Personal Finance : ಆನ್ಲೈನ್ ಶಾಪಿಂಗ್ ವೇಳೆ ಅಸಲಿ, ನಕಲಿ ಹೀಗೆ ಪತ್ತೆ ಮಾಡಿ

By Suvarna NewsFirst Published Sep 27, 2022, 7:43 PM IST
Highlights

ಆನ್ಲೈನ್ ನಲ್ಲಿ ಕೆಲ ವಸ್ತುಗಳು ತೀರಾ ಕಡಿಮೆ ಬೆಲೆಗೆ ಸಿಗುತ್ತದೆ. ಅದನ್ನು ಖರೀದಿಸಿದ ನಾವು ಮೋಸ ಹೋಗಿರ್ತೇವೆ. ನಾಲ್ಕೈದು ದಿನವೂ ಆ ವಸ್ತು ಬಾಳಿಕೆ ಬಂದಿರೋದಿಲ್ಲ. ಆಮೇಲೆ ಬೇಸರಪಟ್ಟುಕೊಳ್ಳುವ ಬದಲು ಖರೀದಿಗೆ ಮೊದಲೇ ಸತ್ಯ ಪರೀಕ್ಷಿಸೋದು ಒಳ್ಳೆಯದು.
 

ಚಿಲ್ಲರೆ ವ್ಯಾಪಾರಕ್ಕಿಂತ ಆನ್ಲೈನ್ ವ್ಯಾಪಾರಕ್ಕೆ ಈಗ ಹೆಚ್ಚಿನ ಬೇಡಿಕೆಯಿದೆ. ಜನರು ಸೋಫಾ ಮೇಲೆ ಕುಳಿತುಕೊಂಡು ಆರಾಮವಾಗಿ ಮೊಬೈಲ್ ಕೈನಲ್ಲಿ ಹಿಡಿದು, ಟೀ ಕುಡಿತಾ ಆನ್ಲೈನ್ ನಲ್ಲಿ ವಸ್ತುಗಳನ್ನು ಆರ್ಡರ್ ಮಾಡ್ತಾರೆ. ಟ್ರಾಫಿಕ್ ನಲ್ಲಿ ಚಿಲ್ಲರೆ ಅಂಗಡಿಗೆ ಹೋಗಬೇಕಾಗಿಲ್ಲ. ಒಂದಾದ್ಮೇಲೆ ಒಂದು ಅಂಗಡಿ ಸುತ್ತಬೇಕಾಗಿಲ್ಲ. ಎಲ್ಲ ಖರೀದಿಸಿದ ವಸ್ತುಗಳನ್ನು ಹಿಡಿದು ಸುಸ್ತಾಗಿ ಮನೆಗೆ ಬರಬೇಕಾಗಿಲ್ಲ. ಈ ಶಾಪಿಂಗ್ ನಿಂದ ಹಣದ ಜೊತೆ ಸಮಯ ಹಾಳು ಎಂಬುದು ಜನರ ಅಭಿಪ್ರಾಯ. ಹಾಗಾಗಿಯೇ ಮನೆಯಲ್ಲಿ ಆರಾಮವಾಗಿ ಕುಳಿತು, ಹೊತ್ತಲ್ಲದ ಹೊತ್ತಿನಲ್ಲೂ ವಸ್ತುಗಳನ್ನು ಖರೀದಿ ಮಾಡ್ತಾರೆ. ಆನ್ಲೈನ್ ನಲ್ಲಿ ಈಗ ಎಲ್ಲ ವಸ್ತುಗಳೂ ಲಭ್ಯವಿದೆ. ಕೆಲ ವಸ್ತುಗಳ ಬೆಲೆ ಅತಿ ಕಡಿಮೆ ಇರುತ್ತದೆ. ಹಾಗೆಯೇ ಕೆಲ ವಸ್ತುಗಳನ್ನು ಕೆಲವೇ ನಿಮಿಷದಲ್ಲಿ ಮನೆಗೆ ತಂದುಕೊಡಲಾಗುತ್ತದೆ. ಹಾಗಾಗಿ ಜನರು ಆನ್ಲೈನ್ ಶಾಪಿಂಗ್ ಇಷ್ಟಪಡ್ತಾರೆ. ಆದ್ರೆ ಆನ್ಲೈನ್ ಶಾಪಿಂಗ್ ನಲ್ಲಿ ಇಷ್ಟು ಕಡಿಮೆ ಬೆಲೆಗೆ ಒಳ್ಳೆ ಬ್ರ್ಯಾಂಡ್ ನ ವಸ್ತು ಸಿಗಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತದೆ. ನೀವು ಖರೀದಿಸಿದ ವಸ್ತು ಒಳ್ಳೆ ಬ್ರ್ಯಾಂಡ್ ನದ್ದಾ ಅಥವಾ ನಕಲಿ ವಸ್ತುವನ್ನು ಸುಳ್ಳು ಹೇಳಿ ನೀಡಲಾಗ್ತಿದೆಯಾ ಎಂಬುದನ್ನು ನೀವು ಖರೀದಿ ವೇಳೆ ಪರೀಕ್ಷೆ ಮಾಡಬೇಕು. ಆಗ ನೀವು ಆನ್ಲೈನ್ ಮೋಸದಿಂದ ಬಚಾವ್ ಆಗ್ಬಹುದು. ನಾವಿಂದು ನೀವು ಖರೀದಿಸುತ್ತಿರುವ ವಸ್ತು ಅಸಲಿಯೇ ಎಂದು ಹೇಗೆ ಪರೀಕ್ಷೆ ಮಾಡ್ಬೇಕು ಎಂಬ ಬಗ್ಗೆ ಮಾಹಿತಿ ನೀಡ್ತೇವೆ.

ಅಧಿಕೃತ ವೆಬ್ಸೈಟ್ (Website)  ಚೆಕ್ ಮಾಡಿ : ಈಗ ವಸ್ತುಗಳನ್ನು ತಯಾರಿಸುವ ಕಂಪನಿಗಳು ಆನ್ಲೈನ್ ವೆಬ್ಸೈಟ್ ಹೊಂದಿರುತ್ತವೆ. ನೀವು ಇ- ಕಾಮರ್ಸ್ (E-Commerce)  ವೆಬ್ಸೈಟ್ ನಲ್ಲಿ ಖರೀದಿ ಮಾಡುವ ಮುನ್ನ ಅಧಿಕೃತ ವೆಬ್ಸೈಟ್ ನಲ್ಲಿ ಚೆಕ್ ಮಾಡಿ. ನಿಮಗೆ ವಸ್ತುಗಳ ಭಿನ್ನವಾಗಿ ಕಂಡರೆ ಅದನ್ನು ಖರೀದಿಸಲು ಹೋಗ್ಬೇಡಿ.

ಸ್ಮಾರ್ಟ್ ಕನ್ಸ್ಯೂಮರ್ ಅಪ್ಲಿಕೇಶನ್ ಬಳಸಿ : ಎಪ್ ಎಸ್ ಎಸ್ ಎಐ (FSSAI) ಸ್ಮಾರ್ಟ್ ಕನ್ಸ್ಯೂಮರ್ ಅಪ್ಲಿಕೇಶನ್ ನೀವು ಬಳಕೆ ಮಾಡಬಹುದು. ಇದ್ರಲ್ಲಿ ನೀವು ಉತ್ಪನ್ನ ಅಸಲಿಯೇ ಅಥವಾ ನಕಲಿಯೇ ಎಂಬುದನ್ನು ಸುಲಭವಾಗಿ ಪತ್ತೆ ಮಾಡಬಹುದು. ಅನೇಕ ಎಲೆಕ್ಟ್ರಾನಿಕ್ ಮತ್ತು ಎಫ್‌ಎಂಸಿಜಿ ಕಂಪನಿಗಳು ವಿಶೇಷ ಕ್ಯೂಆರ್ ಕೋಡ್‌ಗಳು ಅಥವಾ ಹೊಲೊಗ್ರಾಮ್‌ಗಳನ್ನು ಸ್ಥಾಪಿಸಲು ಪ್ರಾರಂಭಿಸಿವೆ. ಸ್ಮಾರ್ಟ್ ಕನ್ಸ್ಯೂಮರ್ ಅಪ್ಲಿಕೇಶನ್ ಸಹಾಯದಿಂದ ಅವುಗಳನ್ನು ಸ್ಕ್ಯಾನ್ ಮಾಡಬಹುದು. ಆಗ ನಿಮಗೆ ಫಲಿತಾಂಶ ತಿಳಿಯುತ್ತದೆ. 

ಬಳಕೆದಾರರ ಕಮೆಂಟ್ ಗಮನಿಸಿ : ಇ ಕಾಮರ್ಸ್ ವೆಬ್ಸೈಟ್ ಗಳಲ್ಲಿ ವಸ್ತುಗಳ ಕೆಳಗೆ ಬಳಕೆದಾರರ ಕಮೆಂಟ್ ಹಾಕಲಾಗುತ್ತದೆ. ಬಳಕೆದಾರರು ತಾವು ಬಳಸಿದ ವಸ್ತು ಹೇಗಿದೆ ಎಂಬುದನ್ನು ಕಮೆಂಟ್ ನಲ್ಲಿ ತಿಳಿಸಿರುತ್ತಾರೆ. ನೀವು ಖರೀದಿ ಮಾಡುವ ಮುನ್ನ ಕಮೆಂಟ್ ಓದಿ. ಹಾಗೆಯೇ ಅದಕ್ಕೆ ಎಷ್ಟು ಸ್ಟಾರ್ ನೀಡಲಾಗಿದೆ ಎಂಬುದನ್ನು ಗಮನಿಸಿ.

Personal Finance: ಹಬ್ಬ ಬಂತು, ಬೇಕಾಬಿಟ್ಟಿ ಖರ್ಚು ಮಾಡೋದ್ ಕಮ್ಮಿ ಮಾಡಿ

ಬೆಲೆ ಬಗ್ಗೆ ಇರಲಿ ಗಮನ : ಸಾಮಾನ್ಯವಾಗಿ ಅಧಿಕೃತ ವೆಬ್ಸೈಟ್ ನಲ್ಲಿ ಬೆಲೆ ರಿಯಾಯಿತಿ ಕಡಿಮೆ ಇರುತ್ತದೆ. ಹಾಗಾಗಿ ಅನೇಕ ರಿಯಾಯಿತಿ ನಕಲಿಯಾಗಿರುತ್ತದೆ. ಹಾಗಾಗಿ ಕಡಿಮೆ ಬೆಲೆಗೆ ಸಿಗ್ತಿದೆ ಎನ್ನುವ ಕಾರಣಕ್ಕೆ ವಸ್ತುಗಳನ್ನು ಖರೀದಿಸಬೇಡಿ. ಡೀಲರ್  ಸ್ಪಷ್ಟವಾಗಿ ಉಲ್ಲೇಖಿಸಿರುವ ಉತ್ಪನ್ನವನ್ನು ಮಾತ್ರ ಖರೀದಿಸಿ.

Personal Finance: ಭವಿಷ್ಯ ಚೆನ್ನಾಗಿರ್ಬೇಕಾ? ಉಳಿತಾಯದಲ್ಲಿ ಈ ತಪ್ಪು ಮಾಡ್ಬೇಡಿ

ವಸ್ತು ನೋಡಿ ಮರಳಾಗಬೇಡಿ, ವಾಸ್ತವ ಅರಿಯಿರಿ : ಉತ್ಪನ್ನವನ್ನು ಸರಿಯಾಗಿ ಪಟ್ಟಿ ಮಾಡಲಾಗಿದೆಯೇ, ಲೋಗೋ ಹೇಗಿದೆ, QR ಕೋಡ್ ಸರಿಯಾದ ಸ್ಥಳದಲ್ಲಿದೆಯೇ,ಕಾಗುಣಿತ ತಪ್ಪಾಗಿದೆಯೇ ಇದೆಲ್ಲವನ್ನೂ ಪರೀಕ್ಷೆ ಮಾಡಿ. ಉತ್ಪನ್ನವು ಅಸಲಿಯೇ ಅಥವಾ ನಕಲಿಯೇ ಎಂಬುದು ಇಂಥ ಸಣ್ಣ ವಿಷ್ಯದಿಂದ ನೀವು ಪತ್ತೆ ಮಾಡಬಹುದು. ಹಾಗಾಗಿ ವಸ್ತು ಚೆನ್ನಾಗಿದೆ ಎಂದು ಖರಿದಿಸುವ ಮೊದಲು ಇದೆಲ್ಲವನ್ನೂ ಗಮನಿಸಿ.  
 

click me!