ಬ್ಯಾಂಕ್ ಬಗ್ಗೆ ಅಸಮಾಧಾನವೇ? ಇಲ್ಲಿ ನಿಮ್ಮ ದೂರು ನೀಡಬಹುದು

Published : Nov 01, 2022, 06:40 PM IST
ಬ್ಯಾಂಕ್ ಬಗ್ಗೆ ಅಸಮಾಧಾನವೇ? ಇಲ್ಲಿ ನಿಮ್ಮ ದೂರು ನೀಡಬಹುದು

ಸಾರಾಂಶ

ಬ್ಯಾಂಕಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಸಿಬ್ಬಂದಿ ನಿಮ್ಮ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸದಿದ್ದರೆ ಅಥವಾ ಅನುಚಿತವಾಗಿ ವರ್ತಿಸಿದ್ರೆ ಬೇಸರ ಮೂಡೋದು ಸಹಜ. ಅವರ ವಿರುದ್ಧ ಎಲ್ಲಿ, ಯಾರಿಗೆ ದೂರು ನೀಡೋದು ಎಂಬ ಗೊಂದಲವೂ ಕಾಡುತ್ತದೆ. ಇಂಥ ಸಮಸ್ಯೆ ನಿಮಗೂ ಎದುರಾಗಿದ್ರೆ ಇಲ್ಲಿದೆ ಉತ್ತರ. 

Business Desk:ಬ್ಯಾಂಕ್ ಗೆ ಭೇಟಿ ನೀಡಿದಾಗ ಅಲ್ಲಿನ ಸಿಬ್ಬಂದಿಯ ವರ್ತನೆ ಅಥವಾ ಕಾರ್ಯನಿರ್ವಹಣೆ ಬಗ್ಗೆ ನಿಮಗೆ ಅಸಮಾಧಾನ ಮೂಡಿರಬಹುದು. ಇಂಥ ಸಮಯದಲ್ಲಿ ಸಿಬ್ಬಂದಿ ಅಥವಾ ಬ್ಯಾಂಕ್ ವಿರುದ್ಧ ಎಲ್ಲಿ, ಯಾರಿಗೆ ದೂರು ನೀಡಬೇಕು ಎಂಬ ಗೊಂದಲ ಗ್ರಾಹಕರಿಗೆ ಮೂಡೋದು ಸಹಜ. ಬ್ಯಾಂಕ್ ಅಥವಾ ಅಲ್ಲಿನ ಸಿಬ್ಬಂದಿ ವಿರುದ್ಧ ಅಸಮಾಧಾನವಿದ್ದರೆ ಗ್ರಾಹಕರು ನೇರವಾಗಿ ಆರ್ ಬಿಐಗೆ ದೂರು ಸಲ್ಲಿಸಬಹುದು. ಆರ್ ಬಿಐ ಏಕೀಕೃತ ಸಾರ್ವಜನಿಕ ತನಿಖಾಧಿಕಾರಿ ಯೋಜನೆಯನ್ನು ಈ ಉದ್ದೇಶಕ್ಕಾಗಿಯೇ ರೂಪಿಸಲಾಗಿದೆ. ಬ್ಯಾಂಕ್ ಸಿಬ್ಬಂದಿ ನಿಮ್ಮೊಂದಿಗೆ ಅನುಚಿತ ವರ್ತನೆ ತೋರಿದರೆ ಅಥವಾ ನಿಮಗೆ ಸರಿಯಾಗಿ ಸ್ಪಂದಿಸದಿದ್ದರೆ ಅಥವಾ ಬ್ಯಾಂಕ್ ಕಾರ್ಯನಿರ್ವಹಣೆ ಬಗ್ಗೆ ಅಸಮಾಧಾನವಿದ್ದರೆ ನೀವು ಆರ್ ಬಿಐಗೆ ದೂರು ದಾಖಲಿಸಬಹುದು. ಇದು ಕೇವಲ ಬ್ಯಾಂಕಿಗಷ್ಟೇ ಅಲ್ಲ, ಬದಲಿಗೆ ಆರ್‌ ಬಿಐ ನಿಯಂತ್ರಣಕ್ಕೊಳಪಡುವ ಯಾವುದೇ ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೂ ಅನ್ವಯಿಸುತ್ತದೆ. ಎಟಿಎಂ ತೊಂದರೆ, ಬ್ಯಾಂಕಿಂಗ್ ವ್ಯವಸ್ಥೆಯಲ್ಲಿನ ತೊಂದರೆ ಸೇರಿದಂತೆ ಎಲ್ಲ ಸಮಸ್ಯೆಗಳಿಗೂ ಓಂಬುಡಸ್ ಮನ್ ಯೋಜನೆಯಡಿ ದೂರು ಸಲ್ಲಿಸಲು ಅವಕಾಶವಿದೆ. ಬರೀ ದೂರಷ್ಟೇ ಅಲ್ಲ, ಸಲಹೆಗಳನ್ನು ಕೂಡ ನೀವು ನೀಡಬಹುದು. 

ದೂರು ನೀಡೋದು ಹೇಗೆ?
ನೀವು ಪ್ರಾರಂಭದಲ್ಲೇ ಆರ್ ಬಿಐ ಏಕೀಕೃತ ಸಾರ್ವಜನಿಕ ತನಿಖಾಧಿಕಾರಿ ಬಳಿ ಒಂದೇ ಬಾರಿಗೆ ದೂರು ಸಲ್ಲಿಸಲು ಅವಕಾಶವಿಲ್ಲ. ಅದಕ್ಕಾಗಿ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಬ್ಯಾಂಕ್ ಅಥವಾ ಎನ್ ಬಿಎಫ್ ಸಿ ವಿರುದ್ಧ ನೇರವಾಗಿ  ಆರ್ ಬಿಐ ಏಕೀಕೃತ ಸಾರ್ವಜನಿಕ ತನಿಖಾಧಿಕಾರಿಗೆ ದೂರು ಸಲ್ಲಿಸಲು ಸಾಧ್ಯವಿಲ್ಲ. ನಿಮಗೆ ಬ್ಯಾಂಕ್ ಅಥವಾ ಬ್ಯಾಂಕೇತರ ಹಣಕಾಸು ಸಂಸ್ಥೆ ಬಗ್ಗೆ ಅಸಮಾಧಾನವಿದ್ದರೆ ಮೊದಲು ಆ ಬ್ಯಾಂಕಿನಲ್ಲೇ ದೂರು ಸಲ್ಲಿಸಬೇಕು. ಇದಕ್ಕಾಗಿ ಬ್ಯಾಂಕಿಂಗ್ ಒಂಬುಡ್ಸ್ ಮನ್ ಇರುತ್ತಾರೆ. ಈ ರೀತಿ ದೂರು ಸಲ್ಲಿಕೆ ಮಾಡಲು ನೀವು ಯಾವುದೇ ಶುಲ್ಕ ಪಾವತಿಸಬೇಕಿಲ್ಲ ಒಂದು ವೇಳೆ ನಿಮ್ಮ ದೂರಿಗೆ ಬ್ಯಾಂಕ್ 30 ದಿನಗಳೊಳಗೆ ಪ್ರತಿಕ್ರಿಯಿಸದಿದ್ದರೆ ಆಗ ನೀವು ಆರ್ ಬಿಐಗೆ ದೂರು ಸಲ್ಲಿಸಬಹುದು. 

ಇಂದಿನಿಂದ ಡಿಜಿಟಲ್‌ ರುಪಾಯಿ ಯುಗ ಶುರು: ಪ್ರಾಯೋಗಿಕವಾಗಿ ಆರ್‌ಬಿಐನಿಂದ E- Rupi ಬಿಡುಗಡೆ

ಆರ್ ಬಿಐಗೆ ದೂರು ಸಲ್ಲಿಸಲು ನೀವು ಆರ್ ಬಿಐ ಲಿಂಕ್ ಗೆ ಹೋಗಿ ಆನ್ ಲೈನ್ ಮೂಲಕ ದೂರು ದಾಖಲಿಸಬಹುದು. ಇದರಲ್ಲಿ ದೂರು ನೀಡಲು ಫೈಲ್ ಎ ಕಂಪ್ಲೇಂಟ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪ್ರತ್ಯೇಕ ಪುಟ ತೆರೆಯುತ್ತದೆ. ಎಲ್ಲ ವಿವರಗಳನ್ನು ಭರ್ತಿ ಮಾಡಿ submit ಮೇಲೆ ಕ್ಲಿಕ್ ಮಾಡಿರಿ.

ಇನ್ನು ಆರ್ ಬಿಐ ಸೆಂಟ್ರಲೈಸ್ಡ್ ರೆಸಿಪ್ಟ್ ಹಾಗೂ ಪ್ರೋಸೆಸಿಂಗ್ ಸೆಂಟರ್ ವ್ಯವಸ್ಥೆ ಇರುತ್ತದೆ. ಇಲ್ಲಿಗೆ ನೇರವಾಗಿ ಇ-ಮೇಲ್ ಮೂಲಕ ದೂರು ನೀಡಬಹುದು. ದೂರಿ ಜೊತೆಗೆ ಅಗತ್ಯ ದಾಖಲೆಗಳನ್ನು ಕೂಡ ಅಟ್ಯಾಚ್ ಮಾಡಿ ಕಳುಹಿಸಿ.ಮೂರನೇಯದಾಗಿ ಪತ್ರ ಬರೆದು ಕೂಡ ನೀವು ದೂರು ನೀಡಬಹುದು. ಚಂಡೀಗಢನಲ್ಲಿರುವ ಆರ್ ಬಿಐ ಕಚೇರಿ ವಿಳಾಸಕ್ಕೆ ಪತ್ರ ಕಳುಹಿಸಿ. ಇಲ್ಲವೇ ನೀವೇ ಖುದ್ದಾಗಿ ತೆರಳಿ ದೂರು ಸಲ್ಲಿಕೆ ಮಾಡಬಹುದು. 

Cylinder Price Slashed: ಕನ್ನಡ ರಾಜ್ಯೋತ್ಸವದಂದು ಗುಡ್‌ ನ್ಯೂಸ್‌: ಅಡುಗೆ ಅನಿಲದ ಬೆಲೆ 115.50 ರೂ. ಕಡಿತ

ನೀವು ಖಾತೆ ಹೊಂದಿರುವ ಬ್ಯಾಂಕ್ ನಿಮಗೆ ಅಗತ್ಯ ಸೇವೆಗಳನ್ನು ಒದಗಿಸೋದು ಅದರ ಕರ್ತವ್ಯ. ಆದರೆ, ಬ್ಯಾಂಕ್ ಸಮರ್ಪಕವಾಗಿ ಮಾಹಿತಿ ನೀಡದಿದ್ರೆ ಅಥವಾ ನಿಮ್ಮ ಪ್ರಶ್ನೆಗಳು ಅಥವಾ ಸಮಸ್ಯೆಗಳಿಗೆ ಸ್ಪಂದಿಸದಿದ್ರೆ ಆಗ ಸುಮ್ಮನಿರುವ ಬದಲು ಸಂಬಂಧಪಟ್ಟವರಿಗೆ ದೂರು ನೀಡುವುದು ಉತ್ತಮ. ಇದ್ರಿಂದ ನಿಮ್ಮ ಸಮಸ್ಯೆ ಬಗೆಹರಿಯುವ ಜೊತೆಗೆ ಇತರ ಗ್ರಾಹಕರಿಗು ಕೂಡ ಬ್ಯಾಂಕ್ ಮುಂದಿನ ದಿನಗಳಲ್ಲಿ ಸಮರ್ಪಕ ಸೇವೆಗಳನ್ನು ಒದಗಿಸುತ್ತದೆ. 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಇಂಟರ್ನೆಟ್ ಇಲ್ಲದೆಯೂ UPI ಪಾವತಿ ಮಾಡಬಹುದು, *99# ಮೂಲಕ ಹಣ ಕಳುಹಿಸುವುದು ಹೇಗೆ?
ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌