ಯುಪಿಐ ಪಾವತಿ ತಪ್ಪಾದ ಖಾತೆಗೆ ಹೋದ್ರೆ ಡೋಂಟ್ ವರಿ, ಈ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ, ಹಣ ಹಿಂಪಡೆಯಿರಿ

Published : Sep 13, 2023, 02:17 PM IST
ಯುಪಿಐ ಪಾವತಿ ತಪ್ಪಾದ ಖಾತೆಗೆ ಹೋದ್ರೆ ಡೋಂಟ್ ವರಿ, ಈ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ, ಹಣ ಹಿಂಪಡೆಯಿರಿ

ಸಾರಾಂಶ

ಯುಪಿಐ ಪಾವತಿ ಸಂದರ್ಭದಲ್ಲಿ ಒಂದು ಸಣ್ಣ ತಪ್ಪು ಮಾಡಿದ್ರೂ ತಪ್ಪಾದ ಖಾತೆಗೆ ಹಣ ವರ್ಗಾವಣೆಯಾಗುವ ಸಾಧ್ಯತೆಯಿರುತ್ತದೆ. ಈ ರೀತಿ ತಪ್ಪಾದ ಖಾತೆಗೆ ಹಣ ವರ್ಗಾವಣೆಯಾದ ಸಂದರ್ಭದಲ್ಲಿ ಏನು ಮಾಡ್ಬೇಕು? ಹಣ ಹಿಂಪಡೆಯೋದು ಹೇಗೆ? ಇಲ್ಲಿದೆ ಮಾಹಿತಿ.   

Business Desk:ಯುಪಿಐ ಪಾವತಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದೆ. ನಗದು ಹಣವನ್ನು ಜೇಬಿನಲ್ಲಿಟ್ಟುಕೊಂಡು ತಿರುಗಬೇಕಾದ ಅನಿವಾರ್ಯತೆಯನ್ನು ಯುಪಿಐ ತಪ್ಪಿಸಿರುವ ಕಾರಣ ಇದರ ಬಳಕೆದಾರರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಮೊಬೈಲ್ ನಲ್ಲಿ ಯುಪಿಐ ಅಪ್ಲಿಕೇಷನ್ ಇದ್ರೆ ಸಾಕು ಹಣ ವರ್ಗಾವಣೆ ಕೆಲಸ ಬಲು ಸರಳ. ಸಣ್ಣ ಮೊತ್ತವೇ ಆಗಿರಬಹುದು ಇಲ್ಲವೇ ದೊಡ್ಡದು, ದೇಶಾದ್ಯಂತ ಯಾವ ಮೂಲೆಯಿಂದ ಬೇಕಾದರೂ ಈಗ ಕೆಲವೇ ಸೆಕೆಂಡ್ ಗಳಲ್ಲಿ ಯುಪಿಐ ಪಾವತಿ ಮಾಡಬಹುದು. ಆದರೆ, ಈ ಯುಪಿಐ ಪಾವತಿಯಿಂದ ಅನೇಕ ಬಾರಿ ಸಂಕಷ್ಟಕ್ಕೆ ಸಿಲುಕೋದು ಇದೆ. ಹೌದು, ಕೆಲವೊಮ್ಮೆ ಒಂದು ಚಿಕ್ಕ ತಪ್ಪಿನಿಂದ ಹಣ ಕಳೆದುಕೊಳ್ಳುವ ಸಾಧ್ಯತೆಯಿರುತ್ತದೆ. ತಿಳಿಯದೆ ತಪ್ಪಾದ ಯುಪಿಐ ಖಾತೆಗೆ ಹಣ ವರ್ಗಾವಣೆ ಮಾಡುತ್ತವೆ. ಆದರೆ, ನಂತರ ಅದನ್ನು ಮರಳಿ ಪಡೆಯಲು ಸಾಕಷ್ಟು ಕಷ್ಟಪಡಬೇಕಾಗುತ್ತದೆ. ಕೆಲವೊಮ್ಮೆ ಈ ರೀತಿ ತಪ್ಪಾದ ಯುಪಿಐ ಖಾತೆಗೆ ಹಣ ವರ್ಗಾವಣೆಯಾದಾಗ ಏನು ಮಾಡಬೇಕು ಎಂಬುದೇ ತಿಳಿಯೋದಿಲ್ಲ. ಆದರೆ, ಇಂಥ ಸಂದರ್ಭಗಳಲ್ಲಿ ಹಣ ಸುಭವಾಗಿ ಮರಳಿ ಸಿಗುವಂತೆ ಮಾಡಲು ಭಾರತೀಯ ರಿಸರ್ವ್ ಬ್ಯಾಂಕ್ ರೀಫಂಡ್ ಪ್ರಕ್ರಿಯೆಯನ್ನು ಸರಳಗೊಳಿಸಿದೆ.  ಆರ್ ಬಿಐ ನೀಡಿರುವ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ ದೂರು ದಾಖಲಿಸುವ ಮೂಲಕ ಹಣ ಹಿಂಪಡೆಯಬಹುದು. 

ದೂರು ದಾಖಲಿಸೋದು ಹೇಗೆ?
ಒಂದು ವೇಳೆ ನೀವು ಹಣವನ್ನು ತಪ್ಪಾದ ಯುಪಿಐ ಖಾತೆಗೆ ವರ್ಗಾಯಿಸಿದ್ದರೆ 18001201740 ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ ದೂರು ದಾಖಲಿಸಬಹುದು. ಈ ಸಂದರ್ಭದಲ್ಲಿ ತಪ್ಪಾದ ಖಾತೆಗೆ ಹಣ ವರ್ಗಾವಣೆ ಮಾಡಿರುವ ಬಗ್ಗೆ ಎಲ್ಲ ಮಾಹಿತಿಗಳನ್ನು ನೀಡಿ. ಆ ಬಳಿಕ ನಿಮ್ಮ ಖಾತೆಯಿರುವ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಎಲ್ಲ ಮಾಹಿತಿಗಳೊಂದಿಗೆ ಅರ್ಜಿ ನಮೂನೆ ಭರ್ತಿ ಮಾಡಿ. ಬ್ಯಾಂಕ್ ಸಂಖ್ಯೆ ಅಥವಾ ಮನವಿ ಸಂಖ್ಯೆಯನ್ನು ಬ್ಯಾಂಕ್ ಮ್ಯಾನೇಜರ್ ನಿಮಗೆ ನೀಡುತ್ತಾರೆ. ಇನ್ನು ನೀವು bankingombudsman.rbi.org.in ಮೇಲ್ ಮಾಡುವ ಮೂಲಕ ಕೂಡ ನಿಮ್ಮ ದೂರು ದಾಖಲಿಸಬಹುದು. ಆರ್ ಬಿಐ ಮಾರ್ಗಸೂಚಿಗಳ ಅನ್ವಯ ತಪ್ಪಾದ ಖಾತೆಗೆ ಹಣ ವರ್ಗಾವಣೆ ಮಾಡಿದ್ದರೆ ದೂರು ದಾಖಲಿಸಿದ ಬಳಿಕ 48 ಗಂಟೆಗಳೊಳಗೆ ಹಣವನ್ನು ರೀಫಂಡ್ ಮಾಡಬೇಕು. 

ಇಂಟರ್‌ನೆಟ್‌ ಇಲ್ಲದೆಯೂ ಸಲೀಸಾಗಿ ಯುಪಿಐ ಬಳಕೆ ಮಾಡಿ: ಆರ್‌ಬಿಐ ಪರಿಚಯಿಸಿದ ಈ ಹೊಸ ವೈಶಿಷ್ಟ್ಯ ಹೀಗಿದೆ ನೋಡಿ.

ಮೆಸೇಜ್ ಡಿಲೀಟ್ ಮಾಡ್ಬೇಡಿ
ತಪ್ಪಾದ ವರ್ಗಾವಣೆ ಬಗ್ಗೆ ನಿಮ್ಮ ಬಳಿ ಅಧಿಕೃತ ದಾಖಲೆ ಇರೋದು ಅಗತ್ಯ. ದೂರು ನೀಡಿರುವ ಬಗ್ಗೆ ನಿಮಗೆ ಬಂದಿರುವ ಯಾವುದೇ ಸಂದೇಶ ಡಿಲೀಟ್ ಮಾಡಬೇಡಿ. ಏಕೆಂದರೆ ನಿಮಗೆ ನೀಡಿರುವ ಪಿಪಿಬಿಎಲ್ ಸಂಖ್ಯೆ ದಾಖಲೆಯಾಗಿ ಕಾರ್ಯನಿರ್ವಹಿಸಲಿದೆ. ಹೀಗಾಗಿ ಬ್ಯಾಂಕ್ ಗೆ ಭೇಟಿ ನೀಡಿ ದೂರು ದಾಖಲಿಸುವ ಸಮಯದಲ್ಲಿ ಈ ಪಿಪಿಬಿಎಲ್ ಸಂಖ್ಯೆಯನ್ನು ನೀಡುವುದು ಕೂಡ ಅಗತ್ಯ.

ಎಷ್ಟು ದಿನಗಳೊಳಗೆ ದೂರು ದಾಖಲಿಸಬೇಕು?
ತಪ್ಪಾದ ಖಾತೆಗೆ ಹಣ ವರ್ಗಾವಣೆ ಮಾಡಿದ ಮೂರು ದಿನಗಳೊಳಗೆ ನೀವು ದೂರು ದಾಖಲಿಸೋದು ಅಗತ್ಯ. ಖಾತೆ ವೆರಿಫೈ ಆದ್ರೆ ನಿಮ್ಮ ಖಾತೆಗೆ ರಿವರ್ಸ್ ಟ್ರಾನ್ಸಕ್ಷನ್ ಮನವಿ ಬಂದ ಕೆಲವೇ ದಿನಗಳಲ್ಲಿ ಹಣ ಜಮೆ ಆಗುತ್ತದೆ. 

ಯುಪಿಐ ಎಟಿಎಂನಿಂದ ಹಣ ವಿತ್ ಡ್ರಾ ಮಾಡೋ ವಿಡಿಯೋ ಹಂಚಿಕೊಂಡ ಕೇಂದ್ರ ಸಚಿವ, ಭೇಷ್ ಎಂದ ನೆಟ್ಟಿಗರು!

ಪೇಮೆಂಟ್ ಪ್ರೊಸೆಸಿಂಗ್ ಅಂತಹ ಬಂದ್ರೆ ಏನ್ ಮಾಡ್ಬೇಕು?
ಯುಪಿಐ ಪಾವತಿ (UPI payment) ಸಂದರ್ಭದಲ್ಲಿ ಕೆಲವೊಮ್ಮೆ ಬಳಕೆದಾರರಿಗೆ (Users) ಪೇಮೆಂಟ್ ಪ್ರೊಸೆಸಿಂಗ್ (Payment Processing)  ಎಂಬ ಫೀಡ್ ಬ್ಯಾಕ್ ಬರುತ್ತದೆ. ಇಂಥ ಸಂದರ್ಭದಲ್ಲಿ ನಿಮ್ಮ ಖಾತೆಯಿಂದ ಹಣ ಕಡಿತವಾಗಿದ್ರೆ ಹೆಚ್ಚಾಗಿ ಪಾವತಿ (Payment) ಸ್ವಲ್ಪ ಸಮಯದ ಬಳಿಕ ಯಶಸ್ವಿಯಾಗಿ ಆಗುತ್ತದೆ. ಒಂದು ವೇಳೆ ಪಾವತಿ ಆಗಿಲ್ಲವೆಂದಾದ್ರೆ 48 ಗಂಟೆಗಳೊಳಗೆ ಹಣ ನಿಮ್ಮ ಖಾತೆಯಿಂದ (account) ಕಡಿತವಾಗುತ್ತದೆ. 


 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

YouTube ನಲ್ಲಿ ಗೋಲ್ಡನ್ ಬಟನ್ ಸಿಕ್ಕಿದ್ರೆ ಹಣದ ಹೊಳೆ, ಜಾಸ್ತಿ ಆಗುತ್ತೆ ತೆರಿಗೆ ಭಾರ
ಒನ್‌8 ಬ್ರ್ಯಾಂಡ್‌ ಸೇಲ್‌: ತನ್ನ ಆಪ್ತ ಗೆಳೆಯನ ಈ ಸಂಸ್ಥೆಯಲ್ಲಿ ಕೊಹ್ಲಿ 40 ಕೋಟಿ ಹೂಡಿಕೆ!