Personal Finance: ಅಂಗಡಿ ಶುರು ಮಾಡೋ ಪ್ಲಾನ್ ಇದ್ಯಾ? ಇಲ್ಲಿ ಸಿಗುತ್ತೆ ಲೋನ್

By Roopa HegdeFirst Published Dec 7, 2022, 5:59 PM IST
Highlights

ಸ್ವಾವಲಂಬಿ ಜೀವನ ನಡೆಸಲು ಕೇಂದ್ರ ಸರ್ಕಾರ ಪ್ರೋತ್ಸಾಹ ನೀಡ್ತಿದೆ. ಜನರಿಗೆ ಬೇಕಾದ ನೆರವು ನೀಡಲು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಸ್ವಂತ ಅಂಗಡಿ ಶುರು ಮಾಡಿ ಹಣ ಗಳಿಸ್ತೇನೆ ಎನ್ನುವವರಿಗೂ ಸರ್ಕಾರ ಸಾಲ ನೀಡ್ತಿದೆ. 

ನಿರುದ್ಯೋಗ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಪ್ರತಿಯೊಬ್ಬರಿಗೂ ವಿದ್ಯೆಗೆ ತಕ್ಕ, ಹೆಚ್ಚು ಆದಾಯವಿರುವ ಉದ್ಯೋಗ ಹುಡುಕುತ್ತಿದ್ದಾರೆ. ಆದ್ರೆ ಎಲ್ಲರಿಗೂ ಬಯಸಿದ ಉದ್ಯೋಗ ಸಿಗಲು ಸಾಧ್ಯವಿಲ್ಲ. ಹೆಚ್ಚಿನ ಆದಾಯ ಬೇಕು, ಸ್ವಂತ ಕಾಲಿನಲ್ಲಿ ನಿಲ್ಲಬೇಕು ಎನ್ನುವವರು ಸ್ವಂತ ಉದ್ಯೋಗವನ್ನು ಶುರು ಮಾಡಬಹುದು. ಸ್ವಂತ ಉದ್ಯೋಗ ಅಥವಾ ವ್ಯಾಪಾರ ಆರಂಭಿಸುವುದು ಸುಲಭವಲ್ಲ. ಅಷ್ಟು ಹಣ ಕೈನಲ್ಲಿ ಇರೋದಿಲ್ಲ. ಅಂಥ ಸಂದರ್ಭದಲ್ಲಿ ಸಾಲ ತೆಗೆದುಕೊಳ್ಳಬೇಕಾಗುತ್ತದೆ. ಅಂಗಡಿ ಶುರು ಮಾಡಿ ಜೀವನ ನಡೆಸ್ತೇನೆ ಎನ್ನುವವರಿಗೆ ಅಂಗಡಿಗಾಗಿ ಎಲ್ಲಿ ಸಾಲ ಪಡೆಯುಬೇಕು, ಹೇಗೆ ಪಡೆಯಬೇಕು ಎಂಬುದು ತಿಳಿದಿರೋದಿಲ್ಲ. ನಾವಿಂದು ಅಂಗಡಿ ಸಾಲವನ್ನು ನೀವು ಹೇಗೆ ಪಡೆಯಬಹುದು ಎಂಬುದನ್ನು ಹೇಳ್ತೆವೆ.  

ಅಂಗಡಿ (Shop) ಗಾಗಿ ಎಲ್ಲಿ ಸಾಲ (Loan) ಪಡೆಯಬೇಕು? : ಶಾಪ್ ಲೋನ್ ಎನ್ನುವುದು ಅಂಗಡಿ ತೆರೆಯಲು ಪಡೆಯುವ ಸಾಲವಾಗಿದೆ, ಕಾಫಿ ಶಾಪ್, ಮೆಡಿಕಲ್ ಸ್ಟೋರ್, ಕಿರಾಣಿ ಹೀಗೆ ಯಾವುದೇ ರೀತಿಯ ಅಂಗಡಿ ತೆರೆಯಲು ನೀವು ಬಯಸಿದ್ದರೆ ನೀವು ಶಾಪ್ ಲೋನ್ ಅಡಿ ಸಾಲ ಪಡೆಯಬಹುದು. ಸಾಲವನ್ನು ನೀವು ಎಷ್ಟು ಪಡೆಯಬೇಕು ಎಂಬುದು ನೀವು ಯಾವ ಅಂಗಡಿ ತೆರೆಯುತ್ತಿದ್ದೀರಿ ಹಾಗೂ ಎಲ್ಲಿ ತೆರೆಯುತ್ತಿದ್ದೀರಿ ಎನ್ನುವುದನ್ನು ಅವಲಂಭಿಸಿರುತ್ತದೆ. ಬೇರೆ ಬೇರೆ ಬ್ಯಾಂಕ್ ಗಳ ಸಾಲದ ಬಡ್ಡಿ ದರ ಭಿನ್ನವಾಗಿದೆ. ಜನಸಾಮಾನ್ಯರಿಗೆ ನೆರವಾಗಲು, ಕೇಂದ್ರ ಸರ್ಕಾರ (Central Govt ) ಕೆಲವು ಬ್ಯಾಂಕ್‌ಗಳ ಸಹಯೋಗದಲ್ಲಿ ಸಾಲ ಯೋಜನೆಯನ್ನು ಪ್ರಾರಂಭಿಸಿದೆ. ಈಗಿನ ಕಾಲದಲ್ಲಿ ಯಾವುದೇ ಅಂಗಡಿಯವರು ತಮ್ಮ ಅಂಗಡಿಗಾಗಿ 50,000 ರೂಪಾಯಿಯಿಂದ 5,00,000 ರೂಪಾಯಿವರೆಗೆ ಸಾಲ ಪಡೆಯಬಹುದಾಗಿದೆ.  

ಮನೆಯಲ್ಲಿ ಎಷ್ಟು ನಗದು ಇಟ್ಟುಕೊಳ್ಳಬಹುದು? ಹೊಸ ತೆರಿಗೆ ನಿಯಮ ಏನ್ ಹೇಳುತ್ತೆ?

ಜನರನ್ನು ಸ್ವಾವಲಂಬಿ ಮಾಡುವ ಸರ್ಕಾರ ಸಾಲ ಸೌಲಭ್ಯ ನೀಡ್ತಿದೆ. ನೀವು ಹೊಸದಾಗಿ ಅಂಗಡಿ ತೆರೆಯಬೇಕೆಂದೇನೂ ಇಲ್ಲ, ಈಗಾಗಲೇ ಅಂಗಡಿ ಹೊಂದಿರುವವರು ಕೂಡ ಬ್ಯಾಂಕ್ ನಲ್ಲಿ ಸಾಲ ಪಡೆಯಬಹುದು. ಹೊಸದಾಗಿ ಅಂಗಡಿ ತೆರೆಯಲು ಹಾಗೂ ವ್ಯಾಪಾರ ವಿಸ್ತರಿಸಲು ಲೋನ್ ನೀಡುವ ಬ್ಯಾಂಕ್ (Bank) ವಿವರ ಇಲ್ಲಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ನೀವು ಅಂಗಡಿಗಾಗಿ ಸಾಲ ಪಡೆಯಬಹುದು. ಎಸ್‌ಬಿಐ ಬ್ಯಾಂಕ್‌ನಿಂದ 50,000 ರಿಂದ 10 ಲಕ್ಷ ರೂಪಾಯಿವರೆಗೆ ನಿಮಗೆ ಸಾಲ ಸಿಗುತ್ತದೆ. 50,000 ರೂಪಾಯಿವರೆಗಿನ ಸಾಲಕ್ಕೆ ಬ್ಯಾಂಕ್ ಯಾವುದೇ ಪ್ರೊಸೆಸ್ಸಿಂಗ್ ಶುಲ್ಕವಿರುವುದಿಲ್ಲ. 50 ಸಾವಿರದಿಂದ 10 ಲಕ್ಷ ರೂಪಾಯಿ ಸಾಲಕ್ಕೆ ನೀವು ಶೇಕಡಾ 0.5ರಷ್ಟು ಪ್ರೊಸೆಸ್ಸಿಂಗ್ ಶುಲ್ಕ ಪಾವತಿಸಬೇಕಾಗುತ್ತದೆ. ದೊಡ್ಡ ವ್ಯವಹಾರಕ್ಕೆ ಬ್ಯಾಂಕ್ 20 ಕೋಟಿಯವರೆಗೆ ಸಾಲ ನೀಡುತ್ತದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವ್ಯಾಪಾರಿಗಳಿಗೆ ಕ್ರೆಡಿಟ್ ಕಾರ್ಡ್ ಸೌಲಭ್ಯವನ್ನೂ ನೀಡುತ್ತದೆ. ಅದ್ರ ಮಿತಿ 10 ಲಕ್ಷ  ರೂಪಾಯಿವರೆಗೆ ಇರುತ್ತದೆ. ಈ ಯೋಜನೆಯಲ್ಲಿ ನೀವು ಸಾಲ ಪಡೆದ್ರೆ ಮರುಪಾವತಿಗೆ ಐದು ವರ್ಷ ಅವಕಾಶವಿರುತ್ತದೆ. ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಯಾವುದೇ ಶಾಖೆಗೆ ಹೋಗಿ ಸಾಲಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.  

ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್‌ : ಅಂಗಡಿ ತೆರೆಯುವ ವ್ಯಾಪಾರಿಗಳಿಗೆ ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಕೂಡ ಸಾಲ ಸೌಲಭ್ಯವನ್ನು ನೀಡುತ್ತದೆ. ಇಲ್ಲಿ 1 ಕೋಟಿ ರೂಪಾಯಿವರೆಗೆ  ಸಾಲವನ್ನು ಪಡೆಯಬಹುದು. ಈ ಸಾಲವನ್ನು ನೀವು 3 ರಿಂದ 7 ವರ್ಷಗಳ ಒಳಗೆ ಮರುಪಾವತಿ ಮಾಡಬೇಕು.  ಈ ಬ್ಯಾಂಕ್ ನಲ್ಲಿ ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ಕೂಡ ನೀವು ಸಾಲವನ್ನು ತೆಗೆದುಕೊಳ್ಳಬಹುದು. 10 ಲಕ್ಷ ರೂಪಾಯಿವರೆಗೆ ನಿಮಗೆ ಸಾಲ ಸಿಗುತ್ತದೆ. ಈ ಯೋಜನೆಯಡಿ ಸಾಲ ಪಡೆಯಲು ನೀವು ವ್ಯಾಪಾರ ಶುರು ಮಾಡಿ ಕನಿಷ್ಟ ಒಂದು ವರ್ಷವಾಗಿರಬೇಕು. ಸರಕು, ಉಪಕರಣ, ಪೀಠೋಪಕರಣ, ಕಂಪ್ಯೂಟರ್‌ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗೆ ಕೂಡ ನೀವ ಸಾಲ ಪಡೆಯಬಹುದು.  

ಪಿಪಿಎಫ್ ಖಾತೆ ಅವಧಿ 15 ವರ್ಷ, ಆ ಬಳಿಕ ಖಾತೆದಾರ ಏನ್ ಮಾಡ್ಬಹುದು?

ಐಡಿಬಿಐ ನೀಡುತ್ತೆ ಸಾಲ:  ಐಡಿಬಿಐ ಕೂಡ ಅಂಗಡಿಗಾಗಿ  ಸಾಲವನ್ನು ನೀಡುತ್ತದೆ. ಗರಿಷ್ಠ 5 ಕೋಟಿ ರೂಪಾಯಿವರೆಗೆ ಸಾಲ ಪಡೆಯಬಹುದು.  

click me!