
ಬೆಂಗಳೂರು (ಆ.09) ಹೊಸ ಕಾರು ಅಥವಾ ಬಳಸಿದ ಕಾರು ಯಾವುದೇ ಆಗಿರಲಿ, ಮೊದಲ ಕಾರು ಎಲ್ಲರಿಗೂ ಅತ್ಯಂತ ಅಚ್ಚು ಮೆಚ್ಚು. ಕಾರಿಗಾಗಿ ಹಂಬಲಿಸಿ, ಅದಕ್ಕಾಗಿ ಶ್ರಮಿಸಿ ನನಸಾಗಿಸುವ ಘಳಿಗೆ ಸ್ಮರಣೀಯ. ಮೊದಲ ಕಾರು ಎಲ್ಲರಿಗೂ ಅಚ್ಚು ಮೆಚ್ಚು. ಸಣ್ಣ ಕಾರು, ಬೇಸಿಕ್ ಮಾಡೆಲ್ ಕಾರಾದರೂ ದುಬಾರಿಯಾಗಿದೆ. ಯಾವುದು ಕೈಗೆಟುಕುವ ದರದಲ್ಲಿ ಇಲ್ಲ. ಕಾರು ಕನಸು ಎಲ್ಲರಿಗೂ ಇರುತ್ತೆ, ಆದರೆ ಕೆಲವರು ಮಾತ್ರ ನನಸಾಗಿಸುತ್ತಾರೆ. ಹಾಗಂತ ನಿರಾಸೆ ಪಡಬೇಕಿಲ್ಲ. ಸುಲಭ ಮಾರ್ಗದ ಮೂಲಕ ಹಣ ಉಳಿತಾಯ ಮಾಡಿ ಕಾರು ಖರೀದಿ ಕನಸು ಎಲ್ಲರಿಗೂ ನನಸಾಗಿಸಲು ಸಾಧ್ಯವಿದೆ.
ಕಾರು ಖರೀದಿಸಲು ಹಲವು ಸುಲಭ ಮಾರ್ಗಗಳಿವೆ. ಕಾರಿ ಬೆಲೆ ಎಷ್ಟೇ ಆಗಿದ್ದರೂ ಅತೀ ಕಡಿಮೆ ಮುಂಗಡ ಹಣ, ಕಡಿಮೆ ಕಂತು, ಕಡಿಮೆ ಬಡ್ಡಿದರದಲಲ್ಲಿ ಸಾಲ ಸೌಲಭ್ಯಗಳು ಲಭ್ಯವಿದೆ. ಹೀಗೆ ಕಾರು ಖರೀದಿ ಪ್ಲಾನ್ ನನಸಾಗಿಸಲು 10 ಸುಲಭ ಮಾರ್ಗಗಳಿವೆ. ಈ ಮಾರ್ಗದ ಮೂಲಕ ಹಣ ಉಳಿತಾಯ ಮಾಡಿ ಕಾರು ಖರೀದಿಸಬಹುದು.
ನಿಮ್ಮ ಆದಾಯ ಅಂದರೆ ಸ್ಯಾಲರಿ ಅಥವಾ ಇತರ ಆದಾಯಗಳನ್ನು ಲೆಕ್ಕ ಹಾಕಿ. ಇದರಲ್ಲಿ ಅಗತ್ಯ ಖರ್ಚು ವೆಚ್ಚ, ಆರೋಗ್ಯ ಸುವಿಧಾ, ಇತರ ಸಾಲ ಸೇರಿದಂತೆ ಖರ್ಚಾಗುವ ಹಣವೆಷ್ಟು ಅನ್ನೋದು ಲೆಕ್ಕ ಹಾಕಬೇಕು. ತಿಂಗಳಿಗೆ ಎಷ್ಟು ಹಣ ಉಳಿತಾಯ ಮಾಡಲು ಸಾಧ್ಯ ಅನ್ನೋದು ಲೆಕ್ಕ ಹಾಕಿ, ಆ ಮೊತ್ತವನ್ನು ತೆಗೆದಿಡಬೇಕು.
ಬರುವ ಆದಾಯದಲ್ಲಿ ಉಳಿತಾಯವಾಗುತ್ತಿಲ್ಲ ಎಂದಾದರೆ, ಕೆಲ ಮಾರ್ಗ ಅನುಸರಿಸಬೇಕು. ಅನಗತ್ಯ ಖರ್ಚು ವೆಚ್ಚಗಳನ್ನು ಕಡಿತಗೊಳಿಸಬೇಕು. ಕಡಿಮೆ ಖರ್ಚಿನಲ್ಲಿನ ಪರ್ಯಾಣ ಮಾರ್ಗಗಳ ಬಗ್ಗೆ ಆಲೋಚಿಸಬೇಕು. ಅಗತ್ಯ ಖರ್ಚು ಹೊರತುಪಡಿಸಿ ಇತರ ಖರ್ಚುಗಳಿಗೆ ಕಡಿವಾಣ ಹಾಕಬೇಕು
ಸ್ಯಾಲರಿ ಅಥವಾ ಬರುತ್ತಿರುವ ಆದಾಯ ಹೆಚ್ಚಿಸಲು ಇತರ ಆದಾಯ ಮೂಲಗಳಿದೆಯಾ ಅನ್ನೋದು ಪತ್ತೆ ಹಚ್ಚಿ. ನಿಮ್ಮ ಮೂಲ ಆಧಾಯಕ್ಕೆ ಯಾವುದೇ ಧಕ್ಕೆ ಬರದ ರೀತಿಯಲ್ಲ ಇತರ ಆದಾಯ ಬರುವಂತೆ ಮಾಡಲು ಸಾಧ್ಯವಿರುವ ಮಾರ್ಗ ಪತ್ತೆ ಹಚ್ಚಿ ಕಾರ್ಯನಿರ್ವಹಿಸಿ. ಇದರಿಂದ ಪ್ರತಿ ತಿಂಗಳು ಒಂದು ಮೊತ್ತವನ್ನು ತೆಗೆದಿಡಲು ಸಾಧ್ಯವಾಗುತ್ತದೆ.
ಉಳಿತಾಯ ಹಣವನ್ನು ಕಡಿಮೆ ಅವಧಿಗೆ ಹೂಡಿಕೆ ಮಾಡಿ. ಪ್ರತಿ ತಿಂಗಳು ನೀವು ತೆಗೆದಿಡುವ ಮೊತ್ತವನ್ನು ಉತ್ತಮ ಆದಾಯ ಸಿಗುವ, ಡ್ಡಿ ಇರುವ ಕಡೆ ಹೂಡಿಕೆ ಮಾಡಿದೆ. ಕಡಿಮೆ ಅವಧಿಯ ಹೂಡಿಕೆ ಆಯ್ಕೆಗಳು ಸಾಕಷ್ಟಿವೆ. ಪ್ರತಿ ತಿಂಗಳು ಇಂತಿಷ್ಟು ಹಣ ಹೂಡಿಕೆ ಮಾಡುವದರಿಂದ ಉತ್ತಮ ರಿಟರ್ನ್ಸ್ ಸಿಗಲಿದೆ. ಇದರಿಂದ ಬಹುಬೇಗನೆ ಕಾರು ಖರೀದಿ ಸಾಧ್ಯವಾಗಲಿದೆ.
ಕಾರು ಖರೀದಿಗೆ ಮಾಡುವ ಉಳಿತಾಯ ಅಥವಾ ಹೂಡಿಕೆ ಹಣವನ್ನು ಯಾವುದೇ ಕಾರಣಕ್ಕೂ ಇತರೆಡೆ ವರ್ಗಾಯಿಸುವುದು, ಖರ್ಚು ಮಾಡುವ ಪ್ರಯತ್ನ ಮಾಡಬೇಡಿ. ಒಂದು ತಿಂಗಳು ಹೂಡಿಕೆ ಮಾಡದಿದ್ದರೆ ಇಡೀ ಪ್ರಯತ್ನಗಳಿಗೆ ಹಿನ್ನಡೆಯಾಗಲಿದೆ.
ನೀವು ಯಾವ ಕಾರು ಖರೀದಸಲು ಇಚ್ಚಿಸುತ್ತಿದ್ದೀರಿ, ಕಾರಿನ ಬೆಲೆ, ನಿಮ್ಮ ಆದಾಯಕ್ಕೆ ಹೊಂದಿಕೆಯಾಗುತ್ತಿದೆಯಾ ಅನ್ನೋದು ಪರಿಶೀಲಿಸಿ. ನಿಮ್ಮ ಬಜೆಟ್ ಹಾಗೂ ನಿರ್ವಹಣೆಗೆ ತಕ್ಕ ಕಾರು ಖರೀದಿಸಿ.
ನೀವು ಖರೀದಿಸಲು ಇಚ್ಚಿಸುವ ಕಾರಿನ ಮುಂಗಡ ಪಾವತಿ ಮಾಹಿತಿ ಪಡೆದುಕೊಳ್ಳಿ. ಮುಂಗಡ ಪಾವತಿ ಮೊತ್ತ ಪಾವತಿಸುವಷ್ಟು ಹೂಡಿಕೆಯಾಗಿದ್ದರೆ, ಪ್ರತಿ ತಿಂಗಳು ಕಂತಿನ ಕುರಿತು ಲೆಕ್ಕ ಹಾಕಿ. ಇವೆರಡು ತಾಳೆಯಾಗುತ್ತಿದ್ದರೆ ಕಾರು ಖರೀದಿಸಿ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.