ಎಸ್ ಬಿಐ ಖಾತೆಯ ಶಾಖೆ ಬದಲಾವಣೆಗೆ ಬ್ಯಾಂಕ್ ಗೆ ಭೇಟಿ ನೀಡಬೇಕಾಗಿಲ್ಲ, ಆನ್ ಲೈನ್ ನಲ್ಲೇ ಮಾಡ್ಬಹುದು!

By Suvarna News  |  First Published Nov 22, 2022, 6:15 PM IST

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇಂದು ಅನೇಕ ಸೇವೆಗಳನ್ನು ಆನ್ ಲೈನ್ ಮೂಲಕವೇ ಒದಗಿಸುತ್ತಿದೆ. ಈಗ ಬ್ಯಾಂಕ್ ಖಾತೆಯ ಶಾಖೆ ಬದಲಾವಣೆಯನ್ನು ಕೂಡ ಆನ್ ಲೈನ್ ಬ್ಯಾಂಕಿಂಗ್ ಸೇವೆಗಳ ಮೂಲಕ ಮನೆಯಿಂದಲೇ ಮಾಡಬಹುದು. ಅದು ಹೇಗೆ? ಇಲ್ಲಿದೆ ಮಾಹಿತಿ. 
 


ನವದೆಹಲಿ (ನ.22): ಭಾರತದ ಸಾರ್ವಜನಿಕ ವಲಯದ ಅತೀ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ತನ್ನ ಗ್ರಾಹಕರಿಗೆ ಸರಳ ಹಾಗೂ ಅಡಚಣೆರಹಿತ ಹಣಕಾಸಿನ ವಹಿವಾಟಿಗೆ ಹಲವಾರು ಆನ್ ಲೈನ್  ಸೇವೆಗಳನ್ನು ಒದಗಿಸಿದೆ. ನೀವು ಕೂಡ ಎಸ್ ಬಿಐಯಲ್ಲಿ ಉಳಿತಾಯ ಖಾತೆ ಹೊಂದಿದ್ದು, ಶಾಖೆ ಬದಲಾಯಿಸಲು ಬಯಸಿದ್ರೆ ಎಸ್ ಬಿಐ ಆನ್ ಲೈನ್ ಬ್ಯಾಂಕಿಂಗ್ ಸೇವೆಗಳ ಮೂಲಕ ಮನೆಯಿಂದಲೇ ಈ ಕೆಲಸ ಮಾಡಿ ಮುಗಿಸಬಹುದು. ಬ್ಯಾಂಕಿಗೆ ಭೇಟಿ ನೀಡಬೇಕಾದ ಅಗತ್ಯವಿಲ್ಲ. ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಖಾತೆಯನ್ನು ಇನ್ನೊಂದು ಶಾಖೆಗೆ ಬದಲಾಯಿಸಲು ನಿಮಗೆ ಆ ಶಾಖೆಯ ಕೋಡ್ ಗೊತ್ತಿರೋದು ಅಗತ್ಯ. ಹಾಗೆಯೇ ಬ್ಯಾಂಕಿನಲ್ಲಿ ನಿಮ್ಮ ಮೊಬೈಲ್ ಸಂಖ್ಯೆ ನೋಂದಣಿ ಆಗಿರೋದು ಅಗತ್ಯ. ಆನ್ ಲೈನ್  ಮೂಲಕವೇ ಬ್ಯಾಂಕ್ ಶಾಖೆ ಬದಲಾವಣೆ ಮಾಡೋದ್ರಿಂದ ಬ್ಯಾಂಕಿಗೆ ಓಡಾಟ ನಡೆಸಬೇಕಾದ ಅಗತ್ಯವಿಲ್ಲ. ಹಿರಿಯ ನಾಗರಿಕರಿಗಂತೂ ಈ ಸೌಲಭ್ಯ ಸಾಕಷ್ಟು ಪ್ರಯೋಜನಕಾರಿಯಾಗಿದೆ. ಆನ್ ಲೈನ್ ನಲ್ಲಿ ಸುಲಭವಾಗಿ ಬ್ಯಾಂಕ್ ಶಾಖೆ ಬದಲಾವಣೆ ಮಾಡಲು ಸಾಧ್ಯವಿರುವ ಕಾರಣ ಸಮಯ ಹಾಗೂ ಶ್ರಮ ಎರಡೂ ಉಳಿತಾಯವಾಗುತ್ತದೆ.

ಆನ್ ಲೈನ್ ನಲ್ಲಿ ಎಸ್ ಬಿಐ ಶಾಖೆ ಬದಲಾಯಿಸೋದು ಹೇಗೆ?
ಹಂತ1: ಎಸ್ ಬಿಐ ಅಧಿಕೃತ ವೆಬ್ ಸೈಟ್ onlinesbi.com.ಭೇಟಿ ನೀಡಿ.
ಹಂತ 2: 'Personal Banking'ಆಯ್ಕೆ ಮೇಲೆ ಕ್ಲಿಕ್ ಮಾಡಿ.
ಹಂತ 3: ಬಳಕೆದಾರರ ಹೆಸರು ಹಾಗೂ ಪಾಸ್ ವರ್ಡ್ ಮೇಲೆ ಕ್ಲಿಕ್ ಮಾಡಿ.
ಹಂತ 4: ಇದಾದ ಬಳಿಕ e-service ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
ಹಂತ 5: ಉಳಿತಾಯ ಖಾತೆ ವರ್ಗಾವಣೆ ಮೇಲೆ ಕ್ಲಿಕ್ ಮಾಡಿ.
ಹಂತ 6: ನೀವು ವರ್ಗಾವಣೆ ಮಾಡಲು ಬಯಸುವ ಖಾತೆಯನ್ನು ಆಯ್ಕೆ ಮಾಡಿ.
ಹಂತ 7: ನೀವು ಖಾತೆಯನ್ನು ವರ್ಗಾವಣೆ ಮಾಡಲು ಬಯಸುವ ಶಾಖೆಯ ಐಎಫ್ ಎಸ್ ಸಿ ಕೋಡ್ ಆಯ್ಕೆ ಮಾಡಿ.
ಹಂತ 8: ಒಮ್ಮೆಗೆ ಎಲ್ಲವನ್ನೂ ಚೆಕ್ ಮಾಡಿ ಹಾಗೂ  Confirm ಬಟನ್ ಮೇಲೆ ಕ್ಲಿಕ್ ಮಾಡಿ.
ಹಂತ 9: ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ. ಇದನ್ನು ನಮೂದಿಸಿ Confirm ಒತ್ತಿ.
ಹಂತ 10: ಕೆಲವು ದಿನಗಳ ಬಳಿಕ ನಿಮ್ಮ ಖಾತೆಯನ್ನು ನೀವು ಮನವಿ ಮಾಡಿರುವ ಶಾಖೆಗೆ ವರ್ಗಾವಣೆ ಮಾಡಲಾಗುತ್ತದೆ. 

Tap to resize

Latest Videos

ಈಗ ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡೋದು ತುಂಬಾ ಸುಲಭ, ಆಧಾರ್ ಕಾರ್ಡ್ ಇದ್ರೆ ಸಾಕು, ಅದು ಹೇಗೆ?

ಆನ್ ಲೈನ್ ಪ್ರಕ್ರಿಯೆ ಹೊರತಾಗಿ ಯೋನೋ ಅಪ್ಲಿಕೇಷನ್ ಅಥವಾ ಯೋನೋ ಲೈಟ್ ಮೂಲಕ ನೀವು ನಿಮ್ಮ ಶಾಖೆಯನ್ನು ಬದಲಾಯಿಸಬಹುದು. ಆದ್ರೆ ನೆನಪಿಡಿ, ನಿಮ್ಮ ಮೊಬೈಲ್ ಸಂಖ್ಯೆ ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಆಗಿರಬೇಕು. ಇಲ್ಲವಾದ್ರೆ ಒಟಿಪಿ ಇಲ್ಲದೆ ಖಾತೆಯನ್ನು ವರ್ಗಾವಣೆ ಮಾಡಲು ಸಾಧ್ಯವಾಗೋದಿಲ್ಲ. 
ಕೊರೋನಾ ಸಾಂಕ್ರಾಮಿಕ ಕಾಣಿಸಿಕೊಂಡ ಬಳಿಕ ಎಸ್ ಬಿಐ ಬಹುತೇಕ ಎಲ್ಲ ಸೇವೆಗಳನ್ನು ಆನ್ ಲೈನ್ ಮೂಲಕ ಒದಗಿಸುತ್ತಿದೆ. 

80-90 ರ ದಶಕದ ಮಕ್ಕಳ ಫೇವರೇಟ್ ರಸ್ನಾ ಜ್ಯೂಸ್ ಸಂಸ್ಥಾಪಕ ಇನ್ನಿಲ್ಲ...

ವಾಟ್ಸ್ ಆ್ಯಪ್  ಮೂಲಕ ಪಿಂಚಣಿ ಸ್ಲಿಪ್
ಎಸ್ ಬಿಐ ಹಿರಿಯ ನಾಗರಿಕರಿಗೆ ವಾಟ್ಸ್ ಆ್ಯಪ್  ಮೂಲಕ ಪಿಂಚಣಿ ಸ್ಲಿಪ್ ಪಡೆಯುವ ಸೇವೆ ಪ್ರಾರಂಭಿಸಿದೆ. ಇದು ಹಿರಿಯ ನಾಗರಿಕರಿಗೆ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ವೇತನ ಸ್ಲಿಪ್ ಪಡೆಯುವ ಕಷ್ಟವನ್ನು ತಪ್ಪಿಸಿದೆ. ಮನೆಯಲ್ಲೇ ಕುಳಿತು ಯಾವುದೇ ಸಮಸ್ಯೆಯಿಲ್ಲದೆ ವಾಟ್ಸ್ ಆ್ಯಪ್  ಮೂಲಕ ಪಿಂಚಣಿ ಸ್ಲಿಪ್ ಪಡೆಯಬಹುದು. ಈ ಸೇವೆ ಪಡೆಯಲು ಗ್ರಾಹಕರು ವಾಟ್ಸ್ ಆ್ಯಪ್ ನಲ್ಲಿ 9022690226 ಸಂಖ್ಯೆಗೆ 'Hi'ಎಂದು ಕಳುಹಿಸಿದರೆ ಸಾಕು. ಗ್ರಾಹಕರು ವಾಟ್ಸ್ ಆ್ಯಪ್  ಬ್ಯಾಂಕಿಂಗ್ ಸೇವೆ ಬಳಸಿಕೊಂಡು ಮಿನಿ ಸ್ಟೇಟ್ ಮೆಂಟ್, ಬ್ಯಾಲೆನ್ಸ್ ಮಾಹಿತಿ ಹಾಗೂ ಪಿಂಚಣಿ ಸ್ಲಿಪ್ ಪಡೆಯಬಹುದಾಗಿದೆ. 

ವಿಡಿಯೋ ಕರೆ ಮೂಲಕ ಜೀವನ ಪ್ರಮಾಣಪತ್ರ ಸಲ್ಲಿಕೆ
ಪಿಂಚಣಿದಾರರಿಗೆ ವಿಡಿಯೋ ಕರೆ ಮೂಲಕ ಜೀವನ ಪ್ರಮಾಣ ಪತ್ರ ಸಲ್ಲಿಕೆ ಮಾಡುವ ಅವಕಾಶವನ್ನು ಭಾರತೀಯ ಸ್ಟೇಟ್ ಬ್ಯಾಂಕ್ (SBI) ಇತ್ತೀಚೆಗೆ ನೀಡಿದೆ. ಎಸ್ ಬಿಐ ಅಧಿಕಾರಿಗೆ ವಿಡಿಯೋ ಕರೆ ಮಾಡುವ ಮೂಲಕ ಪಿಂಚಣಿದಾರರು  ಜೀವನ ಪ್ರಮಾಣ ಪತ್ರ ಸಲ್ಲಿಕೆ ಮಾಡಬಹುದು. ವೆಬ್ ಸೈಟ್ ಅಥವಾ ಮೊಬೈಲ್ ಆ್ಯಪ್ ಮುಖಾಂತರ ವಿಡಿಯೋ ಕರೆ ಮಾಡಿ ಜೀವನ ಪ್ರಮಾಣಪತ್ರ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ. ಈ ಸೇವೆ ಪ್ರಾರಂಭದ ಬಗ್ಗೆ ಎಸ್ ಬಿಐ ಟ್ವೀಟ್ ಮೂಲಕ ಗ್ರಾಹಕರಿಗೆ ಮಾಹಿತಿ ನೀಡಿದೆ.

click me!