2023-24ನೇ ಮೌಲ್ಯಮಾಪನ ವರ್ಷದ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಕೆಗೆ ಜುಲೈ 31 ಅಂತಿಮ ಗಡುವು. ಒಂದು ವೇಳೆ ಈ ಅಂತಿಮ ಗಡುವಿನೊಳಗೆ ಐಟಿಆರ್ ಸಲ್ಲಿಕೆ ಮಾಡಲು ಸಾಧ್ಯವಾಗದಿದ್ರೆ ಏನಾಗುತ್ತದೆ? ಇಲ್ಲಿದೆ ಮಾಹಿತಿ.
Business Desk: ಪ್ರತಿ ಮೌಲ್ಯಮಾಪನ ವರ್ಷದಲ್ಲಿ ಆದಾಯ ತೆರಿಗೆ ಇಲಾಖೆ ತೆರಿಗೆದಾರರಿಗೆ ತಮ್ಮ ಆದಾಯದ ಮಾಹಿತಿಗಳನ್ನು ಸಂಗ್ರಹಿಸಿ ಐಟಿಆರ್ ಸಲ್ಲಿಕೆ ಮಾಡಲು ನಾಲ್ಕು ತಿಂಗಳ ಸಮಯಾವಕಾಶ ನೀಡುತ್ತದೆ. ಸಾಮಾನ್ಯವಾಇ ಈ ನಾಲ್ಕು ತಿಂಗಳ ಅವಧಿ ಏಪ್ರಿಲ್ 1ರಿಂದ ಪ್ರಾರಂಭವಾಗಿ ಜುಲೈ 31ಕ್ಕೆ ಕೊನೆಗೊಳ್ಳುತ್ತದೆ. ಇದು ವೇತನದಾರ ಉದ್ಯೋಗಿಗಳಿಗೆ ಹಾಗೂ ಹಿಂದೂ ಅವಿಭಜಿತ ಕುಟುಂಬಗಳಿಗೆ ಆಡಿಟ್ ಅಗತ್ಯವಿಲ್ಲದ ಅಕೌಂಟ್‌ಗಳಿಗೆ ಅನ್ವಯಿಸುತ್ತದೆ. ಒಂದು ವೇಳೆ ನೀವು ಅಂತಿಮ ಗಡುವಿನೊಳಗೆ ಐಟಿಆರ್ ಸಲ್ಲಿಕೆ ಮಾಡದಿದ್ರೆ ನಿಮಗೆ ದಂಡ ಬೀಳುವ ಜೊತೆಗೆ ಆದಾಯ ತೆರಿಗೆ ಇಲಾಖೆ ನೋಟಿಸ್ ಕೂಡ ನೀಡುತ್ತದೆ. ಅಷ್ಟೇ ಅಲ್ಲ, ಕೆಲವು ಸಂದರ್ಭಗಳಲ್ಲಿ ನೀವು ಜೈಲು ಕಂಬಿಯನ್ನು ಕೂಡ ಎಣಿಸಬೇಕಾಗಬಹುದು. ಹಾಗೆಯೇ ನಮಗೆ ತೆರಿಗೆ ರೀಫಂಡ್ ಕೂಡ ಸಿಗುವುದಿಲ್ಲ. ಇನ್ನು ಜುಲೈ 31ರೊಳಗೆ ನೀವು ಐಟಿಆರ್ ಸಲ್ಲಿಕೆ ಮಾಡದಿದ್ರೆ ಈ ವರ್ಷ ನೀವು ಅನುಭವಿಸಿದ ನಷ್ಟವನ್ನು ಮುಂದಿನ ಆರ್ಥಿಕ ಸಾಲಿನಲ್ಲಿ ನೀವು ಗಳಿಸೋ ಲಾಭಕ್ಕೆ ಸರಿಹೊಂದಿಸಲು ಕೂಡ ಸಾಧ್ಯವಾಗೋದಿಲ್ಲ.
5 ಸಾವಿರ ರೂ. ದಂಡ
ಜುಲೈ 31ರೊಳಗೆ ಐಟಿಆರ್ ಸಲ್ಲಿಕೆ ಮಾಡಲು ಸಾಧ್ಯವಾಗದಿದ್ದವರಿಗೆ ವಿಳಂಬ ಐಟಿಆರ್ ಸಲ್ಲಿಕೆಗೆ ಅವಕಾಶವಿದೆ. 2023-24ನೇ ಮೌಲ್ಯಮಾಪನ ವರ್ಷದ ವಿಳಂಬ ಐಟಿಆರ್ ಸಲ್ಲಿಕೆಗೆ ಡಿಸೆಂಬರ್ 31 ಕೊನೆಯ ದಿನಾಂಕವಾಗಿದೆ. ಆದರೆ, ವಿಳಂಬ ಐಟಿಆರ್ ಸಲ್ಲಿಕೆಗೆ ದಂಡ ಪಾವತಿಸಬೇಕಾಗುತ್ತದೆ. ಆದಾಯ ತೆರಿಗೆ ಇಲಾಖೆ ಕಾಯ್ದೆ ಸೆಕ್ಷನ್ 34 ಎಫ್ ಅನ್ವಯ ಒಂದು ವೇಳೆ ನೀವು ನಿಮ್ಮ ಐಟಿಆರ್ ಅನ್ನು ಜುಲೈ 31ರ ಬಳಿಕ ಹಾಗೂ ಡಿಸೆಂಬರ್ 31ರೊಳಗೆ ಸಲ್ಲಿಕೆ ಮಾಡಿದರೆ ಆಗ ಗರಿಷ್ಠ 5,000ರೂ. ದಂಡ ವಿಧಿಸಲಾಗುತ್ತದೆ. ಒಟ್ಟು 5ಲಕ್ಷ ರೂ. ಹಾಗೂ ಅದಕ್ಕಿಂತ ಹೆಚ್ಚಿನ ವಾರ್ಷಿಕ ಆದಾಯ ಹೊಂದಿರುವ ತೆರಿಗೆದಾರರು ಜು.31ರ ಬಳಿಕ ವಿಳಂಬ ಐಟಿಆರ್ ಸಲ್ಲಿಕೆ ಮಾಡಿದ್ರೆ 5,000ರೂ. ದಂಡ ಪಾವತಿಸಬೇಕು.ಇನ್ನು ಯಾರು ವಾರ್ಷಿಕ ಒಟ್ಟು 5ಲಕ್ಷ ರೂ. ತನಕ ಆದಾಯ ಹೊಂದಿದ್ದಾರೋ ಅವರು 1,000ರೂ. ದಂಡ ಪಾವತಿಸಬೇಕು. ಒಂದು ವೇಳೆ ಐಟಿಆರ್ ಅನ್ನು 2023ರ ಡಿಸೆಂಬರ್ 31ರ ಬಳಿಕ ಸಲ್ಲಿಕೆ ಮಾಡಿದರೆ 10,000ರೂ. ದಂಡ ಪಾವತಿಸಬೇಕಾಗುತ್ತದೆ.
ಐಟಿಆರ್ ಸಲ್ಲಿಕೆ ಮಾಡೋರಿಗೆ ಈ ನಿಯಮ ತಿಳಿದಿರಲಿ;ಬ್ಯಾಂಕ್ ನಗದು ವಿತ್ ಡ್ರಾಗೂ ಶೇ.2ರಷ್ಟುTDS ಕಡಿತ
ನಷ್ಟ-ಲಾಭ ಸರಿ ಹೊಂದಾಣಿಕೆ ಸಾಧ್ಯವಿಲ್ಲ
ನೀವು ಜು.31ರೊಳಗೆ ಐಟಿಆರ್ ಸಲ್ಲಿಕೆ ಮಾಡದಿದ್ರೆ ಕೆಲವೊಂದು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅದೇನೆಂದ್ರೆ ಈ ವರ್ಷ ನೀವು ಅನುಭವಿಸಿದ ನಷ್ಟವನ್ನು ಮುಂದಿನ ಆರ್ಥಿಕ ಸಾಲಿನಲ್ಲಿ ನೀವು ಗಳಿಸೋ ಲಾಭಕ್ಕೆ ಸರಿಹೊಂದಿಸೋ (Setoff) ಅವಕಾಶವನ್ನು ನೀವು ಕಳೆದುಕೊಳ್ಳುತ್ತೀರಿ.
ತೆರಿಗೆ ರೀಫಂಡ್ ಸಿಗೋದಿಲ್ಲ
ನಿಮ್ಮ ಆದಾಯದಿಂದ ಈಗಾಗಲೇ ಹೆಚ್ಚುವರಿಯಾಗಿ ಕಡಿತಗೊಂಡ ತೆರಿಗೆಗೆ ನೀವು ಸೂಕ್ತ ದಾಖಲೆಗಳನ್ನು ಒದಗಿಸಿದ್ರೆ ಅದನ್ನು ಆದಾಯ ತೆರಿಗೆ ಇಲಾಖೆ ನಿಮಗೆ ಮರುಪಾವತಿ (Refund) ಮಾಡುತ್ತದೆ. ಆದ್ರೆ ನೀವು ಜು.31ರೊಳಗೆ ಐಟಿಆರ್ ಫೈಲ್ ಮಾಡದಿದ್ರೆ ನಿಮಗೆ ತೆರಿಗೆ ಮರುಪಾವತಿ ಮಾಡಲಾಗೋದಿಲ್ಲ.
ಬಡ್ಡಿ ಕೂಡ ಕಟ್ಟಬೇಕು
ಒಂದು ವೇಳೆ ನೀವು ಈ ತನಕ ಪಾವತಿ ಮಾಡಿದ ತೆರಿಗೆ ಆದಾಯ ತೆರಿಗೆ ಇಲಾಖೆ ಲೆಕ್ಕ ಹಾಕಿದ ತೆರಿಗೆಗಿಂತ ಕಡಿಮೆ ಇದ್ರೆ ಬಾಕಿ ತೆರಿಗೆ ಪಾವತಿಸೋ ಜೊತೆಗೆ ಅದಕ್ಕೆ ಬಡ್ಡಿಯನ್ನು (Interest) ಕೂಡ ಕಟ್ಟಬೇಕಾಗುತ್ತದೆ.
ITR Filing: 10 ಲಕ್ಷ ರೂ. ಆದಾಯ ಹೊಂದಿದ್ದೀರಾ?ಈ ಲೆಕ್ಕಾಚಾರ ಅನುಸರಿಸಿದ್ರೆ ಯಾವುದೇ ತೆರಿಗೆ ಪಾವತಿಸೋದು ಬೇಡ!
ಜೈಲು ಶಿಕ್ಷೆ
ಮೌಲ್ಯಮಾಪನ ವರ್ಷ 2023-24ರ ಐಟಿ ರಿಟರ್ನ್ಸ್ ಅನ್ನು ಡಿಸೆಂಬರ್ 31, 2022 ರ ವೇಳೆಗೆ ಸಲ್ಲಿಸದಿದ್ದರೆ ನಿಮಗೆ 6 ತಿಂಗಳಿಂದ 7 ವರ್ಷದವರೆಗೆ ಜೈಲು ಶಿಕ್ಷೆ ವಿಧಿಸುವ ಅಧಿಕಾರವನ್ನು ಕೇಂದ್ರ ಸರ್ಕಾರ ಹೊಂದಿದೆ.