ಇಂಡಿಯಾ-ಭಾರತ್‌ ಹೆಸರಿನ ಗದ್ದಲದ ನಡುವೆ, ಕಂಪನಿಯ ಹೆಸರನ್ನು ಭಾರತ್‌ಡಾರ್ಟ್‌ ಎಂದು ಬದಲಿಸಿದ ಬ್ಲ್ಯೂಡಾರ್ಟ್‌!

By Santosh Naik  |  First Published Sep 13, 2023, 12:50 PM IST

ದೇಶದ ಹೆಸರನ್ನು ಭಾರತ್‌ ಎಂದು ಬದಲಿಸುವ ಗದ್ದಲದ ನಡುವೆ ದೇಶದ ಪ್ರಮುಖ ಕೊರಿಯರ್‌ ಕಂಪನಿಗಳಲ್ಲಿ ಒಂದಾದ ಬ್ಲ್ಯೂಡಾರ್ಟ್‌ ತನ್ನ ಹೆಸರನ್ನು ಭಾರತ್‌ಡಾರ್ಟ್‌ ಎಂದು ಬದಲಿಸಿದೆ. ವ್ಯಾಪಕವಾದ ಅನ್ವೇಷಣೆ ಹಾಗೂ ಚರ್ಚೆಯ ಬಳಿಕ ಈ ನಿರ್ಧಾರ ಮಾಡಲಾಗಿದೆ ಎಂದು ಕಂಪನಿ ತಿಳಿಸಿದೆ.


ನವದೆಹಲಿ (ಸೆ.13):  ಲಾಜಿಸ್ಟಿಕ್ಸ್ ಕಂಪನಿ ಬ್ಲೂ ಡಾರ್ಟ್ ಭಾರತದಲ್ಲಿ ತನ್ನ ಪ್ರೀಮಿಯಂ ಸೇವೆಯನ್ನು ಡಾರ್ಟ್ ಪ್ಲಸ್‌ನಿಂದ ಭಾರತ್ ಪ್ಲಸ್‌ ಎನ್ನುವ ಹೆಸರಿನೊಂದಿಗೆ ಮರುಬ್ರಾಂಡ್ ಮಾಡಿದೆ. "ಈ ಕಾರ್ಯತಂತ್ರದ ರೂಪಾಂತರವು ಬ್ಲೂ ಡಾರ್ಟ್‌ನ ನಡೆಯುತ್ತಿರುವ ಪ್ರಯಾಣದಲ್ಲಿ ಒಂದು ಮೈಲಿಗಲ್ಲನ್ನು ಗುರುತಿಸುತ್ತದೆ, ಇದು ಭಾರತದ ವೈವಿಧ್ಯಮಯ ಅಗತ್ಯಗಳನ್ನು ಪೂರೈಸಲು ಅದರ ಅಚಲವಾದ ಬದ್ಧತೆಯನ್ನು ಒತ್ತಿಹೇಳುತ್ತದೆ" ಎಂದು ಬ್ಲೂ ಡಾರ್ಟ್ ಇಂದು ಎನ್‌ಎಸ್‌ಇಗೆ ಸಲ್ಲಿಸಿದ ಫೈಲಿಂಗ್‌ನಲ್ಲಿ ತಿಳಿಸಿದೆ. ಈ ನಿರ್ಧಾರದ ಬಗ್ಗೆ ವಿವರಣೆ ನೀಡಿರುವ ಬ್ಯೂಡಾರ್ಟ್‌ ಕಂಪನಿ, ತನ್ನ ಗ್ರಾಹಕರಿಗೆ ವಿಕಸನಗೊಳ್ಳುತ್ತಿರುವ ಅಗತ್ಯಗಳಿಗೆ ತನ್ನನ್ನು ತಾನು ಹೊಂದಿಸಿಕೊಳ್ಳುವ ಉದ್ದೇಶದಿಂದ ವ್ಯಾಪಕವಾದ ಅನ್ವೇಷಣೆ ಮತ್ತು ಸಂಶೋಧನಾ ಪ್ರಕ್ರಿಯೆಯಿಂದ ಈ ನಿರ್ಧಾರ ಮಾಡಲಾಗಿದೆ ಎಂದು ಹೇಳಿದರು. "ಬ್ಲೂ ಡಾರ್ಟ್ ಎಕ್ಸ್‌ಪ್ರೆಸ್ ಲಿಮಿಟೆಡ್ ಕಂಪನಿಯು ಭಾರತವನ್ನು ಜಗತ್ತಿಗೆ ಮತ್ತು ಜಗತ್ತನ್ನು ಭಾರತಕ್ಕೆ ಸಂಪರ್ಕಿಸುವುದನ್ನು ಮುಂದುವರಿಸುತ್ತಿದೆ. ಈ ಮಹತ್ವದ ಪ್ರಯಾಣದಲ್ಲಿ ಸೇರಲು ಎಲ್ಲಾ ಪಾಲುದಾರರನ್ನು ಆಹ್ವಾನಿಸುತ್ತದೆ" ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಇತ್ತೀಚೆಗೆ ಜಿ20 ಶೃಂಗಸಭೆಗೆ ಬಂದ ನಾಯಕರೊಂದಿಗೆ ನವದೆಹಲಿಯ ಭಾರತ ಮಂಟಪದಲ್ಲಿ ನಡೆಯಲಿರುವ ಔತಣಕೂಟಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ದೇಶದ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಿದ್ದರು. ಈ ಆಹ್ವಾನ ಪತ್ರಿಕೆಯಲ್ಲಿ ಪ್ರೆಸಿಡೆಂಟ್‌ ಆಫ್‌ ಇಂಡಿಯಾ ಬದಲಿಗೆ ಪ್ರೆಸಿಡೆಂಟ್‌ ಆಫ್‌ ಭಾರತ್‌ ಎನ್ನುವ ಶಬ್ದಗಳಿದ್ದವು. ಇದು ರಾಜಕೀಯ ವಿಚಾರವಾಗಿ ಮಾರ್ಪಟ್ಟಿತ್ತು.

Tap to resize

Latest Videos

ಸರ್ಕಾರಿ ದಾಖಲೆಗಳಲ್ಲಿ ‘ಇಂಡಿಯಾ’ ಬದಲು ‘ಭಾರತ’?

ಅದರೊಂದಿಗೆ ಸೆಪ್ಟೆಂಬರ್‌ 18 ರಿಂದ ನಡೆಯಲಿರುವ ಐದು ದಿನಗಳ ವಿಶೇಷ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ದೇಶದ ಹೆಸರನ್ನೂ ಮರು ನಾಮಕರಣ ಮಾಡಲಿದೆ ಎಂದು ಸುದ್ದಿಯಾಗಿತ್ತು. ಇಂಡಿಯಾ ಎನ್ನುವ ಬದಲಿಗೆ ಭಾರತ್‌ ಎನ್ನುವ ಹೆಸರನ್ನು ಸರ್ಕಾರ ಇಡಲಿದೆ ಎನ್ನಲಾಗಿದೆ. ಅದರೊಂದಿಗೆ ಜಿ20 ಶೃಂಗಸಭೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಕುಳಿತ ಮೇಜಿನ ಮುಂಭಾಗದಲ್ಲಿಇಂಡಿಯಾ ಎನ್ನುವ ಹೆಸರಿನ ಬದಲಿಗೆ ಭಾರತ್‌ ಎನ್ನುವ ಹೆಸರಿತ್ತು.

ರಿಪಬ್ಲಿಕ್‌ ಆಫ್‌ ಭಾರತ್‌, ಬಿಜೆಪಿಯರಿಗೆ ಲಾಭ ಆಗುತ್ತದೆ ಅಂದ್ರೆ ಏನು ಬೇಕಾದರೂ ಮಾಡ್ತಾರೆ, ಜಾರಕಿಹೊಳಿ

click me!