Stock Portfolio Rahul Gandhi: ಪಿಡಿಲೈಟ್‌ನಲ್ಲಿ ಗರಿಷ್ಠ ಹೂಡಿಕೆ, ಪಿಎಸ್‌ಯುಗೆ ಹಣ ಹಾಕದ ಕಾಂಗ್ರೆಸ್‌ ನಾಯಕ!

By Santosh Naik  |  First Published Apr 4, 2024, 11:01 AM IST

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ತಮ್ಮ ಅಫಡವಿಟ್‌ನಲ್ಲಿ ತಾವು ಹೂಡಿಕೆ ಮಾಡಿರುವ ಸ್ಟಾಕ್‌ಗಳ ವಿವರಗಳನ್ನೂ ಸಲ್ಲಿಸಿದ್ದಾರೆ. ರಾಹುಲ್‌ ಗಾಂಧಿ ಒಟ್ಟು 25 ಕಂಪನಿಗಳ ಷೇರುಗಳನ್ನು ಖರೀದಿ ಮಾಡಿದ್ದು, ಸರ್ಕಾರಿ ಸ್ವಾಮ್ಯದ ಯಾವ ಕಂಪನಿಗಳ ಮೇಲೂ ಹೂಡಿಕೆ ಮಾಡಿಲ್ಲ.
 


ಬೆಂಗಳೂರು (ಏ.4): ಮಾರ್ಚ್‌ 15ರ ವೇಳೆಗೆ ಕಾಂಗ್ರೆಸ್‌ ನಾಯಕ ಹಾಗೂ ವಯನಾಡ್‌ ಸಂಸದ ರಾಹುಲ್‌ ಗಾಂಧಿ ಒಟ್ಟು 25 ಕಂಪನಿಗಳ ಷೇರುಗಳನ್ನು ಹೊಂದಿದ್ದಾರೆ. ಇದರ ಒಟ್ಟಾರೆ ಮೌಲ್ಯ 4 ಕೋಟಿ ರೂಪಾಯು ಆಗಿದೆ. ಬುಧವಾರ ಕೇಂದ್ರ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಡವಿಟ್‌ನಲ್ಲಿ ಇದರ ವಿವರಗಳನ್ನು ನೀಡಲಾಗಿದೆ. ರಾಹುಲ್‌ ಗಾಂಧಿಯ ಒಟ್ಟಾರೆ ಆದಾಯದಲ್ಲಿ ಶೇ. 88 ರಷ್ಟು ಆದಾಯ ಮ್ಯೂಚುವಲ್‌ ಫಂಡ್‌ ಹಾಗೂ 25 ಸ್ಟಾಕ್‌ಗಳಿಂದಲೇ ಬರುತ್ತಿದೆ. ಅಚ್ಚರಿಯ ವಿಚಾರವೆಂದರೆ, ಇತ್ತೀಚಿನ ವರ್ಷಗಳಲ್ಲಿ ಸಾರ್ವಜನಿಕ ವಲಯದ ಉದ್ದಿಮೆಗಳ ಸ್ಟಾಕ್‌ಗಳು ಏರಿಕೆ ಆಗುತ್ತಿದೆ. ಆದರೆ, ರಾಹುಲ್‌ ಗಾಂಧಿ ಯಾವುದೇ ಪ್ರಮುಖ ಪಿಎಸ್‌ಯು ಸ್ಟಾಕ್‌ಗಳಲ್ಲಿ ಹೂಡಿಕೆ ಮಾಡಿಲ್ಲ. ರಾಹುಲ್‌ ಗಾಂಧಿಯ ಗರಿಷ್ಠ ಹೂಡಿಕೆ ಪಿಡಿಲೈಟ್‌ ಇಂಡಸ್ಟ್ರೀಸ್‌ ಮೇಲೆ ಮಾಡಿದ್ದಾರೆ. ಫೆವಿಕಾಲ್‌, ಮಿ.ಫಿಕ್ಸಿಟ್‌ನಂಥ ಅಂಟು ಉತ್ಪಾದಿಸುವ ಪ್ರಮುಖ ಕಂಪನಿಯಾದ ಪಿಡಿಲೈಟ್‌ನ 1474 ಷೇರುಗಳನ್ನು ರಾಹುಲ್‌ ಗಾಂಧಿ ಹೊಂದಿದ್ದು, ಇದರ ಮೌಲ್ಯ 42.27 ಲಕ್ಷ ರೂಪಾಯಿ ಆಗಿದೆ. ಗುರುವಾರ ಪಿಡಿಲೈಟ್‌ ಇಂಡಸ್ಟ್ರೀಸ್‌ನ ಪ್ರತಿ ಪೇರಿನ ಬೆಲೆ 3016 ರೂಪಾಯಿ ಆಗಿದೆ.

ರಾಹುಲ್‌ ಗಾಂಧಿ ಅವರ 2ನೇ ಗರಿಷ್ಠ ಹೂಡಿಕೆ ಬಜಾಜ್‌ ಫೈನಾನ್ಸ್‌ ಮೇಲೆ ಆಗಿದೆ. ಈ ಕಂಪನಿಯ 551 ಷೇರುಗಳನ್ನು ರಾಹುಲ್‌ ಗಾಂಧಿ ಹೊಂದಿದ್ದು, ಇದರ ಮೌಲ್ಯ 35.89 ಲಕ್ಷ ರೂಪಾಯಿ ಆಗಿದೆ. ಮೂರನೇ ಸ್ಥಾನದಲ್ಲಿ ನೆಸ್ಲೆ ಇಂಡಿಯಾ ಕಂಪನಿಯ ಷೇರುಗಳಿವೆ. 1370 ಷೇರುಗಳನ್ನು ರಾಹುಲ್‌ ಗಾಂಧಿ ಹೊಂದಿದ್ದು ಇದರ ಮೌಲ್ಯ  35.67 ಲಕ್ಷ ರೂಪಾಯಿ ಆಗಿದೆ. ಏಷ್ಯನ್‌ ಪೇಂಟ್ಸ್‌ನ 1231 ಷೇರುಗಳನ್ನು ಹೊಂದಿದ್ದು, ಇದರ ಮೌಲ್ಯ 35.29 ಲಕ್ಷ ರೂಪಾಯಿ ಆಗಿದೆ.

ಇನ್ನು ಟಾಟಾ ಸನ್ಸ್‌ ಮಾಲೀಕತ್ವದಲ್ಲಿರುವ ಟೈಟಾನ್‌ ಕಂಪನಿಯಲ್ಲೂ ಕಾಂಗ್ರೆಸ್‌ ನಾಯಕ ಹೂಡಿಕೆ ಮಾಡಿದ್ದಾರೆ. ಟೈಟಾನ್‌ ಕಂಪನಿಯ 897 ಷೇರುಗಳನ್ನು ರಾಹುಲ್‌ ಹೊಂದಿದ್ದು ಇದರ ಮೌಲ್ಯ 32.58 ಲಕ್ಷ ರೂಪಾಯಿ ಆಗಿದೆ. ಎಫ್‌ಎಂಸಿಜಿ ದೂತ್ಯ ಹಿಂದುಸ್ತಾನ್‌ ಯುನಿಲಿವರ್‌ ಕಂಪನಿಯಲ್ಲಿ 1161 ಷೇರುಗಳನ್ನು ಹೊಂದಿದ್ದು ಇದರ ಮೌಲ್ಯ 27.02 ಲಕ್ಷ ರೂಪಾಇ ಆಗಿದೆ. ಇನ್ನು 24.83 ಲಕ್ಷ ರೂಪಾಯಿ ಮೌಲ್ಯದ ಐಸಿಐಸಿಐ ಬ್ಯಾಂಕ್‌ ಹಾಗೂ 12 ಲಕ್ಷ ರೂಪಾಯಿ ಮೌಲ್ಯದ ಐಟಿಸಿ ಷೇರುಗಳನ್ನು ರಾಹುಲ್‌ ಗಾಂಧಿ ಹೊಂದಿದ್ದಾರೆ.

ದೈತ್ಯ ಕಂಪನಿಗಳಲ್ಲದೆ, ಮಿಡ್‌ಕ್ಯಾಪ್‌ ಹಾಗೂ ಸ್ಮಾಲ್‌ ಕ್ಯಾಪ್‌ ಕಂಪನಿಗಳನ್ನೂ ರಾಹುಲ್‌ ಗಾಂಧಿ ಹೂಡಿಕೆ ಮಾಡಿದ್ದಾರೆ. ಪಿಡಿಲೈಟ್‌ನ ಅಂಗಸಂಸ್ಥೆಯಾಗಿರುವ ಜಿಎಂಎಂ ಪಫೌಲ್ದರ್‌ ಕಂಪನಿಯ 1121 ಷೇರುಗಳನ್ನು ರಾಹುಲ್‌ ಹೊಂದಿದ್ದು, ಇದರ ಮೌಲ್ಯ 14 ಲಕ್ಷ ರೂಪಾಯಿ, ದೀಪಕ್‌ ನೈಟ್ರೇಟ್‌ ಕಂಪನಿಯಲ್ಲಿ 11.92 ಲಕ್ಷದ ಷೇರು ಹೊಂದಿದ್ದಾರೆ. ಟ್ಯೂಬ್‌  ಇನ್ವೆಸ್ಟ್‌ಮೆಂಟ್‌ ಆಫ್‌ ಇಂಡಿಯಾದಲ್ಲಿ 12.10 ಲಕ್ಷ ರೂಪಾಯಿಯ ಷೇರು, ಫೈನ್‌ ಆರ್ಗಾನಿಕ್ಸ್‌ನಲ್ಲಿ 8.56 ಲಕ್ ರೂಪಾಯಿ ಮೌಲ್ಯದ ಷೇರು, ನೌಕರಿ ಡಾಟ್‌.ಕಾಂ, ಜೀವನ್‌ಸಾಥಿಯ ಮಾತೃಸಂಸ್ಥೆಯಾಗಿರುವ ಇನ್ಫೋ ಎಡ್ಜ್‌ನಲ್ಲಿ 4.45 ಲಕ್ಷ ರೂಪಾಯಿಯ ಷೇರು ಹೊಂದಿದ್ದಾರೆ.

Tap to resize

Latest Videos

ಷೇರು ಮಾರುಕಟ್ಟೆಯಲ್ಲಿ ಕೋಟಿ ಕೋಟಿ ಹಣ ಹಾಕಿರುವ ರಾಹುಲ್‌, ಐದು ವರ್ಷದಲ್ಲಿ ಆಸ್ತಿ 5 ಕೋಟಿ ಏರಿಕೆ!

ರಾಹುಲ್‌ ಗಾಂಧಿ ಮ್ಯೂಚ್ಯವಲ್‌ ಫಂಡ್‌ ಹೂಡಿಕೆ: ರಾಹುಲ್‌ ಗಾಂಧಿ ಒಟ್ಟು 3.81 ಕೋಟಿ ರೂಪಾಯಿ ಮೌಲ್ಯದ ಮ್ಯೂಚುವಲ್‌ ಫಂಡ್‌ ಯುನಿಟ್‌ಗಳನ್ನು ಹೊಂದಿದ್ದಾರೆ. ಎಚ್‌ಡಿಎಫ್‌ಸಿ ಸ್ಮಾಲ್‌ ಕ್ಯಾಪ್‌ (Reg-G)ಯಲ್ಲಿ ಗರಿಷ್ಠ 1.08 ಲಕ್ಷ ಯುನಿಟ್‌ಗಳನ್ನು ಹೊಂದಿದ್ದು, ಇದರ ಮೌಲ್ಯ 1.23 ಕೋಟಿ ರೂಪಾಯಿ ಆಗಿದೆ. ಅದರೊಂದಿಗೆ ಎಚ್‌ಡಿಎಫ್‌ಸಿ ಮಿಡ್‌ಕ್ಯಾಪ್‌ (DP GR) 19.58 ಲಕ್ಷ ರೂಪಾಯಿ, ಎಚ್‌ಡಿಎಫ್‌ಸಿ ಸ್ಮಾಲ್‌ ಕ್ಯಾಪ್‌ (DP GR) ಹೂಡಿಕೆ 17.89 ಲಕ್ಷ, ಎಚ್‌ಡಿಎಫ್‌ಸಿ ಹೈಬ್ರಿಡ್‌ ಡೆಟ್‌ ಫಂಡ್‌ (G) ಅಲ್ಲಿ 79.01 ಲಕ್ಷ ರೂಪಾಯಿ, ಐಸಿಐಸಿಐ ಪ್ರುಡೆನ್ಶಿಯಲ್‌ (Reg Savings-G) ಯಲ್ಲಿ 1.02 ಕೋಟಿ ರೂಪಾಯಿ, ಐಸಿಐಸಿಐ ಇಕ್ಯೂ & ಡಿಎಫ್‌ ಡಿ ಗ್ರೂಥ್‌ನಲ್ಲಿ 19.03 ಲಕ್ಷ, ಪಿಪಿಎಫ್‌ಎಎಸ್‌ ಎಫ್‌ಸಿಎಫ್‌ ಡಿ ಗ್ರೂಥ್‌ನಲ್ಲಿ 19.76 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದಾರೆ.

ವಯನಾಡಿನಲ್ಲಿ ಇಂದು ರಾಹುಲ್‌ ಗಾಂಧಿ ನಾಮಪತ್ರ: ಬೃಹತ್‌ ರೋಡ್‌ಶೋ ನಡೆಸಲಿರುವ ಕಾಂಗ್ರೆಸ್‌ ನಾಯಕ

click me!