ಅರುಣಾಭ್ ಸಿನ್ಹಾ ಅವರ ಕಥೆ ಅನೇಕರಿಗೆ ಸ್ಫೂರ್ತಿದಾಯಕವಾಗಿದೆ. ವ್ಯಾಪಾರದ ಹಿನ್ನೆಲೆ ಇಲ್ಲದ ಇವರು, ಭರ್ಜರಿ ಸಂಬಳ ಪಡೆಯುತ್ತಿದ್ದ ಕೆಲಸಕ್ಕೆ ವಿದಾಯ ಹೇಳಿ ಈಗ 110 ಕೋಟಿ ಬೆಲೆಬಾಳುವ ಕಂಪೆನಿ ಕಟ್ಟಿದ್ದಾರೆ.
ಅರುಣಾಭ್ ಸಿನ್ಹಾ ಅವರ ಕಥೆ ಅನೇಕರಿಗೆ ಸ್ಫೂರ್ತಿದಾಯಕವಾಗಿದೆ. ವ್ಯಾಪಾರದ ಹಿನ್ನೆಲೆ ಇಲ್ಲದ ಇವರು ಆದಾಗಲೇ ಖಾಸಗಿ ಕಂಪೆನಿಯಲ್ಲಿ ಭರ್ಜರಿ ಸಂಬಳ ಪಡೆಯುತ್ತಿದ್ದರು. ಇದೆಲ್ಲವನ್ನೂ ಬಿಟ್ಟು ಬಟ್ಟೆ ಒಗೆಯುವ ವ್ಯಾಪಾರ ಆರಂಭಿಸಿದರು. ಅವರ ಕಂಪನಿಯು ಈಗ 100 ಕೋಟಿ ರೂ. ಮೌಲ್ಯ ಹೊಂದಿದೆ. ಮಾತ್ರವಲ್ಲ ಏಷ್ಯಾದ ಬಹುದೊಡ್ಡ ಲಾಂಡ್ರಿ ಕಂಪೆನಿಯಾಗಿ ಬೆಳೆದಿದೆ.
ಐಐಟಿ ಪದವೀದರ ಆಗಿರುವ ಅರುಣಾಭ್ ಸಿನ್ಹಾ ಅವರ ವಾರ್ಷಿಕ ಸಂಬಳ 84 ಲಕ್ಷ ರೂಪಾಯಿಗಳು ವೇತನ ಪಡೆಯುತ್ತಿದ್ದರು. ಆದರೆ ತನ್ನ ಉದ್ಯೋಗವನ್ನು ತೊರೆಯಲು ನಿರ್ಧರಿಸಿದಾಗ ಲಾಂಡ್ರಿ ಉದ್ಯಮ ಆರಂಭಿಸಿದರು. ಸ್ಟಾರ್ಟ್‌ಅಪ್ ಕಂಪೆನಿ ಯುಕ್ಲೀನ್ ಎಂಬ ಲಾಂಡ್ರಿ ಉದ್ಯಮವನ್ನು ತೆರೆದರು.
ದುಬೈ ಶ್ರೀಮಂತ ಮಹಿಳೆ ಭಾರತದ ವೈದ್ಯೆ, ಫೋರ್ಬ್ಸ್ ಪಟ್ಟಿಯಲ್ಲೂ ಸ್ಥಾನ,
ಸಿನ್ಹಾ ಬಿಹಾರದ ಭಾಗಲ್‌ಪುರ ಮೂಲದವರು. ಅವರ ತಂದೆ ಶಿಕ್ಷಕ, ತಾಯಿ ಗೃಹಿಣಿ. ಒಂದು ಚಿಕ್ಕ ಮನೆಯಲ್ಲಿ ವಾಸ ಮಾಡುತ್ತಿದ್ದರು. ಓದಿನಲ್ಲಿ ತುಂಬಾ ಒಳ್ಳೆಯವರಾಗಿದ್ದರು. 8ನೇ ತರಗತಿಯಿಂದಲೇ ಐಐಟಿಗೆ ತಯಾರಿ ಆರಂಭಿಸಿದ್ದ ಅವರು ಪಾಕೆಟ್ ಮನಿ ಗಳಿಸಲು ಟ್ಯೂಷನ್ ಕೂಡುತ್ತಿದ್ದರು. 12ನೇ ತರಗತಿಯ ನಂತರ ಐಐಟಿಯಲ್ಲಿ ತೇರ್ಗಡೆಯಾದರು. ಅವರ ಕಾಲೇಜು ಶಿಕ್ಷಣಕ್ಕೆ ಹಣ ಹೊಂದಿಸಲು ಅವರ ಕುಟುಂಬ ಸಾಕಷ್ಟು ಕಷ್ಟಪಡಬೇಕಾಯಿತು.
ಕಾಲೇಜು ಶಿಕ್ಷಣದ ನಂತರ ಅವರನ್ನು ವಿದೇಶಕ್ಕೆ ಹೋದರು. 2015 ರಲ್ಲಿ, ಅವರು ವಿವಾಹವಾದರು. ಯುಕ್ಲೀನ್ ಅವರ ಮೊದಲ ಸ್ಟಾರ್ಟ್ಅಪ್ ಕಂಪೆನಿ ಆಗಿರಲಿಲ್ಲ. ಅದಕ್ಕೂ ಮುನ್ನ ಅವರು ಫ್ರಾಂಗ್ಲೋಬಲ್ ಎಂಬ ವ್ಯಾಪಾರವನ್ನು ತೆರೆದಿದ್ದರು. ಕಂಪೆನಿ ಬೆಳೆಯಲು ವಿಫಲವಾದ ನಂತರ, ಅವರು ಟ್ರಿಬೋ ಹೋಟೆಲ್‌ಗೆ ಸೇರಿದರು. ಹೀಗಾಗಿ 2015 ರಲ್ಲಿ ತಮ್ಮ ಈಗಿನ ಕಂಪೆನಿ ಯುಕ್ಲೀನ್ ( UClean laundry) ತೆರೆದರು. ಅದರ ಮೊದಲ ಮಳಿಗೆಯನ್ನು ವಸಂತ್ ಕುಂಜ್‌ನಲ್ಲಿ ತೆರೆಯಲಾಯಿತು. ಈ ಕಂಪೆನಿ ತೆರೆಯುವುದು ಮತ್ತು ಈ ವ್ಯವಹಾರ ಕುಟುಂಬಕ್ಕೆ ಇಷ್ಟವಿರಲಿಲ್ಲ. ಆದರೆ, ಅರುಣಾಭ್ ಹರಾಶರಾಗಲಿಲ್ಲ.
ಭಾರತದಲ್ಲಿರುವ 16 ಬ್ರ್ಯಾಂಡ್‌ಗಳು ಅಂಬಾನಿ ಕೈಯಲ್ಲಿ; ದುಬಾರಿ ಜೀವನಕ್ಕೆ ಬಿದ್ದಿದ್ದೀರಾ?
ಸದ್ಯಕ್ಕೆ ಕಂಪೆನಿ 350 ಔಟ್‌ಲೆಟ್‌ಗಳನ್ನು ಹೊಂದಿದೆ ಎಂದು ಎನ್‌ಬಿಟಿ ವರದಿ ಮಾಡಿದೆ. ಈಗ ಅವರು ತಮ್ಮ ಫ್ರಾಂಚೈಸಿಯನ್ನು 5 ಲಕ್ಷ ರೂ.ಗೆ ಮಾರಾಟ ಮಾಡಿದ್ದಾರೆ. ಶೇ. 7ರಷ್ಟು ಅವರ ರಾಯಧನ ಶುಲ್ಕವಾಗಿದೆ. ಅವರು ಪ್ರತಿ ಅಂಗಡಿಗೆ 3 ರಿಂದ 3.5 ಲಕ್ಷ ರೂ. ಇದೆ. ಕಂಪನಿಯು 110 ಕೋಟಿ ರೂಪಾಯಿಗಳ ಸಂಸ್ಥೆಯಾಗಿ ಇಂದು ಬೆಳೆದಿದೆ.