
ನವದೆಹಲಿ(ಜ.21): ದೇಶದ ಪ್ರಮುಖ ಖಾಸಗಿ ಬ್ಯಾಂಕ್ ಐಸಿಐಸಿಐ, ಹೊಸ ಎಟಿಎಂ ವಿತ್ ಡ್ರಾ ನೀತಿಯನ್ನು ಘೋಷಿಸಿದ್ದು, ಡೆಬಿಟ್ ಕಾರ್ಡ್ ಇಲ್ಲದೇ ಎಟಿಎಂ ನಿಂದ ಹಣ ಪಡೆಯುವ ನೂತನ ವ್ಯವಸ್ಥೆಯನ್ನು ಜಾರಿಗೊಳಿಸಿದೆ.
ದೇಶದ ಯಾವುದೇ ಎಟಿಎಂ ನಿಂದ ಡೆಬಿಟ್ ಕಾರ್ಡ್ ಇಲ್ಲದೇ ಹಣ ಪಡೆಯುವ ವ್ಯವಸ್ಥೆ ಇದಾಗಿದ್ದು, ಐಮೊಬೈಲ್ ಆಪ್ ಮೂಲಕವೇ ಎಟಿಎಂನಿಂದ ಹಣ ಪಡೆಯಬಹುದಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಐಸಿಐಸಿಐ ಕಾರ್ಯನಿರ್ವಾಹಕ ನಿರ್ದೇಶಕ ಅನುಪ್ ಬಾಗ್ಚಿ, ಐಮೊಬೈಲ್ ಆಪ್ ಮೂಲಕವೇ ಪ್ರತಿ ಬಾರಿಯೂ ಡೆಬಿಟ್ ಕಾರ್ಡ್ ಇಲ್ಲದೇ ಹಣ ಪಡೆಯುವ ಸೌಲಭ್ಯ ಗ್ರಾಹರಕರಿಗೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.
ಹೊಸ ವ್ಯವಸ್ಥೆಯ ಕುರಿತು 10 ಪ್ರಮುಖ ಅಂಶಗಳು:
1. ಐಸಿಐಸಿಐ ಮೊಬೈಲ್ ಅಪ್ಲಿಕೇಶನ್‌ಗೆ ಐಮೊಬೈಲ್'ಗೆ ಲಾಗ್ ಇನ್ ಮಾಡಿ
2. ‘ಸೇವೆಗಳು’ ಮತ್ತು ‘ಐಸಿಐಸಿಐ ಬ್ಯಾಂಕ್ ಎಟಿಎಂನಲ್ಲಿ ನಗದು ಹಿಂತೆಗೆದುಕೊಳ್ಳುವಿಕೆ’ ಆಪ್ಶನ್ ಆಯ್ಕೆಮಾಡಿ
3. ಮೊತ್ತವನ್ನು ನಮೂದಿಸಿ, ಖಾತೆ ಸಂಖ್ಯೆಯನ್ನು ಆಯ್ಕೆ ಮಾಡಿ, 4 ಅಂಕಿಯ ತಾತ್ಕಾಲಿಕ ಪಿನ್ ರಚಿಸಬೇಕು.
4. ಬಳಿಕ ನಿಮ್ಮ ಮೊಬೈಲ್ ನಂಬರ್‌ಗೆ ಒಟಿಪಿ (ಒನ್ ಟೈಮ್ ಪಾಸ್ವರ್ಡ್) ಬರುತ್ತದೆ.
5. ಯಾವುದೇ ಐಸಿಐಸಿಐ ಬ್ಯಾಂಕ್ ಎಟಿಎಂಗೆ ಭೇಟಿ ನೀಡಿ. ಕಾರ್ಡ್‌ಲೆಸ್ ನಗದು ಪಡೆಯುವಿಕೆ ಆಪ್ಶನ್ ಆಯ್ಕೆ ಮಾಡಿ.
6. ಎಟಿಎಂ ಮಷಿನ್'ನಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
7. ನಂತರ ನಿಮ್ಮ ಮೊಬೈಲ್ ಸಂಖ್ಯೆಗೆ ಬಂದ ಒಟಿಪಿಯನ್ನು ನಮೂದಿಸಿ.
8. ನಿಮ್ಮ ಮೊಬೈಲ್ ಸಂಖ್ಯೆಗೆ ಬಂದಿರುವ ತಾತ್ಕಾಲಿಕ ಪಿನ್ ಕೂಡ ನಮೂದಿಸಿ
9. ನೀವು ಪಡೆಯಬೇಕೆಂದಿರುವ ಹಣವನ್ನು ನಮೂದಿಸಿ.
10. ನಗದು ಹಿಂಪಡೆಯುವ ವಿನಂತಿ ಮತ್ತು ಒಟಿಪಿ ಮರುದಿನ ಮಧ್ಯರಾತ್ರಿಯವರೆಗೆ ಮಾನ್ಯವಾಗಿರುತ್ತದೆ. ಅಂದರೆ ನೀವು ಈ ಅವಧಿಯಲ್ಲಿ ಯಾವಾಗ ಬೇಕಾದರೂ ಹಣ ಪಡೆಯಬಹುದಾಗಿದೆ.
ಐಸಿಐಸಿಐ ಗ್ರಾಹಕರಿಗೆ ಬಂಪರ್ ಆಫರ್: ಲಾಭದ ಪಾಲು ಸೂಪರ್!
ಈ ಸೇವೆ ದೇಶಾದ್ಯಂತ ಇರುವ ಸುಮಾರು 15 ಸಾವಿರಕ್ಕೂ ಅಧಿಕ ಎಟಿಎಂ ಕೇಂದ್ರಗಳಲ್ಲಿ ಲಭ್ಯ ಎಂದು ಐಸಿಐಸಿಐ ಸ್ಪಷ್ಟಪಡಿಸಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.