ಮೋದಿ ಸರ್ಕಾರಕ್ಕೆ ಜಾಗತಿಕ ವಿಘ್ನ: ಪ್ರಧಾನಿ ಕನಸಾಯ್ತಾ ಭಗ್ನ?

Published : Aug 02, 2019, 02:33 PM ISTUpdated : Aug 02, 2019, 03:00 PM IST
ಮೋದಿ ಸರ್ಕಾರಕ್ಕೆ ಜಾಗತಿಕ ವಿಘ್ನ: ಪ್ರಧಾನಿ ಕನಸಾಯ್ತಾ  ಭಗ್ನ?

ಸಾರಾಂಶ

ಮೋದಿ 2.0 ಸರ್ಕಾರಕ್ಕೆ ಎದುರಾಯ್ತು ಜಾಗತಿಕ ವಿಘ್ನ| ಪ್ರಧಾನಿ ಕಂಡಿದ್ದ ಕನಸಿನ ಸಾಕಾರ ಕಷ್ಟ ಕಷ್ಟ?| ವಿಶ್ವದ ಅತಿ ದೊಡ್ಡ ಆರ್ಥಿಕತೆ ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತಕ್ಕೆ 7 ನೇ ಸ್ಥಾನ| ವಿಶ್ವದ ಅತಿ ದೊಡ್ಡ ಆರ್ಥಿಕತೆ ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಒಂದು ಸ್ಥಾನ ಕುಸಿತ ಕಂಡ ಭಾರತ|  ಭಾರತದ ಆರ್ಥಿಕತೆ 2018 ರಲ್ಲಿ 2.7 ಟ್ರಿಲಿಯನ್ ಡಾಲರ್| ಬ್ರಿಟನ್ ಹಾಗೂ ಫ್ರಾನ್ಸ್ ಸಮನಾಗಿ 2.8 ಟ್ರಿಲಿಯನ್ ಡಾಲರ್ ಆರ್ಥಿಕತೆ| ಕರೆನ್ಸಿ ಏರಿಳಿತ ಹಾಗೂ ಬೆಳವಣಿಗೆ ನಿಧಾನಗತಿ ಆರ್ಥಿಕ ಕುಸಿತಕ್ಕೆ ಕಾರಣ|

ನವದೆಹಲಿ(ಆ.02): ಭಾರತವನ್ನು 2024ರ ವೇಳೆಗೆ 5 ಟ್ರಿಲಿಯನ್ ಆರ್ಥಿಕತೆ ಹೊಂದಿರುವ ರಾಷ್ಟ್ರವನ್ನಾಗಿ ಮಾಡುವ ಪ್ರಧಾನಿ ಮೋದಿ ಕನಸಿಗೆ ಆಘಾತಕಾರಿ ಸುದ್ದಿಯೊಂದು ಎದುರಾಗಿದೆ.

ಮಹತ್ವದ ಬೆಳವಣಿಗೆಯೊಂದರಲ್ಲಿ 2018 ನೇ ಸಾಲಿನಲ್ಲಿ ವಿಶ್ವದ ಅತಿ ದೊಡ್ಡ ಆರ್ಥಿಕತೆ ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ 7 ನೇ ಸ್ಥಾನಕ್ಕೆ ಕುಸಿತ ಕಂಡಿದೆ. 

2017 ರಲ್ಲಿ ಭಾರತ ಫ್ರಾನ್ಸ್’ನ್ನು ಹಿಂದಿಕ್ಕಿ 6 ನೇ ಸ್ಥಾನ ಗಳಿಸಿತ್ತು. ಇದೀಗ ಬ್ರಿಟನ್ ಮತ್ತು ಫ್ರಾನ್ಸ್ ಬಹುತೇಕ ಒಂದೇ ಸಮನಾದ ಆರ್ಥಿಕ ಬೆಳವಣಿಗೆ ಹೊಂದಿದ್ದು, ಭಾರತಕ್ಕಿಂತ ಮೇಲಿನ ಸ್ಥಾನಗಳಲ್ಲಿವೆ. 

ವಿಶ್ವಬ್ಯಾಂಕ್ ವರದಿಯ ಪ್ರಕಾರ ಜಿಡಿಪಿ ಶ್ರೇಣಿಯಲ್ಲಿ ಭಾರತ ಈ ವರ್ಷ ಕುಸಿತ ಕಂಡಿದ್ದು, 2018 ರಲ್ಲಿ 2.7 ಟ್ರಿಲಿಯನ್ ಡಾಲರ್ ಆರ್ಥಿಕತೆ ಹೊಂದಿದ ರಾಷ್ಟ್ರವಾಗಿ ಹೊರಹೊಮ್ಮಿದೆ. ಬ್ರಿಟನ್ ಹಾಗೂ ಫ್ರಾನ್ಸ್ ಸಮನಾಗಿ 2.8 ಟ್ರಿಲಿಯನ್ ಡಾಲರ್ ಆರ್ಥಿಕತೆ ಹೊಂದಿವೆ.

 2018 ರಲ್ಲಿ ಅಮೆರಿಕ ಜಿಡಿಪಿ 20.5 ಟ್ರಿಲಿಯನ್ ಡಾಲರ್ ನಷ್ಟಿದ್ದರೆ, ಚೀನಾದ ಆರ್ಥಿಕತೆ 13.6 ಟ್ರಿಲಿಯನ್ ಡಾಲರ್ ಇದೆ. ಅದರಂತೆ ಜಪಾನ್ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಹೊಂದುವ ಮೂಲಕ ಮೂರನೇ ಸ್ಥಾನದಲ್ಲಿದೆ. 

2018 ರಲ್ಲಿ ಭಾರತ ಜಿಡಿಪಿ ಕುಸಿದಿರುವುದಕ್ಕೆ ಕರೆನ್ಸಿ ಏರಿಳಿತ ಹಾಗೂ ಬೆಳವಣಿಗೆ ನಿಧಾನಗತಿ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಬೆಂಗಳೂರಿನಲ್ಲಿ ಊಬರ್‌ ಕ್ರಾಂತಿಯ ಹೆಜ್ಜೆ, B2B ಲಾಜಿಸ್ಟಿಕ್ಸ್, ಮೆಟ್ರೋ ಟಿಕೆಟ್‌ ಕೂಡ ಲಭ್ಯ!
Vastu Tips: ಮನೆಯಲ್ಲಿ 'ಓಡುತ್ತಿರುವ ಏಳು ಕುದುರೆ' ಫೋಟೋ ಯಾಕೆ ಹಾಕ್ತಾರೆ? ಸೀಕ್ರೆಟ್ ಗೊತ್ತಾದ್ರೆ ಈಗ್ಲೇ ಹಾಕ್ತೀರಾ..