India Growth ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತ 8.2% ಬೆಳವಣಿಗೆ, ಚೀನಾ ಶೇ.4.4, IMF ವರದಿ!

Published : Apr 19, 2022, 09:36 PM IST
India Growth ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತ 8.2% ಬೆಳವಣಿಗೆ, ಚೀನಾ ಶೇ.4.4, IMF ವರದಿ!

ಸಾರಾಂಶ

ಜಾಗತಿಕ ಬೆಳವಣಿಗೆ ಪ್ರಕ್ಷೇಪಣಾ ಶೇಕಡಾ 3.6  ಉಕ್ರೇನ್ ಯುದ್ಧದ ಕಾರಣ ಜಾಗತಿಕ ಬೆಳವಣಿಗೆ ಕಂಠಿತ ಭಾರತದ ಬೆಳವಣಿಗೆ ಶೇಕಡಾ 8.2 ರಷ್ಟು

ನವದೆಹಲಿ(ಏ.19): ಉಕ್ರೇನ್ ಯುದ್ಧದ ಕಾರಣ ಜಾಗತಿಕ ಬೆಳವಣಿಗೆ ಕಂಠಿತ ಗೊಂಡಿದೆ. ಈ ಯುದ್ಧದ ಪರಿಣಾಮ ಜಾಗತಿಕ ಬೆಳವಣಿಗೆ ಪ್ರಕ್ಷೇಪಣ ಶೇಕಡಾ 3.6 ರಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ(IMF) ಅಂದಾಜಿಸಿದೆ. ಆದರೆ ಭಾರತದ ಬೆಳವಣಿಗೆಯನ್ನು ಶೇಕಡಾ 8.2 ರಷ್ಟು ಎಂದಿದೆ. ಇದೇ ವೇಳೆ ಮತ್ತೆ ಕೋವಿಡ್‌ಗೆ ತುತ್ತಾಗಿರುವ ಚೀನಾ ಬೆಳವಣಿಗೆ ಶೇಕಡಾ 4.4 ಮಾತ್ರ ಎಂದಿದೆ.

IMF ವರದಿಯಲ್ಲಿ ಭಾರತದ ಬೆಳವಣಿಗೆ ಶೇಕಡಾ 8.2 ರಷ್ಟು ಗುರುತಿಸಿದ್ದರೂ, ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 0.8 ರಷ್ಟು ಕಡಿತಗೊಂಡಿದೆ. ಕಳೆದ ವರ್ಷ ಭಾರತ ಶೇಕಡಾ 8.9 ರಷ್ಟು ಬೆಳವಣಿಗೆ ದಾಖಲಿಸಿತ್ತು. 2023ರ ಸಾಲಿನಲ್ಲಿ ಭಾರತದ ಬೆಳವಣಿಗೆ ಶೇಕಡಾ 6.9 ರಷ್ಟು ಎಂದು ದಾಖಲಿಸಿದೆ.

ಭಾರತದಲ್ಲಿ ಬಡತನ ಏರಿಕೆ ತಡೆದ ಮೋದಿ ಧಾನ್ಯ ಸ್ಕೀಂ

ಚೀನಾದ ಪ್ರಸಕ್ತ ವರ್ಷದ ಬೆಳವಣಿಗೆ ಶೇಕಡಾ 4.4 ಎಂದಿದೆ. ಕಳೆದ ವರ್ಷ ಚೀನಾ 8.1 ರಷ್ಟು ಬೆಳವಣಿಗೆ ದರ ದಾಖಲಿಸಿತ್ತು. ಇನ್ನು 2023ರಲ್ಲಿ 5.1 ರಷ್ಟು ಬೆಳವಣಿಗೆ ದಾಖಲಾಗಲಿದೆ ಎಂದು IMF ತನ್ನ ವರದಿಯಲ್ಲಿ ಹೇಳಿದೆ.

ಈ ವರ್ಷ ಭಾರತದ ಆರ್ಥಿಕತೆ ಶೇ.9ರಷ್ಟುಪ್ರಗತಿ
ಒಮಿಕ್ರೋನ್‌ ವೈರಸ್‌ ಹಾವಳಿ, ಇಂಧನ ದರ ಏರಿಕೆ ಮತ್ತು ಹಣದುಬ್ಬರದ ಪರಿಣಾಮ 2022ರಲ್ಲಿ ವಿಶ್ವದ ಆರ್ಥಿಕತೆ ಅಭಿವೃದ್ಧಿ ದರ ಕುಸಿತವಾಗಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ಅಂದಾಜು ಮಾಡಿದೆ. 2022ರಲ್ಲಿ ಜಾಗತಿಕ ಆರ್ಥಿಕತೆ 5.9ರಷ್ಟುವೃದ್ಧಿಯಾಗಲಿದೆ ಎಂದು ಕಳೆದ ವರ್ಷ ಅಂದಾಜಿಸಲಾಗಿತ್ತು. ಆದರೆ ಇದೀಗ ಅದನ್ನು ಶೇ.4.4ಕ್ಕೆ ಇಳಿಸಲಾಗಿದೆ.

ಜೊತೆಗೆ ಅಮೆರಿಕ, ಚೀನಾ, ಫ್ರಾನ್ಸ್‌, ಬ್ರಿಟನ್‌ ಸೇರಿದಂತೆ ವಿಶ್ವದ ಬಹುತೇಕ ಅಭಿವೃದ್ಧಿ ಹೊಂದಿದ ಮತ್ತು ಹೊಂದುತ್ತಿರುವ ದೇಶಗಳ ಆರ್ಥಿಕ ಪ್ರಗತಿ ದರವು 2021ಕ್ಕೆ ಹೋಲಿಸಿದರೆ 2022ರಲ್ಲಿ ಕುಂಠಿತವಾಗಲಿದೆ. ಆದರೆ ಭಾರತ 2022ರಲ್ಲೂ ಶೇ.9ರಷ್ಟುಪ್ರಗತಿ ದರ ದಾಖಲಿಸಲಿದೆ ಎಂದು ಐಎಂಎಫ್‌ ಅಂದಾಜಿಸಿದೆ. ಇದು ವಿಶ್ವದ ಬೃಹತ್‌ ಆರ್ಥಿಕತೆಗಳಿಗೆ ಹೋಲಿಸಿದರೆ ದೊಡ್ಡಮಟ್ಟಿನ ಪ್ರಗತಿಯಾಗಿದೆ.

ಕೊರೋನಾ ಸಂಕಷ್ಟದಲ್ಲಿ ಭಾರತದ ದಿಟ್ಟ ನಡೆ: PMGKAY ಯೋಜನೆಗೆ IMF ಶ್ಲಾಘನೆ!

ಅಮೆರಿಕದ ಜಿಡಿಪಿ ಪ್ರಗತಿ ದರವನ್ನು ಈ ಹಿಂದೆ ಅಂದಾಜಿಸಿದ್ದ ಶೆ.5.6ರ ಬದಲು ಶೇ.4ಕ್ಕೆ, ಫ್ರಾನ್ಸ್‌ ದರ ಶೇ.6.7ರಿಂದ ಶೇ.3.5ಕ್ಕೆ, ಇಟಲಿ ದರ ಶೇ.6.2ರಿಂದ ಶೇ.3.8ಕ್ಕೆ, ಕೆನಡಾ ದರ ಶೇ.4.7ರಿಂದ ಶೇ.4.1ಕ್ಕೆ, ಚೀನಾ ದರ ಶೇ.8.1ರಿಂದ ಶೇ.4.8ಕ್ಕೆ ಇಳಿಯಲಿದೆ ಎಂದು ಹೇಳಿದೆ.

ಭಾರತದ ಪ್ರಗತಿ:
2020-21ರಲ್ಲಿ ಭಾರತದ ಆರ್ಥಿಕತೆ ಭಾರೀ ಕುಸಿತ ಕಂಡು ಶೇ.-7.3ಕ್ಕೆ ತಲುಪಿತ್ತು. ಕಳೆದ ವರ್ಷ ಶೇ.9ರ ಪ್ರಗತಿ ದಾಖಲಿಸಿತ್ತು. 2022ರಲ್ಲೂ ಭಾರತ ಶೇ.9ರಷ್ಟುಪ್ರಗತಿ ದರ ದಾಖಲಿಸಲಿದೆ ಎಂದು ಐಎಂಎಫ್‌ ತನ್ನ ವರದಿಯಲ್ಲಿ ಹೇಳಿದೆ.

ಭಾರತದಲ್ಲಿ ಬಡತನ ಇಳಿಕೆ
ಭಾರತದಲ್ಲಿ ಕಡುಬಡತನ 2011-2019ರ ಅವಧಿಯಲ್ಲಿ ಶೇ.12.3ರಷ್ಟುಇಳಿಕೆಯಾಗಿದೆ. 2011ರಲ್ಲಿ ಶೇ.22.5ರಷ್ಟಿದ್ದ ಕಡುಬಡವರ ಸಂಖ್ಯೆ 2019ರಲ್ಲಿ ಶೇ.10.2ಕ್ಕೆ ಕುಸಿದಿದೆ ಎಂದು ವಿಶ್ವಬ್ಯಾಂಕ್‌ನ ಸಂಶೋಧನಾ ವರದಿಯೊಂದು ತಿಳಿಸಿದೆ.ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ಕೂಡ ಭಾರತದಲ್ಲಿ ಕಡುಬಡತನ ಬಹುತೇಕ ನಿರ್ಮೂಲನೆಯಾಗಿದೆ. ಸರ್ಕಾರಗಳು ಉಚಿತ ಆಹಾರ ಪೂರೈಸುತ್ತಿರುವುದರಿಂದ ಭಾರತದಲ್ಲಿನ ತೀವ್ರತರ ಬಡತನ ಕಳೆದ 40 ವರ್ಷಗಳಲ್ಲೇ ಈಗ ಕನಿಷ್ಠಕ್ಕೆ ಕುಸಿದಿದೆ ಎಂದು ಹೇಳಿತ್ತು. ಅದರ ಬೆನ್ನಲ್ಲೇ ಈಗ ವಿಶ್ವಬ್ಯಾಂಕ್‌ ಕೂಡ ಭಾರತದಲ್ಲಿ ಕಡುಬಡವರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಕುಸಿದಿರುವ ಬಗ್ಗೆ ಹೇಳಿರುವುದು ಆಶಾಭಾವನೆ ಮೂಡಿಸಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!
100 ವರ್ಷ ಹಳೇ ಕುಂದನ್ ಪೊಲ್ಕಿ ಕಿವಿಯೋಲೆ, ತಾಯಿಯ ಆಭರಣ ಧರಿಸಿದ ನೀತಾ ಅಂಬಾನಿ