Business Ideas : ಮನೆಯಲ್ಲೇ ಕುಳಿತು ಶೂನ್ಯ ಬಂಡವಾಳದಲ್ಲಿ ಈ ಕೆಲಸ ಶುರು ಮಾಡಿ

By Suvarna News  |  First Published Feb 10, 2023, 11:53 AM IST

ವ್ಯಾಪಾರ ಶುರು ಮಾಡ್ಬೇಕು ಅಂದಾಗ ಬಂಡವಾಳದ ಬಗ್ಗೆ ಚಿಂತೆಯಾಗುತ್ತದೆ. ಹಣ ಎಲ್ಲಿಂದ ಹೊಂದಿಸೋದು, ನಷ್ಟವಾದ್ರೆ ಎಂಬೆಲ್ಲ ಪ್ರಶ್ನೆ ಬರುತ್ತದೆ. ಆದ್ರೆ ಈಗಿನ ದಿನಗಳಲ್ಲಿ ಕೆಲ ಅಪ್ಲಿಕೇಷನ್ ಗಳು ಬಂಡವಾಳವಿಲ್ಲದೆ ಕೆಲಸ ನೀಡ್ತಿವೆ. ತಿಂಗಳಿಗೆ 20 ಸಾವಿರಕ್ಕಿಂತ ಹೆಚ್ಚು ಆದಾಯ ಗಳಿಸುವ ಅವಕಾಶ ಕಲ್ಪಿಸಿಕೊಟ್ಟಿವೆ.
 


ತುಂಬಾ ತಲೆ ಕೆಡಿಸಿಕೊಂಡು ಕೆಲಸ ಹುಡುಕಬೇಕಾಗಿಲ್ಲ. ಕೆಲ ಇ – ಕಾಮರ್ಸ್ ಕಂಪನಿಗಳು ಮನೆಯಲ್ಲಿಯೇ ಕುಳಿತುಕೊಂಡು ಕೆಲಸ ಮಾಡಿ ಹಣ ಗಳಿಸುವ ಅವಕಾಶ ನೀಡ್ತಿವೆ. ಅದ್ರಲ್ಲಿ ಮೀಶೋ ಅಪ್ಲಿಕೇಶನ್ ಕೂಡ ಒಂದು. ಅನೇಕರು ಮೀಶೋ ಜೊತೆ ಕೈ ಜೋಡಿಸಿ ಈಗಾಗಲೇ ಸಾಕಷ್ಟು ಹಣ ಗಳಿಸ್ತಿದ್ದಾರೆ. ನಿಮಗೆ ಇನ್ನೂ ಈ ಅಪ್ಲಿಕೇಷನ್ ಮೂಲಕ ಹಣ ಗಳಿಸುವ ವಿಧಾನ ತಿಳಿದಿಲ್ಲವೆಂದ್ರೆ ಈಗ ನಾವು ಹೇಳ್ತಿವಿ ಓದಿ.

ಮೀಶೋ (Meesho) ದಲ್ಲಿ ವ್ಯವಹಾರ (Business) ಶುರು ಮಾಡಲು ಯಾವುದೇ ಬಂಡವಾಳದ ಅವಶ್ಯಕತೆಯಿಲ್ಲ. ಶೂನ್ಯ ಬಂಡವಾಳದಲ್ಲಿ ನೀವು ಕೆಲಸ ಶುರು ಮಾಡಬಹುದು. ಮೀಶೋ ಅಪ್ಲಿಕೇಷನ್ (Application) : ಮೀಶೋ ಆನ್‌ಲೈನ್ ಮರುಮಾರಾಟ ವೇದಿಕೆಯಾಗಿದೆ. ಇದು ಇ-ಕಾಮರ್ಸ್ ವ್ಯವಹಾರದ ಭಾಗವಾಗಿದೆ. ಇದು ಆನ್‌ಲೈನ್ ಸ್ಟೋರ್‌ನಂತೆ ಕಾರ್ಯನಿರ್ವಹಿಸುತ್ತದೆ. ಮಿಶೋ ಅಪ್ಲಿಕೇಷನ್ ವಿಶ್ವಾಸರ್ಹ ಅಪ್ಲಿಕೇಷನ್ ಆಗಿದ್ದು, ಅದ್ರಲ್ಲಿ ಸಿಗುವ ಉತ್ಪನ್ನಗಳು ಉತ್ತಮ ಗುಣಮಟ್ಟದ್ದಾಗಿದೆ. ಹಾಗಾಗಿ ಯಾವುದೇ ಭಯವಿಲ್ಲದೆ ನೀವು ಈ ಕಂಪನಿ ಜೊತೆ ಸೇರಿ ಕೆಲಸ ಶುರು ಮಾಡಬಹುದು. 

Tap to resize

Latest Videos

ಮೀಶೋದಲ್ಲಿ ನಿಮ್ಮ ಖಾತೆ ತೆರೆಯೋದು ಹೇಗೆ? : ಮೊದಲು ನಿಮ್ಮ ಮೊಬೈಲ್ ಪ್ಲೇ ಸ್ಟೋರ್ ನಲ್ಲಿ ಮೀಶೋ ಅಪ್ಲಿಕೇಷನ್ ಡೌನ್ಲೋಡ್ ಮಾಡಿಕೊಳ್ಳಬೇಕು. ಅಪ್ಲಿಕೇಶನ್ ತೆರೆದ ನಂತ್ರ ಮೊಬೈಲ್ ಸಂಖ್ಯೆಯನ್ನು ನಮೂದಿಸುವ ಮೂಲಕ OTP ಪರಿಶೀಲಿಸಿ. ನಿಮ್ಮ ಆದ್ಯತೆಯ ಭಾಷೆ ಆಯ್ಕೆ ಮಾಡಿ. ಅಲ್ಲಿ ವೈಯಕ್ತಿಕ ವಿವರ ನಮೂದಿಸಿ. ಲಾಗಿನ್ ಆದ್ಮೇಲೆ ನೀವು ನಿಮ್ಮ ಖಾತೆ ಮೇಲೆ ಕ್ಲಿಕ್ ಮಾಡಿ, ಪ್ರೊಫೈಲ್ ಎಡಿಟ್ ಮಾಡಿ. ಅಲ್ಲಿ ಕೇಳಲಾದ ಎಲ್ಲ ವಿವರವನ್ನು ಭರ್ತಿ ಮಾಡಿ. ಇದಾದ್ಮೇಲೆ ನಿಮ್ಮ ಬ್ಯಾಂಕ್ ಖಾತೆ ಮೇಲೆ ಕ್ಲಿಕ್ ಮಾಡಿ, ಅಲ್ಲಿ ಕೇಳಲಾದ ವಿವರಗಳನ್ನು ನಮೂದಿಸಿ. 

Business Ideas : ಬೇಡಿಕೆ ಕಡಿಮೆಯಾಗದ ಈ ಮಳಿಗೆ ಗಳಿಕೆಗೆ ಬೆಸ್ಟ್

ಮೀಶೋ ಮೂಲಕ ಹಣ ಗಳಿಕೆ ಹೇಗೆ? : ಮೀಶೋದಲ್ಲಿ ನೀವು ಮೂರ್ನಾಲ್ಕು ರೀತಿಯಲ್ಲಿ ಗಳಿಕೆ ಮಾಡಬಹುದು. ಮೊದಲನೇಯದಾಗಿ ನೀವು ಮರು ಮಾರಾಟಗಾರರಾಗಿ ಗಳಿಸಬಹುದು.  ಮೀಶೋದಲ್ಲಿರುವ ವಸ್ತುವನ್ನು ನೀವು ಮಾರಾಟ ಮಾಡಬೇಕಾಗುತ್ತದೆ. ಕ್ಯಾಟಲಾಗ್ ಪೋಸ್ಟ್ ಮಾಡಿ ಆರ್ಡರ್ ಪಡೆಯಬೇಕು. ಮೀಶೋ ನಿಮಗೆ ಮಾರ್ಜಿನ್ ಅವಕಾಶ ನೀಡಿದೆ. ಮೀಶೋ ನೀಡಿರುವ ಬೆಲೆಗಿಂತ ಹೆಚ್ಚಿನ ಬೆಲೆಗೆ ನೀವು ನಿಮ್ಮ ಗ್ರಾಹಕರಿಗೆ ವಸ್ತು ಮಾರಾಟ ಮಾಡಬಹುದು. ಮೀಶೋ ವಸ್ತುವನ್ನು ನೀವು ಹೇಳಿದ ವಿಳಾಸಕ್ಕೆ ತಲುಪಿಸುತ್ತದೆ. ನಿಮ್ಮ ಮಾರ್ಜಿನ್ ಹಣವನ್ನು ನಿಮ್ಮ ಖಾತೆಗೆ ಪಾವತಿ ಮಾಡುತ್ತದೆ. 
ಇನ್ನೊಂದು ವಿಧಾನವೆಂದ್ರೆ ಸ್ವಂತ ಮಾರಾಟಗಾರರಾಗುವುದು. ನೀವು ಯಾವುದೇ ವಸ್ತುವನ್ನು ತಯಾರಿಸುತ್ತಿದ್ದರೆ ಅಥವಾ ಈಗಾಗಲೇ ಮಾರಾಟ ಮಾಡುತ್ತಿದ್ದರೆ ಮೀಶೋದಲ್ಲಿ ನಿಮ್ಮ ಅಂಗಡಿ ತೆರೆಯಬಹುದು. ಆರ್ಡರ್ ಬರ್ತಿದ್ದಂತೆ ನೀವು ಆ ವಸ್ತುವನ್ನು ಗ್ರಾಹಕರಿಗೆ ನೀಡಬೇಕು. ಮತ್ತೊಂದು ವಿಧಾನವೆಂದ್ರೆ ರೆಫರ್ ಆಂಡ್ ಅರ್ನ್. ಇದ್ರಲ್ಲಿ ನೀವು ನಿಮ್ಮ ಸ್ನೇಹಿತರು ಅಥವಾ ಸಂಬಂಧಿಕರಿಗೆ ಮೀಶೋ ಅಪ್ಲಿಕೇಷನ್ ಬಳಸುವಂತೆ ರೆಫರ್ ಕೋಡ್ ಕಳುಹಿಸಬಹುದು. ಅವರು ಅಪ್ಲಿಕೇಷನ್ ಡೌನ್ಲೋಡ್ ಮಾಡಿ, ಅದ್ರಲ್ಲಿ ವಸ್ತುಗಳನ್ನು ಆರ್ಡರ್ ಮಾಡಿದ್ರೆ ಒಂದು ಆರ್ಡರ್ ಗೆ ಇಷ್ಟು ಹಣದಂತೆ ನಿಮಗೆ ಮಾರ್ಜಿನ್ ಸಿಗುತ್ತದೆ.

ಮೀಶೋ ಅಪ್ಲಿಕೇಷನ್ ಬಳಕೆಗೆ ವೆಚ್ಚ : ಈ ಅಪ್ಲಿಕೇಷನ್ ಬಳಕೆಗೆ ನೀವು ಹಣ ಪಾವತಿ ಮಾಡುವಂತಿಲ್ಲ. ಇದನ್ನು ಉಚಿತವಾಗಿ ಡೌನ್ಲೋಡ್ ಮಾಡಿಕೊಳ್ಳುವ ಮೂಲಕ ನೀವು ಹಣ ಗಳಿಸಬಹುದು. ಪ್ರತಿ ಬಾರಿ ನೀವು ಅಪ್ಲಿಕೇಷನ್ ಓಪನ್ ಮಾಡಿದಾಗ್ಲೂ ನಿಮಗೆ ಕಂಪನಿ ಪಾಯಿಂಟ್ ನೀಡುತ್ತದೆ. ಇದು ಖರೀದಿ ವೇಳೆ ನೆರವಿಗೆ ಬರುತ್ತದೆ. 

ಬ್ಯಾಂಕ್ ಖಾತೆ ತೆರೆಯಲು ವಿಡಿಯೋ ಕೆವೈಸಿ; ಯಾವೆಲ್ಲ ಬ್ಯಾಂಕ್ ಗಳಲ್ಲಿ ಲಭ್ಯ?

ಮೀಶೋ ಅಪ್ಲಿಕೇಷನ್ ಬಳಕೆಯಿಂದಾಗುವ ಗಳಿಕೆ : ಮೀಶೋ ಅಪ್ಲಿಕೇಷನ್ ಮೂಲಕ ನೀವು ಹೆಚ್ಚು ವಸ್ತುಗಳನ್ನು ಮಾರಾಟ ಮಾಡ್ತಿದ್ದರೆ ನಿಮ್ಮ ಗಳಿಕೆ ಹೆಚ್ಚಿರುತ್ತದೆ. ಈಗಾಗಲೇ ಮೀಶೋ ಮೂಲಕ ತಿಂಗಳಿಗೆ 15 – 30 ಸಾವಿರ ರೂಪಾಯಿ ಗಳಿಸುವವರಿದ್ದಾರೆ. 
 

click me!