ಇಪಿಎಫ್ ಕುರಿತ ದೂರುಗಳನ್ನು ಎಲ್ಲಿ ದಾಖಲಿಸಬಹುದು? ಹೇಗೆ? ಇಲ್ಲಿದೆ ಮಾಹಿತಿ

By Suvarna News  |  First Published Sep 12, 2023, 6:37 PM IST

ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಕುರಿತು ಯಾವುದೇ ದೂರುಗಳಿದ್ದರೆ ಅದನ್ನು ಇಪಿಎಫ್ ಒ ಪೋರ್ಟಲ್ ನಲ್ಲಿ ದಾಖಲಿಸಲು ಅವಕಾಶವಿದೆ. ಹಾಗಾದ್ರೆ ಇಪಿಎಫ್ ಕುರಿತ ದೂರುಗಳನ್ನು ಎಲ್ಲಿ ದಾಖಲಿಸಬಹುದು? ಹೇಗೆ? ಇಲ್ಲಿದೆ ಮಾಹಿತಿ. 
 


Business Desk:ತಿಂಗಳ ವೇತನ ಪಡೆಯುವ ಬಹುತೇಕರು ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಖಾತೆ ಹೊಂದಿರುತ್ತಾರೆ. ನೌಕರರ ಭವಿಷ್ಯ ನಿಧಿ (ಇಪಿಎಫ್) ಭಾರತದ ಅತೀದೊಡ್ಡ ಸಾಮಾಜಿಕ ಭದ್ರತೆ ಯೋಜನೆಯಾಗಿದೆ. ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ ಒ) ಉದ್ಯೋಗಿಗಳ ಭವಿಷ್ಯ ನಿಧಿಯ ನಿರ್ವಹಣೆ ಮಾಡುತ್ತದೆ. ಇಪಿಎಫ್ ಗೆ ಸಂಬಂಧಿಸಿ ಏನಾದರೂ ದೂರುಗಳಿದ್ದರೆ ಎಲ್ಲಿ ಸಲ್ಲಿಕೆ ಮಾಡಬೇಕು ಎಂಬುದು ಬಹುತೇಕರಿಗೆ ತಿಳಿದಿಲ್ಲ. ಇದಕ್ಕಾಗಿಯೇ ಇಪಿಎಫ್ ಐ-ದೂರು ನಿರ್ವಹಣಾ ವ್ಯವಸ್ಥೆ (ಇಪಿಎಫ್ಐಜಿಎಂಎಸ್) ಇದೆ. ಇಲ್ಲಿ ದೂರುಗಳನ್ನು ಸಲ್ಲಿಸುವ ಮೂಲಕ ಪ್ರಶ್ನೆಗಳಿಗೆ ಉತ್ತರ ಪಡೆಯಬಹುದು. ಇಪಿಎಫ್ ಸದಸ್ಯರು, ಇಪಿಎಸ್ ಪಿಂಚಣಿದಾರರು, ಉದ್ಯೋಗದಾತ ಸಂಸ್ಥೆಗಳು ಹಾಗೂ ಇತರರು ದೂರುಗಳನ್ನು ದಾಖಲಿಸಬಹುದು. ಕ್ಲೈಮ್ ಗಳು, ಡೆಫಾಸಿಟ್ ಗಳು, ಅಕೌಂಟ್ ಬ್ಯಾಲೆನ್ಸ್ ಮುಂತಾದ ವಿಚಾರಗಳಿಗೆ ಸಂಬಂಧಿಸಿ ಇಪಿಎಫ್ ಸದಸ್ಯರು ದೂರುಗಳನ್ನು ಸಲ್ಲಿಸಬಹುದು. ಈ ದೂರುಗಳ ಸಲ್ಲಿಕೆಗೆ ಇಪಿಎಫ್ ಇಪಿಎಫ್ ಐ-ದೂರು ನಿರ್ವಹಣಾ ವ್ಯವಸ್ಥೆ (ಇಪಿಎಫ್ಐಜಿಎಂಎಸ್)  ಬಳಸಿಕೊಳ್ಳಬಹುದು. ಇನ್ನು ಈ ಪೋರ್ಟಲ್ ನಲ್ಲಿ ಇಪಿಎಫ್ ಚಂದಾದಾರರು ದೂರುಗಳು ಹಾಗೂ ಮನವಿಗಳ ಸ್ಟೇಟಸ್ ಅನ್ನು ಕೂಡ ವೀಕ್ಷಿಸಬಹುದು. 

ಏನಿದು ಇಪಿಎಫ್ ಒ ಪೋರ್ಟಲ್ ?
ಇದು ಇಪಿಎಫ್ಒನಿಂದ ರಚಿಸಲ್ಪಟ್ಟಿರುವ ವೇದಿಕೆ. ಇದು ಇಪಿಎಫ್ ಗೆ ಸಂಬಂಧಿಸಿ ಸದಸ್ಯರ ದೂರುಗಳು, ಸಮಸ್ಯೆಗಳನ್ನು ಪರಿಹರಿಸಲು ಇರುವ ವೇದಿಕೆಯಾಗಿದೆ. ಇದರ ಮೂಲಕ ಸಲ್ಲಿಸಿದ ದೂರುಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ನಿಗದಿತ ಸಮಯ ಮಿತಿಯಲ್ಲಿ ಉತ್ತರಗಳನ್ನು ನೀಡುತ್ತಾರೆ. ಇನ್ನು ಈ ಪೋರ್ಟಲ್ ನಲ್ಲಿ ಸದಸ್ಯರು ಯಾವುದೇ ಪ್ರಶ್ನೆಗಳಿದ್ದರೆ ಅದನ್ನು ಸಲ್ಲಿಕೆ ಮಾಡುವ ಮೂಲಕ ಉತ್ತರಗಳನ್ನು ಪಡೆಯಹುದು. ಇನ್ನು ಸದಸ್ಯರು ಯಾವುದೇ ಸಮಯದಲ್ಲಿ ತಮ್ಮ ದೂರುಗಳನ್ನು ಇಲ್ಲಿ ಸಲ್ಲಿಕೆ ಮಾಡಬಹುದು. ಹಾಗೆಯೇ ದೂರಿನ ಸ್ಟೇಟಸ್ ಅನ್ನು ಕೂಡ ಪರಿಶೀಲಿಸಲು ಅವಕಾಶ ನೀಡಲಾಗಿದೆ.

Tap to resize

Latest Videos

EPF ಬ್ಯಾಲೆನ್ಸ್ ಚೆಕ್ ಮಾಡಲು ಇಂಟರ್ನೆಟ್ ಬೇಕಿಲ್ಲ; ಮನೆಯಲ್ಲೇ ಕುಳಿತು ಈ ವಿಧಾನದಿಂದ ಪರಿಶೀಲಿಸಬಹುದು

ಇಪಿಎಫ್ ಒ ಸೇವೆಗಳ ಬಗ್ಗೆ ದೂರು ಸಲ್ಲಿಕೆ ಹೇಗೆ?
ಹಂತ 1: ಇಪಿಎಫ್ ಇ-ಗ್ರೀವಿಯೆನ್ಸ್ ಮ್ಯಾನೇಜ್ಮೆಂಟ್ ಸಿಸ್ಟಂ (https://epfigms.gov.in/) ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ. ‘Register Grievance’ ಮೇಲೆ ಕ್ಲಿಕ್ ಮಾಡಿ.
ಹಂತ 2 : ‘Status’ಆಯ್ಕೆ ಮಾಡಿ.
ಹಂತ 3: ಯೂನಿವರ್ಸಲ್ ಅಕೌಂಟ್ ನಂಬರ್ (UAN) ನಮೂದಿಸಿ. ಆ ಬಳಿಕ ಸೆಕ್ಯುರಿಟಿ ಕೋಡ್ ನಮೂದಿಸಿ ಹಾಗೂ ‘Get Details’ಬಟನ್ ಮೇಲೆ ಕ್ಲಿಕ್ ಮಾಡಿ.
ಹಂತ 4: ಈಗ UAN ಮಾಹಿತಿ ಕಾಣಿಸುತ್ತದೆ. ‘Get OTP’ಬಟನ್ ಮೇಲೆ ಕ್ಲಿಕ್ ಮಾಡಿ.
ಹಂತ 5: ಒಟಿಪಿ ನಮೂದಿಸಿ, 'Submit' ಬಟನ್ ಮೇಲೆ ಕ್ಲಿಕ್ ಮಾಡಿ. ಒಟಿಪಿ ಪರಿಶೀಲನೆ ಬಳಿಕ ಅದರ ಸಂದೇಶ ಕಾಣಿಸುತ್ತದೆ. ಮುಂದುವರಿಯಲು 'OK' ಬಟನ್ ಮೇಲೆ ಕ್ಲಿಕ್ ಮಾಡಿ.
ಹಂತ 6: ಹೆಸರು, ಲಿಂಗ, ಸಂಪರ್ಕ ಮಾಹಿತಿ, ಪಿನ್ ಕೋಡ್, ರಾಜ್ಯ ಹಾಗೂ ರಾಷ್ಟ್ರ ಮುಂತಾದ ವೈಯಕ್ತಿಕ ಮಾಹಿತಿಗಳನ್ನು ನಮೂದಿಸಿ.
ಹಂತ 7: 'Grievance Details'ಕಾಲಂನಲ್ಲಿರುವ ಪಿಎಫ್ ಖಾತೆ ಸಂಖ್ಯೆ ಮೇಲೆ ಕ್ಲಿಕ್ ಮಾಡಿ.

EPF ಖಾತೆ ಮಾಹಿತಿ ಅಪ್ಡೇಟ್ ಮಾಡಲು ಹೊಸ ನಿಯಮ; ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಮಾಹಿತಿ

ಹಂತ 8: ದೂರು ವಿಧಾನ ಆಯ್ಕೆ ಮಾಡಿ. 'Choose File' ಹಾಗೂ 'Attach' ಬಟನ್ ಗಳನ್ನು ಬಳಸಿಕೊಂಡು ಅಗತ್ಯ ಫೈಲ್ ಗಳನ್ನು ಅಪ್ಲೋಡ್ ಮಾಡಿ. ದೂರಿನ ಮಾಹಿತಿ ನಮೂದಿಸಿದ ಬಳಿಕ 
'Add' ಬಟನ್ ಮೇಲೆ ಕ್ಲಿಕ್ ಮಾಡಿ ಹಾಗೂ ಇದಕ್ಕೆ ಬೆಂಬಲ ನೀಡುವ ಪೇಪರ್ ಗಳನ್ನು ಜೋಡಿಸಿ.
ಹಂತ 9: 'Grievance Details'ಅಲ್ಲಿ ದೂರುಗಳನ್ನು ಪೋಸ್ಟ್ ಮಾಡಿ. ಇಪಿಎಫ್ ಒ ನಲ್ಲಿ ದೂರುಗಳನ್ನು ಫೈಲ್ ಮಾಡಲು 'Submit' ಬಟನ್ ಮೇಲೆ ಕ್ಲಿಕ್ ಮಾಡಿ.
ಹಂತ 10: ಕುಂದುಕೊರತೆ ಅಥವಾ ದೂರು ದಾಖಲಿಸಿದ ಬಳಿಕ ಇ-ಮೇಲ್ ಹಾಗೂ ಎಸ್ ಎಂಎಸ್ ಅನ್ನು ಇಪಿಎಫ್ ಚಂದಾದಾರರಿಗೆ ನೋಂದಣಿ ಸಂಖ್ಯೆಯೊಂದಿಗೆ ಕಳುಹಿಸಲಾಗುತ್ತದೆ. 

click me!