ಐಸಿಐಸಿಐ ಬ್ಯಾಂಕ್ ಕನಿಷ್ಠ ಬ್ಯಾಲೆನ್ಸ್‌ ₹ 50,000 ರು ! ಇರದಿದ್ದರೆ ದಂಡ

Kannadaprabha News   | Kannada Prabha
Published : Aug 10, 2025, 04:20 AM IST
ICICI Bank

ಸಾರಾಂಶ

ಖಾಸಗಿ ವಲಯದಲ್ಲಿ ದೇಶದಲ್ಲೇ 2ನೇ ಅತಿದೊಡ್ಡ ಬ್ಯಾಂಕ್‌ ಆಗಿರುವ ಐಸಿಐಸಿಐ ವಿವಿಧ ಪ್ರದೇಶಗಳಲ್ಲಿ ತನ್ನ ಗ್ರಾಹಕರು ಹೊಂದಿರಬೇಕಾದ ಮಾಸಿಕ ಮಿನಿಮಂ ಬ್ಯಾಲೆನ್ಸ್‌ ಮಿತಿಯಲ್ಲಿ ಭಾರೀ ಏರಿಕೆ ಮಾಡಿದೆ.

ನವದೆಹಲಿ: ಖಾಸಗಿ ವಲಯದಲ್ಲಿ ದೇಶದಲ್ಲೇ 2ನೇ ಅತಿದೊಡ್ಡ ಬ್ಯಾಂಕ್‌ ಆಗಿರುವ ಐಸಿಐಸಿಐ ವಿವಿಧ ಪ್ರದೇಶಗಳಲ್ಲಿ ತನ್ನ ಗ್ರಾಹಕರು ಹೊಂದಿರಬೇಕಾದ ಮಾಸಿಕ ಮಿನಿಮಂ ಬ್ಯಾಲೆನ್ಸ್‌ ಮಿತಿಯಲ್ಲಿ ಭಾರೀ ಏರಿಕೆ ಮಾಡಿದೆ.

ಆ.1ರ ಬಳಿಕ ಮೆಟ್ರೋ ಮತ್ತು ನಗರ ಪ್ರದೇಶಗಳಲ್ಲಿ ಹೊಸ ಖಾತೆ ಆರಂಭಿಸುವವರು ಮಾಸಿಕ ಕನಿಷ್ಠ 50000 ರು.ಸರಾಸರಿ ಬ್ಯಾಲೆನ್ಸ್‌ ಹೊಂದಿರುವುದು ಕಡ್ಡಾಯ. ಹಳೆಯ ಗ್ರಾಹಕರಿಗೆ ಈ ಮಿತಿ 10000 ರು.ನಲ್ಲೇ ಮುಂದುವರೆಯಲಿದೆ.

ದೇಶದ ಎರಡನೇ ಅತಿದೊಡ್ಡ ಸಾಲದಾತ ಎನಿಸಿಕೊಂಡಿರುವ ಐಸಿಐಸಿಐ ಬ್ಯಾಂಕ್ ಗ್ರಾಹಕರಿಗೆ ಶಾಕ್ ನೀಡಿದ್ದು, ಆ.1ರಿಂದ ಜಾರಿಗೆ ಬರುವಂತೆ ಗ್ರಾಹಕರ ಬ್ಯಾಂಕ್ ಖಾತೆಯಲ್ಲಿ ಕನಿಷ್ಠ ಮೊತ್ತ ಮಿತಿಯನ್ನು 10, 000 ರು.ನಿಂದ 50,000 ರು. ಗೆ ಹೆಚ್ಚಿಸಿದೆ.

ಇನ್ನು ಸೆಮಿಅರ್ಬನ್‌ ನಗರಗಳಲ್ಲಿ ಈ ಮಿತಿಯನ್ನು 10000 ರು.ನಿಂದ 25000 ರು.ಗೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಮಿತಿಯನ್ನು 10000 ರು.ಗೆ ನಿಗದಿ ಮಾಡಲಾಗಿದೆ. ಹೊಸದಾಗಿ ಖಾತೆ ತೆರೆಯುವ ಗ್ರಾಹಕರು ಕನಿಷ್ಠ ಮೊತ್ತದ ಮಿತಿ ನಿಯಮ ಪಾಲಿಸದಿದ್ದರೆ, ಕೊರತೆ ಹಣದ ಶೇ.6ರಷ್ಟು ಅಥವಾ 500 ರು.ದಂಡ ವಿಧಿಸಲು ಬ್ಯಾಂಕ್ ನಿರ್ಧರಿಸಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ರೆಪೋ ದರ ಕಡಿತ : ಸಾಲಗಾರರಿಗೆ ಅನುಕೂಲ, ಹೂಡಿಕೆದಾರರಿಗೆ ಬೇಸರ
Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?