ಗುಡ್ ನ್ಯೂಸ್: ಆದಾಯ ತೆರಿಗೆ ಅವಧಿ ವಿಸ್ತರಣೆ!

Published : Jul 26, 2018, 07:07 PM IST
ಗುಡ್ ನ್ಯೂಸ್: ಆದಾಯ ತೆರಿಗೆ ಅವಧಿ ವಿಸ್ತರಣೆ!

ಸಾರಾಂಶ

ಆದಾಯ ತೆರಿಗೆದಾರರಿಗೆ ಕೇಂದ್ರದಿಂದ ಗುಡ್ ನ್ಯೂಸ್ ಆದಾಯ ತೆರಿಗೆ ಸಲ್ಲಿಕೆ ಗಡುವು ವಿಸ್ತರಿಸಿದ ಕೇಂದ್ರ ಜುಲೈ 31 ರ ಬದಲಾಗಿ ಆಗಸ್ಟ್ 31 ಕೊನೆ ದಿನಾಂಕ ಒಂದು ತಿಂಗಳ ಅವಧಿಗೆ ಗಡುವು ವಿಸ್ತರಣೆಗೆ ಅಸ್ತು

ನವದೆಹಲಿ(ಜು.26): ಆದಾಯ ತೆರಿಗೆದಾರರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ಆದಾಯ ತೆರಿಗೆ ಸಲ್ಲಿಸಲು ನಿಗದಿ ಮಾಡಿದ್ದ ದಿನಾಂಕವನ್ನು ಒಂದು ತಿಂಗಳಿಗೆ ವಿಸ್ತರಿಸಲಾಗಿದೆ. ಐಟಿಆರ್ ಸಲ್ಲಿಸಲು ಇದೇ ಜುಲೈ 31 ಕೊನೆ ದಿನಾಂಕವಾಗಿತ್ತು. ಆದರೆ ಆದಾಯ ತೆರಿಗೆ ಇಲಾಖೆ ಈ ಅವಧಿಯನ್ನು ಆಗಸ್ಟ್ 31 ರ ವರೆಗೆ ವಿಸ್ತರಿಸಿದೆ.

ಈ ಕುರಿತು ಮಾಹಿತಿ ನೀಡಿರುವ ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್, ವಿವಿಧ ವಿಭಾಗಗಳ ಆದಾಯ ತೆರಿಗೆ ಸಲ್ಲಿಕೆಯ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ಹೇಳಿದೆ. ಪ್ರಸಕ್ತ ಸಾಲಿನಿಂದ ಆದಾಯ ತೆರಿಗೆ ಸಲ್ಲಿಕೆ ಗಡುವು ಮೀರಿದರೆ ತೆರಿಗೆದಾರರು ದಂಡ ಪಾವತಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಜುಲೈ 31 ರ ಅವಧಿ ಸಾಕಾಗದು ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದರು.

ತೆರಿಗೆದಾರರ ಮನವಿ ಪುರಸ್ಕರಿಸಿರುವ ಕೇಂದ್ರ ಹಣಕಾಸು ಇಲಾಖೆ, ಆದಾಯ ತೆರಿಗೆ ಸಲ್ಲಿಕೆಯ ಅವಧಿಯನ್ನು ಆಗಸ್ಟ್ 31 ರ ವರೆಗೆ ವಿಸ್ತರಿಸಿ ಆದೇಶ ಹೊರಡಿಸಿದೆ. ಈ ಕುರಿತು ಟ್ವೀಟ್ ಮಾಡಿರುವ ಹಣಕಾಸು ಇಲಾಖೆ, ತೆರಿಗೆದಾರರ ಮನವಿ ಪುರಸ್ಕರಿಸಿದ್ದು, ಆದಾಯ ತೆರಿಗೆ ಸಲ್ಲಿಕೆಯ ಕೊನೆಯ ದಿನಾಂಕವನ್ನು ಆಗಸ್ಟ್ 31 ರ ವರೆಗೆ ವಿಸ್ತರಿಸಲಾಗಿದೆ ಎಂದು ತಿಳಿಸಿದೆ.  

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಹೇಗಿದೆ ಗೊತ್ತಾ ಅನಿಲ್‌ ಅಂಬಾನಿ ಅರಮನೆ: ಹೆಲಿಪ್ಯಾಡ್, ಈಜುಕೊಳವಿರುವ 17 ಮಹಡಿಗಳ ಸ್ವರ್ಗ Abode
ಮುಂಬೈನಲ್ಲಿ ಮಂಗಳೂರು ಬೆಡಗಿ ಶಿಲ್ಪಾ ಶೆಟ್ಟಿ ಮೊದಲ ಬೀಚ್ ಕ್ಲಬ್ ಶುರು; ದೇವಲೋಕವೋ ಪ್ರೇಮಲೋಕವೋ ಎಂಬಂತಿದೆ!