
ಹಣದುಬ್ಬರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬರೀ ಒಂದು ಕೆಲಸ ಮಾಡಿ ಸಂಸಾರ ಸಾಗಿಸ್ತೇವೆ ಅಂದ್ರೆ ಕಷ್ಟವಾಗುತ್ತೆ. ಉದ್ಯೋಗದ ಜೊತೆ ಸಣ್ಣ ಬ್ಯುಸಿನೆಸ್ ಮಾಡಿದ್ರೆ ಹಣದ ಸಮಸ್ಯೆಯನ್ನು ಒಂದು ಮಟ್ಟಿಗೆ ನೀವು ಕಡಿಮೆ ಮಾಡಬಹುದು. ನಾವಿಂದು ಸುಲಭವಾಗಿ ಮಾಡಬಹುದಾದ ವ್ಯಾಪಾರವೊಂದರ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ. ಬಾಳೆ ಕಾಯಿ, ಬಾಳೆ ಹಣ್ಣು, ಬಾಳೆ ಹಣ್ಣಿನ ಚಿಪ್ಸ್ ಸೇರಿದಂತೆ ಬಾಳೆ ಎಲೆ ಮಾರಾಟ ಮಾಡಿ ಹಣ ಸಂಪಾದನೆ ಮಾಡೋರಿದ್ದಾರೆ. ನೀವು ಬಾಳೆಕಾಯಿ (Banana ) ಹಿಟ್ಟಿನ ವ್ಯಾಪಾರ (Business ) ಶುರು ಮಾಡಿ ಆದಾಯ ಗಳಿಸಬಹುದು. ಈ ವ್ಯಾಪಾರವನ್ನು ನೀವು ಕಡಿಮೆ ಬಂಡವಾಳದಲ್ಲಿ ಶುರು ಮಾಡ್ಬಹುದು. ಬಾಳೆ ತೋಟವನ್ನು ಹೊಂದಿರುವವರು ಅತ್ಯಂತ ಕಡಿಮೆ ವೆಚ್ಚ ಮಾಡಿ ಈ ವ್ಯಾಪಾರ ಶುರು ಮಾಡಬಹುದು. ಯಾಕೆಂದ್ರೆ ಬಾಳೆಕಾಯಿಯನ್ನು ಪ್ರತ್ಯೇಕವಾಗಿ ಖರೀದಿ ಮಾಡುವ ಅವಶ್ಯಕತೆ ಇರೋದಿಲ್ಲ.
ಬಾಳೆ ಹಿಟ್ಟಿನ ವ್ಯಾಪಾರಕ್ಕೆ ಅಗತ್ಯವಿರುವ ಬಂಡವಾಳ : ಬಾಳೆ ಹಿಟ್ಟಿನ ವ್ಯಾಪಾರ ಶುರು ಮಾಡಲು ನಿಮಗೆ ಆರಂಭದಲ್ಲಿ ಸುಮಾರು 10 ರಿಂದ 15 ಸಾವಿರ ರೂಪಾಯಿ ಅಗತ್ಯವಿದೆ. ಈ ವ್ಯವಹಾರಕ್ಕಾಗಿ ನಿಮಗೆ ಎರಡು ಯಂತ್ರಗಳು ಅಗತ್ಯವಿರುತ್ತವೆ. ಬಾಳೆಹಣ್ಣನ್ನು ಒಣಗಿಸುವ ಡ್ರೈಯರ್ ಮೆಷಿನ್ ಮತ್ತು ಬಾಳೆಹಣ್ಣಿನ ಪುಡಿಯನ್ನು ತಯಾರಿಸಲು ಹಿಟ್ಟು ಮಿಕ್ಸ್ ಮಾಡುವ ಯಂತ್ರ . ನಿಮ್ಮ ಹತ್ತಿರದ ಮಾರುಕಟ್ಟೆಯಿಂದ ಅಥವಾ ಆನ್‌ಲೈನ್‌ನಿಂದ ನೀವು ಈ ಯಂತ್ರಗಳನ್ನು ಸುಲಭವಾಗಿ ನೀವು ಖರೀದಿಸಬಹುದು.
Personal Finance: ತರಕಾರಿ ಬೆಲೆ ಹೆಚ್ಚಾಗ್ತಿದ್ದಂತೆ ಶಾಕ್ ನೀಡಿದ ಬ್ಯಾಂಕ್
ಬಾಳೆ ಹಿಟ್ಟನ್ನು ತಯಾರಿಸೋದು ಹೇಗೆ? : ಬಾಳೆಕಾಯಿ ಹಿಟ್ಟನ್ನು ತಯಾರಿಸಲು ಮೊದಲನೆಯದಾಗಿ ಸೋಡಿಯಂ ಹೈಪೋಕ್ಲೋರೈಡ್ ದ್ರಾವಣದಿಂದ ಸ್ವಚ್ಛಗೊಳಿಸಬೇಕು. ಇದರ ನಂತರ ನೀವು ಅದರ ಸಿಪ್ಪೆಗಳನ್ನು ತೆಗೆಯಬೇಕು. ಐದು ನಿಮಿಷ ಇದನ್ನು ಸಿಟ್ರಿಕ್ ಆಸಿಡ್ ದ್ರಾವಣದಲ್ಲಿ ನೆನೆಸಿಡಬೇಕು. ನಂತ್ರ ಬಾಳೆ ಕಾಯಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಬೇಕು. ಈಗ ಈ ತುಂಡುಗಳನ್ನು 60 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ 24 ಗಂಟೆಗಳ ಕಾಲ ಬಿಸಿ ಗಾಳಿಯ ಒಲೆಯಲ್ಲಿ ಒಣಗಿಸಬೇಕು. ಬಾಳೆಹಣ್ಣಿನ ತುಂಡುಗಳು ಚೆನ್ನಾಗಿ ಆರಿದ ನಂತರ ಮಿಕ್ಸಿಯಲ್ಲಿ ರುಬ್ಬಿಕೊಂಡು ಪುಡಿ ಮಾಡಿಕೊಳ್ಳಬೇಕು.
ನಂತ್ರ ನೀವದನ್ನು ಪಾಲಿಥಿನ್ ಚೀಲಗಳಲ್ಲಿ ಅಥವಾ ಗಾಜಿನ ಬಾಟಲಿಗಳಲ್ಲಿ ಪ್ಯಾಕ್ ಮಾಡುವ ಮೂಲಕ ಬಾಳೆ ಹಿಟ್ಟನ್ನು ಮಾರಾಟ ಮಾಡಬಹುದು. ಇದರ ವೆಚ್ಚ ತುಂಬಾ ಕಡಿಮೆ. ಬಾಳೆಕಾಯಿ ಹಿಟ್ಟು ಸ್ವಲ್ಪ ಹಳದಿ ಬಣ್ಣದ್ದಾಗಿರುತ್ತದೆ.
ಹೋಟೆಲ್ ಉದ್ಯಮಕ್ಕೆ ಕೈಹಾಕಿ ಯಶಸ್ಸು ಕಂಡ ಬೆಂಗಳೂರಿನ ಇಂಜಿನಿಯರಿಂಗ್ ಪದವೀಧರೆ; ಏನಿವರ ಸಕ್ಸಸ್ ಗುಟ್ಟು?
ಬಾಳೆ ಹಿಟ್ಟಿನ ವ್ಯಾಪಾರದಿಂದಾಗುವ ಲಾಭ : ಮಾರುಕಟ್ಟೆಯಲ್ಲಿ ಬಾಳೆ ಹಿಟ್ಟನ್ನು ಕೆ.ಜಿ.ಗೆ 800 ರಿಂದ 1000 ರೂಪಾಯಿಗೆ ಸುಲಭವಾಗಿ ಮಾರಾಟ ಮಾಡಬಹುದು. ಪ್ರತಿದಿನ 5 ಕೆ.ಜಿ ಬಾಳೆ ಹಿಟ್ಟು ಮಾರಾಟ ಮಾಡಿದರೆ ದಿನಕ್ಕೆ 3500 ರಿಂದ 4500 ರೂಪಾಯಿಗಳ ಲಾಭ ಪಡೆಯಬಹುದು. ನೀವು ನಾಲ್ಕೈದು ಮಂದಿ ಒಟ್ಟಿಗೆ ಸೇರಿ, ಮನೆಯಲ್ಲೇ ಈ ವ್ಯವಹಾರವನ್ನು ಶುರು ಮಾಡಬಹುದು. ಆರಂಭದಲ್ಲಿ ನೀವು ಬರೀ ಪೌಡರ್ ಮಾಡುವ ಯಂತ್ರವನ್ನು ಮಾತ್ರ ಖರೀದಿಸಿ ವ್ಯಾಪಾರ ಶುರು ಮಾಡಬಹುದು.
ಬಾಳೆ ಹಿಟ್ಟನ್ನು ರೊಟ್ಟಿ ತಯಾರಿಕೆಗೆ ಬಳಸಲಾಗುತ್ತದೆ. ಆಫ್ರಿಕಾ ಹಾಗೂ ಜಮೈಕಾದಲ್ಲಿ ಗೋಧಿ ಹಿಟ್ಟಿಗೆ ಅಗ್ಗದ ಹಿಟ್ಟಾಗಿ ಬಾಳೆ ಹಿಟ್ಟನ್ನು ಬಳಕೆ ಮಾಡಲಾಗುತ್ತದೆ.
ಬಾಳೆ ಹಿಟ್ಟಿನ ಪ್ರಯೋಜನ : ಬಾಳೆ ಹಿಟ್ಟಿನಲ್ಲಿ ಪೊಟ್ಯಾಸಿಯಮ್ ಮತ್ತು ನಿರೋಧಕ ಪಿಷ್ಟದಲ್ಲಿ ಅಧಿಕವಾಗಿರುತ್ತದೆ. ಇದು ಜೀರ್ಣಕ್ರಿಯೆಗೆ ಒಳ್ಳೆಯದು. ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡುವ ಪ್ರಿಬಯಾಟಿಕ್ ಫೈಬರ್ ಇದಾಗಿದ್ದು, ಮಕ್ಕಳಿಗೂ ಇದು ಪ್ರಯೋಜನಕಾರಿಯಾಗಿದೆ. ನಿಮ್ಮ ಚರ್ಮದ ಸೌಂದರ್ಯವನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.