ಕೆಲವೊಂದು ವಸ್ತುವಿಗೆ ಸದಾ ಬೇಡಿಕೆಯಿರುತ್ತದೆ. ಅದ್ರಲ್ಲಿ ಬಟ್ಟೆ ಕೂಡ ಒಂದು. ಭಾರತ ಎಷ್ಟೇ ಮಾಡರ್ನ್ ಆದ್ರೂ ಸೀರೆ ಬೇಡಿಕೆ ಕಡಿಮೆಯೇನಾಗಿಲ್ಲ. ಸೀರೆ ಮಾರಾಟ ಮಾಡಿಯೂ ನೀವು ಕೈತುಂಬ ಲಾಭ ಪಡೆಯಬಹುದು.
ಸೀರೆ, ವಿಶ್ವದ ಅತ್ಯಂತ ಹಳೆಯ ವೇಷಭೂಷಣಗಳಲ್ಲಿ ಒಂದು. ಸೀರೆ ಭಾರತೀಯ ಮಹಿಳೆಯರ ಸಂಪ್ರದಾಯಿಕ ಉಡುಪು. ಭಾರತೀಯ ಮಹಿಳೆಯರನ್ನು ಸೀರೆ ಸೆಳೆಯುತ್ತದೆ. ಚೆಂದದ ಸೀರೆ ಖರೀದಿಸಲು ಮಹಿಳೆಯರು ಸದಾ ಮುಂದಿರ್ತಾರೆ. ಯಾವಾಗ್ಲೂ ಬೇಡಿಕೆಯಿರುವ ಈ ಸೀರೆ ವ್ಯಾಪಾರ ಶುರು ಮಾಡಿ ನೀವು ಆದಾಯ ಪಡೆಯಬಹುದು. ನಾವಿಂದು ಮನೆಯಲ್ಲಿಯೇ ಸೀರೆ ವ್ಯಾಪಾರ ಶುರು ಮಾಡೋದು ಹೇಗೆ ಎಂಬ ಬಗ್ಗೆ ನಿಮಗೆ ಮಾಹಿತಿಯನ್ನು ನೀಡ್ತೇವೆ.
ಸೀರೆ (Saree) ಅಂಗಡಿಗೆ ಸರಿಯಾದ ಜಾಗ ಆಯ್ಕೆ ಮಾಡಿ : ನೀವು ಮನೆಯಲ್ಲಿಯೇ ಸೀರೆ ವ್ಯಾಪಾರ (Business) ಶುರು ಮಾಡಬಹುದು. ನಿಮ್ಮ ಮನೆ ಜನನಿಬಿಡಿ ಪ್ರದೇಶದಲ್ಲಿದ್ದರೆ ಅಥವಾ ಮನೆ ಬಳಿ ಮಹಿಳೆಯರಿಗೆ ಬೇಕಾಗುವ ಅಗತ್ಯವಸ್ತುಗಳು ಲಭ್ಯವಿದ್ರೆ ನೀವು ಮನೆಯಲ್ಲೇ ಅಂಗಡಿ (shop) ಮಾಡಬಹುದು. ಪ್ರತ್ಯೇಕ ಅಂಗಡಿ ಶುರು ಮಾಡ್ತೇನೆ ಎನ್ನುವವರು ಕೂಡ ಮಾರುಕಟ್ಟೆ ಪ್ರದೇಶದಲ್ಲಿ ಸೀರೆ ಅಂಗಡಿ ತೆರೆದ್ರೆ ಒಳ್ಳೆಯದು.
ಸೀರೆ ವ್ಯಾಪಾರದಲ್ಲಿ ಗಮನ ಕೊಡಬೇಕಾದ ವಿಷಯಗಳು : ಫ್ಯಾಶನ್ (Fashion) ಮತ್ತು ಟ್ರೆಂಡಿ ಸೀರೆಯನ್ನು ಇಟ್ಟುಕೊಳ್ಳಿ. ಅಂಗಡಿ ಇರುವ ಸ್ಥಳಕ್ಕೆ ಅನುಗುಣವಾಗಿ ಬಟ್ಟೆಗಳನ್ನು ಇರಿಸಿ. ಒಂದರಿಂದ ಎರಡು ತಿಂಗಳ ಮುಂಚಿತವಾಗಿ ಕಾರ್ಖಾನೆಯಿಂದ ಸೀರೆಗಳನ್ನು ಆರ್ಡರ್ ಮಾಡಿ. ಹಳ್ಳಿಯಲ್ಲಿ ಅಂಗಡಿಯನ್ನು ತೆರೆದಿದ್ದರೆ ಅಗ್ಗದ ಮತ್ತು ಉತ್ತಮ ಬಟ್ಟೆಗಳನ್ನು ಮಾತ್ರ ಇರಿಸಿ. ನಿಮ್ಮ ಅಂಗಡಿ ನಗರದಲ್ಲಿದ್ದರೆ ಬ್ರಾಂಡೆಡ್ ಸೀರೆಗಳನ್ನು ಇಟ್ಟುಕೊಳ್ಳಿ. ಹಾಗೆಯೇ ದೀಪಾವಳಿ, ದಸರಾ, ಹೋಳಿ ಮುಂತಾದ ಹಬ್ಬಗಳಲ್ಲಿ ನಿಮ್ಮ ಗ್ರಾಹಕ (Customer) ರಿಗೆ ವಿಶೇಷ ಕೊಡುಗೆಗಳನ್ನು ನೀಡಿ.
Business Ideas : ಮನೆಯಲ್ಲೇ ಕುಳಿತು ಶೂನ್ಯ ಬಂಡವಾಳದಲ್ಲಿ ಈ ಕೆಲಸ ಶುರು ಮಾಡಿ
ಸೀರೆ ವ್ಯಾಪಾರ ಹೆಚ್ಚಾಗಲು ಏನು ಮಾಡ್ಬೇಕು? : ನೀವು ಅಂಗಡಿಯಿರಲಿ ಇಲ್ಲ ಮನೆಯಿರಲಿ, ಸೀರೆ ಜೊತೆ ಅದಕ್ಕೆ ಸಂಬಂಧಿಸಿದ ವಸ್ತುಗಳನ್ನು ಕೂಡ ಇಡಬೇಕು. ಉದಾಹರಣೆಗೆ ಸೀರೆ ಜೊತೆ ಬ್ಲೌಸ್, ಬ್ಲೌಸ್ ಪೀಸ್, ಪೆಟಿಕೋಟ್ ಇಡಬೇಕು. ಒಂದೇ ಸ್ಥಳದಲ್ಲಿ ಎಲ್ಲವೂ ಸಿಗೋದ್ರಿಂದ ಗ್ರಾಹಕರು ನಮ್ಮ ಬಳಿ ಹೆಚ್ಚು ಬರ್ತಾರೆ. ಸಾಧ್ಯವಾದ್ರೆ ನೀವು ಟೈಲರ್ ನೇಮಕ ಮಾಡಿಕೊಂಡು ಸೀರೆಗೆ ತಕ್ಕ ಬ್ಲೌಸ್ ಹೊಲಿದುಕೊಡುವ ಕೆಲಸವನ್ನೂ ಶುರು ಮಾಡಿ.
ಸೀರೆ ವ್ಯಾಪಾರಕ್ಕೆ ಜಿಎಸ್ಟಿ ಅಗತ್ಯ : ಹೌದು, ನೀವು ಸೀರೆ ವ್ಯಾಪಾರ ಶುರು ಮಾಡ್ತಿದ್ದರೆ ಜಿಎಸ್ಟಿ ಅಗತ್ಯವಿದೆ. ಸಣ್ಣ ಪ್ರಮಾಣದಲ್ಲಿ ವ್ಯಾಪಾರ ಮಾಡ್ತಿದ್ದರೆ ನೋಂದಣಿ ಅಗತ್ಯವಿಲ್ಲ.
ವ್ಯಾಪಾರಕ್ಕೆ ಸೀರೆ ಎಲ್ಲಿಂದ ತರೋದು? : ಸೀರೆ ವ್ಯಾಪಾರ ಶುರು ಮಾಡುವ ಮುನ್ನ ಸೀರೆ ಎಲ್ಲಿಂದ ತರಬೇಕು ಎಂಬುದು ಗೊತ್ತಿರಬೇಕು. ಸೂರತ್ ಭಾರತದಲ್ಲಿ ಸೀರೆ ತಯಾರಿಕೆಗೆ ಬಹಳ ಪ್ರಸಿದ್ಧವಾಗಿದೆ. ಇಲ್ಲಿ ನೂರಾರು ಸೀರೆ ಕಾರ್ಖಾನೆಗಳಿವೆ. ನೀವು ಅಲ್ಲಿಂದ ಸೀರೆ ಖರೀದಿ ಮಾಡ್ಬಹುದು. ಇಲ್ಲವೆ ನಿಮಗೆ ಅನುಕೂಲವಾಗುವ ಸ್ಥಳದಿಂದ ನೀವು ಸೀರೆ ಖರೀದಿ ಮಾಡ್ಬಹುದು. ಈಗ ಎಲ್ಲ ಕಾರ್ಖಾನೆಗಳು ಗ್ರಾಹಕರಿಗೆ ವಾಟ್ಸ್ ಅಪ್ ಸೌಲಭ್ಯ ನೀಡಿದ್ದು, ನೀವು ಇಲ್ಲಿಂದಲೇ ನಿಮಗಿಷ್ಟದ ಸೀರೆಯನ್ನು ಆರ್ಡರ್ ಮಾಡಿ ತರಿಸಿಕೊಳ್ಳಬಹುದು.
Online Shopping ನಲ್ಲೂ ಇದೆ ನಷ್ಟ, ನಿಮ್ಮ ದುಡ್ಡಿನ ಜಾಗೃತೆ ನೀವು ಮಾಡಬೇಕು!
ಸೀರೆ ವ್ಯಾಪಾರದ ವೆಚ್ಚ ಹಾಗೂ ಲಾಭ : ಕಡಿಮೆ ವೆಚ್ಚದಲ್ಲಿ ಸೀರೆ ವ್ಯಾಪಾರ ಪ್ರಾರಂಭಿಸುವ ಮೂಲಕ ಉತ್ತಮ ಆದಾಯವನ್ನು ಗಳಿಸಬಹುದು. ಮನೆಯಿಂದಲೇ ಸೀರೆ ವ್ಯಾಪಾರ ಆರಂಭಿಸಿದರೆ 50 ಸಾವಿರ ರೂಪಾಯಿ ವೆಚ್ಚ ಬರುತ್ತದೆ. ಕ್ರಮೇಣ ಈ ವ್ಯವಹಾರವನ್ನು ಹೆಚ್ಚಿಸಬಹುದು. ನೀವು ಅಂಗಡಿ ತೆರೆಯುವ ಮೂಲಕ ವ್ಯಾಪಾರ ಮಾಡಲು ಬಯಸಿದರೆ ಒಂದು ಲಕ್ಷ ರೂಪಾಯಿಗಳಿಗಿಂತ ಹೆಚ್ಚು ಹೂಡಿಕೆ ಮಾಡಬೇಕು. ಸೂಕ್ತ ಸ್ಥಳದಲ್ಲಿ ವ್ಯಾಪಾರ ಶುರು ಮಾಡಿದ್ರೆ ತಿಂಗಳಿಗೆ ನೀವು 20 ರಿಂದ 30 ಸಾವಿರ ರೂಪಾಯಿಗಳನ್ನು ಸುಲಭವಾಗಿ ಗಳಿಸಬಹುದು.