
ನವದೆಹಲಿ(ಜ. 21) ತೆರಿಗೆ ಮುಕ್ತ ಮದ್ಯ ಖರೀದಿ ಮೇಲೆ ನಿಯಂತ್ರಣ ಹೇರಲು ವಾಣಿಜ್ಯ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಈ ನಿಯಮ ಜಾರಿಗೆ ಬಂದರೆ ಒಬ್ಬ ಪ್ರಯಾಣಿಕ ತೆರಿಗೆ ಮುಕ್ತವಾಗಿ ಒಂದು ಬಾಟಲ್ ಮದ್ಯ ಮಾತ್ರ ಖರೀದಿ ಮಾಡಬಹುದಾಗುತ್ತದೆ.
ವ್ಯಕ್ತಿಗೆ ಒಂದೇ ಬಾಟಲ್ ಗೆ ಸೀಮಿತ ಮಾಡಲು ವಾಣಿಜ್ಯ ಇಲಾಖೆ ಹಣಕಾಸು ಇಲಾಖೆಗೆ ಶಿಫಾರಸು ಮಾಡಿದೆ. ತೆರಿಗೆ ಮುಕ್ತ ಸಿಗರೇಟ್ ಖರೀದಿ ಮೇಲೂ ನಿಷೇಧ ಹೇರಬೇಕು ಎಂದು ತಿಳಿಸಲಾಗಿದೆ.
ಫುಲ್ ಟೈಟಾಗಿ ದಾಖಲೆ ಬರೆದ ಬೆಂಗಳೂರು ಕುಡುಕರು
ಫೆಬ್ರವರಿ 1 ಕ್ಕೆ ಕೇಂದ್ರ ಸರ್ಕಾರದ ಬಜೆಟ್ ನ್ನು ಹಣಕಾಸು ಸವಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿದ್ದು ಅದಕ್ಕೂ ಮುಂಚಿತವಾಗಿ ಈ ಶಿಫಾರಸು ಮಾಡಲಾಗಿದೆ.
ವಿಮಾನ ನಿಲ್ದಾಣಗಳಲ್ಲಿ ಸದ್ಯ ಪ್ರಯಾಣಿಕರು ಎರಡು ಲೀಟರ್ ಮದ್ಯ ಮತ್ತು ಒಂದು ಬಾಕ್ಸ್ ನಷ್ಟು ಸಿಗರೇಟ್ ಖರೀದಿಗೆ ಅವಕಾಶ ಇದೆ. ಆದರೆ ಇದನ್ನು ಒಂದು ಬಾಟಲ್ ಗೆ ಇಳಿಸುವ ಪ್ರಸ್ತಾವನೆ ಸರ್ಕಾರದ್ದು.
ಅಂತಾರಾಷ್ಟ್ರೀಯ ಪ್ರಯಾಣಿಕರು ಹೊರದೇಶದಲ್ಲಿ ತೆರಿಗೆ ಮುಕ್ತ ಮಾದರಿಯ ಒಂದು ಲೀಟರ್ ಮದ್ಯ ಖರೀದಿ ಮಾಡಲು ಮಾತ್ರ ಅವಕಾಶ ಇದೆ. ಭಾರತಕ್ಕೂ ಇದನ್ನು ಅಳವಡಿಸಿಕೊಳ್ಳಬೇಕು ಎಂಬುದು ಚಿಂತನೆ.
ತೆರಿಗೆ ಮುಕ್ತ ಶಾಪ್ ಒಂದರಲ್ಲಿ ಅಂತಾರಾಷ್ಟ್ರೀಯ ಪ್ರಯಾಣಿಕರೊಬ್ಬರು 50 ಸಾವಿರ ಮೊತ್ತದ ವಸ್ತು ಖರೀದಿ ಮಾಡಬಹುದು. ಕಾಳುಮೆಣಸು. ಚಪ್ಪಲಿ. ರಬ್ಬರ್ ಮೇಲೆಯೂ ಅಬಕಾರಿ ಸುಂಕ ಏರಿಒಕೆ ಮಾಡಬೇಕು ಈ ಮೂಲಕ ಮೇಕ್ ಇನ್ ಇಂಡಿಯಾಕ್ಕೆ ಶಕ್ತಿ ತುಂಬಬೇಕು ಎಂಬುದು ವಾಣಿಜ್ಯ ಇಲಾಖೆಯ ಆಲೋಚನೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.