ದೇಶದಲ್ಲಿ ಪೇಟಿಎಂ ಅಪ್ಲಿಕೇಷನ್ ಬಳಕೆ ಮಾಡುವ ಜನರ ಸಂಖ್ಯೆ ದೊಡ್ಡದಿದೆ. ಆದರೆ, ಕೆಲವರಿಗೆ ಪೇಟಿಎಂ ವ್ಯಾಲೆಟ್ ಬ್ಯಾಲೆನ್ಸ್ ಚೆಕ್ ಮಾಡೋದು ಹೇಗೆ ಎಂಬುದು ತಿಳಿದಿಲ್ಲ. ಎರಡು ಸರಳ ವಿಧಾನಗಳ ಮೂಲಕ ಪೇಟಿಎಂ ವ್ಯಾಲೆಟ್ ಬ್ಯಾಲೆನ್ಸ್ ಚೆಕ್ ಮಾಡಬಹುದು.
Business Desk:ಆನ್ ಲೈನ್ ಪಾವತಿ ವ್ಯವಸ್ಥೆ ಭಾರತದಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದೆ. ಮಾಲ್, ಸೂಪರ್ ಮಾರ್ಕೆಟ್, ಶಾಪ್ ಗಳು ಬಿಡಿ, ಬೀದಿ ವ್ಯಾಪಾರಿಗಳು ಕೂಡ ಇಂದು ಪೇಟಿಎಂ, ಗೂಗಲ್ ಪೇಯಂತಹ ಪಾವತಿ ವ್ಯವಸ್ಥೆಯನ್ನು ಬಳಸುತ್ತಿದ್ದಾರೆ. ಇನ್ನು ಪೇಟಿಎಂ ವಿಷಯಕ್ಕೆ ಬರೋದಾದ್ರೆ ನಮ್ಮಲ್ಲಿ ಬಹುತೇಕರು ಹಣ ವರ್ಗಾವಣೆಗೆ ಈ ಅಪ್ಲಿಕೇಷನ್ ಬಳಸುತ್ತೇವೆ. ಒನ್ 97 ಕಮ್ಯೂನಿಕೇಷನ್ಸ್ ಪೇಟಿಎಂ ಮಾಲೀಕತ್ವ ಹೊಂದಿದೆ. ಪೇಟಿಎಂ ವ್ಯಾಲೆಟ್ ಮುಖಾಂತರ ನೀವು ಹಣವನ್ನು ಇನ್ನೊಬ್ಬರ ಖಾತೆಗೆ ಡಿಜಿಟಲ್ ವರ್ಗಾವಣೆ ಮಾಡಬಹುದು. ಪೇಟಿಎಂ ವ್ಯಾಲೆಟ್ ಮುಖಾಂತರ ನೀವು ಆನ್ ಲೈನ್ ಹಾಗೂ ಆಪ್ ಲೈನ್ ವಹಿವಾಟುಗಳನ್ನು ನಡೆಸಬಹುದಾಗಿದೆ. ಗಿಫ್ಟ್ ವೋಚರ್ ಗಳನ್ನು ಕಳುಹಿಸಬಹುದು, ಹಣ ವರ್ಗಾವಣೆ ಕೂಡ ಮಾಡಬಹುದು. ಹೀಗಿರುವಾಗ ಕೆಲವೊಮ್ಮೆ ಪೇಟಿಎಂ ವ್ಯಾಲೆಟ್ ನಲ್ಲಿ ಬ್ಯಾಲೆನ್ಸ್ ಇಲ್ಲದೆ ಪಾವತಿ ಮಾಡಲು ಸಾಧ್ಯವಾಗದೆ ಪೇಚಿಗೆ ಸಿಲುಕುವುದು ಇರುತ್ತದೆ. ಹಾಗಾದ್ರೆ ಪೇಟಿಎಂ ವ್ಯಾಲೆಟ್ ಬ್ಯಾಲೆನ್ಸ್ ಚೆಕ್ ಮಾಡೋದು ಹೇಗೆ? ವೆಬ್ ಸೈಟ್ ನಲ್ಲಿ ಹಂತ ಹಂತವಾಗಿ ಪೇಟಿಎಂ ವ್ಯಾಲೆಟ್ ಬ್ಯಾಲೆನ್ಸ್ ಚೆಕ್ ಮಾಡೋದು ಹೇಗೆ? ಇಲ್ಲಿದೆ ಮಾಹಿತಿ.
ಪೇಟಿಎಂ ವ್ಯಾಲೆಟ್ ಬ್ಯಾಲೆನ್ಸ್ ಚೆಕ್
ಪೇಟಿಎಂ ವ್ಯಾಲೆಟ್ ಬ್ಯಾಲೆನ್ಸ್ ಅನ್ನು ಎರಡು ಸರಳ ವಿಧಾನಗಳ ಮೂಲಕ ಚೆಕ್ ಮಾಡಬಹುದು. ಒಂದು ಪೇಟಿಎಂ ವೆಬ್ ಸೈಟ್ ಮೂಲಕ ಹಾಗೂ ಇನ್ನೊಂದು ನೇರವಾಗಿ ಪೇಟಿಎಂ ವ್ಯಾಲೆಟ್ ಮುಖಾಂತರ.
ಪೇಟಿಎಂ ವೆಬ್ ಸೈಟ್ ಮೂಲಕ ಹೇಗೆ?
ಹಂತ 1: ಪೇಟಿಎಂ ಅಧಿಕೃತ ವೆಬ್ ಸೈಟ್ ತೆರೆಯಿರಿ.
ಹಂತ 2: ನಿಮ್ಮ ಪೇಟಿಎಂ ಅಪ್ಲಿಕೇಷನ್ ಸ್ಕ್ಯಾನರ್ ಮುಖಾಂತರ ವೆಬ್ ಸೈಟ್ ಗೆ ಸೈನ್ ಇನ್ ಆಗಿ.
ಹಂತ 3: ನಿಮ್ಮ ಪ್ರೊಫೈಲ್ ಫೋಟೋ ಮೇಲೆ ಕರ್ಸರ್ ಇಡಿ. ಆಗ ವೆಬ್ ಸೈಟ್ ನಲ್ಲಿ ವ್ಯಾಲೆಟ್ ಬ್ಯಾಲೆನ್ಸ್ ಕಾಣಿಸುತ್ತದೆ. ಹಾಗೆಯೇ ನಿಮ್ಮ ವ್ಯಾಲೆಟ್ ಪ್ರೊಫೈಲ್, ಆರ್ಡರ್ ಗಳು, ವ್ಯಾಲೆಟ್ ವಹಿವಾಟಿನ ಸಾರಾಂಶ ಇತ್ಯಾದಿ ಮಾಹಿತಿ ಕೂಡ ಕಾಣಿಸುತ್ತದೆ.
ಸರ್ಕಾರಿ ಉದ್ಯೋಗಿಗಳೇ ಗಮನಿಸಿ, ಜ.1ರಿಂದ ಎನ್ ಪಿಎಸ್ ನಿಯಮದಲ್ಲಿ ಬದಲಾವಣೆ
ಪೇಟಿಎಂ ವ್ಯಾಲೆಟ್ ನಿಂದ ನೇರವಾಗಿ ತೆರೆಯೋದು ಹೇಗೆ?
ಹಂತ 1: ನಿಮ್ಮ ಮೊಬೈಲ್ ಫೋನ್ ನಲ್ಲಿ ಪೇಟಿಎಂ ಅಪ್ಲಿಕೇಷನ್ ತೆರೆಯಿರಿ.
ಹಂತ 2 :‘Paytm wallet’ ಆಯ್ಕೆ ಮಾಡಿ.
ಹಂತ 3: ಕೊನೆಯದಾಗಿ ವ್ಯಾಲೆಟ್ ನಲ್ಲಿ ಎಷ್ಟು ಬ್ಯಾಲೆನ್ಸ್ ಇದೆ ಎಂಬುದು ಸ್ಕ್ರೀನ್ ನಲ್ಲಿ ಕಾಣಿಸುತ್ತದೆ.
ಪೇಟಿಎಂನಿಂದ ಆದಾಯ
ಮೊದಲು ಕೇವಲ ಹಣ ವರ್ಗಾವಣೆ ದೃಷ್ಟಿಯಿಂದ ಪೇಟಿಎಂ ಶುರು ಮಾಡಲಾಗಿತ್ತು. ಈಗ ಪೇಟಿಎಂ ಅನೇಕ ಸೌಲಭ್ಯವನ್ನು ಗ್ರಾಹಕರಿಗೆ ನೀಡ್ತಿದೆ. ಉಳಿತಾಯ ಖಾತೆಯನ್ನು ಕೂಡ ನೀವು ತೆರೆಯಬಹುದು. ಆನ್ಲೈನ್ ಶಾಪಿಂಗ್ ಗೆ ಇದನ್ನು ಬಳಸಬಹುದು. ಹಾಗೆಯೇ ಇದ್ರಿಂದ ಆದಾಯ ಗಳಿಸಬಹುದು. ನೀವು ಮನೆಯಲ್ಲಿಯೇ ಕುಳಿತು ಆನ್‌ಲೈನ್ (Online) ಮೂಲಕ ಪೇಟಿಎಂನಿಂದ ಹಣ ಸಂಪಾದಿಸಬಹುದು. ಇದಕ್ಕಾಗಿ ಪೇಟಿಎಂ ಹಲವು ಮಾರ್ಗಗಳನ್ನು ನೀಡುತ್ತದೆ. ಪೇಟಿಎಂ ಕ್ಯಾಶ್‌ಬ್ಯಾಕ್ (Paytm Cash Back), ಪ್ರೋಮೋಕೋಡ್ (Promo Code), ಗೇಮ್ಸ್ (Games), ಅಂಗಸಂಸ್ಥೆ ಮಾರ್ಕೆಟಿಂಗ್ (Marketing) ಸೇರಿದಂತೆ ಅನೇಕ ವಿಧಾನಗಳಿಂದ ನೀವು ಹಣ ಸಂಪಾದನೆ ಮಾಡಬಹುದು.
ಅಂಚೆ ಕಚೇರಿ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ಸಿಗುತ್ತೆ ಬ್ಯಾಂಕ್ ಎಫ್ ಡಿಗಿಂತ ಅಧಿಕ ಬಡ್ಡಿ!
ಕೆವೈಸಿ ಅಗತ್ಯವೇ?
ಪೇಟಿಎಂ ಕೆವೈಸಿ (KYC) ಮಾಡೋದು ಮುಖ್ಯ. ಆದರೆ, ಇದು ಕಡ್ಡಾಯವೇನಲ್ಲ. ನೀವು ಕೆವೈಸಿ ಮಾಡಿರದಿದ್ರೂ ಇತರ ಬ್ಯಾಂಕ್ ಖಾತೆಗಳಂತೆ ಪೇಟಿಎಂ ಖಾತೆಗಳನ್ನು ಬಳಸಬಹುದು. ಆದರೆ, ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಸೇರಿದಂತೆ ಮುಂದುವರಿದ ಪೇಟಿಎಂ ಸೇವೆಗಳನ್ನು ಬಳಸಲು ಸಾಧ್ಯವಾಗೋದಿಲ್ಲ.