ಈ ಸಂಡೇ ಫ್ಯಾಮಿಲಿ ಜೊತೆ ಹೊಟೇಲ್ ಹೊರಟ್ರಾ?: ಇದನ್ನೊಮ್ಮೆ ಓದಿ!

Published : Oct 13, 2018, 03:50 PM IST
ಈ ಸಂಡೇ ಫ್ಯಾಮಿಲಿ ಜೊತೆ ಹೊಟೇಲ್ ಹೊರಟ್ರಾ?: ಇದನ್ನೊಮ್ಮೆ ಓದಿ!

ಸಾರಾಂಶ

ಇನ್ನೂ ಬಗೆಹರಿದಿಲ್ಲ ಸರಕು ಮತ್ತು ಸೇವಾ ತೆರಿಗೆ ಗೊಂದಲ! ಹೋಟೆಲ್ ಉದ್ಯಮದ ಮೇಲೆ ಜಿಎಸ್‌ಟಿ ಪ್ರಭಾವ ಏನು?! ಹೋಟೆಲ್‌ಗಳಿಗೆ ಗರಿಷ್ಠ ಜಿಎಸ್‌ಟಿ ಮಿತಿ ಎಷ್ಟು?! ಜಿಎಸ್‌ಟಿ ನೆಪದಲ್ಲಿ ಹೋಟೆಲ್‌ಗಳು ಹೆಚ್ಚಿದ ಹಣ ಪೀಕುತ್ತಿವೆಯಾ?! ಜಿಎಸ್‌ಟಿ ಅರ್ಥವಾದರೆ ನಿಮ್ಮ ಹಣ ಸುಭದ್ರ 

ಬೆಂಗಳೂರು(ಅ.13): ಜಿಎಸ್‌ಟಿ ಜಾರಿಯಾದ ಮೇಲೆ ಹೊಸ ತೆರಿಗೆ ದರಗಳು ಹಾಗೂ ಸರಕು ಮತ್ತು ಸೇವೆಗಳ ಮೇಲೆ ಆಗುವ ಬದಲಾವಣೆಗಳ ಬಗ್ಗೆ ಸಾರ್ವಜನಿಕರಲ್ಲಿ ಗೊಂದಲ ಇನ್ನೂ ಮುಂದುವರೆದಿದೆ.  

ಈ ನಡುವೆ ಬಹಳಷ್ಟು ಉದ್ಯಮಗಳು ಜಿಎಸ್‌ಟಿಯ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸುತ್ತಿಲ್ಲ. ಸರ್ಕಾರದ ಸತತ ಎಚ್ಚರಿಕೆ ಬಳಿಕವೂ ಬಹಳಾರು ಉದ್ಯಮ ಸಂಸ್ಥೆಗಳು ತಮ್ಮ ಉತ್ಪನ್ನಗಳ ದರಗಳನ್ನು ಹೆಚ್ಚಿಸಿವೆ.

ರೆಸ್ಟೋರೆಂಟ್ ವಿಧಿಸುವ ತೆರಿಗೆಗಳು:

ಜಿಎಎಸ್‌ಟಿ-ಪೂರ್ವ ವ್ಯವಸ್ಥೆಯಲ್ಲಿ ರೆಸ್ಟೋರೆಂಟ್ ಬಿಲ್‌ಗಳು, ವ್ಯಾಟ್, ಸೇವಾ ತೆರಿಗೆ, ಸ್ವಚ್ಛ ಭಾರತ ಸೆಸ್, ಕೃಷಿ ಕಲ್ಯಾಣ ಸೆಸ್, ಹಾಗೂ ಸೇವಾ ಶುಲ್ಕಗಳನ್ನು (ಕೆಲವು ರೆಸ್ಟೋರೆಂಟ್‌ಗಳಲ್ಲಿ)  ಒಳಗೊಂಡಿರುತ್ತಿತ್ತು. ಗ್ರಾಹಕರು ಸೇವಿಸಿದ ಆಹಾರಕ್ಕೆ ವ್ಯಾಟ್ ಅನ್ವಯವಾಗುತ್ತಿದರೆ, ರೆಸ್ಟೋರೆಂಟ್ ಒದಗಿಸಿದ ಸೇವೆಗೆ ಸೇವಾ ಶುಲ್ಕ ವಿಧಿಸಲಾಗುತ್ತಿತ್ತು; ಸೇವಾಶುಲ್ಕಕ್ಕೂ ಸರ್ಕಾರಕ್ಕೂ ಏನೂ ಸಂಬಂಧವಿರಲಿಲ್ಲಟ್

ಹೋಟೆಲ್‌ಗಳಿಗೆ ಶೇ.5ರಿಂದ ಶೆ.18ರವರೆಗೆ ಜಿಎಸ್‌ಟಿ ದರಗಳು ಅನ್ವಯವಾಗುತ್ತದೆ. ಇಲ್ಲಿ  ಸಣ್ಣ ಹೋಟೆಲ್‌ಗಳಿಗೆ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ಸೌಲಭ್ಯವಿರುವುದಿಲ್ಲ. ಇತರ ಹೋಟೆಲ್‌ಗಳಿಗೆ ಅದು ಅನ್ವಯವಾಗುತ್ತದೆ. 

ಹಿಂದಿನ ವ್ಯವಸ್ಥೆಗೆ ಹೋಲಿಸಿದಾಗ ಹೊಸ ವ್ಯವಸ್ಥೆಯಲ್ಲಿ ಗ್ರಾಹಕರ ಮೇಲೆ ಕಡಿಮೆ ಹೊರೆ ಬೀಳುವುದು ಸ್ಪಷ್ಟವಾಗುತ್ತದೆ. ಆದರೆ, ನೀವು ಇದನ್ನೇ ಅಂತಿಮ ಮೊತ್ತವೆಂದು ಭಾವಿಸಿ ಪಾವತಿಸುವ ಮುನ್ನ ಯೋಚಿಸಬೇಕು.

ಹಳೇ ವ್ಯವಸ್ಥೆಯಲ್ಲಿ ಹೋಟೆಲ್‌ಗಳು ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್‌ನ್ನು ಕೇವಲ ವ್ಯಾಟ್ ಮೇಲೆಯೇ ವಿಧಿಸಬೇಕಿತ್ತು. ಆದರೆ ಜಿಎಸ್‌ಟಿಯಲ್ಲಿ ಸಂಪೂರ್ಣ ತೆರಿಗೆ ಮೊತ್ತದ ಮೇಲೆ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್‌ನ್ನು ಪಡೆಯಬಹುದಾಗಿದೆ.  ಎಣ್ಣೆ, ತುಪ್ಪ, ಬೆಣ್ಣೆ, ಸಕ್ಕರೆ ಮುಂತಾದ ವಸ್ತುಗಳ ಮೇಲೆ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ನ್ನು ಹಾಕಿ, ಆಹಾರ ವಸ್ತುಗಳ ಬೆಲೆಗಳನ್ನು ಇಳಿಸಬಹುದಾಗಿದೆ. ಆ ಮೂಲಕ ಗ್ರಾಹಕರಿಗೆ ಜಿಎಸ್‌ಟಿ ಲಾಭವನ್ನು ವರ್ಗಾಯಿಸಬಹುದಾಗಿದೆ.

ಮದ್ಯ:
ಮದ್ಯವನ್ನು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿಡಲಾಗಿದೆ.  ಆದ್ದರಿಂದ ಅದಕ್ಕೆ ಆಯಾಯ ರಾಜ್ಯದ ವ್ಯಾಟ್ ತೆರಿಗೆ ಅನ್ವಯಿಸುತ್ತದೆ. ಒಂದೇ ಹೋಟೆಲ್‌ನಲ್ಲಿ  ಆಹಾರ ಹಾಗೂ ಮದ್ಯವನ್ನು ಸೇವಿಸಿದಲ್ಲಿ, ಹೋಟೆಲ್‌ಗಳು  ತಿಂಡಿ-ತಿನಿಸುಗಳಿಗೆ ಜಿಎಸ್‌ಟಿ ಹಾಗೂ ಮದ್ಯಕ್ಕೆ ವ್ಯಾಟ್ ವಿಧಿಸಿ ಪ್ರತ್ಯೇಕ ಬಿಲ್‌ನ್ನು ನೀಡಬೇಕು.

ಜಿಎಸ್‌ಟಿ ನೆಪ ಮುಂದಿಟ್ಟುಕೊಂಡು ಕೆಲವು ಹೋಟೆಲ್‌ಗಳು ತಿಂಡಿಗಳ ದರವನ್ನು ಹೆಚ್ಚಿಸಿವೆ, ಆದರೆ ವಾಸ್ತವದಲ್ಲಿ, ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ವ್ಯವಸ್ಥೆಯಿಂದ ದರಗಳು ಇನ್ನೂ ಕಡಿಮೆಯಾಗಬೇಕು.

ಗ್ರಾಹಕರು ಒಂದು ಮುಖ್ಯ ಅಂಶವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು, ಹೋಟೆಲ್‌ಗಳಿಗೆ ಗರಿಷ್ಠ ಜಿಎಸ್‌ಟಿ ಮಿತಿ  ಶೇ.18 ಮಾತ್ರ.  ಒಂದು ವೇಳೆ ಯಾವುದೇ ಹೋಟೆಲ್‌ನವರು ಅದಕ್ಕಿಂತ ಹೆಚ್ಚು ತೆರಿಗೆಯನ್ನು ವಿಧಿಸಿದ್ದಾರೆ ಎಂದಾದಲ್ಲಿ ಗ್ರಾಹಕರು ದೂರನ್ನು ಸಲ್ಲಿಸಬಹುದಾಗಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

Share Market: ರಿಲಯನ್ಸ್ ಷೇರಿನ ಹೆಸರಲ್ಲಿ ಬೆಂಗಳೂರು ಉದ್ಯಮಿಗೆ ₹8 ಕೋಟಿ ವಂಚನೆ!
ರುಪಾಯಿ ಮೌಲ್ಯ ಕುಸಿತದ ಎಫೆಕ್ಟ್‌: ಹೊಸ ವರ್ಷಕ್ಕೆ ದೇಶವಾಸಿಗಳಿಗೆ ಸಿಗಲಿದೆ ಶಾಕ್!