Lakshmi to Lakme: ಬ್ಯೂಟಿ ಪ್ರಾಡಕ್ಟ್ ಬ್ರ್ಯಾಂಡ್ ಆರಂಭದ ಹಿಂದಿದೆ ನೆಹರೂ ಕೈ!

By Suvarna NewsFirst Published Jun 17, 2023, 12:39 PM IST
Highlights

ಬ್ಯೂಟಿ ಪ್ರಾಡಕ್ಟ್ ನಲ್ಲಿ ಪಟ್ಟಿ ಮಾಡಿ ಅಂದ್ರೆ ಮೊದಲು ಬಾಯಿಗೆ ಬರೋದು ಲ್ಯಾಕ್ಮೆ. ಭಾರತದ ಮೊದಲ ಸೌಂದರ್ಯ ಉತ್ಪನ್ನವಾದ ಲ್ಯಾಕ್ಮೆ ಶುರುವಾಗಿದ್ದರ ಹಿಂದೊಂದು ಕಥೆಯಿದೆ. ಉತ್ಪನ್ನಕ್ಕೆ ಲ್ಯಾಕ್ಮೆ ಹೆಸರು ಬರಲೂ ವಿಶೇಷ ಕಾರಣವಿದೆ.
 

ಲ್ಯಾಕ್ಮೆ ಹೆಸರು ಯಾರಿಗೆ ಗೊತ್ತಿಲ್ಲ. ಲ್ಯಾಕ್ಮೆ, ಸೌಂದರ್ಯ ಉತ್ಪನ್ನಗಳು ಅಥವಾ ಸೌಂದರ್ಯವರ್ಧಕಗಳ ಮಾರುಕಟ್ಟೆಯಲ್ಲಿ ಪ್ರಮುಖ ಬ್ರಾಂಡ್‌ಗಳಲ್ಲಿ ಒಂದಾಗಿದೆ.  ದೇಶಿ – ವಿದೇಶಿ ಸೇರಿದಂತೆ ಸಾಕಷ್ಟು ವಿಧದ ಸೌಂದರ್ಯ ಉತ್ಪನ್ನಗಳಿವೆ. ಆದ್ರೆ ಲ್ಯಾಕ್ಮೆ ಹೆಚ್ಚು ಪ್ರಸಿದ್ಧಿ ಪಡೆದಿದ್ದು, ಇದು ಭಾರತದ ಮೊದಲ ಸ್ವದೇಶಿ ಸೌಂದರ್ಯವರ್ಧಕ ಕಂಪನಿಯಾಗಿದೆ.  ಆಗಿನ ಪ್ರಧಾನಿ (Prime Minister) ಜವಾಹರಲಾಲ್ ನೆಹರು ಅವರ ಆಶಯದಂತೆ ಜೆಆರ್‌ಡಿ ಟಾಟಾ (JRD Tata) ಅವರು ಪ್ರಾರಂಭಿಸಿದ ಕಂಪನಿ ಇಂದು ದೇಶದ ಅತಿ ಹೆಚ್ಚು ಮಾರಾಟವಾಗುವ ಸೌಂದರ್ಯವರ್ಧಕ ಬ್ರ್ಯಾಂಡ್ ಆಗಿದೆ.  ಲಕ್ಷ್ಮಿ (Lakshmi) ಯಿಂದ ಲ್ಯಾಕ್ಮೆ (Lakme) ಆಗಿದ್ದು ಹೇಗೆ ಅನ್ನೋದನ್ನು ನಾವು ಹೇಳ್ತೇವೆ.

ನೆಹರೂ ಕಾಳಜಿಯಿಂದ ಶುರುವಾಯ್ತು ಲ್ಯಾಕ್ಮೆ : 1947 ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತು. ಆದರೆ ಆರ್ಥಿಕತೆಯು ನಿರ್ಣಾಯಕ ಹಂತವನ್ನು ದಾಟುತ್ತಿತ್ತು. ಉಳಿದ ವ್ಯಾಪಾರಿಗಳಂತೆ  ಭಾರತೀಯ ಸೌಂದರ್ಯವರ್ಧಕ ಮಾರುಕಟ್ಟೆಯು ವಿದೇಶಿ ಬ್ರ್ಯಾಂಡ್‌ಗಳ ಮೇಲೆ ಅವಲಂಬಿತವಾಗಿದೆ. ಇದು ಪ್ರಧಾನಿ ಜವಾಹರಲಾಲ್ ನೆಹರೂ ಅವರನ್ನು ಚಿಂತೆಗೀಡು ಮಾಡಿತ್ತು. ಮಹಿಳೆಯರು ಆಮದು ಮಾಡಿಕೊಂಡ ಸೌಂದರ್ಯವರ್ಧಕ ಉತ್ಪನ್ನಗಳನ್ನು ಖರೀದಿಸುತ್ತಿದ್ದರು. ಇದರಿಂದ ಆತಂಕಗೊಂಡ ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಅವರು ತಮ್ಮ ಸ್ನೇಹಿತ ಜೆಆರ್ ಡಿ ಟಾಟಾ ಅವರಿಗೆ ಕರೆ ಮಾಡಿದ್ದರು.

Latest Videos

ಯೋಗ ಶಿಕ್ಷಕನಿಂದ ಬಿಲಿಯನೇರ್ ಉದ್ಯಮಿ ತನಕ; ಪತಂಜಲಿ ಸಿಇಒ ಆಚಾರ್ಯ ಬಾಲಕೃಷ್ಣ ಅವರ ಯಶಸ್ಸಿನ ಹಾದಿ ಹೀಗಿತ್ತು...

ನೆಹರೂ ಟಾಟಾಗೆ ಹೇಳಿದ್ದೇನು? : ದೇಶದ ಹಣ ವಿದೇಶಕ್ಕೆ ಹೋಗ್ತಿದೆ ಎಂದು ಜೆಆರ್ ಡಿ ಟಾಟಾ ಮುಂದೆ ನೆಹರೂ ಬೇಸರ ವ್ಯಕ್ತಪಡಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಏನಾದ್ರೂ ಮಾಡಿ ಎಂದು ಟಾಟಾ ಹೇಳಿದ್ದರು. ನೆಹರೂ ಮಾತನ್ನು ಟಾಟಾ ಅರ್ಥ ಮಾಡಿಕೊಂಡರು. ಭಾರತದಲ್ಲಿ ಯಾವುದೇ ಕಾಸ್ಮೆಟಿಕ್ ಬ್ರಾಂಡ್ ಇಲ್ಲ ಎಂಬುದನ್ನು ಅರಿತ ಅವರು, ಮಾರುಕಟ್ಟೆಯ ಬೇಡಿಕೆಯನ್ನು ಟಾಟಾ ಅರ್ಥ ಮಾಡಿಕೊಂಡರು. ದೇಶ ಸೌಂದರ್ಯವರ್ಧಕ ಮಾರುಕಟ್ಟೆಯಲ್ಲಿ ಯಾವುದೇ ಸ್ಪರ್ಧೆ ಇರಲಿಲ್ಲ. ಅದರ ನಂತರ 1952 ರಲ್ಲಿ ಟಾಟಾ, ದೇಶದ ಮೊದಲ ಸ್ಥಳೀಯ ಸೌಂದರ್ಯವರ್ಧಕ ಕಂಪನಿಯಾದ ಲ್ಯಾಕ್ಮೆಯ ಅಡಿಪಾಯವನ್ನು ಹಾಕಿದರು.

ಲ್ಯಾಕ್ಮೆ ಹೆಸರಿನ ಅಡಗಿದೆ ರಹಸ್ಯ : ಜೆಆರ್ ಟಿ ಟಾಟಾ, ಲ್ಯಾಕ್ಮೆ ಕಂಪನಿಯನ್ನು ಟಾಟಾ ಆಯಿಲ್ ಮಿಲ್ಸ್ ಕಂಪನಿಯ (TOMCO) ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾಗಿ ಪ್ರಾರಂಭಿಸಿದರು. ಬ್ರಾಂಡ್ ಸಿದ್ಧವಾಗಿತ್ತು ಆದ್ರೆ ಏನು ಹೆಸರಿಡೋದು ಎನ್ನುವ ಗೊಂದಲ ಕಾಡಿತ್ತು. ಸಾಮಾನ್ಯ ಜನರಿಗೆ ಇಷ್ಟವಾಗುವ ಹೆಸರನ್ನು ಅವರು ಬಯಸಿದ್ದರು. ಟಾಟಾ ತನ್ನ ಕೆಲವು ಪ್ರತಿನಿಧಿಗಳನ್ನು ಪ್ಯಾರಿಸ್‌ಗೆ ಕಳುಹಿಸಿ, ಬ್ರ್ಯಾಂಡ್ ಮತ್ತು ಸೌಂದರ್ಯವರ್ಧಕ ಉತ್ಪನ್ನಗಳಲ್ಲಿ ಬರುವ ಸವಾಲುಗಳನ್ನು ಅರ್ಥ ಮಾಡಿಕೊಳ್ಳುವಂತೆ ಹೇಳಿದ್ರು. ಏತನ್ಮಧ್ಯೆ, ಟಾಟಾ ತಂಡವು ಫ್ರೆಂಚ್ ಸಂಯೋಜಕ ಲಿಯೋ ಡೆಲಿಬ್ಸ್ ಅವರ ಒಪೆರಾ ವೀಕ್ಷಣೆ ಮಾಡಿದ್ರು. ಒಪೆರಾದ ಮುಖ್ಯಸ್ಥೆ ಒಬ್ಬ ಮಹಿಳೆಯಾಗಿದ್ದರು. ಒಬ್ಬ ಬ್ರಿಟೀಷ್ ಅಧಿಕಾರಿಯನ್ನು ಪ್ರೀತಿಸಿದ ಮಹಿಳೆ ಹೆಸರು ಭಿನ್ನವಾಗಿತ್ತು.  ಹಿಂದೂ ಧರ್ಮದ ದೇವತೆಯಾದ ಲಕ್ಷ್ಮಿಯ ಹೆಸರನ್ನು ಫ್ರೆಂಚ್ ಭಾಷೆಗೆ ಅನುವಾದಿಸಿದ ಆಕೆ ಹೆಸರನ್ನು ಇಡಲಾಗಿತ್ತು. ಲಕ್ಷ್ಮಿಯ ಫ್ರೆಂಚ್ ಅನುವಾದ ಲ್ಯಾಕ್ಮೆ ಆಗಿತ್ತು. ಟಾಟಾ ಈ ಹೆಸರನ್ನು ಕೇಳಿದಾಗ ತಮ್ಮ ಬ್ರಾಂಡ್‌ ಗೆ ಲ್ಯಾಕ್ಮೆ ಹೆಸರಿಡಲು ನಿರ್ಧರಿಸಿದ್ರು.

ಬುದ್ಧಿವಂತ ವಿದ್ಯಾರ್ಥಿಯಲ್ಲ,ಆದರೂ ಐಐಟಿಯಲ್ಲಿ ಓದು,ಈಗ ದಿನದ ಗಳಿಕೆ ಒಂದು ಕೋಟಿ;ಇದು ಝೊಮ್ಯಾಟೋ ಸಿಇಒ ಯಶೋಗಾಥೆ!

ಶುಭಾರಂಭಗೊಂಡ ಲ್ಯಾಕ್ಮೆ : ಮುಂಬೈನ ಪೆದ್ದಾರ್ ರಸ್ತೆಯಲ್ಲಿರುವ ಸಣ್ಣ ಬಾಡಿಗೆ ಮನೆಯಲ್ಲಿ ಲ್ಯಾಕ್ಮೆ ಪ್ರಾರಂಭವಾಯಿತು. ಆರಂಭದಲ್ಲಿಯೇ ಲ್ಯಾಕ್ಮೆ ಎಲ್ಲರಿಗೂ ಇಷ್ಟವಾಗಲು ಶುರುವಾಗಿತ್ತು.  5 ವರ್ಷಗಳಲ್ಲಿಯೇ ಅದ್ರ ಪ್ರಭಾವ ಭಾರತೀಯರ ಮೇಲಾಗಿತ್ತು. 1960 ರ ಹೊತ್ತಿಗೆ ಕಂಪನಿ ಉತ್ಪನ್ನಕ್ಕೆ ಉನ್ನತ ರೆಸ್ಪಾನ್ಸ್ ಸಿಗಲು ಶುರುವಾಯ್ತು. ಲ್ಯಾಕ್ಮೆ ಬಿಡುಗಡೆಯ ನಂತರ ವಿದೇಶಿ ಸೌಂದರ್ಯ ಉತ್ಪನ್ನಗಳ ಆಮದು ಭಾರತದಲ್ಲಿ ಬಹುತೇಕ ನಿಂತುಹೋಯಿತು ಎನ್ನಬಹುದು.  

click me!