಜುಲೈ 31, 2023ರೊಳಗೆ ಸಲ್ಲಿಕೆ ಮಾಡಬೇಕು' ಎಂದು ಡೆಲೊಟ್ಟೆ ಇಂಡಿಯಾ ಪಾಲುದಾರ ಅಲೋಕ್ ಅಗರ್ ವಾಲ್ ತಿಳಿಸಿದ್ದಾರೆ. 

Tap to resize

Latest Videos

ಪ್ಲೀಸ್, ಇಂಥ ಆಮಿಷಗಳಿಗೆ ಬಲಿಯಾಗ್ಬೇಡಿ; ಪಾರ್ಟ್ ಟೈಮ್ ಜಾಬ್ ಲಿಂಕ್ ಕ್ಲಿಕ್ ಮಾಡಿ 7.23ಲಕ್ಷ ಕಳೆದುಕೊಂಡ ಯುವತಿ

ವಿವಿಧ ಶೀರ್ಷಿಕೆಗಳಡಿಯಲ್ಲಿ ತೆರಿಗೆದಾರರ ಆದಾಯದ ಸ್ವರೂಪದ ಆಧಾರದಲ್ಲಿ ವಿದೇಶಿ ಆದಾಯವನ್ನು ಬಹಿರಂಗಗೊಳಿಸಲು ಯಾವ ಐಟಿಆರ್ ಅರ್ಜಿ ಆಯ್ಕೆ ಮಾಡಬೇಕು ಎಂಬುದನ್ನು ನಿರ್ಧರಿಸಬೇಕಾಗುತ್ತದೆ. 
*ವಿದೇಶಿ ಷೇರುಗಳ ಗಳಿಕೆ ಅಥವಾ ನಷ್ಟವನ್ನು ವರದಿ ಮಾಡಲು ತೆರಿಗೆದಾತ 'ಐಟಿಆರ್ 2' ಅರ್ಜಿ ನಮೂನೆಯಲ್ಲಿ ಐಟಿಆರ್ ಸಲ್ಲಿಕೆ ಮಾಡಬೇಕು. ಆದರೆ, ಇವರು ಉದ್ಯಮ/ವೃತಿ ಅಥವಾ ಪಾಲುದಾರಿಕೆ ಸಂಸ್ಥೆಯಿಂದ ಯಾವುದೇ ಆದಾಯ ಹೊಂದಿಲ್ಲವೆಂದ್ರೆ ಮಾತ್ರ. ಇಂಥ ಆದಾಯ ಹೊಂದಿರೋರು ಐಟಿಆರ್ 3 ನಮೂನೆಯಲ್ಲಿ ಮಾಹಿತಿ ಸಲ್ಲಿಕೆ ಮಾಡಬೇಕು.
*ಇನ್ನು ಐಟಿಆರ್ 2 ಬಳಸೋರು ಅದರಲ್ಲಿ ವಿದೇಶಿ ಷೇರುಗಳ ಮಾರಾಟದಿಂದ ಗಳಿಸಿದ್ದು ಅಥವಾ ಕಳೆದುಕೊಂಡಿದ್ದನ್ನು 'ಶೆಡ್ಯೂಲ್ CG' ಅಡಿಯಲ್ಲಿ ವರದಿ ಮಾಡಬೇಕು.
*ಇನ್ನು ವಿದೇಶಿ ಕಂಪನಿಗಳಲ್ಲಿ ಷೇರುಗಳನ್ನು ಹೊಂದಿರೋರು ಲಾಭ/ನಷ್ಟದ ಜೊತೆಗೆ ಮಾಹಿತಿಯನ್ನು 'Schedule Foreign Assets (FA)'ನಲ್ಲಿ ವರದಿ ಮಾಡಬೇಕು.
*ವಿದೇಶಿ ಷೇರುಗಳಲ್ಲಿ ಹೂಡಿಕೆ ಹೊಂದಿರುವ ತೆರಿಗೆದಾರರ ಆದಾಯ 5 ಮಿಲಿಯನ್ ರೂ.ಗಿಂತ ಹೆಚ್ಚಿದ್ದರೆ ' Schedule Assets and Liability (AL)'ನಲ್ಲಿ ನಮೂದಿಸಬೇಕು.
ಇನ್ನು ಇಂಥ ತೆರಿಗೆದಾರರು ಬಂಡವಾಳ ನಷ್ಟ (capital losses) ಹೊಂದಿದ್ದರೆ ತಮ್ಮ ಐಟಿಆರ್ ಅನ್ನು ಸಮಯಕ್ಕೆ ಸರಿಯಾಗಿ ಫೈಲ್ ಮಾಡೋದು ಅಗತ್ಯ. ಇಲ್ಲವಾದರೆ ಇಂಥ ನಷ್ಟವನ್ನು ಕಂದಾಯ ಪ್ರಾಧಿಕಾರಗಳು ಪರಿಗಣಿಸೋದಿಲ್ಲ.

ನೋ ಕಾಸ್ಟ್ ಇಎಂಐ ನಿಜಕ್ಕೂ ಗ್ರಾಹಕರಿಗೆ ಲಾಭದಾಯಕವೇ? ಇದರ ಹಿಂದಿನ ಮಾರ್ಕೆಟಿಂಗ್ ಗಿಮಿಕ್ ಏನು? ಇಲ್ಲಿದೆ ಮಾಹಿತಿ

ಯಾರು ಐಟಿಆರ್ -1 ಸಹಜ್ ಫೈಲ್ ಮಾಡಬಹುದು?
ಐಟಿಆರ್ -1 (ಸಹಜ್) ಹಾಗೂ ಐಟಿಆರ್ ಅರ್ಜಿ ನಮೂನೆ 4 (ಸುಗಮ್)  ಸರಳ ಅರ್ಜಿಗಳಾಗಿದ್ದು, ಇದು ಸಣ್ಣ ಹಾಗೂ ಮಧ್ಯಮ ತೆರಿಗೆದಾರರಿಗೆ ಸಂಬಂಧಿಸಿದ್ದಾಗಿದೆ. 50 ಲಕ್ಷ ರೂ. ತನಕ ಆದಾಯ ಹೊಂದಿರುವ ವ್ಯಕ್ತಿಗಳು ಈ ಅರ್ಜಿ ಸಲ್ಲಿಕೆ ಮಾಡಬಹುದು.  ವೇತನ, ಗೃಹ ಆಸ್ತಿ, ಇತರ ಮೂಲಗಳು (ಬಡ್ಡಿ ಇತ್ಯಾದಿ) ಹಾಗೂ 5 ಸಾವಿರ ರೂ. ತನಕ ಕೃಷಿ ಆದಾಯ ಹೊಂದಿರೋರು ಸಹಜ್ ಅರ್ಜಿ ಫೈಲ್ ಮಾಡಬಹುದು. ಇನ್ನು ಸುಗಮ್ ಅರ್ಜಿಯನ್ನು ವೈಯಕ್ತಿಕ, ಹಿಂದು ಅವಿಭಕ್ತ ಕುಟುಂಬಗಳು ಹಾಗೂ ಸಂಸ್ಥೆಗಳು (LLPs ಹೊರತುಪಡಿಸಿ) ಸಲ್ಲಿಕೆ ಮಾಡಬಹುದು. ಒಟ್ಟಾರೆ 50ಲಕ್ಷ ರೂ. ತನಕ ಆದಾಯ ಹೊಂದಿರುವ ಹಾಗೂ ಸೆಕ್ಷನ್ 44AD, 44ADA ಅಥವಾ 44AE ಅಡಿಯಲ್ಲಿ ಉದ್ಯಮ ಹಾಗೂ ವೃತ್ತಿಯಿಂದ ಆದಾಯ ಪಡೆಯೋರು ಈ ಅರ್ಜಿ ಸಲ್ಲಿಕೆ ಮಾಡಬಹುದು.

click me!