ಯೂಟ್ಯೂಬಲ್ಲಿ ರೀಲ್ಸ್ ಪೋಸ್ಟ್ ಮಾಡಿಯೂ ದುಡೀಬಹುದು ನೋಡಿ!

By Suvarna News  |  First Published Jan 4, 2024, 3:20 PM IST

ಹಣ ಗಳಿಸೋಕೆ ಈಗ ನಾನಾ ದಾರಿಯಿದೆ. ಅದ್ರಲ್ಲಿ ಯುಟ್ಯೂಬ್ ಶಾರ್ಟ್ಸ್ ಮುಂದಿದೆ. ಈಗಾಗಲೇ ಅನೇಕರು ಇದ್ರಲ್ಲಿ ಸಂಪಾದನೆ ಮಾಡ್ತಿದ್ದು, ನೀವು ಮಾಡುವ ಪ್ಲಾನ್ ಇದ್ರೆ ಈ ಆರ್ಟಿಕಲ್ ಓದಿ.
 


ಈಗ ಯೂಟ್ಯೂಬ್ ಶಾರ್ಟ್ಸ್ ಬಹಳ ಜನಪ್ರಿಯವಾಗುತ್ತಿದೆ. ಯುಟ್ಯೂಬ್ ನಲ್ಲಿ 2.7 ಶತಕೋಟಿ ಸಕ್ರಿಯ ಬಳಕೆದಾರರಿದ್ದು, ವಿಶ್ವದಲ್ಲಿ ಇದು ಮುಂದಿದೆ. ಯುಟ್ಯೂಬ್ ಶಾರ್ಟ್ಸ್ ನಲ್ಲಿ 2 ಶತಕೋಟಿ ಸಕ್ರಿಯ ಬಳಕೆದಾರರಿದ್ದು, ಇದು ಯುಟ್ಯೂಬ್ ನಂತ್ರ ಎರಡನೇ ಸ್ಥಾನದಲ್ಲಿದೆ/  ಪ್ರತಿದಿನ ಯೂಟ್ಯೂಬ್ ಶಾರ್ಟ್ಸ್ ಅನ್ನು 50 ಶತಕೋಟಿಗೂ ಹೆಚ್ಚು ಬಾರಿ ವೀಕ್ಷಣೆ ಮಾಡಲಾಗುತ್ತದೆ.  ವೀಕ್ಷಣೆ ವಿಷ್ಯದಲ್ಲೂ ಯುಟ್ಯೂಬ್ ಶಾರ್ಟ್ಸ್ ಮುಂದಿದೆ. ಯುಟ್ಯೂಬ್ ಶಾರ್ಟ್ಸ್ ಅನ್ನು ಭಾರತದಲ್ಲಿ ಪ್ರತಿ ದಿನ 12.8 ಬಿಲಿಯನ್ ಗೂ ಹೆಚ್ಚು ಬಾರಿ ವೀಕ್ಷಿಸಲಾಗುತ್ತದೆ. ಭಾರತದ ನಂತರ, ಯೂಟ್ಯೂಬ್ ಶಾರ್ಟ್ಸ್‌ನಲ್ಲಿ ಅಮೆರಿಕ ಅತಿ ಹೆಚ್ಚು ವೀಕ್ಷಣೆಗಳನ್ನು ಹೊಂದಿದೆ. ಬರೀ ವೀಕ್ಷಣೆ ಮಾಡೋದಲ್ಲ ಇದ್ರಲ್ಲಿ ಹಣಗಳಿಕೆಗೆ ಸಾಕಷ್ಟು ಅವಕಾಶವಿದೆ. ನೀವು ಯುಟ್ಯೂಬ್ ಶಾರ್ಟ್ಸ್ ನಲ್ಲಿ ವಿಡಿಯೋ ಅಪ್ಲೋಡ್ ಮಾಡುವ ಮೂಲಕ ಹಣ ಸಂಪಾದನೆ ಮಾಡಬಹುದು. 

ಯುಟ್ಯೂಬ್ (YouTube)ಶಾರ್ಟ್ಸ್ ನಲ್ಲಿ ವಿಡಿಯೋ : ಯುಟ್ಯೂಬ್ ನ ಇನ್ನೊಂದು ಭಾಗ ಯುಟ್ಯೂಬ್ ಶಾರ್ಟ್ಸ್ (Shorts) . ಅದ್ರಲ್ಲಿ ವಿಡಿಯೋ ಮಾಡೋದು ಬಹಳ ಸುಲಭ. ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಯೂಟ್ಯೂಬ್ ಅಪ್ಲಿಕೇಶನ್ ತೆರೆಯಬೇಕು.  ಕ್ರಿಯೇಟ್ ಬಟನ್ ಟ್ಯಾಪ್ ಮಾಡಬೇಕು. ಕಿರು ವೀಡಿಯೊ ಆಯ್ಕೆಯನ್ನು ಆರಿಸಿ, ವೀಡಿಯೊ ಸ್ಕ್ರಿಪ್ಟ್ ಅನ್ನು ನಿರ್ಧರಿಸಿ, ರೆಕಾರ್ಡ್ ಮಾಡಿ, ವೀಡಿಯೊವನ್ನು ಸರಿಯಾಗಿ ಎಡಿಟ್ ಮಾಡಿ, ತದನಂತರ ಅದನ್ನು ಅಪ್‌ಲೋಡ್ ಮಾಡಿ. ನಿಮ್ಮ ವೀಡಿಯೋ ಚೆನ್ನಾಗಿದ್ದರೆ ಅದು ವೈರಲ್ ಆಗುವ ಸಾಧ್ಯತೆಗಳು ಹೆಚ್ಚು.  ಇಲ್ಲಿ ನೀವು ಬರೀ 60 ಸೆಕೆಂಡುಗಳ ವಿಡಿಯೋ ಮಾತ್ರ ಹಾಕ್ಬೇಕು. 

Tap to resize

Latest Videos

ಮಾಡೋದು ಅಡುಗೆ, ಗಳಿಕೆ ಸಿನಿ ನಟಿಯರಿಗಿಂತಲೂ ಹೆಚ್ಚು! ಈಕೆಗೊಂದು ಸಲಾಂ!

ಯುಟ್ಯೂಬ್ ಶಾರ್ಟ್ಸ್ ನಲ್ಲಿ ಹಣ ಸಂಪಾದನೆಗೆ ಷರತ್ತು : 
ಚಾನಲ್ ಅರ್ಹತೆ: ಕಳೆದ 365 ದಿನಗಳಲ್ಲಿ ನಿಮ್ಮ ಯುಟ್ಯೂಬ್ ಚಾನಲ್ ಕನಿಷ್ಠ 500 ಚಂದಾದಾರರನ್ನು ಮತ್ತು 3000 ಗಂಟೆಗಳ ವೀಕ್ಷಣೆ ಸಮಯವನ್ನು ಹೊಂದಿರಬೇಕು.
ಯುಟ್ಯೂಬ್ ಶಾರ್ಟ್ಸ್ ಅರ್ಹತೆ : ಕಳೆದ 90 ದಿನಗಳಲ್ಲಿ ನಿಮ್ಮ ಶಾರ್ಟ್ಸ್ ಚಾನಲ್ ಕನಿಷ್ಠ ಒಂದು ಕೋಟಿ ವೀಕ್ಷಣೆಯನ್ನು ಹೊಂದಿರಬೇಕು.
ಹಕ್ಕುಸ್ವಾಮ್ಯ ಅನುಸರಣೆ: ನಿಮ್ಮ ಯುಟ್ಯೂಬ್ ಚಾನಲ್‌ನಲ್ಲಿ ಯಾವುದೇ ರೀತಿಯ ಹಕ್ಕುಸ್ವಾಮ್ಯ ಅಥವಾ ಸಮುದಾಯದ ವಿಷ್ಯ ಇರಬಾರದು. 

ಯುಟ್ಯೂಬ್ ಶಾರ್ಟ್ಸ್ ಮೂಲಕ ಹಣ ಸಂಪಾದನೆ : ಯುಟ್ಯೂಬ್, ಶಾರ್ಟ್ಸ್ ಕ್ರಿಯೆಟರ್ ಗಳಿಗೆ ಗಳಿಕೆಯ ಶೇಕಡಾ ೪೫ರಷ್ಟನ್ನು ನೀಡುತ್ತದೆ. ನೀವು ಹಣ ಗಳಿಸುವ ಷರತನ್ನು ಪೂರೈಸಿದ್ದು, ನಿಮ್ಮ ಶಾರ್ಟ್ಸ್ ೧೦ ಲಕ್ಷ ವ್ಯೂವ್ ಹೊಂದಿದ್ದರೆ ನಿಮಗೆ ೪೦೫ ಡಾಲರ್ ಸಿಗುತ್ತದೆ.  ನೀವು ಗೂಗಲ್ ಅಡ್ಸೆನ್ಸ್, ಅಫಿಲಿಯೇಟ್ ಮಾರ್ಕೆಟಿಂಗ್, ಪ್ರಾಯೋಜಕತ್ವ, ಸೇವೆಗಳ  ಮಾರಾಟ, ಮರ್ಚಂಡೈಸ್ ಮಾರಾಟ, ಸದಸ್ಯತ್ವದ ಮಾರಾಟ, ಬ್ರಾಂಡ್ ಪಾರ್ಟನರ್ ಶಿಪ್ ಸೇರಿದಂತೆ ನಾನಾ ವಿಧಗಳಿಂದ ಹಣ ಸಂಪಾದನೆ ಮಾಡಬಹುದು. 

ಗಳಿಕೆ ಹೆಚ್ಚಾಗಲು ಹೀಗೆ ಮಾಡಿ :  ನೀವು ಚಾನೆಲ್ ಓಪನ್ ಮಾಡುವ ಮೊದಲು ಅದ್ರಲ್ಲಿ ಯಾವೆಲ್ಲ ವಿಷ್ಯ ಇರಬೇಕು ಎಂಬುದನ್ನು ನಿರ್ಧರಿಸಿರಬೇಕು. ಕ್ವಾಲಿಟಿಗೆ ಮಹತ್ವ ನೀಡಬೇಕು. ಯಾವುದೇ ವಿಡಿಯೋವನ್ನು ನಕಲು ಮಾಡದೆ, ನಿಯಮಿತವಾಗಿ ವಿಡಿಯೋ ಹಾಕ್ಬೇಕು. ನೀವು ಯಾವ ಹ್ಯಾಶ್ಟ್ಯಾಕ್ ಹಾಕ್ತೀರಿ ಎಂಬುದು ಇಲ್ಲಿ ಮುಖ್ಯವಾಗುತ್ತದೆ. ಗೇಮಿಂಗ್, ಕಾಮಿಡಿ, ಆರೋಗ್ಯ, ಫಿಟ್ನೆಸ್, ಸಲಹೆಗಳು ಮತ್ತು ಟೆಕ್ನಿಕ್ಸ್, ಮೋಟಿವೇಶನ್ ವಿಡಿಯೋ, ಹಣಕಾಸಿಗೆ ಸಂಬಂಧಿಸಿದ ವಿಡಿಯೋಗಳು ಹೆಚ್ಚು ವೀವ್ಸ್ ಪಡೆಯುತ್ತವೆ. 

ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಟೆಕ್ ಉದ್ಯೋಗಿ, ದಿನಕ್ಕೆ ಭರ್ತಿ 5 ಕೋಟಿ ಗಳಿಸೋಕೆ ಕಾರಣವಾಗಿದ್ದೇ ಹೆಂಡ್ತಿ!

ಯುಟ್ಯೂಬ್ ಶಾರ್ಟ್ಸ್ (Shorts) ಯಾಕೆ ? : ನೀವು ಯುಟ್ಯೂಬ್ ನಲ್ಲಿ ವಿಡಿಯೋ ಹಾಕುವ ಬದಲು ಯುಟ್ಯೂಬ್ ಶಾರ್ಟ್ಸ್ ನಲ್ಲಿ ವಿಡಿಯೋ ಹಾಕೋದು ಸುಲಭ. ವಿಡಿಯೋ ಚಿಕ್ಕದಿರುವ ಕಾರಣ ಹೆಚ್ಚು ಸಮಯ ತೆಗೆದುಕೊಳ್ಳೋದಿಲ್ಲ. 
 

click me!