* ಆದಾಯ ತೆರಿಗೆ ಇಲಾಖೆಯು ಪರಿಷ್ಕೃತ ಆದಾಯದ ಮೇಲಿನ ತೆರಿಗೆ ಪಾವತಿ
* ಕೇಂದ್ರದಿಂದ ಐಟಿ ರಿಟರ್ನ್ಸ್ ಪರಿಷ್ಕರಣೆಗೆ ಹೊಸ ಫಾರ್ಮ್!
* ಆದಾಯದ ಮೊತ್ತದೊಂದಿಗೆ, ಅದನ್ನು ಸಲ್ಲಿಸುತ್ತಿರುವುದಕ್ಕೆ ನಿಖರವಾದ ಕಾರಣ
ನವದೆಹಲಿ(ಮೇ.02): ಆದಾಯ ತೆರಿಗೆ ಇಲಾಖೆಯು ಪರಿಷ್ಕೃತ ಆದಾಯದ ಮೇಲಿನ ತೆರಿಗೆ ಪಾವತಿಸಲು ಹೊಸ ಫಾಮ್‌ರ್ ಅನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ತೆರಿಗೆ ಪಾವತಿದಾರರು ತೆರಿಗೆ ಸಲ್ಲಿಸಬೇಕಾದ ಆದಾಯದ ಮೊತ್ತದೊಂದಿಗೆ, ಅದನ್ನು ಸಲ್ಲಿಸುತ್ತಿರುವುದಕ್ಕೆ ನಿಖರವಾದ ಕಾರಣವನ್ನು ನೀಡಬೇಕಾಗಿದೆ.
‘2019-20 ಹಾಗೂ 2020-21ರ ಹಣಕಾಸು ವರ್ಷದಲ್ಲಿ ಪರಿಷ್ಕೃತ ಆದಾಯ ತೆರಿಗೆ ರಿಟನ್ಸ್‌ರ್ (ಐಟಿಆರ್-ಯು) ಸಲ್ಲಿಸಲು ಹೊಸ ಫಾಮ್‌ರ್ ಅನ್ನು ತೆರಿಗೆ ಪಾವತಿದಾರರಿಗೆ ಒದಗಿಸಲಾಗುವುದು. ಈ ಫಾಮ್‌ರ್‍ನಲ್ಲಿ ತೆರಿಗೆ ಪಾವತಿದಾರರು ತಮ್ಮ ಆದಾಯವನ್ನು ಪರಿಷ್ಕರಿಸುವಾಗ ಅದರೊಂದಿಗೆ ಫಾಮ್‌ರ್‍ನಲ್ಲಿ ನಮೂದಿಸಲಾದ- ಈ ಮೊದಲು ತೆರಿಗೆ ರಿಟರ್ನ್ ಪಾವತಿಯಾಗಿರಲಿಲ್ಲ, ಆದಾಯವನ್ನು ಸರಿಯಾಗಿ ನಮೂದಿಸಿರಲಿಲ್ಲ, ಆದಾಯದ ತಪ್ಪು ಮೂಲಗಳನ್ನು ಸೂಚಿಸಲಾಗಿತ್ತು. ನಷ್ಟದಿಂದಾಗಿ ಆದಾಯ ಇಳಿಕೆಯಾಯಿತು ಮೊದಲಾದ ಕಾರಣಗಳಲ್ಲಿ ಸೂಕ್ತವಾದದ್ದನ್ನು ಆಯ್ಕೆ ಮಾಡಬೇಕಾಗಿದೆ’ ಎಂದು ಇಲಾಖೆ ತಿಳಿಸಿದೆ.
‘ಐಟಿಆರ್-ಅಪ್‌ಡೇಟ್ ಅನ್ನು ತೆರಿಗೆ ಪಾವತಿಸಿದ 2 ವರ್ಷಗಳ ಒಳಗಾಗಿ ಸಲ್ಲಿಸಬೇಕಾಗಿದೆ. ಹೆಚ್ಚುವರಿ ಮೊತ್ತದ ಶೇ. 25ರಷ್ಟುಬಾಕಿ ತೆರಿಗೆ ಹಾಗೂ ಬಡ್ಡಿದರವನ್ನು ಇದರೊಂದಿಗೆ ಸಲ್ಲಿಸಬೇಕಾಗುತ್ತದೆ. ಇದರೊಂದಿಗೆ ತೆರಿಗೆ ಸಲ್ಲಿಕೆಯ ವೇಳೆಯಲ್ಲಿ ಸ್ಪಷ್ಟವಾದ ಕಾರಣವನ್ನು ಸೂಚಿಸುವುದು ಹೆಚ್ಚಿನ ಮಾಹಿತಿ ವಿಶ್ಲೇಷಣೆ ಹಾಗೂ ಸಂಸ್ಕರಣೆಗಾಗಿ ಅನುಕೂಲಕರವಾಗಿದೆ’ ಎಂದು ಇಲಾಖೆ ತಿಳಿಸಿದೆ.